ಬೆಂಗಳೂರಿನ 5 ಲಕ್ಷ ಬಿ ಖಾತಾ ನಿವೇಶನಗಳಿಗೆ ಎ ಖಾತಾ: ಸರ್ಕಾರದ ನಿರ್ಧಾರ

Date:

ಬೆಂಗಳೂರು ಮಹಾನಗರದಲ್ಲಿ ಅನಧಿಕೃತ ಕಟ್ಟಡಗಳು ಹಾಗೂ ಬಡಾವಣೆಗಳ ನಿರ್ಮಾಣಕ್ಕೆ ಕಡಿವಾಣ ಹಾಕುವ ಉದ್ದೇಶದೊಂದಿಗೆ ಸುಮಾರು 5 ಲಕ್ಷ ‘ಬಿ’ ಖಾತಾ ಸ್ವತ್ತುಗಳಿಗೆ ‘ಎ’ ಖಾತಾ ಜತೆಗೆ ಎಲ್ಲ ಮೂಲಸೌಕರ್ಯಗಳು ದೊರಕಲಿವೆ.ಇದಕ್ಕೆ ಸ್ವತ್ತಿನ ಮಾಲೀಕರು ಮಾರ್ಗಸೂಚಿ ದರದ ಶೇಕಡಾ 5 ರಷ್ಟು ಶುಲ್ಕ ಪಾವತಿಸಬೇಕಾಗುತ್ತದೆ.

- Advertisement -

ಏಕ ನಿವೇಶನದ ‘ಬಿ’ ಖಾತಾ ಸ್ವತ್ತುಗಳನ್ನು ಕ್ರಮಬದ್ಧಗೊಳಿಸಿ ‘ಎ’ ಖಾತಾ ನೀಡುವಂತಹ ಮಹತ್ವದ ನಿರ್ಧಾರವನ್ನು ಸಚಿವ ಸಂಪುಟ ಸಭೆಯು ಕೈಗೊಂಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿಸುಮಾರು 5 ಲಕ್ಷಕ್ಕಿಂತ ಹೆಚ್ಚು ‘ಬಿ’ ಖಾತಾ ಸ್ವತ್ತುಗಳಿವೆ. 9 ಮಾನದಂಡಗಳ ಆಧಾರದಲ್ಲಿ ಭೂಪರಿವರ್ತನೆಯಾಗದ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದ ನಿವೇಶನಗಳಿಗೆ ಖಾತಾ ನೀಡಲು ತೀರ್ಮಾನಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ನಿವೇಶನಗಳಿಗಷ್ಟೇ ‘ಎ’ ಖಾತಾ ಭಾಗ್ಯ

ಸಾರ್ವಜನಿಕ ರಸ್ತೆಗಳೆಂದು ಘೋಷಿಸಲ್ಪಟ್ಟ ರಸ್ತೆಗಳಲ್ಲಿರುವ ‘ಬಿ’ ಖಾತಾ ಏಕ ನಿವೇಶನಗಳಿಗೆ ‘ಎ’ ಖಾತಾ ನೀಡಲು ನಿರ್ಧರಿಸಲಾಗಿದೆ. ‘ಬಿ’ ಖಾತಾ ನಿವೇಶನದಲ್ಲಿ ಈಗಾಗಲೇ ಕಟ್ಟಡ ನಿರ್ಮಿಸಿರುವವರಿಗೂ ‘ಎ’ ಖಾತಾ ಹಾಗೂ ನಕ್ಷೆ ಸಿಗಲಿದೆ. ಆದರೆ, ಕಟ್ಟಡ ಅನಧಿಕೃತ ಎಂದು ನಮೂದಾಗಿರುತ್ತದೆ. ನಿವೇಶನಗಳಿಗಷ್ಟೇ ‘ಎ’ ಖಾತಾ ಭಾಗ್ಯ ಸಿಗುತ್ತದೆ, ಕಟ್ಟಡಗಳಿಗೆ ಎ ಖಾತಾ ನೀಡಲಾಗುವುದಿಲ್ಲ.

ಕಾನೂನುಬಾಹಿರವಾಗಿ ಅನಿಯಂತ್ರಿತ ಕಟ್ಟಡ ನಿರ್ಮಾಣ ಮತ್ತು ಬಡಾವಣೆಗಳ ನಿರ್ಮಾಣದಲ್ಲಿ ಶಿಸ್ತು ತರಲು, ನಗರದ ನಾಗರಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ನಿವೇಶನಗಳಿಗೆ ಕಾನೂನು ಉದ್ದೇಶಕ್ಕೆ ಅಧಿಕೃತ ‘ಎ’ ಖಾತಾ ನೀಡಲು ಸಚಿವ ಸಂಪುಟ ನಿರ್ಧರಿಸಿದೆ’ ಎಂದು ಸಚಿವ ಎಚ್‌.ಕೆ. ಪಾಟೀಲ ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ನಿವೇಶನಗಳು ‘ಎ’ ಖಾತಾದ ಸಕಲ ಸೌಲಭ್ಯಗಳನ್ನು ಪಡೆಯಲು ಅರ್ಹವಾಗಿದ್ದು, ಅದಕ್ಕೆ ಅಗತ್ಯವಾದ ಶುಲ್ಕ, ಅಭಿವೃದ್ಧಿ ಶುಲ್ಕವನ್ನು ಬಿಬಿಎಂಪಿಗೆ ಪಾವತಿಸಬೇಕು. ಶುಲ್ಕ ಪಾವತಿ ನಂತರ, ‘ಇ’ ಖಾತಾ ಸೇರಿದಂತೆ ಕಟ್ಟಡ ನಕ್ಷೆಯೂ ಲಭ್ಯವಾಗಲಿದೆ. ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ–1961ರಲ್ಲಿ (ಕೆಟಿಸಿಪಿ) ‘ಬಿ’ ಖಾತಾ ಆಸ್ತಿಗಳು ಎಂಬ ಮಾನ್ಯತೆ ಇಲ್ಲ. ಇಂತಹ ಯೋಜಿತವಲ್ಲದ ಆಸ್ತಿಗಳಲ್ಲಿ ನಿರ್ಮಿಸಲಾಗಿರುವ ಅಕ್ರಮ ಕಟ್ಟಡಗಳು ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಕುಸಿದು, ಅಸುರಕ್ಷಿತ ತಾಣಗಳಾಗಿವೆ.

ಆದ್ದರಿಂದ ‘ಬಿ’ ಖಾತಾ ಆಸ್ತಿಗಳನ್ನು ಕೆಟಿಸಿಪಿ ಕಾಯ್ದೆಯ ನಿಯಂತ್ರಣಕ್ಕೆ ತರುವುದು ಅವಶ್ಯ. ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ–2024 (ಜಿಬಿಜಿಎ) ಕಲಂ 3ರ 147ರಲ್ಲಿ 2024ರ ಸೆಪ್ಟೆಂಬರ್‌ 30ರ ನಂತರದ ಅನಧಿಕೃತ ಆಸ್ತಿಗಳಿಗೆ ‘ಬಿ’ ಖಾತಾ ನೀಡುವುದನ್ನು ನಿಷೇಧಿಸಲಾಗಿದೆ. ಹೀಗಾಗಿ, ಅನಧಿಕೃತ ಕಟ್ಟಡಗಳು ಮತ್ತು ಬಡಾವಣೆಗಳ ಅಭಿವೃದ್ಧಿಯನ್ನು ನಿಯಂತ್ರಿಸಲು, ತಡೆ ಗಟ್ಟಲು ಕಾನೂನು ಮತ್ತು ನಿಯಂತ್ರಿತ ಚೌಕಟ್ಟನ್ನು ಖಾತರಿಪಡಿಸಲು ಜಿಬಿಜಿಎ ಅಡಿ ರಚಿಸಲಾಗುವ ಎಲ್ಲ ನಗರ ಪಾಲಿಕೆಗಳಿಗೂ ಅನ್ವಯವಾಗುವಂತೆ ಎಲ್ಲ ನಿವೇಶನಗಳಿಗೆ ‘ಎ’ ಖಾತಾ ನೀಡುವ ಪ್ರಸ್ತಾವವನ್ನು ಸಚಿವ ಸಂಪುಟ ಅನುಮೋದಿಸಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ತುಳಿದಷ್ಟು ಪುಟಿದೇಳುವ ರಾಹುಲ್ ಎಂಬ ಜನನಾಯಕ

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ನಿವೇಶನಗಳು ‘ಎ’ ಖಾತಾವನ್ನು ಪಡೆಯಬಹುದು. ನಿವೇಶನಗಳ ಮುಂದಿರುವ ಖಾಸಗಿ ರಸ್ತೆಯನ್ನು ‘ಸಾರ್ವಜನಿಕ ರಸ್ತೆ’ ಎಂದು ಘೋಷಿಸಲಾಗುತ್ತದೆ. ಭೂ ಪರಿವರ್ತನೆಯಾಗಿರುವ ಅಥವಾ ಭೂ ಪರಿವರ್ತನೆಯಾಗದ ನಿವೇಶನಗಳಿಗೆ ಮಾರ್ಗಸೂಚಿ ದರದಂತೆ ಶೇ 5ರಷ್ಟು ದರವನ್ನು ಶುಲ್ಕವನ್ನಾಗಿ ಪಾವತಿಸಬೇಕು.

ಯಾರಿಗೆ ಅನುಕೂಲ?

ಬಿಬಿಎಂಪಿಯಿಂದ ‘ಬಿ’ ಖಾತಾ ಪಡೆದಿರುವ ನಿವೇಶನದಾರರು

ಅನಧಿಕೃತ ನಿವೇಶನ/ ಬಡಾವಣೆಯಲ್ಲಿ ‘ಬಿ’ ಖಾತಾ ಹೊಂದಿದ್ದ ಅಥವಾ ಹೊಂದಿರದ ಕಟ್ಟಡಗಳು

ಏಕ ನಿವೇಶನದಲ್ಲಿ ಬಿಬಿಎಂಪಿ ಖಾತಾ ಹೊಂದದೆ ನಿರ್ಮಾಣವಾಗಿರುವ ಅಪಾರ್ಟ್‌ಮೆಂಟ್‌

ಜಿಲ್ಲಾಧಿಕಾರಿಯಿಂದ ಭೂ ಪರಿವರ್ತನೆಯಾಗಿ, ಕೆಟಿಸಿಪಿ ಕಾಯ್ದೆಯಂತೆ ಅನುಮೋದನೆ ಪಡೆಯದ ಖಾಲಿ ನಿವೇಶನ

ಭೂ ಪರಿವರ್ತನೆಯಾಗಿ, ನೋಂದಣಿ ಪತ್ರದ ಮೂಲಕ ವಿಭಾಗಗೊಂಡಿರುವ ಖಾಲಿ ನಿವೇಶನಗಳು

ಭೂ ಪರಿವರ್ತನೆಯಾಗದೆ ವಿಭಾಗವಾಗದ ಸರ್ವೆ ಸಂಖ್ಯೆ/ ಹಿಸ್ಸಾ ಸಂಖ್ಯೆ ಖಾಲಿ ನಿವೇಶನ

ಭೂ ಪರಿವರ್ತನೆಯಾಗದೆ ಸರ್ವೆ ಸಂಖ್ಯೆ/ ಹಿಸ್ಸಾ ಸಂಖ್ಯೆಯಲ್ಲಿ ಅನಧಿಕೃತ ವಾಗಿ ಭಾಗವಾಗಿ 2024ರ ಸೆಪ್ಟೆಂಬರ್ 30ರೊಳಗೆ ನೋಂದಣಿ ಪತ್ರದ ಮೂಲಕ ದಾಖಲೆ ಹೊಂದಿರುವ ನಿವೇಶನ

30 ಅಡಿx40 ಅಡಿ ನಿವೇಶನಕ್ಕೆ ₹2.07 ಲಕ್ಷ

ಬಿಬಿಎಂಪಿ ವ್ಯಾಪ್ತಿಯಲ್ಲಿ ನಿವೇಶನವಿರುವ ಪ್ರದೇಶದಲ್ಲಿ ಮಾರ್ಗಸೂಚಿ ದರ ಪ್ರತಿ ಚದರಡಿಗೆ ₹3,000 ಇದ್ದರೆ, ₹1.80 ಲಕ್ಷ ಶುಲ್ಕ ಪಾವತಿಸಬೇಕಾಗುತ್ತದೆ. ಇದರ ಜೊತೆಗೆ, ಪ್ರತಿ ಚದರ ಮೀಟರ್‌ಗೆ ₹250ರಂತೆ ₹27,870 ಅಭಿವೃದ್ಧಿ ಶುಲ್ಕವಿರುತ್ತದೆ.

ಉದ್ಯಾನಕ್ಕೆ ಜಾಗವಿಲ್ಲದಿದ್ದರೆ ಶುಲ್ಕ

ಉದ್ಯಾನಕ್ಕೆ ಜಾಗ ಬಿಡಲು ಅವಕಾಶವಿಲ್ಲದ 55 ಚದರ ಮೀಟರ್‌ನಿಂದ ಎರಡು ಸಾವಿರ ಚದರ ಮೀಟರ್‌ವರೆಗಿನ ನಿವೇಶನಗಳಲ್ಲಿರುವ ಕಟ್ಟಡಗಳು ಮಾರ್ಗಸೂಚಿ ದರದ ಶೇ 5ರಷ್ಟು ಶುಲ್ಕವನ್ನು ‘ಪಾರ್ಕ್‌ ಫೀ’ ಎಂದು ಪಾವತಿಸುವುದು ಕಡ್ಡಾಯವಾಗಿದೆ.

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ ಸೆಕ್ಷನ್‌ 13–ಇಗೆ ತಿದ್ದುಪಡಿ ತಂದು, ಪರಿಷ್ಕೃತ ಮಾಸ್ಟರ್‌ ಪ್ಲಾನ್‌–2015ರ ವಲಯ ನಿಯಮಗಳನ್ನು ಬದಲಾಯಿಸಿ ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿದೆ.

ಬಿಬಿಎಂಪಿ ಹಾಗೂ ಬಿಡಿಎ ವ್ಯಾಪ್ತಿಯಲ್ಲಿ ಎರಡು ಸಾವಿರ ಚದರ ಮೀಟರ್‌ನಿಂದ 10 ಸಾವಿರ ಚದರ ಮೀಟರ್‌ವರೆಗಿನ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಅಪಾರ್ಟ್‌ಮೆಂಟ್‌ಗಳು ಶೇ 15ರಷ್ಟು ಭೂಮಿಯನ್ನು ಉದ್ಯಾನವನ್ನಾಗಿ ಅಭಿವೃದ್ಧಿಪಡಿಸುವುದು ಕಡ್ಡಾಯವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾಗತಿಕ ಕೌಶಲ್ಯ ರಾಜಧಾನಿಯಾಗುವತ್ತ ಕರ್ನಾಟಕದ ದಿಟ್ಟ ಹೆಜ್ಜೆ: ನ. 3ರಿಂದ ‘ಬೆಂಗಳೂರು ಕೌಶಲ್ಯ ಶೃಂಗಸಭೆ’

"ಕೃತಕ ಬುದ್ಧಿಮತ್ತೆ (AI) ಹಾಗೂ ಹೊಸ ತಂತ್ರಜ್ಞಾನಗಳಿಂದ ಕೌಶಲ್ಯ ಕ್ಷೇತ್ರವು ಅತಿವೇಗವಾಗಿ...

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ‘ಬ್ಯಾರಿ ಭಾಷಾ ದಿನ’ ಆಚರಣೆ

ಜಗತ್ತಿನ ಯಾವುದೇ ಭಾಷೆಯನ್ನು ಬ್ಯಾರಿ ಸಮುದಾಯದ ಮಕ್ಕಳು ಕಲಿಯಲಿ. ಆದರೆ, ಮನೆಯಲ್ಲಿ...

ಬೆಂಗಳೂರು | ಅಕ್ರಮವಾಗಿ ಮನೆ ನೆಲಸಮ: 5 ಲಕ್ಷ ನಗದು, ಆಭರಣ ಕಳವು; ಇಬ್ಬರ ವಿರುದ್ಧ ಎಫ್‌ಐಆರ್

67 ವರ್ಷದ ವೃದ್ಧ ವ್ಯಾಪಾರಿಯೊಬ್ಬರ ಮನೆಯನ್ನು ಅಕ್ರಮವಾಗಿ ಧ್ವಂಸಗೊಳಿಸಿ, ರೂ. 5...

ಧರ್ಮಸ್ಥಳದ ಸಾವಿನ ಪ್ರಮಾಣದಲ್ಲಿ ವ್ಯತ್ಯಾಸ; ನಿಜ ಪತ್ತೆಗೆ ಎಸ್‌ಐಟಿಗೆ ಸರ್ಕಾರದಿಂದ ಪೂರಕ ಬೆಂಬಲ ಅಗತ್ಯ: ಮಹಿಳಾ ಆಯೋಗದ ಅಧ್ಯಕ್ಷೆ

ಧರ್ಮಸ್ಥಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾವುಗಳು...