ಬೆಂಗಳೂರು | ಸಮಸ್ಯೆ ಸರಿಪಡಿಸಲು ಹೋದ ಇನ್ಸ್‌ಪೆಕ್ಟರ್‌ಗೆ ಅವಾಜ್‌ ಹಾಕಿದ ಯುವಕ: ಎಫ್‌ಐಆರ್‌ ದಾಖಲು

Date:

ಮದುವೆಯಾಗಿದ್ದರೂ, ತಾನೂ ಪ್ರೀತಿ ಮಾಡಿದ ಹುಡುಗಿ ಬೇರೆಯವರೊಂದಿಗೆ ಸ್ನೇಹ ಮಾಡಿದ್ದಾಳೆಂದು ಯುವತಿಯ ಮನೆಮುಂದೆ ಗಲಾಟೆ ಮಾಡುತ್ತಿದ್ದವನ್ನು ಸಮಾಧಾನ ಪಡಿಸಲು ಹೋದ ಇನ್ಸ್‌ಪೆಕ್ಟರ್‌ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

- Advertisement -

ಜಗದೀಶ ಆರೋಪಿ. ಈತನು ಇತ್ತೀಚೆಗೆ ಪಿಎಸ್‌ಐ ಪರೀಕ್ಷೆ ಬರೆದು ಫೇಲಾಗಿದ್ದನು. ಈತನಿಗೆ ಈಗಾಗಲೇ, ಮದುವೆಯಾಗಿದ್ದು, ಬೇರೆ ಯುವತಿಯ ಜತೆಗೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದನು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭಾವೈಕ್ಯತೆಯ ಹೆಜ್ಜೆನಾದ: ಕದ್ರಿ ದೇಗುಲದ ಯಕ್ಷಗಾನದಲ್ಲಿ ‘ಮಹಿಷಾಸುರ ಮರ್ದಿನಿ’ಯಾಗಿ...

ಕಲೆಗೆ ಯಾವುದೇ ಧರ್ಮ, ಜಾತಿಗಳ ಭೇದವಿಲ್ಲ ಎಂಬುದನ್ನು ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಕಲೆ ಮತ್ತೊಮ್ಮೆ ಅತ್ಯಂತ ಸುಂದರವಾಗಿ ಸಾಬೀತುಪಡಿಸಿದೆ. ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವೇದಿಕೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು 'ಮಹಿಷಾಸುರ...

ಪದವೀಧರರು, ಶಿಕ್ಷಕರೇ ಗಮನಿಸಿ.. ಅ.23ರಂದು ಪ್ರಾಶಸ್ತ್ಯ ಮತ ಚಲಾಯಿಸುವಾಗ...

ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ-2026ರ ಮತದಾನ ಅಕ್ಟೋಬರ್ 23ರಂದು ನಡೆಯಲಿದೆ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯನ್ನು ಆರಿಸಲು ಪ್ರಾಶಸ್ತ್ಯ ಮತದಾನ ಪದ್ಧತಿಯನ್ನು ಅನುಸರಿಸಬೇಕು. ಈ ಸಂದರ್ಭದಲ್ಲಿ...

ಬೆಂಗಳೂರು ಶಿಕ್ಷಕರ ಕ್ಷೇತ್ರ: ಪುಟ್ಟಣ್ಣ ಕಟ್ಟಿಕೊಂಡಿರುವ ‘ಶಿಕ್ಷಕರ ಕೋಟೆ’...

ವಿಧಾನ ಪರಿಷತ್‌ನ 4 ಸ್ಥಾನಗಳಲ್ಲಿಅಕ್ಟೋಬರ್ 23ರ ಶುಕ್ರವಾರ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವುದು- ‘ಬೆಂಗಳೂರು ಶಿಕ್ಷಕರ ಕ್ಷೇತ್ರ'. ಇಲ್ಲಿ ಕಾಂಗ್ರೆಸ್‌ನಿಂದ ಸ್ಫರ್ಧಿಸಿರುವ ಪುಟ್ಟಣ್ಣ ಮತ್ತು ಎನ್‌ಡಿಎ ಅಭ್ಯರ್ಥಿಯಾಗಿರುವ...

ಇತ್ತೀಚೆಗೆ, ಆ ಯುವತಿ ಬೇರೆಯವರ ಜತೆಗೆ ಸ್ನೇಹ ಬೆಳೆಸಿದ್ದಾಳೆ ಮತ್ತು ಚಾಟ್ ಮಾಡುತ್ತಿದ್ದಾಳೆ ಎಂದು ಅನುಮಾನಗೊಂಡು ಆಕೆಯ ಮನೆಯ ಮುಂದೆ ಬಂದು ಗಲಾಟೆ ಮಾಡುತ್ತಿದ್ದನು. ಇದನ್ನು ಕಂಡ ಸ್ಥಳೀಯರು 112ಗೆ ಕರೆ ಮಾಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇನ್ಸ್ಪೆಕ್ಟರ್​ ಸಂದೀಪ್‌ ಆತನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾರೆ.

ಈ ವೇಳೆ, ಇನ್ಸ್‌ಪೆಕ್ಟರ್‌ ಸಂದೀಪ್‌ಗೆ ನಿಂದಿಸಲು ಆರಂಭಿಸಿದ ಜಗದೀಶ ಹುಡುಗರಿಗೆ ಹೇಳಿ ನಿನ್ನ ಬಟ್ಟೆ ಬಿಚ್ಚಿಸುತ್ತೇನೆ. ಘೇರಾವ್ ಹಾಕ್ತಿನಿ ಎಂದು ಅವಾಜ್‌ ಹಾಕಿದ್ದಾನೆ. ಅರ್ಧ ಮಾರ್ಕ್​ನಿಂದ ನಾನು ಪಿಎಸ್​ಐ ಫೇಲ್ ಆದೆ. ನಿನ್ನಿಂದ ಏನು ಕಿತ್ತುಕ್ಕೊಳ್ಳೋಕೆ ಆಗಲ್ಲ. ನೀನು ತ್ರಿಬಲ್ ಸ್ಟಾರ್ ಅಷ್ಟೇ, ನನ್ ಕೈಲಿ ರಿವಾಲ್ವರ್ ಇದ್ದಿದ್ರೆ ಕಥೆನೇ ಬೇರೆ ಇರತಿತ್ತು. ನೀನು ₹500 ತಗೊಂಡು ಕೆಲಸ ಮಾಡೋನು. ನಿನಗೆ ಹ್ಯೂಮನ್ ರೈಟ್ಸ್ ಅವರು ಗೊತ್ತಾ? ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹಾಕ್ತೀನಿ ಎಂದು ಇನ್ಸ್ಪೆಕ್ಟರ್ ಸಂದೀಪ್ ಅವರಿಗೆ ಜಗದೀಶ್  ಬೆದರಿಕೆ ಹಾಕಿದ್ದಾನೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ದಂಪತಿಯಿಂದ ಹನಿಟ್ರ್ಯಾಪ್‌ ದಂಧೆ ಆರೋಪ; ನಾಲ್ವರ ಬಂಧನ

ಸದ್ಯ ಕರ್ತವ್ಯ ನಿರತ ಸಿಬ್ಬಂದಿ ಮೇಲೆ ಹಲ್ಲೆ, ಅವಾಚ್ಯ ಶಬ್ಧಗಳಿಂದ ನಿಂದನೆ ಹಿನ್ನಲೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಜಗದೀಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿಯಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ

ಪೊಲೀಸ್ ವೀರ ಹುತಾತ್ಮರ ದಿನಾಚರಣೆ ಅಂಗವಾಗಿ ಕಲಬುರಗಿ ನಗರದ ಜಿಲ್ಲಾ ಸಶಸ್ತ್ರ...

ರಾಯಚೂರು | ಭೀಕರ ರಸ್ತೆ ಅಪಘಾತ: ಶಾಸಕ ಮಾನಪ್ಪ ವಜ್ಜಲ್ ಅವರ ಸಹೋದರನ ಪುತ್ರ ಮಲ್ಲು ವಜ್ಜಲ್‌ಗೆ ಗಂಭೀರ ಗಾಯ

ಲಿಂಗಸುಗೂರು ತಾಲೂಕಿನ ಹೊನ್ನಹಳ್ಳಿ ಗ್ರಾಮದ ಸಮೀಪ ಬುಧವಾರ ಸಂಭವಿಸಿದ ಭೀಕರ ರಸ್ತೆ...

ಉಡುಪಿ | ‘ದ ಒರಿಜಿನಲ್ ಆಭರಣ ಜುವೆಲ್ಲರ್ಸ್’ ನವೀಕೃತ ಶೋರೂಂ ಲೋಕಾರ್ಪಣೆ

ಉಡುಪಿ ನಗರದ ಹೃದಯ ಭಾಗದಲ್ಲಿರುವ ಸಿಬಿ ರಸ್ತೆಯಲ್ಲಿ 1935 ರಲ್ಲಿ ಆರಂಭಗೊಂಡಿದ್ದ...

ವಿಜಯಪುರ |ಬಡವರು, ದೀನ-ದುರ್ಬಲರು ಹಾಗೂ ವಿಕಲಚೇತನರ ಬದುಕಿಗೆ ಬೆಳಕಾದ ಎಂ.ಎಸ್. ಖೇಡ: 10ನೇ ಪುಣ್ಯಸ್ಮರಣೆ

ಬಡವರು, ದೀನ-ದುರ್ಬಲರು ಹಾಗೂ ವಿಕಲಚೇತನರಿಗೆ ಶಿಕ್ಷಣದ ಮೂಲಕ ಬದುಕು ಕಟ್ಟಿಕೊಟ್ಟ ವಿಜಯಪುರ...