ಮೋದಿ ರೋಡ್‌ ಶೋ | 45 ನಿಮಿಷದ ಮೆರವಣಿಗೆಗೆ 5 ಗಂಟೆ ರಸ್ತೆಗಳು ಬಂದ್; ಬಸವಳಿದ ಬೆಂಗಳೂರು

Date:

Advertisements
ಬೆಂಗಳೂರಿನಲ್ಲಿ ಕೆಲಸ ಮುಗಿಸಿ ಮನೆ ತಲುಪಿದರೇ ಸಾಕಪ್ಪಾ ಎಂದು ಉದ್ಯೋಗಿಗಳು ಮನೆ ಕಡೆ ಮುಖ ಮಾಡುವ ಹೊತ್ತಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ರಾಜ್ಯ ವಿಧಾನಸಭೆ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಬೆಂಗಳೂರು ಒಟ್ಟು 28 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ತಮ್ಮ ಅಭ್ಯರ್ಥಿಗಳ ಬೆಂಬಲಕ್ಕಾಗಿ ರಾಷ್ಟ್ರೀಯ ಪಕ್ಷದ ರಾಜಕೀಯ ದಿಗ್ಗಜರು ರಾಜಧಾನಿಯತ್ತ ದಾಪುಗಾಲಿಡುತ್ತಾ ಮತಯಾಚನೆಗಾಗಿ ಬರುತ್ತಿದ್ದಾರೆ. ಆದರೆ, ಈ ಪ್ರಚಾರ ನಗರದ ಜನರ ಸಂಚಾರಕ್ಕೆ ಸಂಕಷ್ಟ ತರುತ್ತಿದೆ.

ಬೆಂಗಳೂರು ಸಂಚಾರ ದಟ್ಟಣೆಗೆ ಹೆಸರುವಾಸಿಯಾದ ನಗರ. ಈ ನಗರದಲ್ಲಿ ಒಮ್ಮೆ ಟ್ರಾಫಿಕ್‌ನಲ್ಲಿ ಸಿಲುಕಿದರೆ ತಾಸುಗಟ್ಟಲೆ ರಸ್ತೆಯಲ್ಲೇ ಕಾಯಬೇಕಾಗುತ್ತದೆ. ಅದರಲ್ಲೂ ಪೀಕ್‌ ಅವರ್‌ನಲ್ಲಿ ಸವಾರನ ಪರಿಸ್ಥಿತಿ ಹೇಳತೀರದು. ಈ ನಗರದಲ್ಲಿ ಹೆಚ್ಚಾಗಿ ಐಟಿ-ಬಿಟಿ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಲಕ್ಷಾಂತರ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಯ ನಿರ್ವಹಿಸುವವರ ಪೈಕಿ ಹೆಚ್ಚಿನ ಜನ ಸ್ವಂತ ವಾಹನದ ಮೇಲೆ ಒಲುವು ಹೊಂದಿದ್ದಾರೆ. ನಗರದಲ್ಲಿ ವಾಹನಗಳ ಸಂಖ್ಯೆ, ಜನಸಂಖ್ಯೆ ಹೆಚ್ಚಾದಂತೆ ಸಂಚಾರ ದಟ್ಟಣೆಯೂ ಹೆಚ್ಚಾಗುತ್ತಿದೆ.

ಇಂತಹ ಸಮಯದಲ್ಲಿ ಚುನಾವಣೆ ಪ್ರಚಾರವೆಂದು ಅಭ್ಯರ್ಥಿಗಳ ಪರವಾಗಿ ದಿನಕ್ಕೊಬ್ಬರು ನಾಯಕರು ಮತಯಾಚನೆಗಾಗಿ ನಗರದತ್ತ ಬರುತ್ತಿದ್ದಾರೆ. ಏ.29ರಂದು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮತಯಾಚನೆಗಾಗಿ ಬೆಂಗಳೂರಿಗೆ ಬರುತ್ತಿದ್ದು, ಈ ವೇಳೆ, ಮಧ್ಯಾಹ್ನ 2ರಿಂದ ಸಂಜೆ 7.30ರವರೆಗೆ ಮಾಗಡಿ ರಸ್ತೆಯ ನೈಸ್​ ಜಂಕ್ಷನ್​ನಿಂದ ಸುಮನಹಳ್ಳಿ ಸರ್ಕಲ್​​ವರೆಗೂ ನಗರ ಸಂಚಾರ ಪೊಲೀಸ್‌ ಇಲಾಖೆ ವಾಹನಗಳ ಸಂಚಾರವನ್ನು ರದ್ದುಪಡಿಸಿದೆ. ಪ್ರಧಾನಿ ಮೋದಿ ಅವರು ಬೆಂಗಳೂರಿನ ಹೃದಯ ಭಾಗದ ರಸ್ತೆಯಲ್ಲಿ 8 ರಿಂದ 10 ಕಿ.ಮೀ ವರೆಗೂ ರ‍್ಯಾಲಿ ಹಮ್ಮಿಕೊಂಡಿದ್ದಾರೆ.

Advertisements

ಓಲ್ಡ್ ಏರ್‌ಪೋರ್ಟ್ ರಸ್ತೆ, ಕಬ್ಬನ್ ರಸ್ತೆ, ಅಂಬೇಡ್ಕರ್ ರಸ್ತೆ, ಕೃಂಬಿಗಲ್ ರಸ್ತೆ, ದೇವಾಂಗ ರಸ್ತೆ, ಕೇಂಬ್ರಿಡ್ಜ್ ಲೇಔಟ್ ರಸ್ತೆ, ಡಿಕನ್‌ಸನ್ ರಸ್ತೆ, ಲಾಲ್‌ಬಾಗ್ ವೆಸ್ಟ್ ಗೇಟ್ ರಸ್ತೆ, ಕೆ.ಆರ್.ಸರ್ಕಲ್, ಆರ್.ವಿ.ಕಾಲೇಜ್ ರಸ್ತೆ, ಲಾಲ್‌ಬಾಗ್‌ ಮುಖ್ಯ ರಸ್ತೆ, ಬಸನವಗುಡಿ 50 ಅಡಿ ರಸ್ತೆ, ಕೆನರಾ ಬ್ಯಾಂಕ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಪ್ರದೇಶಗಳು ಸಂಪೂರ್ಣ ಜನನಿಬಿಡ ಪ್ರದೇಶಗಳಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದ್ದಾರೆ ಎಂದು ನಾಗರಿಕರು ದೂರುತ್ತಿದ್ದಾರೆ.

ಅದರಲ್ಲೂ ನಗರದಲ್ಲಿ ಕೆಲಸ ಮುಗಿಸಿ ಮನೆ ತಲುಪಿದರೇ ಸಾಕಪ್ಪಾ ಎಂದು ಉದ್ಯೋಗಿಗಳು ಮನೆ ಕಡೆ ಮುಖ ಮಾಡುವ ಹೊತ್ತಿನಲ್ಲಿ ರ‍್ಯಾಲಿ ನಡೆಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಉದ್ಯೋಗಿ ಸಂತೋಷ್, “ಬೆಂಗಳೂರಿನ ಹೃದಯ ಭಾಗದಲ್ಲಿ ಪೀಕ್ ಅವರ್ ನಲ್ಲಿ ಪ್ರಧಾನಿ ಮೋದಿ ಅವರು ರೋಡ್ ಶೋ ನಡೆಸುತ್ತಿದ್ದಾರೆ. ಈ ಮಾರ್ಗದಲ್ಲಿ ದಿನನಿತ್ಯ ಕನಿಷ್ಠ 10 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ. ಶಾಲಾ ಮಕ್ಕಳು, ಐಟಿ ಉದ್ಯೋಗಿಗಳು ದಿನಗೂಲಿ ನೌಕರರು ಸೇರಿದಂತೆ ಎಲ್ಲ ಉದ್ಯೋಗಿಗಳು ಮನೆಗೆ ತೆರಳುವ ಸಮಯದಲ್ಲಿ ಮೋದಿ ಅವರು ರೋಡ್ ಶೋ ನಡೆಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರಿಗೆ ಪ್ರಧಾನಿ ಮೋದಿ: ಎಲ್ಲೆಲ್ಲಿ ಸಂಚಾರ ನಿರ್ಬಂಧ? ಇಲ್ಲಿದೆ ನೋಡಿ!

“ರೋಡ್‌ ಶೋ ಕಾರಣ ರಸ್ತೆ ಬಂದ್ ಮಾಡಿರುವುದರಿಂದ ದಿನದ ಅರ್ಧ ದಿನ ಸುತ್ತಿ ಬಳಸಿ ನಮ್ಮ ಮನೆಗೆ ಸೇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ಅವಲಂಬಿಸಿ ಸಾವಿರಾರು ಬೀದಿ ಬದಿ ವ್ಯಾಪಾರಸ್ಥರು ಇಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಭದ್ರತೆಯ ದೃಷ್ಟಿಯಿಂದ ಅವರೆಲ್ಲರಿಗೂ ನೋಟಿಸ್ ನೀಡಿ ಅವರೆಲ್ಲರ ಒಂದು ದಿನದ ಅನ್ನಕ್ಕೆ ಕೊಳ್ಳಿ ಇಟ್ಟಿದ್ದಾರೆ” ಎಂದು ದೂರಿದರು.

ಆಟೋ ಚಾಲಕ ಧನಂಜಯ ಈ ದಿನ.ಕಾಮ್ ಜತೆಗೆ ಮಾತನಾಡಿ, “ಮೋದಿ ರೋಡ್ ಶೋ ಎಂದು ನಮ್ಮ ದಿನನಿತ್ಯದ ವೇತನಕ್ಕೆ ಕಡಿತ ಹಾಕಿದ್ದಾರೆ. ಪ್ರತಿ ದಿನ ಎನಿಲ್ಲವೆಂದರೂ 1 ಸಾವಿರಿಂದ 1,500 ದಷ್ಟು ಬಾಡಿಗೆ ದುಡಿಯುತ್ತಿದ್ದೆ, ಆದರೆ ಇಂದು ಇನ್ನೂ ₹200 ಸಂಪಾದನೆಯೂ ಆಗಿಲ್ಲ” ಎಂದರು.

e4c01bd9b2970ccfecae47b47af65a36?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. 5 ಗಂಟೆಗಳ ಕಾಲ traffic jam ಅಂದರೆ, PM ಬರುವ ಸಮಯದಲ್ಲಿ lockdown ಮಾಡಿದ್ದರೆ ಚೆನ್ನಾಗಿತ್ತು…

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

Download Eedina App Android / iOS

X