ಪತ್ರಕರ್ತರಲ್ಲಿ ಪ್ರಶ್ನೆ ಮಾಡುವ ಸೂಕ್ಷ್ಮತೆ ಕ್ಷೀಣ: ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ

Date:

Advertisements
  • ಓದುವ ಪ್ರವೃತ್ತಿಯನ್ನು ಯುವ ಜನರು ಬೆಳೆಸಿಕೊಂಡು ಪ್ರಶ್ನೆ ಮಾಡಬೇಕು
  • ಮಾಧ್ಯಮ ಕ್ಷೇತ್ರಕ್ಕೆ ಬರಬೇಕೆಂದರೆ ಎಲ್ಲ ವಿಷಯದ ಬಗ್ಗೆ ಜ್ಞಾನ ಬೇಕು

“ಪತ್ರಕರ್ತರಲ್ಲಿ ಓದುವ ಆಸಕ್ತಿ ಕಡಿಮೆ ಆಗಿರುವುದರಿಂದ ಇಂದು ಪತ್ರಕರ್ತರು ಪ್ರಶ್ನೆ ಮಾಡುವ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿದ್ದಾರೆ” ಎಂದು ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ ಹೇಳಿದರು.

ಬೆಂಗಳೂರಿನ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮತ್ತು ವಿಜಯ ವಿದ್ಯಾರ್ಥಿ ವಾರ್ಷಿಕ ಸಂಚಿಕೆ ಸಮಿತಿ ವತಿಯಿಂದ ಮಾಧ್ಯಮ ಭಾಷಾ ಕೌಶಲ್ಯ ಬರವಣಿಗೆ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಈ ವೇಳೆ ಮಾತನಾಡಿದ ಅವರು, “ಓದುವ ಪ್ರವೃತ್ತಿಯನ್ನು ಯುವ ಜನರು ಬೆಳೆಸಿಕೊಂಡು ಪ್ರಶ್ನೆ ಮಾಡುವ ಪ್ರವೃತ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಆದರೆ, ಇವತ್ತಿನ ಮಾಧ್ಯಮ ಬದಲಾಗಿದೆ. ಟಿವಿ ಮಾಧ್ಯಮಗಳು ಬಂದ ನಂತರ ಹೇಳಿದರು-ಕೇಳಿದರು ಎಂದು ಬರೆಯುತ್ತಿದ್ದೇವೆ ಹೊರತು ನಾವು ಪ್ರಶ್ನೆ ಮಾಡುವ ಮಾಧ್ಯಮವಾಗಿ ಉಳಿದಿಲ್ಲ. ಕೇವಲ ಪ್ರತಿಕ್ರಿಯೆ ಪಡೆಯುವ ಮಾಧ್ಯಮವಾಗಿ ಬೆಳೆಯುತ್ತಿದೆ. ಅದು ಅಪಾಯಕಾರಿ” ಎಂದು ವಿಷಾದ ವ್ಯಕ್ತಪಡಿಸಿದರು.

Advertisements

“ಮಾಧ್ಯಮ ಕ್ಷೇತ್ರಕ್ಕೆ ಬರಬೇಕೆಂದರೆ ಎಲ್ಲ ವಿಷಯದ ಬಗ್ಗೆ ಜ್ಞಾನಬೇಕು. ವಿಜ್ಞಾನ, ತಂತ್ರಜ್ಞಾನ, ಅರ್ಥಶಾಸ್ತ್ರ ಬಗ್ಗೆಯೂ ಅರಿವಿರಬೇಕು. ವಿಚಾರಗಳನ್ನು ತಿಳಿದವರಿಂದ ಪಡೆದು ವರದಿ ಮಾಡಬೇಕು. ಇಂದಿನ ಮಾಧ್ಯಮಗಳಲ್ಲಿ ತನಿಖಾ ವರದಿಯ ಕೊರತೆ ಕಾಣುತ್ತಿದೆ. ಕಾನೂನಿನ ತೊಡಕು ಇದ್ದರೂ ಸಹ, ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ವರದಿ ಮಾಡಬೇಕು. ಇದರಿಂದ ಕಾನೂನಿನ ಸಮಸ್ಯೆ ತಪ್ಪುತ್ತದೆ” ಎಂದರು.

“ಮುದ್ರಣ ಮಾಧ್ಯಮ ಇನ್ನೂ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ. ಇತ್ತೀಚೆಗೆ ನಡೆದ ಮಾಧ್ಯಮ ಸಮೀಕ್ಷೆಯಲ್ಲಿ ಮುದ್ರಣ ಮಾಧ್ಯಮ ಶೇ.62ರಷ್ಟು ವಿಶ್ವಾಸವನ್ನು ಉಳಿಸಿಕೊಂಡಿವೆ. ಡಿಜಿಟಲ್ ಮಾಧ್ಯಮಗಳು ವಿಶ್ವಾಸ ಕಳೆದುಕೊಳ್ಳುತ್ತಿವೆ” ಎಂದು ವಿಶಾದ ವ್ಯಕ್ತಪಡಿಸಿದರು.

ಶೇ.56ರಷ್ಟು ವಿದ್ಯುನ್ಮಾನ ಮಾಧ್ಯಮಗಳು ವಿಶ್ವಾಸವನ್ನು ಕಳೆದುಕೊಂಡಿವೆ. ಗೂಗಲ್ ಎಲ್ಲ ಕೊಡುತ್ತದೆ. ಆದರೆ, ನಂಬಿಕೆ ಕಷ್ಟ. ಸಾಮಾಜಿಕ ಮಾಧ್ಯಮಗಳಾದ ಶೇ.53 ಟ್ವಿಟರ್, ಶೇ.30 ಫೇಸ್‌ಬುಕ್, ಶೇ.31 ಟೆಲಿಗ್ರಾಂ ಹಾಗೂ ಶೇ.28 ವಾಟ್ಸ್‌ಆಪ್ ಹಾಗೂ ಶೇ. 29ರಷ್ಟು ಇನ್‌ಸ್ಟಾಗ್ರಾಂ ವಿಶ್ವಾಸ ಉಳಿಸಿಕೊಂಡಿವೆ. ಆದ್ದರಿಂದ ವಿದ್ಯಾರ್ಥಿಗಳು ಮೊಬೈಲ್‌ಗೆ ದಾಸರಾಗದೆ ಹೆಚ್ಚು ಪುಸ್ತಕಗಳನ್ನು ಓದಬೇಕು” ಎಂದು ಹೇಳಿದರು.

“ಉತ್ತಮ ಮಾಧ್ಯಮ ಈಗ ಕೈಗಾರಿಕೆಯಾಗಿ ಬೆಳೆದಿದೆ. ಯಾವ ಸುದ್ದಿಯನ್ನು ಓದುಗ ಗ್ರಾಹಕನಿಗೆ ನೀಡಬೇಕು ಎಂದು ವರದಿಗಾರಿಕೆ ಮಾಡುವವರಿಗೆ ತಿಳಿದಿರಬೇಕು. ರಾಜಕೀಯ ವರದಿ ಮಾಡುವ ಪತ್ರಕರ್ತರ ಜವಾಬ್ದಾರಿಗಳು ಹೆಚ್ಚು ಇರುತ್ತದೆ. ಇಡೀ ರಾಜ್ಯದಲ್ಲಿ ರಾಜಕೀಯ ಪಕ್ಷ ಹಾಗೂ ರಾಜ್ಯದಲ್ಲಿ ಆಗುವ ಎಲ್ಲ ಬೆಳವಣಿಗೆಗಳ ಬಗ್ಗೆ ಗಮನಿಸಬೇಕು. ಎಲ್ಲ ತರದ ಕೌಶಲ್ಯ ಬೇಕು. ಸರ್ಕಾರವನ್ನು ಬೀಳಿಸಿರುವ ವರದಿಗಳು ನಮ್ಮ ರಾಜ್ಯದಲ್ಲಿವೆ. ಆದ್ದರಿಂದ ಮಾಧ್ಯಮಗಳು ಪ್ರಭಾವವನ್ನು ಬೀರಿವೆ. ಸರ್ಕಾರ ಮತ್ತು ಜನರ ನಡುವೆ ಯಾವುದೇ ಪತ್ರಿಕೆ ಅಥವಾ ಪತ್ರಕರ್ತ ಸೇತುವೆಯಾಗಿ ಕೆಲಸ ಮಾಡಬೇಕು” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಶಕ್ತಿ ಯೋಜನೆ | ಮಹಿಳೆಯರಿಗೆ ಸ್ಮಾರ್ಟ್‌ ಕಾರ್ಡ್‌ ಬದಲಿಗೆ ಸಾಮಾನ್ಯ ಬಸ್‌ ಪಾಸ್ ವಿತರಣೆ

“ವರದಿಗಾರ ಯಾವುದೇ ರಾಜಕಾರಣಿಗಳ ಜೊತೆ ಅತಿಯಾದ ಸಂಬಂಧವನ್ನು ಇಟ್ಟುಕೊಳ್ಳಬಾರದು. ಏಕೆಂದರೆ ಈ ಸಂಬಂಧದಿಂದ ಉತ್ತಮ ಸುದ್ದಿಯನ್ನು ಮಾಡಲು ಸಾಧ್ಯವಿಲ್ಲ. ಪತ್ರಿಕೆಗಳು ಜನರಿಗೆ ಹತ್ತಿರವಾಗಬೇಕು. ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಅದರ ಸದುಪಯೋಗವನ್ನು ಪಡೆಯಲು ಸಲಹೆ ನೀಡಬೇಕು” ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ವೆಂಕಟೇಶಪ್ಪ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ ಎಸ್.ಜಿ. ಐಕ್ಯೂಎಸಿ ಸಂಚಾಲಕರಾದ ಟಿ.ಎನ್. ಜ್ಞಾನೇಶ್ವರ ಅವರು ಉಪಸ್ಥಿತರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟ, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್‌ ಕೇಸ್‌ ದಾಖಲು

ಬೆಂಗಳೂರು ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪೂಜಿಸಬೇಕಾಗಿ ಮತ್ತು...

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮಹಿಳೆ ವಿರುದ್ಧದ ಪೋಕ್ಸೋ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಬೆಂಗಳೂರಿನ ವಿಲ್ಲಾವೊಂದರಲ್ಲಿ ವಾಸವಿದ್ದ 53 ವರ್ಷದ ಮಹಿಳೆ ತನ್ನ ಕಾಮ ತೃಷೆಗಾಗಿ...

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

Download Eedina App Android / iOS

X