ಯುವಜನರಲ್ಲಿ ಕ್ರೀಡಾ ಸ್ಫೂರ್ತಿ ಮತ್ತು ದೈಹಿಕ ಕ್ಷಮತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ‘ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕ’, ‘ಬೆಂಗಳೂರು ನಗರ ಘಟಕ’ ಮತ್ತು ‘ಐಡಿಯಲ್ ಸ್ಪೋರ್ಟ್ಸ್ ಅಕಾಡೆಮಿ’ ಸಹಯೋಗದೊಂದಿಗೆ ನಡೆಸಿದ ಸ್ಮ್ಯಾಷ್ ಫೆಸ್ಟ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ವಸಂತ ನಗರದಲ್ಲಿರುವ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಒಟ್ಟು 32 ತಂಡಗಳು ಭಾಗವಹಿಸಿದ್ದು, 32 ರೋಚಕ ಪಂದ್ಯಗಳು ಜರುಗಿದವು. ಫೈನಲ್ ಪಂದ್ಯದಲ್ಲಿ ‘ಅಮೀರ್ ಮತ್ತು ಸಫ್ವಾನ್’ ತಂಡವು ಅಜಹರ್ ಮತ್ತು ಜವಾದ್ ಅವರ ‘ರ್‍ಯಾಲಿ ರೈಡರ್ಸ್’ ತಂಡವನ್ನು 2-0 ಅಂತರದಿಂದ ರೋಚಕವಾಗಿ ಗೆದ್ದು, ಚಾಂಪಿಯನ್ ಆದರು. ತೃತೀಯ ಸ್ಥಾನವನ್ನು ಇಮ್ರಾನ್ ಷರೀಫ್ ಮತ್ತು ಇಮ್ತಿಯಾಜ್ ಅವರ ‘ಟೀಮ್ 804’ ಪಡೆದುಕೊಂಡಿತು.
ಇದನ್ನೂ ಓದಿ: ಸ್ಟಾರ್ಟ್ಅಪ್ ಪ್ರೋತ್ಸಾಹಕ್ಕೆ ಹೆಚ್ಚುವರಿ ಅನುದಾನ ಕೋರಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಮನವಿ
ಸಮಾರೋಪ ಸಮಾರಂಭದಲ್ಲಿ ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕದ ರಾಜ್ಯಾಧ್ಯಕ್ಷರಾದ ಡಾ. ನಸೀಮ್ ಅಹ್ಮದ್ ಅವರು ವಿಜೇತ ತಂಡಗಳಿಗೆ ಟ್ರೋಫಿಗಳನ್ನು ವಿತರಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ಯುವಜನತೆಗೆ ಕ್ರೀಡೆ ಮತ್ತು ಫಿಟ್‌ನೆಸ್‌ನ ಮಹತ್ವವನ್ನು ವಿವರಿಸಿದರು.
ಅಲ್ಲದೆ, ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕ ಹಮ್ಮಿಕೊಂಡಿರುವ ‘ಮೌನ ಮುರಿಯಿರಿ: ನ್ಯಾಯಕ್ಕಾಗಿ ಧ್ವನಿ ಎತ್ತಿ’ (UNMUTE: RISE FOR JUSTICE) ಅಭಿಯಾನದ ಕುರಿತು ಮಾಹಿತಿ ನೀಡುತ್ತಾ, “ಇಂದು ಸಮಾಜದ ಹಲವು ಕ್ಷೇತ್ರಗಳಲ್ಲಿ ಅನ್ಯಾಯ ನಡೆಯುತ್ತಿದೆ. ಯಾರ ವಿರುದ್ಧ ಅನ್ಯಾಯ ಆಗುತ್ತಿದ್ದರೂ ಯುವ ಸಮಾಜ ಧ್ವನಿ ಎತ್ತಬೇಕು. ಈ ಬಗ್ಗೆ ಜಾಗೃತಿ ಮೂಡಿಸಲು ‘ಮೌನ ಮುರಿಯಿರಿ: ನ್ಯಾಯಕ್ಕಾಗಿ ಧ್ವನಿ ಎತ್ತಿ’ ಎಂಬ ಅಭಿಯಾನವನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು” ಎಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಸ್ಮಾಯಿಲ್, ಬೆಂಗಳೂರು ನಗರ ಅಧ್ಯಕ್ಷರಾದ ಸುಹೈಲ್ ಅಹ್ಮದ್, ಜಯನಗರ ಘಟಕದ ಅಧ್ಯಕ್ಷರಾದ ಸೊಹೈಲ್, ರಾಜ್ಯ ಕಾರ್ಯದರ್ಶಿ ಇರ್ಷಾದ್ ವೇಣೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪಂದ್ಯಾವಳಿಯಲ್ಲಿ ತೀರ್ಪುಗಾರರಾಗಿ ಮಹೇರ್ ಹಮ್ಜಾ, ಇರ್ಫಾನ್, ಮೊಬೀನ್, ಆಸಿಫ್, ಇಸ್ಮಾಯಿಲ್ ತೀರ್ಥಹಳ್ಳಿ, ಮುದಬ್ಬಿರ್ ಅಲಿ, ಸಾಕಿಬ್ ಜಾಕಿ ಹಾಗೂ ಮುದಸ್ಸಿರ್ ಅಲಿ ಸಹಕರಿಸಿದರು. ಸ್ಕೋರರ್ ಮತ್ತು ಸಂಯೋಜಕರಾಗಿ ಫಾರೂಕ್ ಅಹ್ಮದ್, ಮುದಸ್ಸಿರ್, ಸಯೀದ್ ಬಾಗ್ಬನ್ ಹಾಗೂ ಹನ್ನಾನ್ ಜವಾಬ್ದಾರಿ ನಿರ್ವಹಿಸಿದರು. ಸಂಚಾಲಕರಾಗಿ ಉಮೈರ್ ಖಾನ್ ಕಾರ್ಯ ನಿರ್ವಹಿಸಿದರು.


