ಬೆಳಗಾವಿ

ಬೆಳಗಾವಿ | ಮಧ್ಯರಾತ್ರಿಯಿಂದಲೇ ರಾಜ್ಯೋತ್ಸವ ಸಂಭ್ರಮ, ಇಂದು ಬೃಹತ್‌ ಮೆರವಣಿಗೆ

ಬೆಳಗಾವಿಯಲ್ಲಿ ಮಧ್ಯರಾತ್ರಿಯಿಂದಲೇ ಕನ್ನಡ ರಾಜ್ಯೋತ್ಸವ ಆರಂಭಗೊಂಡಿದೆ. ಸಿಡಿಮದ್ದು ಪ್ರದರ್ಶನ ಮೂಲಕ ಕನ್ನಡ ಅಭಿಮಾನಿಗಳು ರಾತ್ರಿವಿಡಿ ಕುಣಿದು ಕುಪ್ಪಳಿಸಿದ್ದಾರೆ. ಇದೇ ಮೊದಲ ಬಾರಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರ ಕನ್ನಡ ಸಂಘಟನೆಗಳ ಕಾರ್ಯಕರ್ತರು ಸಿಡಿ...

ಮಹಿಳೆಯರಿಗೆ ಅವಮಾನ ಮಾಡಿದ ಕನ್ನೇರಿ ಸ್ವಾಮಿ; ಸಮರ್ಥನೆ ಮಾಡಿಕೊಂಡ ಜಗದೀಶ್ ಶೆಟ್ಟರ್!

ಮಠಗಳು ಭಾರತೀಯ ಸಮಾಜದಲ್ಲಿ ನೈತಿಕತೆ, ಅಧ್ಯಾತ್ಮ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರತೀಕವಾಗಿದ್ದಾರೆ. ಜನರು ಮಠಾಧೀಶರನ್ನು ಕೇವಲ ಧಾರ್ಮಿಕ ನಾಯಕರಾಗಿ ಮಾತ್ರವಲ್ಲ, ಮಾರ್ಗದರ್ಶಕರಾಗಿಯೂ ಕಾಣುತ್ತಾರೆ. ಇಂತಹ ನಾಡಿನಲ್ಲಿ ಮಠದ ಸ್ವಾಮಿಗಳ ಮಾತುಗಳು ಸಮಾಜದ ನಡವಳಿಕೆಗೆ...

ದಾವಣಗೆರೆ | ವಾಲ್ಮೀಕಿ ಸಮಾಜದ ಬಗ್ಗೆ ಅವಹೇಳನ:ಗುರುಪೀಠದ ಪ್ರಸನ್ನಾನಂದಪುರಿ ಶ್ರೀ ಆಕ್ರೋಶ

ವಾಲ್ಮೀಕಿ ಸಮಾಜದ ವಿರುದ್ಧ ಸಭೆಯಲ್ಲಿ ಮಾತನಾಡಿ ಅವಹೇಳನಕಾರಿಯಾಗಿ ಮಾತನಾಡಿರುವ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ, ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಸರ್ಕಾರ ಕಾನೂನು ಕ್ರಮಕೈಗೊಳ್ಳಬೇಕು ಎಂದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ...

ಬೆಳಗಾವಿ | ಮದುವೆಯಾಗಿ ನಾಲ್ಕು ತಿಂಗಳಲ್ಲೇ ಕೊಲೆ; ಹೆಂಡತಿಯ ಕೊಂದು ಬೆಡ್ ಕೆಳಗೆ ಶವ ಅಡಗಿಸಿದ ಪತಿ!

ಮದುವೆಯಾದ ನಾಲ್ಕು ತಿಂಗಳಲ್ಲೇ ಪತಿಯೊಬ್ಬ ಪತ್ನಿಯನ್ನು ಕೊಂದು ಮಂಚದಡಿ ಶವವನ್ನು ಹೂತಿಟ್ಟ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನಡೆದಿದೆ. ಸಾಕ್ಷಿ ಆಕಾಶ್ ಕಂಬಾರ (20) ಮೃತ ಮಹಿಳೆ...

ಶಿರೋಡಾ ಕಡಲತೀರದಲ್ಲಿ ಭೀಕರ ದುರಂತ; ಏಳು ಮಂದಿ ನೀರುಪಾಲು, ಓರ್ವನ ಸ್ಥಿತಿ ಗಂಭೀರ

ಪಕ್ಕದ ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಶಿರೋಡಾ ಸಮುದ್ರ ತೀರದಲ್ಲಿ ಭೀಕರ ದುರಂತ ಸಂಭವಿಸಿದ್ದು, ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಲೋಂಡಾ ಗ್ರಾಮದ ಒಂದೇ ಕುಟುಂಬದ ಎಂಟು ಮಂದಿ ಸಮುದ್ರದಲ್ಲಿ ಈಜಲು ಇಳಿದಾಗ ಅಲೆಗಳಿಗೆ...

ಬೆಳಗಾವಿ | ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ; ರಮೇಶ್ ಕತ್ತಿ ಪೆನಲ್ ಗೆಲುವಿಗೆ ಕಾರಣವಾದ ಅಂಶಗಳಿವು…

ಬೆಳಗಾವಿ ಜಿಲ್ಲೆಯ ಸ್ಥಳೀಯ ರಾಜಕಾರಣ ರಾಜ್ಯ ಮಟ್ಟದಲ್ಲೂ ಗಮನ ಸೆಳೆಯುವಂಥದ್ದು. ಇಲ್ಲಿ ಕುಟುಂಬ ಹಾಗೂ ಜಾತಿ ರಾಜಕಾರಣದ ಪ್ರಭಾವ ಇದ್ದರೂ, ಸಹಕಾರಿ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರು ತಾವು ನಂಬುವ ನಾಯಕರಿಗೆ ಆದ್ಯತೆ ನೀಡುವುದನ್ನು...

ಬೆಳಗಾವಿ | ಗೋಮಾಂಸ ಮಾರಾಟ ಶಂಕಿಸಿ ಲಾರಿಗೆ ಬೆಂಕಿ ಇಟ್ಟ ವಿಹಿಂಪ, ಬಜರಂಗದಳ ಕಾರ್ಯಕರ್ತರು

ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿರುವ ಆರೋಪದ ಮೇಲೆ ಲಾರಿಯೊಂದಕ್ಕೆ ಬೆಂಕಿ ಇಟ್ಟ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಅಕ್ರಮ ಗೋ ಮಾಂಸ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ...

ಬೆಂಗಳೂರು | ಬೆಳಗಾವಿಯಲ್ಲಿ ಟಿಟಿಡಿ ದೇವಸ್ಥಾನ ನಿರ್ಮಾಣಕ್ಕೆ ಆಡಳಿತ ಮಂಡಳಿ ಅನುಮೋದನೆ: ನರೇಶ್‌ ಕುಮಾರ್‌

ಉತ್ತರ ಕರ್ನಾಟಕ, ಗೋವಾ ಹಾಗೂ ಮಹರಾಷ್ಟ್ರ ರಾಜ್ಯದ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಬೆಳಗಾವಿಯಲ್ಲಿ ತಿರುಪತಿ ತಿರುಮಲ ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿ ಆಡಳಿತ ಮಂಡಳಿ ಅನುಮೋದನೆ ನೀಡಿದೆ ಎಂದು ಟಿಟಿಡಿ ಸದಸ್ಯ ಎಸ್‌...

ಪ್ಲಾಸ್ಟಿಕ್ ಆಯುವವನಿಂದ ಚುನಾವಣಾ ಹೋರಾಟ; ಜನತೆಗೆ ಪ್ರಜಾಪ್ರಭುತ್ವದ ಪಾಠ

ಕೇವಲ ಶ್ರೀಮಂತರು, ಅಧಿಕಾರಿಗಳು, ರಾಜಕೀಯ ವಂಶಸ್ಥರಿಗಷ್ಟೇ ಸೀಮಿತವಲ್ಲದೆ, ಸಾಮಾನ್ಯ ಜೀವಿಗೂ ತನ್ನ ಧ್ವನಿ ಎತ್ತುವ ವೇದಿಕೆ ಕಲ್ಪಿಸುವುದೇ ಪ್ರಜಾಪ್ರಭುತ್ವದ ನಿಜವಾದ ಸೊಗಸು. ಬದುಕು ಸಾಗಿಸಲು ದಿನವಿಡೀ ಪ್ಲಾಸ್ಟಿಕ್ ಆಯುವವರಿಗೂ ಕೈಯಲ್ಲಿ ಮತಪತ್ರ ಹಿಡಿದು...

ಬೆಳಗಾವಿ | ಡಿಸಿಸಿ ಬ್ಯಾಂಕ್ ಚುನಾವಣೆ; ಗ್ರಾಮ ದೇವತೆ ಮೇಲೆ ಆಣೆ ಪ್ರಮಾಣ

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ (ಬಿಡಿಸಿಸಿ) ಚುನಾವಣೆ ರಾಜಕೀಯ ಧ್ರುವೀಕರಣಕ್ಕೆ ನಾಂದಿ ಹಾಡಿದೆ. ಮೂರು ದಶಕಗಳ ಕಾಲ ಬ್ಯಾಂಕಿನ ಮೇಲೆ ಪಾರಮ್ಯ ಸಾಧಿಸಿದ್ದ ಕತ್ತಿ ಕುಟುಂಬವನ್ನು ದೂರ ಇಡಲು ಜಾರಕಿಹೊಳಿ ಸಹೋದರರು...

ಬೆಳಗಾವಿ | ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ; ಮೂರು ಪೆನೆಲ್‌ಗಳ ನಡುವೆ ತೀವ್ರ ಪೈಪೋಟಿ

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ಖಾನಪೇಟೆಯ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ 18 ನಿರ್ದೇಶಕರ ಸ್ಥಾನಗಳಿಗೆ ನಾಳೆ (ಸೆ.14) ಚುನಾವಣೆ ನಡೆಯಲಿದೆ. ಒಟ್ಟು 19,875 ಶೇರು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ...

ಬೆಳಗಾವಿ | ತಮ್ಮನ ಪತ್ನಿಗೆ ಚಾಕು ಇರಿದು ಹತ್ಯೆ; ಆರೋಪಿ ಪರಾರಿ

ತಮ್ಮನ ಪತ್ನಿಯನ್ನು ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಟಿಳಕವಾಡಿಯ ಮಂಗಳವಾರ ಪೇಟೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಮೃತರನ್ನು ಗೀತಾ ಗವಳಿ (45) ಎಂದು ಗುರುತಿಸಲಾಗಿದೆ. ಆರೋಪಿ ಗಣೇಶ ಗವಳಿ, ಗೀತಾಳ...

ಈ ಹೊತ್ತಿನ ಪ್ರಮುಖ ಸುದ್ದಿ