ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಸಮಸ್ಯೆಗೆ ಮುಕ್ತಿಯೇ ಇಲ್ಲದಂತಾಗಿದೆ. ರಸ್ತೆಗುಂಡಿಗಳಿಂದಾಗಿ ನೂರಾರು ಅಪಘಾತಗಳು ಸಂಭವಿಸಿದ್ದು, ಹಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಆದರೂ, ರಸ್ತೆಗುಂಡಿ ಸಮಸ್ಯೆಯನ್ನು ಪರಿಹರಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಇದೀಗ, ರಸ್ತೆಗುಂಡಿಗೆ ಇಳಿದು ಸರಕು ಸಾಗಿಸುವ ಆಟೋವೊಂದು ಪಲ್ಟಿಯಾಗಿರುವ ಘಟನೆ ನಡೆದಿದೆ.
ಬೆಂಗಳುರಿನ ನಾಗವಾರ ವೃತ್ತದ ಬಳಿ ಸರಕು ಸಾಗಿಸುವ ಆಟೋ ಪಲ್ಟಿಯಾಗಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಬಿಬಿಎಂಪಿ ವಿರುದ್ಧ ಹಲವಾರು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
People now have a clearer understanding of what the term "Brand Bengaluru" truly signifies. Unfortunately, it seems to have become synonymous with roads riddled with craters and potholes, many of which pose significant safety hazards. These poorly maintained roads not only… pic.twitter.com/nwS9ntNbcX
— Karnataka Portfolio (@karnatakaportf) November 15, 2024
ರಸ್ತೆಗಳು ಪ್ರಯಾಣಿಕರಿಗೆ ಭಯ ಉಂಟುಮಾಡುವಂತಿವೆ. ರಸ್ತೆಗುಂಡಿಗಳಿಂದಾಗಿ ಅಪಘಾತ-ಪೀಡಿತ ವಲಯಗಳು ಹೆಚ್ಚುತ್ತಿವೆ. ನಾಗವಾರ ಜಂಕ್ಷನ್‌ನ ರಸ್ತೆಯಲ್ಲಿ ದೊಡ್ಡ ಹೊಂಡವಿದ್ದು, ಸರಕು ಆಟೋ ಪಲ್ಟಿಯಾಗಿದೆ. ಇಂತಹ ಹಲವಾರು ಘಟನೆಗಳು ನಡೆಯುತ್ತಿದ್ದರೂ, ಬಿಬಿಎಂಪಿ ನಿದ್ರೆಯ ಗುಂಗಿನಲ್ಲಿದೆ ಎಂದು ಹಲವರು ಕಿಡಿಕಾರಿದ್ದರೆ.