ಸೈಬರ್ ಕ್ರೈಂ ಪ್ರಕರಣದ ತನಿಖೆ ನಡೆಸಲು ದೂರುದಾರರಿಂದ 2 ಲಕ್ಷ ರೂ. ಲಂಚ ಪಡೆಯುತ್ತಿದ್ದ ಎಸಿಪಿ ಮತ್ತು ಎಎಸ್‌ಐ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ‘ರೆಡ್‌ಹ್ಯಾಂಡ್’ಆಗಿ ಹಿಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇಬ್ಬರನ್ನೂ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ದೂರುದಾರ ಮಧುಸೂದನ್ ಬಿ.ಎಸ್ ಎಂಬವರು ಸೈಬರ್ ಕ್ರೈ ಪ್ರಕರಣ ದಾಖಲಿಸಿದ್ದರು. ಆ ಪ್ರಕರಣದ ತನಿಖೆ ನಡೆಸಬೇಕೆಂದರೆ 4 ಲಕ್ಷ ರೂ. ಲಂಚ ಕೊಡಬೇಕೆಂದು ಠಾಣೆಯ ಎಎಸ್ಐ ಕೃಷ್ಣಮೂರ್ತಿ ಮತ್ತು ಎಸಿಪಿ ತನ್ವೀರ್ ಎಸ್.ಆರ್ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಲಂಚ ಕೇಳಿದ ಎಸಿಪಿ ಮತ್ತು ಎಎಸ್‌ಐ ವಿರುದ್ಧ ದೂರುದಾರ ಮಧುಸೂದನ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ಮಧುಸೂದನ್ ಕೈಯಲ್ಲಿ 2 ಲಕ್ಷ ರೂ. ಕೊಟ್ಟು ಸಿಐಎಸ್ ಠಾಣೆಗೆ ಕಳಿಸಿದ್ದರು. ಮಧುಸೂದನ್ ಅವರಿಂದ ಎಸಿಪಿ ಮತ್ತು ಎಎಸ್‌ಐ ಲಂಚ ಪಡೆಯುವ ವೇಳೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಇಬ್ಬರನ್ನೂ ಲಂಚ ಪಡೆಯುವಾಗಲೇ ಹಿಡಿದಿದ್ದಾರೆ. ವಶಕ್ಕೆ ಪಡೆದಿದ್ದಾರೆ.
ಈ ವರದಿ ಓದಿದ್ದೀರಾ?: ‘ಸ್ತನ ಮುಟ್ಟುವುದು ಅತ್ಯಾಚಾರವಲ್ಲ’ವೆಂಬ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ
ದೂರುದಾರ ಮಧುಸೂದನ್ ಅವರ ಕಂಪನಿಯ ವೆಬ್‌ಸೈಟ್ ಹ್ಯಾಕ್ ಮಾಡಿ, ಆರ್ಥಿಕ ನಷ್ಟವುಂಟು ಮಾಡಲಾಗಿತ್ತು. ಕೆಲಸದಿಂದ ತೆಗೆದು ಹಾಕಿದ ಸಿಟ್ಟಿಗೆ ಕಂಪನಿಯ ಮಾಜಿ ಉದ್ಯೋಗಿಯೊಬ್ಬ ಈ ಕೃತ್ಯ ಎಸಗಿದ್ದಾನೆ ಎಂದು ಅನುಮಾನಿಸಿದ್ದ ಮಧುಸೂದನ್ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಪ್ರಕರಣದ ತನಿಖೆ ಆರಂಭಿಸಲು4 ಲಕ್ಷ ರೂ. ಲಂಚ ಕೊಡಬೇಕೆಂದು ಆರೋಪಿತ ಅಧಿಕಾರಿಗಳು ಬೇಡಿಕೆ ಇಟ್ಟಿದ್ದರುಎಂದು ತಮ್ಮ ದೂರಿನಲ್ಲಿ ಮಧುಸೂದನ್ ಆರೋಪಿಸಿದ್ದಾರೆ.