- ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
- ಏಕಾಏಕಿ ಅಪಾರ್ಟ್ಮೆಂಟ್ ಮೇಲಿಂದ ಹಾರಿ ಕೆಳಗೆ ಬಿದ್ದ ಮಹಿಳೆ
ಬೆಂಗಳೂರಿನ ಯಲಹಂಕ ಬಳಿಯ ನಾಗೇನಹಳ್ಳಿಯ ಅಪಾರ್ಟ್ಮೆಂಟ್ನ 10ನೇ ಮಹಡಿಯಿಂದ ಬಿದ್ದು ಮಹಿಳೆ ಸಾವನ್ನಪ್ಪಿದ್ದ ಘಟನೆ ನಡೆದಿದೆ.
ಲಖೌನ ಮೂಲದ ಅಮೃತಾ ಶರ್ಮ (27) ಮೃತಪಟ್ಟ ಮಹಿಳೆ. ಖಾಸಗಿ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದಳು. ಜೂನ್ 22ರಂದು ರಾತ್ರಿ 10 ಗಂಟೆಗೆ ಈ ಘಟನೆ ನಡೆದಿದೆ. ಮಹಿಳೆ ಏಕಾಏಕಿ ಮೇಲಿಂದ ಹಾರಿ ಕೆಳಗೆ ಬಿದ್ದಿದ್ದಾಳೆ. ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮಹಿಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತಿದ್ದರು. ಈಕೆ ಕಳೆದ ಎರಡು ವರ್ಷದ ಹಿಂದೆ ವಿವಾಹವಾಗಿದ್ದರು. ರಾತ್ರಿ ವೇಳೆ ಎಲ್ಲರೂ ಮನೆಯಲ್ಲಿರುವಾಗ ಈಕೆ ಅಡುಗೆ ಮನೆಯ ಬಾಲ್ಕನಿಯಲ್ಲಿದ್ದರು. ಈ ವೇಳೆ ಘಟನೆ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ದಿನದ 24 ಗಂಟೆಯೂ ಹೋಟೆಲ್ ತೆರೆಯಲು ಅನುಮತಿ ನೀಡಿ ಎಂದ ಬಿಬಿಎಚ್ಎ
ಇತ್ತೀಚಿಗೆ ಮಹಿಳೆಯು ತನ್ನ ತಂದೆಯನ್ನು ಕಳೆದುಕೊಂಡು ನೋವಿನಲ್ಲಿದ್ದರು. ಸದ್ಯ ಮೃತಳ ತಾಯಿ ಲಖನೌನಿಂದ ಬೆಂಗಳೂರಿಗೆ ಆಗಮಿಸುತಿದ್ದಾರೆ ಎಂದು ತಿಳಿದುಬಂದಿದೆ.