ಬೆಂಗಳೂರು | ತಾಯಂದಿರ ಎದೆ ಹಾಲಿನ ಎರಡನೇ ಬ್ಯಾಂಕ್‌ ಮುಂದಿನ ವಾರ ಗೋಶಾ ಆಸ್ಪತ್ರೆಯಲ್ಲಿ ಆರಂಭ

Date:

Advertisements
  • ಶಿಶುಗಳಿಗೆ ಎದೆ ಹಾಲು ನೀಡುವ ದಾನಿಗಳು ಆಸ್ಪತ್ರೆಯ ತಾಯಂದಿರು
  • ಕರ್ನಾಟಕದಲ್ಲಿ ಮೂರನೇಯ ತಾಯಂದಿರ ಎದೆ ಹಾಲಿನ ಬ್ಯಾಂಕ್‌ ಆರಂಭ

ರಾಜ್ಯ ರಾಜಧಾನಿ ಬೆಂಗಳೂರಿನ ಗೋಶಾ ಆಸ್ಪತ್ರೆಯಲ್ಲಿ ಮುಂದಿನ ವಾರದಿಂದ ತಾಯಂದಿರ ಎದೆ ಹಾಲಿನ ಎರಡನೇ ಬ್ಯಾಂಕ್ ಆರಂಭವಾಗುತ್ತಿದೆ.

ಹಾಜೀ ಸರ್ ಇಸ್ಮಾಯಿಲ್ ಸೇಟ್ (ಎಚ್‌ಎಸ್‌ಐಎಸ್‌) ಗೋಶಾ ಆಸ್ಪತ್ರೆಯಲ್ಲಿ ಅವಧಿಪೂರ್ವ ಮತ್ತು ಕಡಿಮೆ ತೂಕದ ಶಿಶುಗಳಿಗಾಗಿ ಎದೆ ಹಾಲನ್ನು ಉಚಿತವಾಗಿ ನೀಡಲು ಈ ಬ್ಯಾಂಕ್ ಆರಂಭವಾಗುತ್ತಿದೆ. ಆಸ್ಪತ್ರೆಯಲ್ಲಿ ಮುಂದಿನ ವಾರದಿಂದ ಎದೆ ಹಾಲಿನ ಬ್ಯಾಂಕ್ ಕಾರ್ಯನಿರ್ವಹಿಸಲು ಸಿದ್ಧವಾಗಿದೆ.

ಈಗ ಸ್ಥಾಪನೆ ಆಗುತ್ತಿರುವ ತಾಯಂದಿರ ಎದೆ ಹಾಲಿನ ಬ್ಯಾಂಕ್‌ ಕರ್ನಾಟಕದಲ್ಲಿ ಮೂರನೇಯದ್ದಾಗಿದೆ ಹಾಗೂ ಬೆಂಗಳೂರಿನಲ್ಲಿ ಎರಡನೆಯದು. ಶಿಶುಗಳಿಗೆ ಎದೆ ಹಾಲು ನೀಡುವ ದಾನಿಗಳು ಆಸ್ಪತ್ರೆಯಲ್ಲಿ ದಾಖಲಾಗಿರುವ ತಾಯಂದಿರಾಗಿರುತ್ತಾರೆ. ಆಸ್ಪತ್ರೆಯಲ್ಲಿ ಅನಾರೋಗ್ಯ ಮತ್ತು ಅವಧಿಪೂರ್ವ ಶಿಶುಗಳಿಗೆ ಹಾಲನ್ನು ಉಚಿತವಾಗಿ ನೀಡಲಾಗುತ್ತದೆ.

Advertisements

ಪ್ರಸ್ತುತ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವಾಣಿ ವಿಲಾಸ ಹೆರಿಗೆ ಆಸ್ಪತ್ರೆ ಮತ್ತು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್) ಇಂತಹ ಸೌಲಭ್ಯ ಹೊಂದಿರುವ ಎರಡು ಸರ್ಕಾರಿ ಸಂಸ್ಥೆಗಳಾಗಿವೆ.

ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ (ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ) ಹೊಂದಿಕೊಂಡಿರುವ 120 ಹಾಸಿಗೆಗಳ ಎಚ್‌ಎಸ್‌ಐಎಸ್‌ ಗೋಶಾ ಆಸ್ಪತ್ರೆಯು ಪೂರ್ವ ಬೆಂಗಳೂರು ಮತ್ತು ಸೆಂಟ್ರಲ್ ಬ್ಯುಸಿನೆಸ್ ಜಿಲ್ಲೆಯ ರೋಗಿಗಳಿಗೆ ಹೆರಿಗೆ ರೆಫರಲ್ ಆಸ್ಪತ್ರೆಯಾಗಿದೆ.

ಆಸ್ಪತ್ರೆಯಲ್ಲಿ ತಾಯಂದಿರ ಎದೆ ಹಾಲಿನ ಬ್ಯಾಂಕ್‌ ಮೂಲಸೌಕರ್ಯಗಳೊಂದಿಗೆ ಸಿದ್ಧವಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ತುಳಸಿದೇವಿ ಡಿ ಬುಧವಾರ ತಿಳಿಸಿದರು.

“ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಜನಿಸುವ 550 ಶಿಶುಗಳಲ್ಲಿ ಸುಮಾರು 19% ಕಡಿಮೆ ತೂಕದ ಹಾಗೂ ಜನನದ ಅವಧಿಗೂ ಮುಂಚಿತವಾಗಿ ಶಿಶುಗಳ ಜನನವಾಗುತ್ತವೆ. ನಿಯೋನಾಟಲ್ ಇಂಟೆನ್ಸಿವ್ ಕೇರ್ ಯುನಿಟ್ 12 ಶಿಶುಗಳಿಗೆ ಅವಕಾಶ ಕಲ್ಪಿಸುತ್ತದೆ. ಅದರಲ್ಲಿ ಸುಮಾರು ಆರು ಮಕ್ಕಳಿಗೆ ಎದೆ ಹಾಲು ಬೇಕಾಗುತ್ತದೆ. ಇದಕ್ಕೆ ಕಾರಣ ಅವರು ಅವಧಿಪೂರ್ವವಾಗಿ ಜನಿಸಿರುವುದು ಅಥವಾ ಕಡಿಮೆ ತೂಕವನ್ನು ಹೊಂದಿರುವುದು. ಅಲ್ಲದೆ, ಕೆಲವು ತಾಯಂದಿರು ಶಿಶುಗಳಿಗೆ ಅಗತ್ಯವಿರುವ ಪ್ರಮಾಣದಲ್ಲಿ ಹಾಲುಣಿಸಲು ಸಾಧ್ಯವಾಗುವುದಿಲ್ಲ. ಇಂತಹ ಶಿಶುಗಳಿಗೆ ಈ ತಾಯಂದಿರ ಎದೆ ಹಾಲಿನ ಬ್ಯಾಂಕ್ ಅನುಕೂಲವಾಗಲಿದೆ” ಎಂದು ಡಾ.ದೇವಿ ಹೇಳಿದರು.

ಸಂಶೋಧನಾ ಸಂಸ್ಥೆಯ ನಿರ್ದೇಶಕ ಮತ್ತು ಡೀನ್ ಮನೋಜ್ ಕುಮಾರ್ ಹೆಚ್.ವಿ ಮಾತನಾಡಿ, “ಗೋಶಾ ಆಸ್ಪತ್ರೆಯು ರೆಫರಲ್ ಹೆರಿಗೆ ಆಸ್ಪತ್ರೆಯಾಗಿರುವುದರಿಂದ ಹೆಚ್ಚಿನ ಗರ್ಭಿಣಿಯರು ಈ ಆಸ್ಪತ್ರೆಗೆ ಬಂದು ದಾಖಲಾಗುತ್ತಾರೆ. ನವಜಾತ ಶಿಶುಗಳಿಗೆ, ವಿಶೇಷವಾಗಿ ಕಡಿಮೆ ಜನನ ತೂಕ ಹೊಂದಿರುವವರಿಗೆ, ಪಾಶ್ಚೀಕರಿಸಿದ ಎದೆ ಹಾಲಿನೊಂದಿಗೆ ಆಹಾರವನ್ನು ನೀಡುವುದು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ನಮ್ಮ ಆಸ್ಪತ್ರೆಯಲ್ಲಿರುವ ಮಕ್ಕಳಿಗೆ ಎದೆ ಹಾಲು ಒದಗಿಸುವುದರ ಜತೆಗೆ ಅಗತ್ಯವಿರುವ ಇತರೆ ಆಸ್ಪತ್ರೆಗಳಿಗೆ ಹಾಲನ್ನು ನೀಡುತ್ತೇವೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು ವಿಶ್ವವಿದ್ಯಾಲಯ | ‘ನ್ಯಾಕ್ ಎ ಡಬಲ್ ಪ್ಲಸ್’ ಪಡೆದಿದ್ದರೂ ವಿದ್ಯಾರ್ಥಿಗಳಿಗಿಲ್ಲ ಮೂಲ ಸೌಕರ್ಯ

ವಾಣಿ ವಿಲಾಸ ತಾಯಂದಿರ ಎದೆ ಹಾಲಿನ ಬ್ಯಾಂಕ್

ಕಳೆದ ವರ್ಷ ಮಾರ್ಚ್‌ 8ರಂದು ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ತಾಯಂದಿರ ಎದೆ ಹಾಲಿನ ಕೇಂದ್ರ ಆರಂಭವಾಯಿತು. ಇಲ್ಲಿ ನಿತ್ಯ 20 ರಿಂದ 30 ತಾಯಂದಿರು ಎದೆ ಹಾಲನ್ನು ನೀಡುತ್ತಿದ್ದಾರೆ. ‘ಅಮೃತಧಾರೆ ಹ್ಯೂಮನ್ ಮಿಲ್ಕ್ ಬ್ಯಾಂಕ್’ ಸುಮಾರು 200 ಲೀಟರ್ ತಾಯಂದಿರ ಎದೆ ಹಾಲು ಸಂಗ್ರಹಿಸಿದೆ. ಇದರಿಂದ 1,000 ಕ್ಕೂ ಹೆಚ್ಚು ಶಿಶುಗಳನ್ನು ಅನುಕೂಲವಾಗಿದೆ.

ರಾಜ್ಯ ಆರೋಗ್ಯ ಇಲಾಖೆಯು ಬೆಂಗಳೂರು, ಬೆಳಗಾವಿ, ಕಲಬುರ್ಗಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ನಾಲ್ಕು ತಾಯಂದಿರ ಎದೆ ಹಾಲಿನ ಬ್ಯಾಂಕ್‌ಗಳನ್ನು ಪ್ರಾರಂಭಿಸಲು ಚಿಂತನೆ ನಡೆಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟ, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್‌ ಕೇಸ್‌ ದಾಖಲು

ಬೆಂಗಳೂರು ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪೂಜಿಸಬೇಕಾಗಿ ಮತ್ತು...

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮಹಿಳೆ ವಿರುದ್ಧದ ಪೋಕ್ಸೋ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಬೆಂಗಳೂರಿನ ವಿಲ್ಲಾವೊಂದರಲ್ಲಿ ವಾಸವಿದ್ದ 53 ವರ್ಷದ ಮಹಿಳೆ ತನ್ನ ಕಾಮ ತೃಷೆಗಾಗಿ...

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

Download Eedina App Android / iOS

X