- 13 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಗೆ ಇಬ್ಬರು ಮಕ್ಕಳು
- ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ವಿವಾಹೇತರ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಮಹಿಳೆಯೊಬ್ಬರನ್ನು ಆಕೆಯ ಪತಿ ಬರ್ಬರವಾಗಿ ಕೊಲೆ ಮಾಡಿದ್ದು, ತನ್ನ ಅತ್ತೆಗೆ ಕೊಲೆಯ ಬಗ್ಗೆ ತಾನೇ ಮಾಹಿತಿ ನೀಡಿರುವ ಘಟನೆ ಮೂಡಲಪಾಳ್ಯದ ಶಿವಾನಂದನಗರದಲ್ಲಿ ನಡೆದಿದೆ.
ಗೀತಾ(33) ಕೊಲೆಯಾದ ದುರ್ದೈವಿ. ಆರೋಪಿ ಶಂಕರ ಬಂಧಿತ ಪತಿ. ಶಂಕರ ಹಾಗೂ ಗೀತಾ ಇಬ್ಬರು 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಜುಲೈ 26ರಂದು ರಾತ್ರಿ ಶಂಕರ್ ಹೆಂಡತಿಗೆ ವಿವಾಹೇತರ ಸಂಬಂಧವಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಜಗಳ ಆರಂಭಿಸಿದ್ದಾನೆ. ಈ ವೇಳೆ, ಪತ್ನಿಯನ್ನು ಕೊಲೆ ಮಾಡಿ ಬಳಿಕ ಮೃದೇಹವನ್ನು ಸೋಫಾ ಮೇಲೆ ಇಟ್ಟಿದ್ದಾನೆ.
ಮೃತ ಗೀತಾ ತಾಯಿಗೆ ಕರೆ ಮಾಡಿದ ಆರೋಪಿ ನಿಮ್ಮ ಮಗಳನ್ನು ಕೊಲೆ ಮಾಡಿದ್ದೇನೆ ಎಂದು ತಿಳಿಸಿದ್ದಾನೆ. ಈ ಬಗ್ಗೆ ತಿಳಿದ ಗೀತಾ ತಾಯಿ ಹೊಸೂರಿನಿಂದ ಮಗಳ ಮನೆಗೆ ಬಂದಿದ್ದಾರೆ. ಮಗಳ ಮೃತದೇಹವನ್ನು ಕಂಡು ಕಂಗಾಲಾಗಿದ್ದಾರೆ.
ಕೊಲೆ ಮಾಡಿರುವ ಆರೋಪಿ ಶಂಕರ್ನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.