ಉಗಮದಿಂದಲೇ ವೈವಿಧ್ಯ ಹೊತ್ತ ಕನ್ನಡ ಸಂಸ್ಕೃತಿ-ಭಾಷೆಯೂ ಹೌದು: ಬಿಳಿಮಲೆ

Date:

ಕನ್ನಡ ಭಾಷೆ ಮತ್ತು ಸಂಸ್ಕೃತಿ ಒಂದರೊಳಗೊಂದು ಬೆಸೆದುಕೊಂಡಿರುವ ಅವಿಭಾಜ್ಯ ಅಂಶಗಳಾಗಿವೆ. ಹಾಗಾಗಿ ಉಗಮದಿಂದಲೇ ವೈವಿಧ್ಯ ಹೊತ್ತ ಕನ್ನಡ ಸಂಸ್ಕೃತಿಯೂ ಹೌದು, ಭಾಷೆಯೂ ಹೌದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆಯವರು ಅಭಿಪ್ರಾಯಪಟ್ಟರು.

- Advertisement -

ಬೆಂಗಳೂರು ನಗರದ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಕನ್ನಡ ಸಾಮರಸ್ಯ ನೆಲೆಗಳು’ 41 ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕನ್ನಡ ಭಾಷೆ ಅಂದರೆ ಕನ್ನಡ ಸಂಸ್ಕೃತಿ, ಕನ್ನಡ ಸಂಸ್ಕೃತಿ ಅಂದರೆ ಭಾಷೆಯೇ ಆಗಿದೆ. ಕನ್ನಡವು ಉಗಮದಿಂದ ಇಂದಿನವರೆಗೂ ಬಹುಮುಖಿಯಾಗಿ ಬೆಳೆಯುತ್ತ ಬಂದಿದೆ. ಭಾಷೆ ಮತ್ತು ಸಂಸ್ಕೃತಿ ಪರಸ್ಪರ ಅವಲಂಬಿತವಾಗಿವೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ಕವಿತೆ | ನನ್ನವ್ವನ ನೋಟ್ ಪುಸ್ತಕ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಗುಜರಾತಿನ ಕವಿ, ಕಲಾವಿದರಾದ ಜಯಂತ್ ಪರ್ಮಾರ್ ಅವರ ಒಂದು ಉರ್ದು ಕವನದ ಇಂಗ್ಲಿಷ್ ಅನುವಾದವನ್ನು ಕನ್ನಡಕ್ಕೆ ತಂದಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ ಬೇವಿನ...

ಕಬ್ಬಿಗೆ ರೂ.5,500 ಬೆಂಬಲ ಬೆಲೆ ಆಗ್ರಹ: ಬಿರುಬಿಸಿಲಿಗೆ ಜಗ್ಗದೇ...

ಸೆಪ್ಟೆಂಬರ್ 29 ರಂದು ಹುಬ್ಬಳ್ಳಿಯಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸಿದ್ದರು. ನಂತರ ಬಿಜೆಪಿ ಪಕ್ಷದ ಶಾಸಕರು ಮನವೊಲಿಸಿ ದೆಹಲಿಯಲ್ಲಿ ಸಭೆ ಮಾಡುವುದಾಗಿ ತಿಳಿಸಿದ್ದರು. ಆದರೆ ದೆಹಲಿಯಲ್ಲಿ ರೈತ ಮುಖಂಡರು ಮತ್ತು ಕೇಂದ್ರ ಸಚಿವರ...

ʼಜೆನ್‌ ಝಿʼ ಎಂಬ ಸಮತಾ ನಿಲುವು

ಸುಪ್ರಿಂಕೋರ್ಟಿನ ಮುಖ್ಯಸ್ಥರು ಇದೀಗ ಮತ್ತೊಂದು ಹೇಳಿಕೆಯ ಮೂಲಕ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ. ವಿದ್ಯಾರ್ಥಿ ಯುವಜನರ ಕುರಿತು ‘ಸೊಳ್ಳೆಗಳನ್ನು ಹೊಡೆಯಲು ಸುತ್ತಿಗೆಗಳು ಬೇಕಿಲ್ಲ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಪ್ರಜಾಪ್ರಭುತ್ವ ದೇಶದ ಕಾನೂನು ಕಾಯುವ ಅತ್ಯುನ್ನತ ಹೊಣೆ...

‘ಕವಿರಾಜಮಾರ್ಗ’ ಕೃತಿಯಲ್ಲಿ ಶ್ರೀವಿಜಯನು ‘ಕನ್ನಡಂಗಳ್’ ಎಂಬ ಪದ ಬಳಸಿ ಕನ್ನಡದ ಬಹುತ್ವವನ್ನು ವರ್ಣಿಸಿದ್ದನ್ನು ಉಲ್ಲೇಖಿಸಿದ ಅವರು, ಆ ಕಾಲದಿಂದಲೇ ಕನ್ನಡವು ವೈವಿಧ್ಯಮಯ ಪ್ರಾದೇಶಿಕ ಮತ್ತು ಸಾಮಾಜಿಕ ರೂಪಗಳನ್ನು ಒಳಗೊಂಡು ಬೆಳೆದಿದೆ. ʼಕಾವೇರಿಯಿಂದ ಗೋದಾವರಿವರೆಗೆʼ ವಿಸ್ತಾರವಾಗಿ ಹರಡಿಕೊಂಡಿದ್ದ ಕನ್ನಡ ನಾಡಿಗೆ ಎಲ್ಲ ದಿಕ್ಕುಗಳಿಂದ ವಿಭಿನ್ನ ಸಂಸ್ಕೃತಿಗಳು ಮುಕ್ತವಾಗಿ ಪ್ರವೇಶಿಸಿ, ಕಾಲಾಂತರದಲ್ಲಿ ಅವೆಲ್ಲವೂ ಕನ್ನಡವಾಗಿವೆ” ಎಂದರು.

“ಉತ್ತರದ ಬಿಹಾರದಿಂದ ನಮ್ಮ ನೆಲಕ್ಕೆ ಆಗಮಿಸಿದ ಜೈನ ಧರ್ಮವು ನಮಗೆ ಪಂಪ, ರನ್ನ, ನಾಗಚಂದ್ರನೇ ಮೊದಲಾದ ಮಹಾಕವಿಗಳನ್ನು ಕೊಟ್ಟಿತು. ಅದೇ ಬಿಹಾರದಿಂದ ಬಂದ ಬೌದ್ದ ಧರ್ಮವು ಕರ್ನಾಟಕಕ್ಕೆ ಸನ್ನತಿ, ಮಸ್ಕಿ, ಗವೀಮಠ, ಕದ್ರಿ ಮೊದಲಾದ ಇತಿಹಾಸ ಪ್ರಸಿದ್ಧ ಸ್ಥಳಗಳನ್ನು ನೀಡಿತು. ಪಕ್ಕದ ತಮಿಳುನಾಡಿನಿಂದ ಕರ್ನಾಟಕ ಪ್ರವೇಶಿಸಿದ ವಿಶಿಷ್ಟಾದ್ವೈತವು ಮೇಲುಕೋಟೆಯನ್ನು ಸಂಪನ್ನಗೊಳಿಸಿತು. ಮಂಡನಮಿಶ್ರರು ಸುರೇಶಾಚಾರ್ಯರಾಗಿ ಶೃಂಗೇರಿಗೆ ಬಂದರು. ಮಧ್ವಾಚಾರ್ಯರಂತೂ ಉಡುಪಿಯವರೇ ಆಗಿದ್ದಾರೆ. ಕಡಲಾಚೆಯಿಂದ ಬಂದ ಇಸ್ಲಾಂ ಧರ್ಮವು ಕರ್ನಾಟಕದ ವಾಸ್ತುಶಿಲ್ಪಕ್ಕೆ ಹೊಸ ತಿರುವು ನೀಡಿ ಇಂಡೋ ಸಾರ್ಸೆನಿಕ್‌ ಶೈಲಿಯನ್ನೇ ಕೊಟ್ಟಿತು. ವಸಾಹತು ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಕರ್ನಾಟಕ ಪ್ರವೇಶಿಸಿದ ಕ್ರಿಶ್ಚಿಯನ್‌ ಧರ್ಮವು ಕನ್ನಡಕ್ಕೆ ಆಧುನಿಕತೆಯ ಸ್ಪರ್ಶ ನೀಡಿತು. ಇದೇ ರೀತಿಯಲ್ಲಿ ಕನ್ನಡ ನಾಡಿಗೆ ಅನೇಕ ಸಮುದಾಯಗಳು ವಲಸೆ ಬಂದು ನೆಲೆಸಿವೆ” ಎಂಬುದನ್ನು ತಿಳಿಸಿದರು.

ಪ್ರಸ್ತುತ ಕರ್ನಾಟಕದಲ್ಲಿ ಸುಮಾರು 290 ಭಾಷೆಗಳು ಬಳಕೆಯಲ್ಲಿದ್ದು, ಎಲ್ಲವನ್ನೂ ತನ್ನೊಳಗೆ ಸೇರಿಸಿಕೊಂಡು ಬೆಳೆದಿರುವ ಕನ್ನಡನಾಡಿನ ಸಹಿಷ್ಣು ಗುಣವನ್ನು ಮಹಾಕವಿ ಕುವೆಂಪು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಕರೆದಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಆದರೆ, 1990ರ ನಂತರದ ಆರ್ಥಿಕ-ಸಾಮಾಜಿಕ ಬೆಳವಣಿಗೆಗಳಿಂದ ಕನ್ನಡ ಭಾಷೆ ಏಕಮುಖೀಯತೆಯ ಸವಾಲುಗಳನ್ನು ಎದುರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಹಿನ್ನೆಲೆದಲ್ಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹೊಸ ತಲೆಮಾರಿನ ವಿದ್ಯಾರ್ಥಿಗಳಿಗೆ ಕನ್ನಡದ ಸಮನ್ವಯತೆಯನ್ನು ಪರಿಚಯಿಸಲು ಸುಮಾರು 100 ಪುಸ್ತಕಗಳನ್ನು ಪ್ರಕಟಿಸುವ ಯೋಜನೆ ಕೈಗೊಂಡಿದ್ದು, ಇದರಲ್ಲಿ 41 ಕೃತಿಗಳು ಈಗಾಗಲೇ ಬಿಡುಗಡೆಯಾಗಿವೆ. ಉಳಿದವುಗಳನ್ನು ನವೆಂಬರ್ ಒಳಗೆ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ. ಯೋಜನೆಯ ನಿರ್ದೇಶಕರಾಗಿ ಡಾ. ರವಿಕುಮಾರ್ ನೀಹಾ ಮತ್ತು ಮುಖ್ಯ ಸಂಪಾದಕರಾಗಿ ಬೊಳುವಾರು ಮಹಮದ್ ಕುಂಞಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವನ್ನು ಪ್ರಶಂಸಿಸಿದ ಅವರು, ಕನ್ನಡ ಕಾವಲು ಪಡೆಯ ಮೊದಲ ಅಧ್ಯಕ್ಷರಾಗಿ ಭಾಷೆ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಪ್ರಾಧಿಕಾರವು ರಾಜ್ಯದ 26 ಜಿಲ್ಲೆಗಳಿಗೆ ಭೇಟಿ ನೀಡಿ ಕನ್ನಡದ ಪರಿಣಾಮಕಾರಿ ಅನುಷ್ಠಾನ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುತ್ತಿದೆ ಎಂದು ವಿವರಿಸಿದರು.

ಆಡಳಿತದಲ್ಲಿ ಕನ್ನಡದ ಬಳಕೆ ಸರಳವಾಗಿರಬೇಕು. ಪ್ರಭುತ್ವದ ಭಾಷೆ ಜನಸಾಮಾನ್ಯರಿಗೆ ಅರ್ಥವಾಗುವಂತಾಗಬೇಕು. ಎಲ್ಲ ಇಲಾಖೆಗಳಲ್ಲೂ ಕನ್ನಡದಲ್ಲಿ ವ್ಯವಹರಿಸುವುದು ಖಚಿತವಾಗಬೇಕು. ಇದಲ್ಲದೆ, ರಾಜ್ಯದಲ್ಲಿ ಸುಮಾರು 19,700 ಶಾಲೆಗಳಿಗೆ ಖಾತಾ ಪತ್ರಗಳಿಲ್ಲದಿರುವ ಸಮಸ್ಯೆಯನ್ನು ಗುರುತಿಸಿ ಕ್ರಮ ಕೈಗೊಂಡ ಪರಿಣಾಮ ಈಗ 400ಕ್ಕಿಂತ ಕಡಿಮೆ ಶಾಲೆಗಳಲ್ಲಷ್ಟೇ ಸಮಸ್ಯೆ ಉಳಿದಿದೆ ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಮಾನ ಸಮಾಜ ನಿರ್ಮಾಣಕ್ಕೆ ಆರ್ಥಿಕ-ಸಾಮಾಜಿಕ ಶಕ್ತಿ ಅಗತ್ಯ: ಸಿಎಂ ಸಿದ್ದರಾಮಯ್ಯ

ಶತಮಾನ ಪೂರೈಸಿದ ಶಾಲೆಗಳನ್ನು ಪಾರಂಪರಿಕ ಶಾಲೆಗಳಾಗಿ ಪರಿವರ್ತಿಸಲು ಸರ್ಕಾರವು ಪ್ರತಿ ಜಿಲ್ಲೆಯಲ್ಲಿ ಒಂದರಂತೆ 31 ಶಾಲೆಗಳನ್ನು ಗುರುತಿಸಿ, ₹18 ಕೋಟಿ ಅನುದಾನ ಮೀಸಲಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಅವರು, ಗಾಂಧೀಜಿ ಭೇಟಿ ನೀಡಿದ್ದ, ಕುವೆಂಪು, ಸರ್ ಎಂ ವಿಶ್ವೇಶ್ವರಯ್ಯ ಮತ್ತು ರಾಷ್ಟ್ರಕವಿ ಗೋವಿಂದ ಪೈ ಓದಿದಂತಹ ಐತಿಹಾಸಿಕ ಶಾಲೆಗಳ ಸಂರಕ್ಷಣೆ ಅಗತ್ಯವಿದೆ ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ʼಜೆನ್‌ ಝಿʼ ಎಂಬ ಸಮತಾ ನಿಲುವು

ಸುಪ್ರಿಂಕೋರ್ಟಿನ ಮುಖ್ಯಸ್ಥರು ಇದೀಗ ಮತ್ತೊಂದು ಹೇಳಿಕೆಯ ಮೂಲಕ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ. ವಿದ್ಯಾರ್ಥಿ...

ಚರ್ಚ್‌ನಲ್ಲಿ ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ; ಫಾದರ್ ವಿರುದ್ಧ ಪೋಕ್ಸೋ ಕೇಸ್

ಪ್ರಾರ್ಥನೆಗಾಗಿ ಚರ್ಚ್‌ಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ...

ದೇಶದ ನಿರುದ್ಯೋಗ ಪ್ರಮಾಣದಲ್ಲಿ ಸ್ಥಿರತೆ; ನಗರ ಮಹಿಳೆಯರ ನಿರುದ್ಯೋಗದಲ್ಲಿ ಏರಿಕೆ!

ಭಾರತದಲ್ಲಿ ನಿರುದ್ಯೋಗ ಪ್ರಮಾಣವು ಸೆಪ್ಟೆಂಬರ್ 2026ರಲ್ಲಿ ಶೇ. 5ರಷ್ಟೇ ಇದ್ದು, ಹಿಂದಿನ...