ಫ್ಯಾನ್ಸಿ ನಂಬರ್‌ ಹರಾಜಿಗೆ ಆಗಸ್ಟ್‌ 31 ರಂದು ಅರ್ಜಿ ಆಹ್ವಾನಿಸಿದ ಸಾರಿಗೆ ಇಲಾಖೆ

Date:

Advertisements

ರಾಜ್ಯ ಸಾರಿಗೆ ಇಲಾಖೆಯು ಫ್ಯಾನ್ಸಿ ನಂಬರ್‌ಗಳ ಹರಾಜಿನ ಮೂಲಕ ಅಧಿಕ ಆದಾಯ ಗಳಿಸುತ್ತಿದೆ. ಇದೀಗ, ‘ಕೆಎ 04 ಎನ್‌ಡಿ’ ಸರಣಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಆಗಸ್ಟ್ 31ರಂದು ಹರಾಜು ಆರಂಭವಾಗಲಿದ್ದು, ಕಳೆದ ಆ.17ರಂದು ನಡೆದ ಫ್ಯಾನ್ಸಿ ನಂಬರ್ ಹರಾಜಿನಲ್ಲಿ ಇಲಾಖೆ ₹59.81 ಲಕ್ಷ ಗಳಿಸಿದೆ. ‘ಕೆಎ 05 ಎನ್‌ಜೆ 0001’ ಹರಾಜಿನಲ್ಲಿ ಗರಿಷ್ಠ ₹20.75 ಲಕ್ಷ, ಕೆಎ 05 ಎನ್‌ಜೆ 0007, ಕೆಎ 05 ಎನ್‌ಜೆ 0009, ಕೆಎ 05 ಎನ್‌ಜೆ 0555 ಮತ್ತು ಕೆಎ 05 ಎನ್‌ಜೆ 5555 ತಲಾ ₹3.2 ಲಕ್ಷಕ್ಕೆ ಮಾರಾಟವಾಗಿದೆ.

ಕೆಎ 05 ಎನ್‌ಜೆ 9999 ₹3.05 ಲಕ್ಷ, ಕೆಎ 05 ಎನ್‌ಜೆ 7777 ₹2.35 ಲಕ್ಷ, ಕೆಎ 05 ಎನ್‌ಜೆ 0999 ₹2.25 ಲಕ್ಷ, ಕೆಎ 05 ಎನ್‌ಜೆ 0666 ₹1.75 ಲಕ್ಷಕ್ಕೆ ಹರಾಜಾಗಿದೆ.

Advertisements

ಕರ್ನಾಟಕ ಮೋಟಾರು ವಾಹನ ನಿಯಮಗಳು, 1989ರ ನಿಯಮ 46 (ಎಎ) 1 ರಿಂದ 999 ರ ನಡುವಿನ ಲಘು ಮೋಟಾರು ವಾಹನಗಳಿಗೆ ಫ್ಯಾನ್ಸಿ ನೋಂದಣಿ ಸಂಖ್ಯೆಗಳನ್ನು ಹಂಚಿಕೆ ಮಾಡಲು ಸಾರ್ವಜನಿಕರಿಂದ ಸಾರಿಗೆ ಇಲಾಖೆ ಅರ್ಜಿಗಳನ್ನು ಆಹ್ವಾನಿಸಿದೆ.

‘ಕೆಎ 04 ಎನ್‌ಡಿ’ ಸರಣಿಯ ಹರಾಜು ಪ್ರಕ್ರಿಯೆಯು ಆ.31ರಂದು ಮಧ್ಯಾಹ್ನ 12 ಗಂಟೆಗೆ ಶಾಂತಿನಗರದ ಸಾರಿಗೆ ಆಯುಕ್ತರ ಕಚೇರಿಯಲ್ಲಿ ನಡೆಯಲಿದ್ದು, ಆಸಕ್ತರು ಡಿಮ್ಯಾಂಡ್ ಡ್ರಾಫ್ಟ್‌ನೊಂದಿಗೆ ಅರ್ಜಿಯನ್ನು ಸಲ್ಲಿಸಿ ₹75,000 ರಶೀದಿಯೊಂದಿಗೆ ಕಾರ್ಯದರ್ಶಿ, ರಾಜ್ಯ ಸಾರಿಗೆ ಪ್ರಾಧಿಕಾರ ಬೆಂಗಳೂರು, ಡಿಡಿ ಮತ್ತು ಅರ್ಜಿಯನ್ನು ಆಗಸ್ಟ್ 31ರ ಮಧ್ಯಾಹ್ನ 12 ಗಂಟೆಯೊಳಗೆ ಸಲ್ಲಿಸಬೇಕು.

ಈ ಸುದ್ದಿ ಓದಿದ್ದೀರಾ? ಸೋಂಕುಗಳು, ಅಪಘಾತಗಳೂ ಕಾರ್ನಿಯಲ್ ಕುರುಡುತನಕ್ಕೆ ಕಾರಣವಾಗುತ್ತವೆ: ಕಣ್ಣಿನ ತಜ್ಞ

ಅರ್ಜಿದಾರರಿಗೆ ಟೋಕನ್ ನೀಡಲಾಗುವುದು. ಯಶಸ್ವಿ ಬಿಡ್ಡುದಾರರು ಎರಡು ಕೆಲಸದ ದಿನಗಳಲ್ಲಿ ಒಟ್ಟು ಬಿಡ್ ಮೊತ್ತವನ್ನು ಡಿಡಿ ರೂಪದಲ್ಲಿ ಪಾವತಿಸಬೇಕು. 90 ದಿನಗಳಲ್ಲಿ ವಾಹನವನ್ನು ನೋಂದಾಯಿಸಿಕೊಳ್ಳಬೇಕು. ವಿಫಲವಾದರೆ ಬಿಡ್ಡಿಂಗ್ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಹೇಳಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟ, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್‌ ಕೇಸ್‌ ದಾಖಲು

ಬೆಂಗಳೂರು ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪೂಜಿಸಬೇಕಾಗಿ ಮತ್ತು...

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮಹಿಳೆ ವಿರುದ್ಧದ ಪೋಕ್ಸೋ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಬೆಂಗಳೂರಿನ ವಿಲ್ಲಾವೊಂದರಲ್ಲಿ ವಾಸವಿದ್ದ 53 ವರ್ಷದ ಮಹಿಳೆ ತನ್ನ ಕಾಮ ತೃಷೆಗಾಗಿ...

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

Download Eedina App Android / iOS

X