- ರೇವಾ ಕಾಲೇಜಿನ ಕೆಲ ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ
- ಕಾಲೇಜಿನ ಭದ್ರತಾ ಲೋಪವೂ ಎದ್ದು ಕಾಣುತ್ತಿದೆ: ಡಿಸಿಪಿ
ರೇವಾ ಕಾಲೇಜು ವಾರ್ಷಿಕೋತ್ಸವ ವೇಳೆ ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ಗುದ್ದಾಟ ನಡೆದು ಚಾಕುವಿನಿಂದ ಇರಿದುಕೊಂಡಿರುವ ಘಟನೆ ಬೆಂಗಳೂರಿನ ಬಾಗಲೂರು ಬಳಿ ಏ.29ರಂದು ನಡೆದಿದೆ.
ಮೃತ ಯುವಕ ಭಾಸ್ಕರ್ ಜೆಟ್ಟಿ (25) ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ 4ನೇ ವರ್ಷದ ವಿದ್ಯಾರ್ಥಿ. ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಭಾಸ್ಕರ್ ಅವರನ್ನು ಶುಕ್ರವಾರ ರಾತ್ರಿ ಕೊಲೆ ಮಾಡಲಾಗಿದೆ. ಕೃತ್ಯ ಎಸಗಿದ ಆರೋಪದಡಿ ಕೆಲ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಬಿ.ಎಂ. ಲಕ್ಷ್ಮಿಪ್ರಸಾದ್ ತಿಳಿಸಿದರು.
“ಶುಕ್ರವಾರ ರಾತ್ರಿ ರೇವಾ ಕಾಲೇಜಿನ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿತ್ತು. ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ 9.30 ಗಂಟೆ ಸುಮಾರಿಗೆ ಜಗಳ ಶುರುವಾಗಿತ್ತು. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಇದೇ ವೇಳೆ ವಿದ್ಯಾರ್ಥಿಯೊಬ್ಬ ತನ್ನ ಬಳಿಯ ಚಾಕುವಿನಿಂದ ಇರಿದು ಭಾಸ್ಕರ್ ಅವರನ್ನು ಕೊಂದಿದ್ದಾನೆ. ಕಾಲೇಜಿನ ಭದ್ರತಾ ಲೋಪವೂ ಎದ್ದು ಕಾಣುತ್ತಿದೆ” ಎಂದು ಡಿಸಿಪಿ ಬಿ.ಎಂ. ಲಕ್ಷ್ಮಿಪ್ರಸಾದ್ ತಿಳಿಸಿದರು.
“ಸದ್ಯ ಕಾಲೇಜು ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದೆ. ತಪಿತಸ್ಥ ಇನ್ನೂ ಪತ್ತೆಯಾಗಿಲ್ಲ. ಮೃತ ಭಾಸ್ಕರ್ ಅವರ ಪೋಷಕರು ಮತ್ತಿಕೆರೆಯಲ್ಲಿ ಮನೆ ಮಾಡಿದ್ದಾರೆ. ಗುಜರಾತ್ ಮೂಲದವರು. ಇಬ್ಬರಿಗೂ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಶನಿವಾರ ಪರೀಕ್ಷೆ ನಡೆಸಲಾಗುವುದು”ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: 2050ರ ವೇಳೆಗೆ ನೀರಿನ ಕೊರತೆ ಎದುರಿಸಲಿರುವ ಬೆಂಗಳೂರು