ನಮ್ಮ ಮೆಟ್ರೋ ರೈಲಿನಲ್ಲಿ ಯುವತಿಯರ ಖಾಸಗಿ ಅಂಗಾಂಗಗಳ ವಿಡಿಯೋ ಹಾಗೂ ಭಾವಚಿತ್ರ ತೆಗೆಯುತ್ತಿದ್ದ ಯುವಕನನ್ನು ಮೆಟ್ರೋ ನಿಲ್ದಾಣದ ಸೆಕ್ಯೂರಿಟಿ ಗಾರ್ಡ್‍ಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜಯನಗರದಲ್ಲಿ ನಡೆದಿದೆ.
ಆರೋಪಿಗೆ ಬಿಎಂಆರ್‌ಸಿಎಲ್ 5,000 ರೂ. ದಂಡ ವಿಧಿಸಿದೆ. ವಶಕ್ಕೆ ಪಡೆಯಲಾದ ಆರೋಪಿಯನ್ನು ಮಹೇಶ್ ಎಂದು ಗುರುತಿಸಲಾಗಿದೆ. ಆರೋಪಿ, ಮೆಟ್ರೋದಲ್ಲಿ ಪ್ರಯಾಣ ಮಾಡುವ ಮಹಿಳೆಯರ ಖಾಸಗಿ ಅಂಗಾಂಗಗಳ ಫೋಟೋ ಹಾಗೂ ವಿಡಿಯೋ ತೆಗೆಯುತ್ತಿದ್ದ. ಆರೋಪಿಯ ಮೊಬೈಲ್‍ನಲ್ಲಿ ಸುಮಾರು 50 ಯುವತಿಯರ ವಿಡಿಯೋ ಮತ್ತು ಭಾವಚಿತ್ರಗಳು ಪತ್ತೆಯಾಗಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೋರೆಗಾಂವ್ ಭೀಮಾ ವಿಜಯೋತ್ಸವ ದಲಿತ ಅಸ್ಮಿತೆಯ ಕತೆಯನ್ನು ಬಲ್ಲಿರಾ?
ಡಿ.25 ರಂದು ಬೆಳಿಗ್ಗೆ 9 ಗಂಟೆಗೆ ಯುವತಿಯೊಬ್ಬರು ಮೆಜೆಸ್ಟಿಕ್‍ನಿಂದ ಜೆಪಿ ನಗರ ಮೆಟ್ರೋ ಸ್ಟೇಷನ್‍ಗೆ ಹೋಗುತ್ತಿದ್ದರು. ಈ ವೇಳೆ ಯುವಕ, ಯುವತಿಯ ಖಾಸಗಿ ಅಂಗಾಂಗಗಳ ವಿಡಿಯೋ ತೆಗೆಯುತ್ತಿದ್ದನ್ನು ಗಮನಿಸಿ ಆತನಿಗೆ ಹಲ್ಲೆ ನಡೆಸಿದ್ದಾಳೆ. ಈ ವೇಳೆ ರಾತ್ರಿ ಪಾಳಿ ಮುಗಿಸಿ ಮನೆಗೆ ಹೋಗುತ್ತಿದ್ದ ಇಬ್ಬರು ಭದ್ರತಾ ಸಿಬ್ಬಂದಿ ಯುವತಿಯ ಸಹಾಯಕ್ಕೆ ಧಾವಿಸಿದ್ದಾರೆ. ಈ ವೇಳೆ ಮಹೇಶ್‍ನ ಕೃತ್ಯ ಬೆಳಕಿಗೆ ಬಂದಿದೆ.
ಜಯನಗರ ಮೆಟ್ರೋ ನಿಲ್ದಾಣದಲ್ಲಿ ಯುವಕನನ್ನು ರೈಲಿನಿಂದ ಕೆಳಗಿಳಿಸಿ, ಮೊಬೈಲ್ ಪರಿಶೀಲನೆ ನಡೆಸಿದಾಗ ವಿಡಿಯೋ ಹಾಗೂ ಫೋಟೋಗಳು ಪತ್ತೆಯಾಗಿವೆ. ಆತನನ್ನು ಜಯನಗರ ಪೊಲೀಸ ವಶಕ್ಕೆ ನೀಡಲಾಗಿದೆ.
ಡ್ಯೂಟಿಯಲ್ಲಿ ಇಲ್ಲದಿದ್ದರೂ ಯುವತಿಯ ಸಹಾಯಕ್ಕೆ ಧಾವಿಸಿದ ಮೆಟ್ರೋ ಸೆಕ್ಯುರಿಟಿ ಗಾರ್ಡ್ ಸುಜೀತ್ ಹಾಗೂ ಎಸ್.ಜಿ ರಾಮ್ ಬಹದ್ದೂರ್ ಅವರನ್ನು ಬಿಎಂಆರ್‌ಸಿಎಲ್ ಅಭಿನಂದಿಸಿದೆ.

