- ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್‌ನ ಕೋವಿಡ್ ವಾರ್ಡ್‌ನ ನೋಡಲ್ ಅಧಿಕಾರಿ
- ಬಿಎಂಸಿಆರ್‌ಐನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಡಾ. ಅಸಿಮಾ ಬಾನು
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಬಿಎಂಸಿಆರ್‌ಐ) 23 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಡಾ. ಅಸಿಮಾ ಬಾನು ಅವರು ಬುಧವಾರ ಸಂಸ್ಥೆಯ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಬಿಎಂಸಿಆರ್‌ಐನಲ್ಲಿ ಪ್ರಾಂಶುಪಾಲರಾಗಿ ಸ್ಥಾನ ಪಡೆದ ಮೊದಲ ಮುಸ್ಲಿಂ ಮಹಿಳೆ ಡಾ. ಅಸಿಮಾ ಬಾನು ಅವರು 2020ರಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಕೋವಿಡ್ ವಾರ್ಡ್‌ನ ನೋಡಲ್ ಅಧಿಕಾರಿಯಾಗಿ ಮಾಡಿದ ಕೆಲಸಕ್ಕಾಗಿ ವ್ಯಾಪಕ ಪ್ರಶಂಸೆ ದೊರೆತಿದೆ.
1990ರ ದಶಕದಲ್ಲಿ ಬಿಎಂಸಿಆರ್‌ಐನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಅವರು 2000ರಲ್ಲಿ ಮೈಕ್ರೋಬಯಾಲಜಿ ವಿಭಾಗದಲ್ಲಿ ಅಧ್ಯಾಪಕರಾಗಿ ಅಧಿಕಾರ ವಹಿಸಿಕೊಂಡರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೆರೆ ಮಾಲಿನ್ಯದಿಂದ ಮೀನುಗಳ ಮಾರಣಹೋಮ; 6 ತಿಂಗಳಲ್ಲಿ 11 ಘಟನೆ ವರದಿ
ಅಂದಿನಿಂದ ಅವರು ಗುಣಮಟ್ಟದ ಉಸ್ತುವಾರಿ ಮತ್ತು ಕೋವಿಡ್ ಸೋಂಕು ನಿಯಂತ್ರಣ ಅಧಿಕಾರಿಯಾಗಿ, ಬೌರಿಂಗ್ ಆಸ್ಪತ್ರೆಯಲ್ಲಿ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥರಾಗಿ, ವೈದ್ಯಕೀಯ ಶಿಕ್ಷಣ ಘಟಕದ ಸಂಚಾಲಕರಾಗಿ ಮತ್ತು ಬಿಎಂಸಿಆರ್‌ಐನ ಸಿಮ್ಯುಲೇಶನ್ ಮತ್ತು ಕೌಶಲ್ಯ ಕೇಂದ್ರದ ನೋಡಲ್ ಅಧಿಕಾರಿ ಸೇರಿದಂತೆ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.