ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಸಂಬಂಧಿಸಿದ ಆರೋಪದಲ್ಲಿ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಭಾರತೀಯ ಸಂವಿಧಾನದ 163ನೇ ವಿಧಿಯ ಅಡಿಯಲ್ಲಿ ಬದ್ಧವಾಗಿರುವ ಮಂತ್ರಿಗಳ ಮಂಡಳಿಯ ಸಲಹೆಯನ್ನು ಒಳಗೊಂಡಂತೆ, ಶಾಸನಬದ್ಧ ಆದೇಶಗಳನ್ನು ಉಲ್ಲಂಘಿಸಿ ಮತ್ತು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿ ಆದೇಶವನ್ನು ನೀಡಲಾಗಿದೆ ಎಂದು ರಿಟ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಮುಡಾ ಹಗರಣ | ಸಿದ್ದರಾಮಯ್ಯ ಮಾತ್ರವಲ್ಲ, ಅವರ ಬೆಂಬಲಿಗರು 500ಕ್ಕೂ ಹೆಚ್ಚು ಸೈಟ್ ನುಂಗಿದ್ದಾರೆ: ಆರ್ ಅಶೋಕ್ ಆರೋಪ
“ರಾಜ್ಯಪಾಲರ ನಿರ್ಧಾರವು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ, ದೋಷಪೂರಿತವಾಗಿದೆ. ಬಾಹ್ಯ ಮೂಲಗಳ ಪ್ರೇರಣೆಯಿಂದ ಮಾಡಲಾಗಿದೆ” ಎಂದು ಕೂಡಾ ಸಿಎಂ ಹೈಕೋರ್ಟ್ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ನ್ಯಾಯಮೂರ್ತಿ ಹೇಮಂತ್ ಚಂದನಗೌಡರ ಅವರ ಏಕಸದಸ್ಯ ಪೀಠ ಇಂದು ಮಧ್ಯಾಹ್ನ 2.30ಕ್ಕೆ ಅರ್ಜಿಯ ವಿಚಾರಣೆ ನಡೆಸಲಿದೆ. ಸಿಎಂ ಪರ ವಕೀಲ ರವಿವರ್ಮಾ ಕುಮಾರ್ ವಾದಿಸಲಿದ್ದಾರೆ.
Breaking: #Karnataka Chief Minister #Siddaramaiah has moved High court challenging order issued by Governor Thaawarchand Gehlot granting sanction to prosecute him in the alleged multi-crore scam relating to Mysore Urban Development Authority (MUDA).@siddaramaiah@TCGEHLOT pic.twitter.com/FV69l21xNP
— Live Law (@LiveLawIndia) August 19, 2024