ಪ್ಯಾರಿಸ್ ಒಲಿಂಪಿಕ್ಸ್‌ | ಮಹಿಳೆಯರ ಕುಸ್ತಿ: ಅರ್ಹತೆಯ ಹಾದಿಯಲ್ಲಿ ವಿನೇಶ್ ಪೊಗಾಟ್, ರೀತಿಕಾ, ಅಂಶು ಮಲಿಕ್, ಮಾನ್ಸಿ

Date:

ಮುಂದಿನ ಜುಲೈ 26ರಿಂದ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ಏಷ್ಯನ್ ಅರ್ಹತಾ ಸುತ್ತಿನ ಪಂದ್ಯಾವಳಿಗಳು ನಡೆಯುತ್ತಿದ್ದು, ಮಹಿಳೆಯರ ಕುಸ್ತಿಯ ವಿಭಾಗದಲ್ಲಿ ಭಾರತೀಯ ಕುಸ್ತಿಪಟುಗಳಾದ ವಿನೇಶ್ ಪೊಗಾಟ್ ಸೇರಿದಂತೆ ನಾಲ್ವರು ಅರ್ಹತೆಯ ಹಾದಿಯಲ್ಲಿದ್ದಾರೆ.

- Advertisement -

ಭಾರತದ ಮಹಿಳಾ ಕುಸ್ತಿಪಟುಗಳಾದ ವಿನೇಶ್ ಪೊಗಾಟ್, ಅಂಶು ಮಲಿಕ್, ರೀತಿಕಾ ಮತ್ತು ಮಾನ್ಸಿ ಅವರು ಕಿರ್ಗಿಸ್ತಾನ್‌ನ ಬಿಶ್ಕೆಕ್‌ನಲ್ಲಿ ಇಂದು ನಡೆದ ಏಷ್ಯನ್ ಒಲಿಂಪಿಕ್ ಗೇಮ್ ಕ್ವಾಲಿಫೈಯರ್‌ನ ಸೆಮಿಫೈನಲ್‌ಗೆ ತಲುಪಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ವಿನೇಶ್ ಪೊಗಾಟ್ ತನ್ನ ಕಾಂಬೋಡಿಯಾದ ಪ್ರತಿಸ್ಪರ್ಧಿ ಸ್ಮಾನಂಗ್ ಡಿಟ್ ಅನ್ನು ಸುಲಭವಾಗಿ ಸೋಲಿಸಿದರೆ, 2021 ರ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತೆ ಅಂಶು ಮಲಿಕ್ ಕಿರ್ಗಿಸ್ತಾನ್‌ನ ಕಲ್ಮಿರಾ ಬಿಲಿಂಬೆಕೋವಾ ಅವರನ್ನು ‘ಟೆಕ್ನಿಕಲ್ ಸುಪೀರಿಯಾರಿಟಿ’ ಆಧಾರದ ಮೇಲೆ ಸೋಲಿಸಿದರು.

23 ವರ್ಷದೊಳಗಿನವರ ಕುಸ್ತಿಯಲ್ಲಿ U23 ವಿಶ್ವ ಚಾಂಪಿಯನ್ ರೀತಿಕಾ ತಮ್ಮ ಎದುರಾಳಿ ಚೀನಾದ ಜುವಾಂಗ್ ವಾಂಗ್ ಅವರನ್ನು ಸೋಲಿಸಿದರು. ಕಜಕಿಸ್ತಾನದ ಐರಿನಾ ಕುಜ್ನೆಟ್ಸೊವಾ ವಿರುದ್ಧ ಗೆಲ್ಲುವ ಮೂಲಕ ಮಾನ್ಸಿಯವರು ಕೊನೆಯ ನಾಲ್ಕರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದರು.

68 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಏಕೈಕ ಭಾರತೀಯ ಕುಸ್ತಿಪಟು ನಿಶಾ ದಹಿಯಾ, ಸೆಮಿಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಗೆಲ್ಲಲೇಬೇಕಾಗಿದ್ದ ಮೂರನೇ ಸುತ್ತಿನಲ್ಲಿ ನಿಶಾ, ಕಝಾಕಿಸ್ತಾನ್‌ನ ಯೆಲೆನಾ ಶಾಲಿಗಿನಾ ಅವರನ್ನು ಸೋಲಿಸಿದರು. ಆದರೆ ಅಗ್ರ-ನಾಲ್ಕರಲ್ಲಿ ಉಳಿಯಲು ಸಾಕಷ್ಟು ಅಂಕಗಳನ್ನು ಹೊಂದಿರಲಿಲ್ಲ.

‘ನನ್ನನ್ನು ಡೋಪಿಂಗ್ ಪ್ರಕರಣದಲ್ಲಿ ಸಿಲುಕಿಸಲು ಯತ್ನ ನಡೆದಿದೆ’ ಎಂದು ಆರೋಪಿಸಿದ್ದ ವಿನೇಶ್ ಪೊಗಾಟ್

ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಸಂಜಯ್ ಸಿಂಗ್ ಅವರು ಒಲಿಂಪಿಕ್ಸ್‌ನಲ್ಲಿ ಆಡುವುದನ್ನು ತಡೆಯಲು ಬಯಸುತ್ತಿದ್ದಾರೆ. ಅಲ್ಲದೆ ಅವರು ತನ್ನ ವಿರುದ್ಧ ಡೋಪಿಂಗ್ ಪಿತೂರಿ ಮಾಡುವ ಸಾಧ್ಯತೆಗಳಿವೆ ಎಂದು ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಪೊಗಾಟ್ ಗಂಭೀರ ಆರೋಪ ಮಾಡಿದ್ದರು.

29ರ ಹರೆಯದ ವಿನೇಶ್ 2019 ಮತ್ತು 2022ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 53 ಕೆಜಿ ವಿಭಾಗದಲ್ಲಿ ಕಂಚು ಮತ್ತು 2018ರ ಏಷ್ಯನ್ ಗೇಮ್ಸ್‌ನಲ್ಲಿ 50 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.

“ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಅವರ ಆಪ್ತ ಸಂಜಯ್ ಸಿಂಗ್ ಅವರು ನನ್ನನ್ನು ಒಲಿಂಪಿಕ್ಸ್‌ನಲ್ಲಿ ಆಡದಂತೆ ತಡೆಯಲು ಸಾಧ್ಯವಿರುವ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ತಂಡದೊಂದಿಗೆ ನೇಮಕಗೊಂಡಿರುವ ತರಬೇತುದಾರರು ಬ್ರಿಜ್ ಭೂಷಣ್ ಮತ್ತು ಅವರ ತಂಡಕ್ಕೆ ಅಚ್ಚುಮೆಚ್ಚಿನವರು, ಆದ್ದರಿಂದ ಅವರು ನನ್ನ ನೀರಿನಲ್ಲಿ ಏನನ್ನಾದರೂ ಬೆರೆಸಿ ನನ್ನ ಪಂದ್ಯದ ಸಮಯದಲ್ಲಿ ಅದನ್ನು ಕುಡಿಯುವಂತೆ ಮಾಡುತ್ತಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ನನ್ನನ್ನು ಡೋಪ್‌ನಲ್ಲಿ ಸಿಲುಕಿಸಲು ಸಂಚು ನಡೆದಿರಬಹುದು ಎಂದು ನಾನು ಹೇಳಿದರೆ ಅದು ತಪ್ಪಾಗುವುದಿಲ್ಲ. ನಮ್ಮನ್ನು ಮಾನಸಿಕವಾಗಿ ಹಿಂಸಿಸಲು ಯಾವುದೇ ದಾರಿಯನ್ನು ಬಿಡುತ್ತಿಲ್ಲ. ಇಂತಹ ಮಹತ್ವದ ಸ್ಪರ್ಧೆಗೆ ಮುನ್ನ ನಮ್ಮ ವಿರುದ್ಧದ ಇಂತಹ ಮಾನಸಿಕ ಕಿರುಕುಳ ಎಷ್ಟರ ಮಟ್ಟಿಗೆ ಸರಿ?” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್: ಲವ್ಲಿನಾಗೆ ಚಿನ್ನ, ಬಿಲ್ಲುಗಾರಿಕೆಯಲ್ಲಿ ಐತಿಹಾಸಿಕ ಸಾಧನೆ; ಪದಕ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು...

ಏಷ್ಯನ್ ಗೇಮ್ಸ್: ಪಾಕ್ ಮಣಿಸಿ ಫೈನಲ್‌ಗೇರಿದ ಭಾರತ ಹಾಕಿ ತಂಡ; ಕುಸ್ತಿಯಲ್ಲಿ ನಿತೇಶ್‌ಗೆ ಬೆಳ್ಳಿ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 13ನೇ ದಿನವಾದ...

ಏಷ್ಯಾಡ್’ನಲ್ಲಿ ಶ್ರೀಲಂಕಾ ಸೋಲಿಸಿದ ಟೀಮ್ ಇಂಡಿಯಾ: ಚಿನ್ನದ ಪದಕಕ್ಕಾಗಿ ಪಾಕ್ ಎದುರು ಸೆಣಸು

ಸಂಘಟಿತ ಪ್ರದರ್ಶನ ನೀಡಿದ ಭಾರತ ಪುರುಷರ ಕ್ರಿಕೆಟ್ ತಂಡ, ಇಲ್ಲಿ ನಡೆಯುತ್ತಿರುವ...

ಗಿಲ್ ಅಮೋಘ ದ್ವಿಶತಕದಾಟ, ರೋಹಿತ್ ಶತಕ: 406 ರನ್ ಗುರಿ ಮುಟ್ಟಿ ಐತಿಹಾಸಿಕ ಜಯ ಸಾಧಿಸಿದ ಭಾರತ

ಗುವಾಹಟಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಇತಿಹಾಸ...