ಮದುವೆಯಾಗಿದ್ದರೂ, ತಾನೂ ಪ್ರೀತಿ ಮಾಡಿದ ಹುಡುಗಿ ಬೇರೆಯವರೊಂದಿಗೆ ಸ್ನೇಹ ಮಾಡಿದ್ದಾಳೆಂದು ಯುವತಿಯ ಮನೆಮುಂದೆ ಗಲಾಟೆ ಮಾಡುತ್ತಿದ್ದವನ್ನು ಸಮಾಧಾನ ಪಡಿಸಲು ಹೋದ ಇನ್ಸ್‌ಪೆಕ್ಟರ್‌ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜಗದೀಶ ಆರೋಪಿ. ಈತನು ಇತ್ತೀಚೆಗೆ ಪಿಎಸ್‌ಐ ಪರೀಕ್ಷೆ ಬರೆದು ಫೇಲಾಗಿದ್ದನು. ಈತನಿಗೆ ಈಗಾಗಲೇ, ಮದುವೆಯಾಗಿದ್ದು, ಬೇರೆ ಯುವತಿಯ ಜತೆಗೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದನು.
ಇತ್ತೀಚೆಗೆ, ಆ ಯುವತಿ ಬೇರೆಯವರ ಜತೆಗೆ ಸ್ನೇಹ ಬೆಳೆಸಿದ್ದಾಳೆ ಮತ್ತು ಚಾಟ್ ಮಾಡುತ್ತಿದ್ದಾಳೆ ಎಂದು ಅನುಮಾನಗೊಂಡು ಆಕೆಯ ಮನೆಯ ಮುಂದೆ ಬಂದು ಗಲಾಟೆ ಮಾಡುತ್ತಿದ್ದನು. ಇದನ್ನು ಕಂಡ ಸ್ಥಳೀಯರು 112ಗೆ ಕರೆ ಮಾಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇನ್ಸ್ಪೆಕ್ಟರ್ ಸಂದೀಪ್ ಆತನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾರೆ.
ಈ ವೇಳೆ, ಇನ್ಸ್‌ಪೆಕ್ಟರ್ ಸಂದೀಪ್‌ಗೆ ನಿಂದಿಸಲು ಆರಂಭಿಸಿದ ಜಗದೀಶ ಹುಡುಗರಿಗೆ ಹೇಳಿ ನಿನ್ನ ಬಟ್ಟೆ ಬಿಚ್ಚಿಸುತ್ತೇನೆ. ಘೇರಾವ್ ಹಾಕ್ತಿನಿ ಎಂದು ಅವಾಜ್ ಹಾಕಿದ್ದಾನೆ. ಅರ್ಧ ಮಾರ್ಕ್ನಿಂದ ನಾನು ಪಿಎಸ್‌ಐ ಫೇಲ್ ಆದೆ. ನಿನ್ನಿಂದ ಏನು ಕಿತ್ತುಕ್ಕೊಳ್ಳೋಕೆ ಆಗಲ್ಲ. ನೀನು ತ್ರಿಬಲ್ ಸ್ಟಾರ್ ಅಷ್ಟೇ, ನನ್ ಕೈಲಿ ರಿವಾಲ್ವರ್ ಇದ್ದಿದ್ರೆ ಕಥೆನೇ ಬೇರೆ ಇರತಿತ್ತು. ನೀನು ₹500 ತಗೊಂಡು ಕೆಲಸ ಮಾಡೋನು. ನಿನಗೆ ಹ್ಯೂಮನ್ ರೈಟ್ಸ್ ಅವರು ಗೊತ್ತಾ? ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹಾಕ್ತೀನಿ ಎಂದು ಇನ್ಸ್ಪೆಕ್ಟರ್ ಸಂದೀಪ್ ಅವರಿಗೆ ಜಗದೀಶ್ ಬೆದರಿಕೆ ಹಾಕಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ದಂಪತಿಯಿಂದ ಹನಿಟ್ರ್ಯಾಪ್ ದಂಧೆ ಆರೋಪ; ನಾಲ್ವರ ಬಂಧನ
ಸದ್ಯ ಕರ್ತವ್ಯ ನಿರತ ಸಿಬ್ಬಂದಿ ಮೇಲೆ ಹಲ್ಲೆ, ಅವಾಚ್ಯ ಶಬ್ಧಗಳಿಂದ ನಿಂದನೆ ಹಿನ್ನಲೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಜಗದೀಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ.