25 ನಿಮಿಷ ಜಾಹೀರಾತು: ಬೆಂಗಳೂರಿನ ವ್ಯಕ್ತಿಯ ಸಮಯ ಪೋಲು ಮಾಡಿದ ಪಿವಿಆರ್‌ಗೆ 1.65 ಲಕ್ಷ ರೂ. ದಂಡ

Date:

Advertisements

ಇಪ್ಪತ್ತೈದು ನಿಮಿಷಗಳ ದೀರ್ಘಾವಧಿ ಸಮಯದ ವಾಣಿಜ್ಯ ಜಾಹೀರಾತು ಪ್ರದರ್ಶಿಸುವ ಮೂಲಕ ಬೆಂಗಳೂರು ವ್ಯಕ್ತಿಯ ಸಮಯ ಪೋಲು ಮಾಡಿ ಮಾನಸಿಕ ಸಂಕಟ ಉಂಟು ಮಾಡಿದ ಪಿವಿಆರ್‌, ಐನಾಕ್ಸ್‌ಗೆ ಬೆಂಗಲೂರಿನ ಗ್ರಾಹಕರ ನ್ಯಾಯಾಲಯ 65 ಸಾವಿರ ರೂ. ದಂಡ ವಿಧಿಸಿ ಪರಿಹಾರದ ಹಣವನ್ನು ವ್ಯಕ್ತಿಗೆ ನೀಡಲು ಆದೇಶಿಸಿದೆ.

ಅಬಿಷೇಕ್‌ ಎಂ ಆರ್‌ ಎಂಬುವವರು 2023ರಲ್ಲಿ ಬುಕ್‌ ಮೈ ಶೋ ಮೂಲಕ ‘ ಸಾಮ್‌ ಬಹದ್ದೂರ್‌’ ಸಿನಿಮಾ ನೋಡಲು ಬುಕ್‌ ಮೈಶೋ ಮೂಲಕ ಸಂಜೆ 4 ಪ್ರದರ್ಶನದ ಮೂರು ಟಿಕೆಟ್‌ ಖರೀದಿಸಿದ್ದರು. ಸಿನಿಮಾ 6.30ಕ್ಕೆ ಮುಗಿಸಿ ಅವರು ಬೇರೆ ಕೆಲಸಗಳಿಗೆ ಕೆಲಸಕ್ಕೆ ತೆರಳಬೇಕಿತ್ತು. ಆದರೆ ಸಿನಿಮಾ ಜಾಹೀರಾತು, ಟ್ರೈಲರ್‌ಗಳ ಮೂಲಕ ಸಂಜೆ 4.30 ಕ್ಕೆ ಆರಂಭವಾಗಿ ಸುಮಾರು 30 ನಿಮಿಷಗಳ ಕಾಲ ಸಮಯ ವ್ಯರ್ಥವಾಯಿತು.

ಸಮಯ ಅಮೂಲ್ಯವಾದುದು, ಕಂಪನಿಯವರು ತಮ್ಮ ಲಾಭವನ್ನು ಪಡೆಯುವುದಕ್ಕಾಗಿ ಅನಗತ್ಯ ಜಾಹೀರಾತುಗಳನ್ನು ಪ್ರದರ್ಶಿಸುವುದು ಸ್ಪಷ್ಟವಾಗಿದೆ. ಅರ್ಧ ಗಂಟೆ ಸಮಯ ವ್ಯರ್ಥವಾದ ಕಾರಣ ದೂರುದಾರರು ತಮ್ಮ ಕಾರ್ಯಕ್ರಮಗಳು ಹಾಗೂ ಪೂರ್ವನಿಗದಿ ಯೋಜನೆಗಳಿಗೆ ತೆರಳಲು ಸಾಧ್ಯವಾಗಿರಲಿಲ್ಲ. ಇದರಿಂದ ತಮಗೆ ನಷ್ಟವಾಗಿದ್ದು, ಪರಿಹಾರ ದೊರಕಿಸಿಕೊಡಬೇಕೆಂದು ಅಭಿಷೇಕ್‌ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದರು.

Advertisements

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಂತು ಬೇಸಿಗೆ, ತತ್ವಾರ ತಂತು ನೀರಿಗೆ, ಅನುಕೂಲ ಅವಕಾಶವಾದಿಗಳಿಗೆ!

“ಸಮಯವು ಹಣಕ್ಕಿಂತ ಅಮೂಲ್ಯವಾದದು, ಆದ ಕಾರಣ ದೂರುದಾರರಿಗೆ ಪಿವಿಆರ್‌ ಹಾಗೂ ಐನಾಕ್ಸ್ ನಷ್ಟವನ್ನು ತುಂಬಿಕೊಡಬೇಕು. ಅನಗತ್ಯ ವಾಣಿಜ್ಯ ಜಾಹೀರಾತು ಪ್ರಕಟಿಸಿ ಸಮಯ ಹಾಳು ಮಾಡಿದ್ದಕ್ಕಾಗಿ ಪಿವಿಆರ್‌ ಹಾಗೂ ಐನಾಕ್ಸ್ 50 ಸಾವಿರ ದಂಡ ವಿಧಿಸಲಾಗಿದೆ. ಮಾನಸಿಕ ಸಂಕಟಕ್ಕಾಗಿ 5 ಸಾವಿರ ಹಾಗೂ ಉಳಿದ 10 ಸಾವಿರವನ್ನು ದೂರುದಾರರ ವೆಚ್ಚ ಹಾಗೂ ಇತರ ಪರಿಹಾರಕ್ಕೆ ನೀಡಬೇಕು. ಹಾಗೆಯೇ ಪಿವಿಆರ್‌ ಐನಾಕ್ಸ್‌ಗೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ” ಎಂದು ಕೋರ್ಟ್‌ ತಿಳಿಸಿತು.

ದಂಡದ ಹಣವನ್ನು ಗ್ರಾಹಕ ಕ್ಷೇಮಾಭಿವೃದ್ಧಿ ನಿಧಿಗೆ ನೀಡಬೇಕೆಂದು ಕೋರ್ಟ್ ನಿರ್ದೇಶಿಸಿತು. ಒಂದು ತಿಂಗಳ ಒಳಗಾಗಿ ಎಲ್ಲ ದಂಡದ ಹಣವನ್ನು ಪಾವತಿಸಬೇಕೆಂದು ಕೋರ್ಟ್ ಆದೇಶಿಸಿತು. ಟಿಕೆಟ್ ಬುಕ್ಕಿಂಗ್‌ ವೇದಿಕೆ ಬುಕ್‌ ಬೈ ಶೋ ಅವರ ಪಾತ್ರ ಇರದಿದ್ದ ಕಾರಣ ಅವರನ್ನು ಹೊಣೆಗಾರರನ್ನಾಗಿ ಮಾಡದಿರಲು ಕೋರ್ಟ್ ನಿರ್ಧರಿಸಿತು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

ಚಿತ್ರದುರ್ಗ | ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಅನ್ಯಾಯ ಸರಿಪಡಿಸಿ; ಮಹಾನಾಯಕ ದಲಿತ ಸೇನೆ

ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಎತ್ತಿ...

ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ

ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ...

Download Eedina App Android / iOS

X