ತುಮಕೂರು | ‘ಬರಹಗಾರ’ರಾಗಿ ಅಂಬೇಡ್ಕರ್ ಅವರನ್ನು ಅರ್ಥಮಾಡಿಕೊಳ್ಳುವುದು ಮುಖ್ಯ: ಸಂಶೋಧಕ ರಂಗನಾಥ ವೈ

Date:

ಅಂಬೇಡ್ಕರ್ ಅವರನ್ನೂ ಒಳಗೊಂಡಂತೆ ಯಾವುದೇ ಚಿಂತಕರನ್ನು ಕುರಿತು ಅಧ್ಯಯನ ಮಾಡುವಾಗ ಅವರ ಬರಹಗಳು ನಮಗೆ ಅತಿಮುಖ್ಯವಾಗುತ್ತವೆ. ಇಲ್ಲಿ ನಾವು, ಚರಿತ್ರೆಯ ದೃಷ್ಟಿಯಿಂದ, ರಾಜಕೀಯ ತತ್ವಸಾಸ್ತ್ರದ ದೃಷ್ಟಿಯಿಂದ, ಹೋರಾಟ, ಸಮಾಜಶಾಸ್ತ್ರ ಹೀಗೆ ಬೇರೆ ಬೇರೆ ದೃಷ್ಟಿಕೋನಗಳಲ್ಲಿ ಓದನ್ನು ನಡೆಸುತ್ತೇವೆ ಎಂಬುದು ಮುಖ್ಯ ಎಂದು ಸಂಶೋಧಕ ರಂಗನಾಥ ವೈ ಹೇಳಿದರು.

- Advertisement -

ನಗರದ ಎಸ್ ಎಸ್ ಪುರಂನ ಅಂಗಳ ಕಮ್ಯುನಿಟಿ ಟ್ರಸ್ಟ್‌ನ ಅವರಣದಲ್ಲಿ ನಡೆದ ʼಲೇಖನಿಯಿಂದ ಅಧಿಕಾರದತ್ತ: ಬರಹಗಾರರಾಗಿ ಅಂಬೇಡ್ಕರ್ʼ ಎಂಬ ವಿಷಯವನ್ನು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ಕವಿತೆ | ನನ್ನವ್ವನ ನೋಟ್ ಪುಸ್ತಕ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಗುಜರಾತಿನ ಕವಿ, ಕಲಾವಿದರಾದ ಜಯಂತ್ ಪರ್ಮಾರ್ ಅವರ ಒಂದು ಉರ್ದು ಕವನದ ಇಂಗ್ಲಿಷ್ ಅನುವಾದವನ್ನು ಕನ್ನಡಕ್ಕೆ ತಂದಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ ಬೇವಿನ...

ಕಬ್ಬಿಗೆ ರೂ.5,500 ಬೆಂಬಲ ಬೆಲೆ ಆಗ್ರಹ: ಬಿರುಬಿಸಿಲಿಗೆ ಜಗ್ಗದೇ...

ಸೆಪ್ಟೆಂಬರ್ 29 ರಂದು ಹುಬ್ಬಳ್ಳಿಯಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸಿದ್ದರು. ನಂತರ ಬಿಜೆಪಿ ಪಕ್ಷದ ಶಾಸಕರು ಮನವೊಲಿಸಿ ದೆಹಲಿಯಲ್ಲಿ ಸಭೆ ಮಾಡುವುದಾಗಿ ತಿಳಿಸಿದ್ದರು. ಆದರೆ ದೆಹಲಿಯಲ್ಲಿ ರೈತ ಮುಖಂಡರು ಮತ್ತು ಕೇಂದ್ರ ಸಚಿವರ...

ʼಜೆನ್‌ ಝಿʼ ಎಂಬ ಸಮತಾ ನಿಲುವು

ಸುಪ್ರಿಂಕೋರ್ಟಿನ ಮುಖ್ಯಸ್ಥರು ಇದೀಗ ಮತ್ತೊಂದು ಹೇಳಿಕೆಯ ಮೂಲಕ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ. ವಿದ್ಯಾರ್ಥಿ ಯುವಜನರ ಕುರಿತು ‘ಸೊಳ್ಳೆಗಳನ್ನು ಹೊಡೆಯಲು ಸುತ್ತಿಗೆಗಳು ಬೇಕಿಲ್ಲ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಪ್ರಜಾಪ್ರಭುತ್ವ ದೇಶದ ಕಾನೂನು ಕಾಯುವ ಅತ್ಯುನ್ನತ ಹೊಣೆ...

“ಅಂಬೇಡ್ಕರ್ ಅವರನ್ನು ಕುರಿತಂತೆ ಪ್ರಾರಂಭದ ಓದುಗಳ ಆಸಕ್ತಿ ರಾಜಕೀಯ ತತ್ವಶಾಸ್ತ್ರ, ದಲಿತ ರಾಜಕಾರಣ, ಅಂಬೇಡ್ಕರ್ ಅವರು ಕಟ್ಟಿದ ಚರಿತ್ರೆ ಇವುಗಳನ್ನು ಕುರಿತದ್ದಾಗಿತ್ತು. ಬರಹಗಾರರಾಗಿ ಅಂಬೇಡ್ಕರ್ ಅವರನ್ನು ಕಾಣುವುದು ಇವುಗಳಿಗಿಂತ ಕೊಂಚ ಭಿನ್ನ. ಬರವಣಿಗೆಯ ವಸ್ತುವನ್ನು ಕುರಿತ ಅಧ್ಯಯನ ಒಂದು ಕಡೆಯಾದರೆ, ಬರವಣಿಗೆಯ ಶೈಲಿ, ಬರವಣಿಗೆಯಲ್ಲಿ ವ್ಯಕ್ತವಾಗಿರುವ ಭಾವನೆಗಳ ಏರಿಳಿತಗಳು, ನಿರೂಪಣಾ ಶೈಲಿ ಇತ್ಯಾದಿಗಳ ಅಧ್ಯಯನವನ್ನು ಇದು ಒಳಗೊಂಡಿದೆ.
ಭಾಷಣಕ್ಕಾಗಿ ಬರೆದ ಬರಹಕ್ಕೂ ಅಥವಾ ಭಾಷಣ ಕೇಳುವವರನ್ನು ಗಮನದಲ್ಲಿಟ್ಟುಕೊಂಡಂತೆ ಬರೆದ ನಿರೂಪಣಾ ಶೈಲಿಗೂ, ಕೃತಿ ಅಥವಾ ಲೇಖನದಲ್ಲಿ ವ್ಯಕ್ತವಾಗುವ ಬರಹಕ್ಕೂ ವ್ಯತ್ಯಾಸವಿರುತ್ತದೆ. ಹೇಳುವ ಭಾಷೆ ಆ ಭಾಷೆಯ ಮೂಲಕ ವ್ಯಕ್ತವಾಗುವ ಚಿಂತನೆಯನ್ನು ಪ್ರಭಾವಿಸುತ್ತದೆ. ವಿಚಾರ ಬೇರೆ ಮತ್ತು ಬರವಣಿಗೆಯ ಶೈಲಿ ಬೇರೆ ಇರುವುದಿಲ್ಲ. ಅದೇ ರೀತಿ ಬರವಣಿಗೆ, ಬರವಣಿಗೆಯ ಉದ್ದೇಶ, ಆ ಬರವಣಿಗೆಯ ಮೂಲಕ ವ್ಯಕ್ತವಾಗುವ ಚಿಂತನೆಗೆ ಬಿಡಿಸಲಾರದ ಸಂಬಂಧವಿದೆ” ಎಂದರು.

“ಭಾಷೆಯ ಬಳಕೆಯನ್ನು, ಭಾಷೆಯನ್ನು ಅಥೈಸಿಕೊಳ್ಳುವುದು ನಿಜಕ್ಕೂ ಕಷ್ಟದ ಕೆಲಸ ಮತ್ತು ಅಷ್ಟೇ ಮುಖ್ಯವಾದ ಕೆಲಸವೂ ಹೌದು. ಬರವಣಿಗೆಯೆಂದರೇನು? ಅಧಿಕಾರವೆಂದರೇನು? ಅದಿಕಾರದಲ್ಲಿ ಬರವಣಿಗೆಯ ಪ್ರಾತ್ರ ಅಥವಾ ಸ್ಥಾನವೇನು? ಎಂಬ ಪ್ರಶ್ನೆಗಳನ್ನು ನಾವು ಹಾಕಿಕೊಳ್ಳಬೇಕು. ಅಂಬೇಡ್ಕರ್ ಏನನ್ನು ಬರೆದಿದ್ದಾರೆ ಎಂದು ನೋಡುವ ಕ್ರಮ ಒಂದುಕಡೆಯಾದರೆ, ಹೇಗೆ ಬರೆದಿದ್ದಾರೆ ಎಂದು ನೋಡುವ ಕ್ರಮ ಮತ್ತೊಂದು ಕಡೆಯಿದೆ. ಕೃತಿಯೊಂದನ್ನು ಹೇಗೆ ಬರೆಯಲಗಿದೆ, ಈ ಬರೆಹಕ್ಕೆ ಪ್ರೇರಣೆಯಾದ ಸನ್ನಿವೇಷಗಳು, ವ್ಯಕ್ತಿಗಳು ಯಾವುವು ಮತ್ತು ಯಾರು? ಈ ಕ್ರಮದಲ್ಲಿಯೇ ಏಕೆ ಇದನ್ನು ಬರೆಯಲಾಗಿದೆ ಎಂಬ ಪ್ರಶ್ನೆಗಳನ್ನು ಹಾಕಿಕೊಂಡು ಅಧ್ಯಯನ ಮಾಡುವುದು ಮುಖ್ಯ. ಅಂಬೇಡ್ಕರ್ ಅವರನ್ನು ಒಬ್ಬ ಬರಹಗಾರರಾಗಿ ನೋಡುವುದರಿಂದ ಮತ್ತೊಂದು ಹೊಸ ಆಯಾಮದಲ್ಲಿ ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಡಾ. ಬಿ ಆರ್‌ ಅಂಬೇಡ್ಕರ್ ಸಮಾನತೆಯ ಹರಿಕಾರ: ದಮ್ಮ ಪಾಲ ಬಂತೇಜಿ

ಕಾರ್ಯಕ್ರಮದಲ್ಲಿ ಅಂಗಳ ಟ್ರಸ್ಟ್‌ನ ಅಧ್ಯಕ್ಷೆ ರಂಜಿತ ಎಂ ಎನ್, ಪ್ರ.ಕಾರ್ಯದರ್ಶಿ ನವೀನ್ ಕುಮಾರ್ ಪಿ ಆರ್, ಪೂಜಾ, ಸಂಶೋಧನಾರ್ಥಿಗಳಾದ ಅಮರ್ ಬಿ, ಗಂಗಾಧರ ಬಾಣಸಂದ್ರ, ಧನುಷ್ ಎಚ್ ಶೇಖರ್, ಜ್ಞಾನೇಶ್, ಲೋಕೇಶ್, ಹರಿಕೃಷ್ಣ, ಮನೋಜ ಎಂ ಆರ್, ಪಾತಲಿಂಗಯ್ಯ, ಮಾರುತಿ ಸೇರಿದಂತೆ ಹಲವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಕವಿತೆ | ನನ್ನವ್ವನ ನೋಟ್ ಪುಸ್ತಕ – ಜಯಂತ್‌ ಪರ್ಮಾರ್

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಗುಜರಾತಿನ ಕವಿ, ಕಲಾವಿದರಾದ...

ಪೊಲೀಸ್ ವಿರುದ್ಧ ಲೈಂಗಿಕ ಕಿರುಕುಳ ದೂರಿನ ಬೆನ್ನಲ್ಲೇ ಜಾತಿನಿಂದನೆ ಕೇಸ್: ಯೂಟ್ಯೂಬರ್ ಯುವತಿ ಬಂಧಿಸದಂತೆ ಸುಪ್ರೀಂ ಆದೇಶ

ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದ ಯುವ ಪತ್ರಕರ್ತೆ...

ಕಬ್ಬಿಗೆ ರೂ.5,500 ಬೆಂಬಲ ಬೆಲೆ ಆಗ್ರಹ: ಬಿರುಬಿಸಿಲಿಗೆ ಜಗ್ಗದೇ ಸಾಗಿದ ರೈತ ಹೋರಾಟ!

ಸೆಪ್ಟೆಂಬರ್ 29 ರಂದು ಹುಬ್ಬಳ್ಳಿಯಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸಿದ್ದರು. ನಂತರ...