ಬೆಂಗಳೂರಿನಲ್ಲಿ ರೈಲಿಗೂ ‘ಟ್ರಾಫಿಕ್ ಜಾಮ್’ ಬಿಸಿ?; ವಿಡಿಯೋ ವೈರಲ್ – ಅಧಿಕಾರಿಗಳ ಸ್ಪಷ್ಟನೆ

Date:

Advertisements

ವಾಹನಗಳು ರೈಲು ಹಳಿಗಳನ್ನು ದಾಟುತ್ತಿದ್ದು, ಹಳಿಗಳ ಮೇಲೆ ರೈಲು ನಿಂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂಚಾರ ದಟ್ಟಣೆಯಿಂದ ವಾಹನಗಳ ರೈಲ್ವೇ ಹಳಿಗಳ ಮೇಲೂ ಸಾಲಾಗಿ ನಿಂತಿದ್ದು, ರೈಲು ಮುಂದೆ ಸಾಗಲಾರದೆ, ಹಳಿಗಳ ಮೇಲೆ ನಿಂತಿದೆ. ಸಂಚಾರ ದಟ್ಟಣೆಯ ಬಿಸಿ, ರೈಲಿಗೂ ತಟ್ಟಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೋ ವೈರಲ್ ಅಗಿದೆ. ಆದರೆ, ಈ ಹೇಳಿಕಯನ್ನು ರೈಲ್ವೇ ಅಧಿಕಾರಿಗಳು ಅಲ್ಲಗಳೆದಿದ್ದು, ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನ ಮುನೇನಕೊಳಲು ರೈಲ್ವೆ ಕ್ರಾಸಿಂಗ್ ಬಳಿ, ವಾಹನಗಳು ಹಳಿ ದಾಟುತ್ತಿದ್ದು, ರೈಲು ಹಳಿಗಳ ಮೇಲೆ ನಿಂತಿದ್ದ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಆ ವಿಡಿಯೋವನ್ನು ಇನ್​​ಸ್ಟಾಗ್ರಾಂನಲ್ಲಿ ಸುಧೀರ್‌ ಚಕ್ರವರ್ತಿ (sudhirchakravarthi4142) ಎಂಬವರು ಹಂಚಿಕೊಂಡಿದ್ದಾರೆ.

“ನಾನು ಅಥವಾ ನೀವು ಮಾತ್ರವಲ್ಲ ರೈಲಿಗೂ ಕೂಡಾ ಬೆಂಗಳೂರು ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಸುಧೀರ್ ಪೋಸ್ಟ್‌ ಮಾಡಿದ್ದಾರೆ.

Advertisements
WhatsApp Image 2024 09 26 at 6.33.01 PM

ಅವರ ಪೋಸ್ಟ್‌ ವೈರಲ್ ಆಗಿರುವ ಹಿನ್ನೆಲೆ, ವಿಡಿಯೋವನ್ನು ರೈಲ್ವೇ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. “ಬೈಯಪ್ಪನಹಳ್ಳಿ ಮತ್ತು ಕಾರ್ಮೆಲಾರಂ ನಡುವೆ ರೇಕ್ ಪರಿಶೀಲನೆ ನಡೆಸಲಾಗುತ್ತಿತ್ತು. ಹೀಗಾಗಿ, ರೈಲು ಸಂಚಾರಕ್ಕೆ ಅನುಮತಿಸದರೆ, ರೆಡ್‌ ಸಿಗ್ನಲ್ ಹಾಕಲಾಗಿತ್ತು. ಪರಿಣಾಮ, ರೈಲನ್ನು (ನಂ. 12257) ಲೋಕೊ-ಪೈಲಟ್ ಹಳಿಗಳ ನಿಲ್ಲಿಸಿದ್ದರು. ಪರಿಶೀಲನೆ ಮುಗಿದ ಬಳಿಕ, ರೈಲ್ವೇ ಗೇಟ್ ಹಾಕಿ, ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಸಂಚಾರ ದಟ್ಟಣೆಗೂ, ರೈಲು ನಿಂತಿದ್ದಕ್ಕೂ ಯಾವುದೇ ಸಂಬಂಧ ಇಲ್ಲ” ಎಂದು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

ಬೆಂಗಳೂರು ಮೆಟ್ರೋ: ನಾಳೆ ಹಳದಿ ಮಾರ್ಗದಲ್ಲಿ ಬೆಳಿಗ್ಗೆ 5ಕ್ಕೆ ಸಂಚಾರ ಆರಂಭ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ಹಳದಿ ಮಾರ್ಗದಲ್ಲಿ ಸೋಮವಾರ...

Download Eedina App Android / iOS

X