ಬೆಂಗಳೂರಿನಲ್ಲಿ ಸ್ಪೋಟ ನಡೆಸಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರ ಮನೆಯಲ್ಲಿ ಪತ್ತೆಯಾದ ಗ್ರೆನೇಡ್ ಭಾರತದಲ್ಲಿ ತಯಾರಿಸಿದ್ದಲ್ಲ, ಬದಲಾಗಿ ಹೊರಗಡೆಯಿಂದ ಕಳ್ಳಸಾಗಣೆ ಮಾಡಲಾಗಿದೆ ಎಂದು ಬೆಂಗಳೂರು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ತಿಳಿಸಿದ್ದಾರೆ.
ಸೈಯದ್ ಸುಹೇಲ್ ಖಾನ್ (24), ಮೊಹಮ್ಮದ್ ಉಮರ್ (29), ಜಾಹಿದ್ ತಬ್ರೇಜ್ (25), ಸೈಯದ್ ಮುದಾಸೀರ್ ಪಾಷಾ (28) ಮತ್ತು ಮೊಹಮ್ಮದ್ ಫಿಜಲ್ ರಬ್ಬಾನಿ (30) ಅವರನ್ನು ಜುಲೈ 20ರಂದು ಸಿಸಿಬಿ ಪೊಲೀಸರು ಬಂಧಿಸಿದ್ದರು.
ಬಂಧಿತರಿಂದ ನಾಲ್ಕು ಜೀವಂತ ಗ್ರೆನೇಡ್‌ಗಳು, ಏಳು ದೇಶಿ ನಿರ್ಮಿತ ಪಿಸ್ತೂಲ್‌ಗಳು, 45 ಬುಲೆಟ್‌ಗಳು, ವಾಕಿ-ಟಾಕಿಗಳು ಹಾಗೂ ಇನ್ನಿತರ ವಸ್ತುಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಬೆಂಗಳೂರಿನ 10 ಕಡೆ ಸ್ಪೋಟ ನಡೆಸಲು ಯೋಜನೆ ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ
“ಎಲ್ಲ (ಗ್ರೆನೇಡ್‌ಗಳು) ಶಂಕಿತ ಉಗ್ರರ ಮನೆಯಲ್ಲಿ ಪತ್ತೆಯಾಗಿದ್ದವು. ಸ್ಪೋಟ ನಡೆಸಲು ಸಿದ್ಧವಾಗಿದ್ದವು. ಈ ಗ್ರೆನೇಡ್‌ಗಳನ್ನು ಭಾರತದಲ್ಲಿ ತಯಾರಿಸಲಾಗಿಲ್ಲ. ತಯಾರಕರ ಹೆಸರು ಅಥವಾ ದೇಶದ ಹೆಸರು ಉಲ್ಲೇಖಿಸಲಾಗಿಲ್ಲ. ವಿದೇಶದಿಂದ ಕಳ್ಳಸಾಗಣೆ ಮಾಡಲಾಗಿದೆ” ಎಂದು ಹಿರಿಯ ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಆಟೋ ಚಾಲಕ, ಮೆಕ್ಯಾನಿಕ್, ವೆಲ್ಡಿಂಗ್ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಾರೆ. ಬಂಧನವಾಗಿರುವ ಐವರು ಭಯೋತ್ಪಾದನಾ ದಾಳಿ ಅಥವಾ ಗ್ರೆನೇಡ್ ಬಳಸಲು ತರಬೇತಿ ಹೊಂದಿಲ್ಲದ ಕಾರಣ ಅವರು ಅದನ್ನು ಕಾರ್ಯಗತಗೊಳಿಸುವವರಲ್ಲ. ಬದಲಾಗಿ ಇದರಲ್ಲಿ ಬೇರೆಯವರ ಕೈವಾಡ ಇರಬಹುದು” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಜುನೈದ್ ಅಹ್ಮದ್ ಈ ಭಯೋತ್ಪಾದನಾ ಕೃತ್ಯ ನಡೆಸಲು ಸಂಚು ರೂಪಿಸಿದ್ದವನು. ಈತ ವೀಸಾದೊಂದಿಗೆ ಭಾರತವನ್ನು ತೊರೆದಿದ್ದಾನೆ. ಆರೋಪಿ ಎಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಬಗ್ಗೆ ತಿಳಿದಿದೆ. ಆದರೆ, ಆತನ ಹೆಚ್ಚಿನ ಚಲನವಲನಗಳನ್ನು ಇನ್ನೂ ಟ್ರ್ಯಾಕ್ ಮಾಡಬೇಕಾಗಿದೆ” ಎಂದು ಪೊಲೀಸ್ ಅಧಿಕಾರಿ ಹೇಳಿದರು.
“ಬೆಂಗಳೂರಿನ ಸುಲ್ತಾನಪಾಳ್ಯದಲ್ಲಿ ಕುರಿ ವ್ಯಾಪಾರಿಯಾಗಿದ್ದ ಅಹ್ಮದ್ ಅವರನ್ನು ಅಕ್ಟೋಬರ್ 2017 ರಲ್ಲಿ ಬಂಧಿಸಲಾಯಿತು. ಅವರು ಮತ್ತು ಅವರ ಸಹಚರರು ಮತ್ತೊಬ್ಬ ವ್ಯಾಪಾರಿ ನೂರ್ ಅಹಮದ್ ಅವರನ್ನು ಕೊಲೆ ಮಾಡಿದ್ದರು. 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಟಿ ನಾಸಿರ್ ಅವರನ್ನು ಭೇಟಿಯಾದ ಅವರು ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ 18 ತಿಂಗಳು ಕಳೆದಿದ್ದರು” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನಕಲಿ ನೋಟು ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳ ಬಂಧನ
“ಬಂಧನದ ಬಳಿಕ ನಾಸಿರ್ ಅವರನ್ನು ಪ್ರಶ್ನಿಸಿದ್ದೇವೆ. ಆದರೆ ಅವರು ಯಾವುದೇ ಉತ್ತರ ನೀಡುತ್ತಿಲ್ಲ. ಪೊಲೀಸರನ್ನು ಹೇಗೆ ಮೋಸಗೊಳಿಸಬೇಕು ಎಂದು ಉತ್ತಮ ತರಬೇತಿ ಪಡೆದಿದ್ದಾರೆ. ಅಹ್ಮದ್ ಅವರ ಮನೆಯಿಂದ 502 ಕೆ.ಜಿ ಕೆಂಪು ಮರಳುಗಳನ್ನು ಪೊಲೀಸರು ವಶಪಡಿಸಿಕೊಂಡ ನಂತರ ಡಿಸೆಂಬರ್ 2020ರಲ್ಲಿ ಅವರನ್ನು ಬಂಧಿಸಲಾಯಿತು.
“ಇದು ದೇಶದಾದ್ಯಂತ ಇತರ ಭಯೋತ್ಪಾದಕ ಸಂಚು ರೂಪಿಸುವವರೊಂದಿಗೆ ಪರಸ್ಪರ ಸಂಪರ್ಕ ಹೊಂದಿರಬಹುದು. ದಾಖಲೆಗಳನ್ನು ಪಡೆದಿರುವ ಕಾರಣ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತೆಗೆದುಕೊಳ್ಳಲು ಇದು ಸೂಕ್ತವಾದ ಪ್ರಕರಣವಾಗಿದೆ ಮತ್ತು ನಾವು ಪ್ರಕರಣದ ವಿವರಗಳನ್ನು ಹಂಚಿಕೊಂಡಿದ್ದೇವೆ” ಎಂದು ಅಧಿಕಾರಿ ಹೇಳಿದರು.