ಬೆಂಗಳೂರು | ಜೋಡಿಗಳನ್ನು ಸುಲಿಯುತ್ತಿದ್ದ ನಕಲಿ ಪೊಲೀಸನ ಬಂಧನ

Date:

ಬೆಂಗಳೂರಿನ ಪಾರ್ಕುಗಳು ಮತ್ತು ಕೆರೆಗಳು ಇಲ್ಲವೇ ರಸ್ತೆ ಬದಿ ಬಳಿ ಕಾರಿನಲ್ಲಿ ಕುಳಿತ ಜೋಡಿಗಳನ್ನು ಬೆದರಿಸಿ ಅವರಿಂದ ಹಣ, ಚಿನ್ನ ಸುಲಿಗೆ ಮಾಡುತ್ತಿದ್ದ ನಕಲಿ ಪೊಲೀಸನನ್ನು ಬಂಧಿಸಲಾಗಿದೆ.

- Advertisement -

ನಕಲಿ ಪೊಲೀಸನ ಹಾವಳಿ ಬಗ್ಗೆ ಹಲವಾರು ದೂರುಗಳು ಕೇಳಿ ಬಂದ ನಂತರ ಕಾರ್ಯಾಚರಣೆಗಿಳಿದ ಜಯನಗರ ಪೊಲೀಸರು ಆಸೀಫ್ ಖಾನ್ ಅಲಿಯಾಸ್ ಪಿಸ್ತೋ ಎಂಬುವನನ್ನು ದಸ್ತಗಿರಿ ಮಾಡಿದ್ದಾರೆ. ಗಂಗಾನಗರದ ನಿವಾಸಿಯಾದ ಖಾನ್ 10ನೆಯ ತರಗತಿಯಲ್ಲಿ ನಪಾಸಾಗಿ ಅರೆಕಾಲಿಕ ಆಟೋ ಚಾಲಕನಾಗಿದ್ದ. ಕಾರಿನಲ್ಲಿ ಕುಳಿತಿರುತ್ತಿದ್ದ ಜೋಡಿಗಳನ್ನು ‘ಸಾರ್ವಜನಿಕ ಅಸಭ್ಯತೆ’ಯ ಹೆಸರಿನಲ್ಲಿ ಬೆದರಿಸಿ ಹಣ ಕೀಳುತ್ತಿದ್ದ. ಪೊಲೀಸರ ಹೆಸರಿನಲ್ಲಿ ಈ ಕೆಲಸ ಮಾಡುತ್ತಿದ್ದ ಈತ ಪೊಲೀಸರ ಪಾಲಿಗೆ ವಿಶೇಷ ತಲೆನೋವಾಗಿದ್ದ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ತನ್ನನ್ನು ಪೊಲೀಸನೆಂದು ಬಣ್ಣಿಸಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆಯ ಕೇಸು ಹಾಕುವುದಾಗಿ ಜೋಡಿಗಳನ್ನು ಬ್ಲ್ಯಾಕ್ ಮೇಲ್ ಮಾಡಿ ಹಣ ಪಡೆಯುತ್ತಿದ್ದ. ಜಯನಗರದ ಆರ್,ವಿ,ಮೆಟ್ರೋ ನಿಲ್ದಾಣದ ಬಳಿ ತಮ್ಮ ಸಹೋದ್ಯೋಗಿಯ ಜೊತೆ ಕಾರಿನಲ್ಲಿ ಕುಳಿತಿದ್ದ ಖಾಸಗಿ ಕಂಪನಿಯೊಂದರ ಉದ್ಯೋಗಿಯನ್ನು ಇದೇ ತಿಂಗಳ ಐದರಂದು ಬೆದರಿಸಿದ್ದ. ಆತನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಕೈಯಲ್ಲಿನ ಚಿನ್ನದ ಉಂಗುರದ ಜೊತೆಗೆ ಎಟಿಎಂ ನಿಂದ 10 ಸಾವಿರ ರುಪಾಯಿಗಳನ್ನು ತೆಗೆಯಿಸಿ ಕಬಳಿಸಿದ್ದ.  ಇಂತಹ ಇನ್ನೂ ಹಲವು ದೂರುಗಳು ಈತನ ಮೇಲಿದ್ದವು.

ಈ ನಕಲಿ ಪೊಲೀಸನಿಂದ 80 ಗ್ರ್ಯಾಮ್ ಗಳಷ್ಟು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದೆ. ಈತನ ಸುಲಿಗೆಗೆ ಈಡಾದವರು ಜಯನಗರ ಪೊಲೀಸರನ್ನು ಸಂಪರ್ಕಿಸಬಹುದು ಇಲ್ಲವೇ ಸಮೀಪದ ಠಾಣೆಗಳಲ್ಲಿ ದೂರು ನೀಡಬಹುದು ಎಂದು ಪೊಲೀಸರು ಸೂಚಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾಗತಿಕ ಕೌಶಲ್ಯ ರಾಜಧಾನಿಯಾಗುವತ್ತ ಕರ್ನಾಟಕದ ದಿಟ್ಟ ಹೆಜ್ಜೆ: ನ. 3ರಿಂದ ‘ಬೆಂಗಳೂರು ಕೌಶಲ್ಯ ಶೃಂಗಸಭೆ’

"ಕೃತಕ ಬುದ್ಧಿಮತ್ತೆ (AI) ಹಾಗೂ ಹೊಸ ತಂತ್ರಜ್ಞಾನಗಳಿಂದ ಕೌಶಲ್ಯ ಕ್ಷೇತ್ರವು ಅತಿವೇಗವಾಗಿ...

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ‘ಬ್ಯಾರಿ ಭಾಷಾ ದಿನ’ ಆಚರಣೆ

ಜಗತ್ತಿನ ಯಾವುದೇ ಭಾಷೆಯನ್ನು ಬ್ಯಾರಿ ಸಮುದಾಯದ ಮಕ್ಕಳು ಕಲಿಯಲಿ. ಆದರೆ, ಮನೆಯಲ್ಲಿ...

ಬೆಂಗಳೂರು | ಅಕ್ರಮವಾಗಿ ಮನೆ ನೆಲಸಮ: 5 ಲಕ್ಷ ನಗದು, ಆಭರಣ ಕಳವು; ಇಬ್ಬರ ವಿರುದ್ಧ ಎಫ್‌ಐಆರ್

67 ವರ್ಷದ ವೃದ್ಧ ವ್ಯಾಪಾರಿಯೊಬ್ಬರ ಮನೆಯನ್ನು ಅಕ್ರಮವಾಗಿ ಧ್ವಂಸಗೊಳಿಸಿ, ರೂ. 5...

ಧರ್ಮಸ್ಥಳದ ಸಾವಿನ ಪ್ರಮಾಣದಲ್ಲಿ ವ್ಯತ್ಯಾಸ; ನಿಜ ಪತ್ತೆಗೆ ಎಸ್‌ಐಟಿಗೆ ಸರ್ಕಾರದಿಂದ ಪೂರಕ ಬೆಂಬಲ ಅಗತ್ಯ: ಮಹಿಳಾ ಆಯೋಗದ ಅಧ್ಯಕ್ಷೆ

ಧರ್ಮಸ್ಥಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾವುಗಳು...