- ವೈಜ್ಞಾನಿಕವಾಗಿಯೂ ಚಿಂತನೆ ಮಾಡದೆ ಹೋಟೆಲ್ಗಳಲ್ಲಿ ತಿಂಡಿ ಬೆಲೆ ಏರಿಕೆ
- ₹1ಕ್ಕೆ ಒಂದು ರಾಗಿ ಮುದ್ದೆ, ಸಾರು ಮಾರುವ ಮೂಲಕ ವಿನೂತನ ಪ್ರತಿಭಟನೆ
ವಿನೂತನ ಪ್ರತಿಭಟನೆ ಮಾಡುವ ಮೂಲಕ ಗುರುತಿಸಿಕೊಂಡಿರುವ ಮಾಜಿ ಶಾಸಕ ಹಾಗೂ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಶುಕ್ರವಾರ ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ಒಂದು ರೂಪಾಯಿಗೆ ಒಂದು ರಾಗಿ ಮುದ್ದೆ, ಸಾರು ಮಾರುವ ಮೂಲಕ ಹೋಟೆಲ್ಗಳ ದರ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಮಾಜಿ ಶಾಸಕ ಹಾಗೂ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, “ಹೋಟೆಲ್ಗಳಲ್ಲಿ ಅವೈಜ್ಞಾನಿಕವಾಗಿ ತಿಂಡಿಗಳ ಬೆಲೆ ಏರಿಕೆ ಮಾಡಲಾಗಿದೆ. ಇದನ್ನು ವಿರೋಧಿಸಿ ಒಂದು ರೂಪಾಯಿಗೆ ಒಂದು ರಾಗಿ ಮುದ್ದೆ, ಸಾರು ಮಾರುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದೇವೆ” ಎಂದು ತಿಳಿಸಿದರು.
“ಏಕಾಏಕಿ ಚಿಂತನೆ ಮಾಡದೆ ಹೋಟೆಲ್ಗಳಲ್ಲಿ ತಿಂಡಿಗಳ ಬೆಲೆ ಏರಿಸಿರುವುದು ಸರಿಯಾದ ಕ್ರಮವಲ್ಲ. ತಿಂಡಿಗಳ ಬೆಲೆ ಏರಿಕೆ ಅವೈಜ್ಞಾನಿಕವಾಗಿದೆ. ಶೇ.60 ಭಾಗ ಜನರು ಹೋಟೆಲ್ ತಿಂಡಿಗಳನ್ನೇ ಅವಲಂಬಿಸಿದ್ದಾರೆ. ಹೋಟೆಲ್ಗಳಲ್ಲಿ ತಿಂಡಿಗಳ ಬೆಲೆ ಏರಿಸಬಾರದು. ಬೆಲೆ ಇಳಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹೋರರೋಗಿ ವಿಭಾಗಕ್ಕೆ 4 ಅಂತಸ್ತಿನ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾದ ನಿಮ್ಹಾನ್ಸ್
“ಹೋಟೆಲ್ನ ಮಾಲೀಕರು ಹಾಲು ದರ ₹3 ಹೆಚ್ಚಳವಾಗಿರುವ ಸಮಸ್ಯೆ ಹೇಳುತ್ತಾರೆ. ಹಾಗಂತ ₹3ಗೆ ₹10 ಏರಿಕೆ ಮಾಡುವುದು ಎಷ್ಟು ಸರಿ” ಎಂದು ಪ್ರಶ್ನಿಸಿದರು.