ಕೆಎಸ್‌ಆರ್‌ಟಿಸಿ | ‘ನಮ್ಮ ಕಾರ್ಗೋ-ಟ್ರಕ್ ಸೇವೆ’ ಯೋಜನೆಗೆ ಚಾಲನೆ ನೀಡಿದ ರಾಮಲಿಂಗಾರೆಡ್ಡಿ

Date:

Advertisements

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ನೂತನವಾಗಿ ನಮ್ಮ ಕಾರ್ಗೋ- ‘ಟ್ರಕ್ ಸೇವೆ’ (ನಿಮ್ಮ ವಿಶ್ವಾಸ – ನಮ್ಮ ಕಾಳಜಿ) ಆರಂಭಿಸಿದ್ದು, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಯೋಜನೆಗೆ ಚಾಲನೆ ನೀಡಿ 20 ನೂತನ ಟ್ರಕ್‌ಗಳಿಗೆ ಹಸಿರು ನಿಶಾನೆ ತೋರಿದರು.

ಈ ವೇಳೆ ಮಾತನಾಡಿದ ಅವರು, “ಮುಂದಿನ ಒಂದು ತಿಂಗಳಿನಲ್ಲಿ 100 ಟ್ರಕ್‌ಗಳನ್ನು, ಒಂದು ವರ್ಷದೊಳಗಾಗಿ 500 ಟ್ರಕ್‌ಗಳನ್ನು ಸೇರ್ಪಡೆ ಮಾಡಲಾಗುವುದು. ಪ್ರಸಕ್ತ ಪೀಣ್ಯದಲ್ಲಿರುವ ನಿಗಮದ ಬಸವೇಶ್ವರ ಬಸ್ ನಿಲ್ದಾಣವನ್ನು ಈ ನಮ್ಮ ಕಾರ್ಗೋ ಟ್ರಕ್ ಟರ್ಮಿನಲ್ ಆಗಿ ಪರಿವರ್ತನೆ ಮಾಡಲಾಗುವುದು. ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಘಟಕವನ್ನಾಗಿ ಬಳಸಿ, ಬಸ್ ನಿಲ್ದಾಣದಲ್ಲಿರುವ ಸ್ಥಳವನ್ನು ಸರ್ಕಾರಿ ಸಂಸ್ಥೆಗಳಿಗೆ ನೀಡಿ ವಾಣಿಜ್ಯ ಉಪಯೋಗಕ್ಕಾಗಿ ಬಳಸಲಾಗುವುದು” ಎಂದು ತಿಳಿಸಿದರು.

ನಿಗಮವು ಕೆ.ಎಂ.ಎಸ್ ಕೋಚ್ ಬಿಲ್ಡರ್ಸ್ ಪ್ರೈವೆಟ್ ಲಿಮಿಟೆಡ್ ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡು ಎರಡು ತಿಂಗಳ ಅವಧಿಗೆ ಹಾಗೂ ಎಸ್.ಎಂ ಕಣ್ಣಪ್ಪ ಪ್ರೈವೆಟ್ ಲಿಮಿಟೆಡ್ ರವರಿಗೆ ತನ್ನ ಟ್ರಕ್ ಅನ್ನು ಒಂದು ತಿಂಗಳ ಅವಧಿಗೆ ಬಾಡಿಗೆಗೆ ನೀಡಿ ಸಾರಿಗೆ ವಲಯದಲ್ಲಿ ಮಹತ್ತರ ಪ್ರಗತಿಯ ಹೆಜ್ಜೆ ಇರಿಸಿದೆ.

Advertisements

ನಿಗಮವು ಸಾರ್ವಜನಿಕ ಸಾರಿಗೆಯಲ್ಲಿ ತನ್ನ ವಹಿವಾಟನ್ನು ಮತ್ತಷ್ಟು ಉತ್ತಮಪಡಿಸಲು 2021ರಲ್ಲಿ ನಮ್ಮ ಕಾರ್ಗೊ ಹೆಸರಿನಿಂದ ಲಾಜಿಸ್ಟಿಕ್ಸ್ ಸೇವೆಯನ್ನು ಪ್ರಾರಂಭಿಸಿದೆ.

ನಿಗಮದ ವತಿಯಿಂದ ನೂತನ ನಮ್ಮ ಕಾರ್ಗೋ ಟ್ರಕ್ ಸೇವೆಗಳಿಗೆ 20 ಸರಕು ಸಾಗಣೆ ವಾಹನಗಳ ಮೂಲಕ ಚಾಲನೆ ನೀಡಲಾಗಿದೆ. ಇದರಡಿಯಲ್ಲಿ ನಿಗಮದ ಮಾರ್ಗಗಳು ಕಾರ್ಯಾಚರಣೆಯಲ್ಲಿರುವ ಸ್ಥಳಗಳಿಗೆ ನಿಗಮದ ಬಸ್‌ಗಳಿಂದ ಪಾರ್ಸಲ್‌ಗಳನ್ನು ಸಾಗಿಸಲಾಗುತ್ತಿದೆ. ಈ ಯೋಜನೆಯನ್ನು ಮತ್ತೊಂದು ಹಂತಕ್ಕೆ ಅಭಿವೃದ್ಧಿಪಡಿಸುವ ಸಲುವಾಗಿ ಜಿಪಿಎಸ್ ಅಳವಡಿಕೆಯೊಂದಿಗೆ ನವೀನ ಬ್ರಾಂಡ್ ‘ನಮ್ಮ ಕಾರ್ಗೋ-ಟ್ರಕ್ ಸೇವೆ’ಗಳನ್ನು ಈಗ ಪರಿಚಯಿಸುತ್ತಿದೆ ಎಂದು ನಿಗಮ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ? ಬಿಎಂಟಿಸಿ | ಮಾದಾವರದಿಂದ ನೈಸ್ ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿಗೆ ಸಾರಿಗೆ

ನೂತನ ಸೇವೆಯ ಪ್ರಮುಖ ಅಂಶಗಳು

  • ಗ್ರಾಹಕರ ಸರಕುಗಳನ್ನು ರಾಜ್ಯ ವ್ಯಾಪ್ತಿಯಲ್ಲಿ ಸುರಕ್ಷಿತ, ವೇಗ ಹಾಗೂ ವಿಶ್ವಾಸಾರ್ಹವಾಗಿ ಸಾಗಿಸಲಾಗುವುದು.
  • ಈ ಟ್ರಕ್‌ಗಳು ಮುಚ್ಚಲಾದ ಕಂಟೈನರ್ ಮಾದರಿಯಲ್ಲಿದೆ.
  • ನಿಗಮವು ಬಲವಾದ ನೆಟ್ವರ್ಕ್ ವ್ಯವಸ್ಥೆಯನ್ನು ಹೊಂದಿದ್ದು, ಟ್ರಕ್ ಟ್ರ್ಯಾಕಿಂಗ್ ಸೌಲಭ್ಯದೊಂದಿಗೆ ವಿಶ್ವಾಸಾರ್ಹ ಸಿಬ್ಬಂದಿಗಳ ಮುಖೇನ ಗ್ರಾಹಕರ ಸರಕುಗಳನ್ನು ಸುರಕ್ಷಿತವಾಗಿ ಸರಿಯಾದ ಸಮಯಕ್ಕೆ ಸಾಗಿಸಲಿದೆ.
  • ಈ ನೂತನ ಸರಕು ಸಾಗಣೆ ವ್ಯವಸ್ಥೆಯನ್ನು ಆಸಕ್ತ ಗ್ರಾಹಕರಿಗೆ ಕರಾರು ಒಪ್ಪಂದಕ್ಕೆ ಒಳಪಟ್ಟು ಒದಗಿಸಲಿದೆ.
  • ಈ ಲಾಜಿಸ್ಟಿಕ್ ಸೇವೆಗಳಿಂದ ನಿಗಮ ಹಾಗೂ ಸೌಲಭ್ಯ ಪಡೆಯುವ ಸಂಸ್ಥೆಗಳ ನಡುವೆ ಒಡನಾಟ ವರ್ಧನೆಯಾಗಲಿದೆ.
  • ಟ್ರಕ್ ಸೇವೆಯು ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ದಾವಣಗೆರೆಯಿಂದ ಕರ್ನಾಟಕ ರಾಜ್ಯದ ನಾನಾ ಸ್ಥಳಗಳಿಗೆ ಲಭ್ಯವಿರುತ್ತದೆ.
  • ನಿಗಮವು ಗ್ರಾಹಕರುಗಳ ಅಗತ್ಯತೆಗನುಗುಣವಾಗಿ ಟ್ರಕ್ ಸೇವೆ ಒದಗಿಸಲಿದ್ದು, ಇಚ್ಛೆಯುಳ್ಳ ಆಸಕ್ತ ಗ್ರಾಹಕರು ತಮ್ಮ ಅಗತ್ಯತೆಗಳ ಮಾಹಿತಿ / ವಿವರಗಳನ್ನು ಒದಗಿಸುವಂತೆ ಕೋರಿದೆ.
  • ಹೆಚ್ಚಿನ ಮಾಹಿತಿಗಾಗಿ ಕಾಲ್ ಸೆಂಟರ್ ಸಂಖ್ಯೆ: 080-26252625 ಅಥವಾ ಇ-ಮೇಲ್ ವಿಳಾಸ: logistics@ksrtc.org ಸಂಪರ್ಕಿಸುವಂತೆ ಕೋರಿದೆ.

ಈ ನೂತನ ಟ್ರಕ್ ಸೇವೆಗಳಿಗೆ ನಿಗದಿಪಡಿಸಿರುವ ದರ

  • 1 ರಿಂದ 100 ಕಿ.ಮೀ ವರೆಗೆ ಕನಿಷ್ಠ ಕಿ.ಮೀ ಇದ್ದು, ಪ್ರತಿ ಕಿ.ಮೀ ದರ ₹50 ಇದೆ. ಗರಿಷ್ಠ 12 ಗಂಟೆ ಅವಧಿಗೆ ₹5,000 ಕನಿಷ್ಠ ದರವಿದೆ.
  • 1 ರಿಂದ 200 ಕಿ.ಮೀ ವರೆಗೆ ಪ್ರತಿ ಕಿ.ಮೀಗೆ ₹40 ದರವಿದ್ದು, ಕನಿಷ್ಠ 200 ಕಿ.ಮೀಗೆ 24 ಗಂಟೆ (ನಿರ್ಗಮನದ ಸಮಯದಿಂದ 24 ಗಂಟೆ ಅವಧಿ) ₹8000 ದರವಿದೆ.
  • 200 ಕಿ.ಮೀ ಮೇಲ್ಪಟ್ಟ ಹೆಚ್ಚುವರಿ ಕಿ.ಮೀ ಗೆ ಅಂದರೆ ಪ್ರತಿ ಕಿ.ಮೀಗೆ ₹35 ಇದ್ದು, ಕಾರ್ಯಾಚರಣೆಯ ಕಿ.ಮೀ ಮೇಲೆ ದರವಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

Download Eedina App Android / iOS

X