ಬ್ಯಾರಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ʼಬ್ಯಾರಿ ಸೆಂಟ್ರಲ್‌ ಕಮಿಟಿ ಬೆಂಗಳೂರುʼ ರಚನೆ : ಅಧ್ಯಕ್ಷರಾಗಿ ಶಬೀರ್‌ ಬ್ರಿಗೇಡ್‌

Date:

Advertisements

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿ ಕರ್ನಾಟಕದ ಬಹುಮುಖ್ಯ ಸಮುದಾಯವಾಗಿರುವ ಬ್ಯಾರಿ ಸಮುದಾಯದ ಯುವಕರಿಂದ ಬ್ಯಾರಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ʼಬ್ಯಾರಿ ಸೆಂಟ್ರಲ್‌ ಕಮಿಟಿ ಬೆಂಗಳೂರುʼ ಎಂಬ ಸಂಘಟನೆಯನ್ನು ರಚಿಸಲಾಗಿದ್ದು, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಅಧ್ಯಕ್ಷರಾಗಿ ಶಬೀರ್‌ ಬ್ರಿಗೇಡ್‌, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್‌ ಕೆಂಪಿ ಆಯ್ಕೆಯಾಗಿದ್ದಾರೆ. ಈ ಸಂಘಟನೆಯು ಬೆಂಗಳೂರಿನಲ್ಲಿರುವ ಅನಿವಾಸಿ ಬ್ಯಾರಿಗಳ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಕಾನೂನಾತ್ಮಕ ಸಹಾಯ, ಮುಂತಾದ ರೀತಿಯಲ್ಲಿ ಬ್ಯಾರಿ ಸಮುದಾಯದ ಸಮಗ್ರ ಅಭಿವೃಧ್ದಿಗಾಗಿ ಕಾರ್ಯಚರಿಸಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಇದರ ಉಪಾಧ್ಯಕ್ಷರುಗಳಾಗಿ, ರಿಫಾಯಿ ವಸಂತನಗರ, ಸಲೀಂ ಸಿ.ಎಂ
ಶಂಸು ಎಂಪೈರ್ ಆಯ್ಕೆ ಮಾಡಲಾಗಿದೆ. ಉಳಿದಂತೆ ಕಾರ್ಯದರ್ಶಿಗಳಾಗಿ ಅಡ್ವೋಕೇಟ್ ಅತಾವುಲ್ಲ, ಬಶೀರ್ ಅಡ್ಯನಡ್ಕ, ಇರ್ಷಾದ್ ಯುವರ್ ಚಾಯ್ಸ್, ಕೋಶಾಧಿಕಾರಿಗಳಾಗಿ ಅಬ್ಬಾಸ್ ಡೈಮಂಡ್ ಗ್ರೂಪ್, ಉಸ್ಮಾನ್ ಬಂಗಾಡಿ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಹಾರಿಸ್ ಬೆಳ್ಮ ಇವರನ್ನು ಆಯ್ಕೆ ಮಾಡಲಾಗಿದೆ.

Advertisements

BEARY 1

ಅನ್ವರ್ ಎಂಪೈರ್, ಗಫೂರ್ ಕೆಂಟ್, ಖಲಂದರ್ ಬಿಸಿರೋಡ್, ಆಸಿಫ್ ಪಿ ಕೆ, ಹಾರಿಸ್ ಎಸ್ ಕೆ, ಆರಿಫ್ ರೈದಾನ್
ಅಡ್ವೋಕೇಟ್ ಖಲಂದರ್, ಸಮದ್ ಕಿಚನ್ಸ್ ಎಟ್, ಮಾಝ್ ಕಾವಳಕಟ್ಟೆ, ಅಬೀದ್ ಅಲಿ ಲುಲು, ಝಮೀರ್ ಫಿಶ್ ಎಚ್ ಎ ಲ್, ಹುಸೈನ್ ಆತೂರ್, ಹಾರಿಸ್ ಮದ್ದಡ್ಕ, ಅಡ್ವೋಕೇಟ್ ಅನ್ಸಾರ್, ಅಫ್ಜಲ್ ಮೊಬೈಲ್ ಎಕ್ಸ್‌ಪ್ರೆಸ್, ಬದ್ರುದ್ದಿನ್, ಹನೀಫ್ ಕೆಎಂಸಿ, ಇಲ್ಯಾಸ್ ಮುನ್ನ ಯುವರ್ ಚಾಯ್ಸ್ ಇವರನ್ನು ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ‘ಬ್ಯಾರಿ ಸೆಂಟ್ರಲ್‌ ಕಮಿಟಿ ಬೆಂಗಳೂರು’ ಪ್ರಕಟಣೆಯಲ್ಲಿ ತಿಳಿಸಿದೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

ಬೆಂಗಳೂರು ಮೆಟ್ರೋ: ನಾಳೆ ಹಳದಿ ಮಾರ್ಗದಲ್ಲಿ ಬೆಳಿಗ್ಗೆ 5ಕ್ಕೆ ಸಂಚಾರ ಆರಂಭ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ಹಳದಿ ಮಾರ್ಗದಲ್ಲಿ ಸೋಮವಾರ...

Download Eedina App Android / iOS

X