- ಶಾಂತಿ ಸುವ್ಯವಸ್ಥೆ ಕಾಪಾಡಲು ಸುಮಾರು 45 ಪ್ರಮುಖ ರೌಡಿಶೀಟರ್‌ಗಳ ಗಡಿಪಾರು
- 33 ರೌಡಿಗಳ ಗಡಿಪಾರಿಗೆ ಸಿದ್ಧತೆ ನಡೆಯುತ್ತಿದ್ದು, ಕೌನ್ಸಿಲಿಂಗ್ ಆಗುತ್ತಿದೆ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕೆಲವೇ ದಿನಗಳಲ್ಲಿ ನಡೆಯಲಿದೆ. ಈ ವೇಳೆ, ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸುಮಾರು 45 ಪ್ರಮುಖ ರೌಡಿಗಳನ್ನು ಗಡಿಪಾರು ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
45 ಪ್ರಮುಖ ರೌಡಿಗಳಲ್ಲಿ ಈಗಾಗಲೇ 12 ರೌಡಿಗಳನ್ನು ಗಡಿಪಾರು ಮಾಡಲು ಆಯಾ ವಿಭಾಗದ ಡಿಸಿಪಿಗಳು ಆದೇಶ ಹೊರಡಿಸಿದ್ದಾರೆ. ಇನ್ನುಳಿದಂತೆ 33 ರೌಡಿಗಳ ಗಡಿಪಾರಿಗೆ ಸಿದ್ಧತೆ ನಡೆಯುತ್ತಿದ್ದು, ಕೌನ್ಸಿಲಿಂಗ್ ಆಗುತ್ತಿದೆ. ಇನ್ನೊಂದು ವಾರದಲ್ಲಿ ನಗರ ಪೊಲೀಸರು ಗಡಿಪಾರು ಮಾಡಲಿದ್ದಾರೆ.
ಬೆಂಗಳೂರಿನ ಪೂರ್ವ ವಿಭಾಗ 12, ಪಶ್ಚಿಮ ವಿಭಾಗ 6, ಆಗ್ನೇಯ ವಿಭಾಗ 5, ಕೇಂದ್ರ ವಿಭಾಗ 4, ಈಶಾನ್ಯ ವಿಭಾಗ 4, ವೈಟ್ ಫೀಲ್ಡ್ ವಿಭಾಗ 5, ಉತ್ತರ ವಿಭಾಗ 5, ದಕ್ಷಿಣ ವಿಭಾಗ 4 ರೌಡಿಗಳನ್ನ ಗಡಿಪಾರು ಮಾಡಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಡಬ್ಲೂಎಸ್‌ಎಸ್‌ಬಿ ಗುಂಡಿಗೆ ಎರಡೂವರೆ ವರ್ಷದ ಮಗು ಬಿದ್ದು ಸಾವು
ಗಡಿಪಾರು ಆಗಿರುವ ಕುಖ್ಯಾತ ರೌಡಿಗಳು
ವಿಲ್ಸನ್ ಗಾರ್ಡನ್, ಕಾಡುಬೀಸನಹಳ್ಳಿ ರೋಹಿತ್, ಕ್ಯಾಟ್ ಮಂಜ, ಮುನಿಕೃಷ್ಣ, ಮಂಜುನಾಥ್ ಅಲಿಯಾಸ್ ಮೋಲ ಬೆಂಗಳೂರಿನಿಂದ ಗಡಿಪಾರು ಆಗಿದ್ದಾರೆ.