ಬೆಂಗಳೂರು-ಮೈಸೂರು ಹೆದ್ದಾರಿ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿದೆ. ಇದೀಗ, ಹೆದ್ದಾರಿಯಲ್ಲಿ ಸಿಮೆಂಟ್ ತುಂಬಿದ ಕಂಟೇನರ್ ಟೈರ್ ಸ್ಫೋಟಗೊಂಡು ಪಲ್ಟಿಯಾಗಿದೆ. ಇದರಡಿ ಕಂಟೇನರ್‌ನ ಚಾಲಕ ಸಿಲುಕಿ ಒದ್ದಾಡಿದ ಘಟನೆ ನಡೆದಿದೆ.
ಚನ್ನಪಟ್ಟಣ ತಾಲೂಕಿನ ಕುಂತೂರುದೊಡ್ಡಿ ಗ್ರಾಮದ ಬಳಿ ಕಂಟೇನರ್ ಪಲ್ಟಿಯಾಗಿದೆ. ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಕಂಟೇನರ್ ಉರುಳಿ ಬಿದ್ದಿದೆ. ಈ ವೇಳೆ, ಕಂಟೇನರ್ ಕೆಳಗೆ ಚಾಲಕ ಸಿಲುಕಿ ಬಿದ್ದಿದ್ದು, ಸ್ಥಳೀಯರು ಹಾಗೂ ಪೊಲೀಸರು ಜೆಸಿಬಿ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿ ಚಾಲಕನನ್ನು ರಕ್ಷಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಜಾ ದಿನಗಳೆಂದರೆ ಖಾಸಗಿ ಬಸ್‌ಗಳಿಗೆ ಹಬ್ಬ; ದುಪ್ಪಟ್ಟಾಗುವ ಟಿಕೆಟ್ ದರ; ಕ್ರಮ ಕೈಗೊಳ್ಳದ ಸಾರಿಗೆ ಇಲಾಖೆ
ಸಿಮೆಂಟ್ ತುಂಬಿದ ಕಂಟೇನರ್ ವೊಂದು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿತ್ತು. ಈ ವೇಳೆ, ಟೈರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಬೃಹತ್ ಕಂಟೇನರ್ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಉರುಳಿ ಬಿದ್ದಿದೆ. ಇದರ ಪರಿಣಾಮ ಲಾರಿ ಇಂಜಿನ್ ಮತ್ತು ಕಂಟೇನರ್ ಇಬ್ಬಾಗವಾಗಿದೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.