ಬೆಳಗಾವಿ |ನಂದಿನಿ ಹಾಲು ಉತ್ಪಾದಕರಿಗೆ ₹2.40 ಕೋಟಿ ಮೌಲ್ಯದ ಉಪಕರಣ ವಿತರಣೆ

Date:

ನಂದಿನಿ ಹಾಲಿನ ಗುಣಮಟ್ಟ ಮತ್ತು ಒಕ್ಕೂಟದ ಮೇಲಿನ ರೈತರ ವಿಶ್ವಾಸದಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಹೈನುಗಾರಿಕೆ ಕ್ಷೇತ್ರ ನಿರಂತರ ಪ್ರಗತಿ ಸಾಧಿಸುತ್ತಿದೆ. ಜಿಲ್ಲೆಯ 644 ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಪ್ರತಿದಿನ ಸರಾಸರಿ 3.20 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ ಎಂದು ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

- Advertisement -

ಬೆಳಗಾವಿ ನಗರದ ಮಹಾಂತೇಶ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನಲ್ಲಿ ಒಕ್ಕೂಟ ಗಳಿಸಿದ ಲಾಭಾಂಶದ ಶೇ.60ರಷ್ಟು ಅನುದಾನದಡಿ ಹಾಲು ಉತ್ಪಾದಕ ಸದಸ್ಯರಿಗೆ ₹2.40 ಕೋಟಿ ವೆಚ್ಚದ ವಿವಿಧ ಉಪಕರಣಗಳನ್ನು ವಿತರಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 2.45 ಲಕ್ಷ ಲೀಟರ್ ಆಕಳ ಹಾಲು ಹಾಗೂ 71 ಸಾವಿರ ಲೀಟರ್‌ಗೂ ಅಧಿಕ ಎಮ್ಮೆ ಹಾಲು ಸಂಗ್ರಹವಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸೋನಿಯಾ ಗಾಂಧಿಯವರ ಪುಸ್ತಕಕ್ಕೆ ನಿಷೇಧದ ಬೇಡಿಕೆ: ಇತಿಹಾಸವನ್ನು ಅಳಿಸಿಹಾಕಲು...

ಸಾವರ್ಕರ್ ಮತ್ತು ಆರ್‌ಎಸ್‌ಎಸ್ ಕುರಿತ ಐತಿಹಾಸಿಕ ಉಲ್ಲೇಖಗಳನ್ನು ವಿರೋಧಿಸಿ ಬಿಜೆಪಿ ಬೆಂಬಲಿತ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಬಣ ಸೋನಿಯಾ ಗಾಂಧಿಯವರ ಆತ್ಮಕಥನಕ್ಕೆ ನಿಷೇಧ ಹೇರಬೇಕೆಂದು ಒತ್ತಾಯಿಸುತ್ತಿದೆ. ಗಾಂಧೀಜಿಯವರ ಹಂತಕ ಗೋಡ್ಸೆಯನ್ನು ಸಮರ್ಥಿಸುವ...

ಇತಿಹಾಸದ ಕಮಾನು: ಸಮಾನತೆಯಿಂದ ಅಸಮಾನತೆಗೆ, ಮತ್ತೆ ಸಮಾನತೆಯತ್ತವೇ ಮನುಷ್ಯನ...

ಒಂದು ಕಾಲದಲ್ಲಿ ಮನುಷ್ಯನ ಕೈಕೆಲಸವನ್ನು ಯಂತ್ರಗಳು ಬದಲಾಯಿಸಿದವು. ಈಗ ಮನುಷ್ಯನ ಬುದ್ಧಿಶಕ್ತಿಯ ಕೆಲವು ಕೆಲಸಗಳನ್ನೂ ಯಂತ್ರಗಳು ಮಾಡತೊಡಗಿವೆ. ಭಾಷಾಂತರ, ಲೆಕ್ಕಾಚಾರ, ವಿನ್ಯಾಸ, ಮಾಹಿತಿ ವಿಶ್ಲೇಷಣೆ, ವೈದ್ಯಕೀಯ ಪರೀಕ್ಷೆಗಳಿಗೆ ನೆರವು, ಆಡಳಿತದ ನಿರ್ಧಾರಗಳಿಗೆ ಸಹಾಯ...

‘ಎಪ್ಸ್ಟೀನ್‌’ನದ್ದು ಆತ್ಮಹತ್ಯೆಯಲ್ಲ, ಕೊಲೆ! ತಜ್ಞರ ಹೊಸ ಅಧ್ಯಯನದಿಂದ ಸ್ಫೋಟ;...

ಅಮೆರಿಕದ ಜಾರ್ಜ್ ಫ್ಲಾಯ್ಡ್ ಸಾವಿನ ಪ್ರಕರಣ ಸೇರಿದಂತೆ ವಿಧಿವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಪ್ರೊ. ಮೈಕೆಲ್ ಫ್ರೀಮನ್ ಅವರು ಎಪ್ಸ್ಟೀನ್ ಸಾವಿಗೆ ಸಂಬಂಧಿಸಿದ ಶವಪರೀಕ್ಷೆಯ ದಾಖಲೆಗಳು ಮತ್ತು ಛಾಯಾಚಿತ್ರಗಳನ್ನು ಸುಮಾರು ಒಂದು ವರ್ಷ...

ಜಿಲ್ಲೆಯ ಹೈನುಗಾರರು ನಂದಿನಿ ಸಂಸ್ಥೆಯ ಮೇಲೆ ಇಟ್ಟಿರುವ ವಿಶ್ವಾಸವೇ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ. ಒಕ್ಕೂಟದ ಲಾಭಾಂಶವನ್ನು ಹಾಲು ಉತ್ಪಾದಕರಿಗೆ ಹಂಚಿಕೆ ಮಾಡುವ ಮೂಲಕ ಅವರ ಆರ್ಥಿಕ ಸಬಲೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಹಾಲು ಪೂರೈಕೆ ಮಾಡುವ ರೈತರಿಗೆ ದೀಪಾವಳಿ ಕೊಡುಗೆಯಾಗಿ ವಿವಿಧ ಉಪಕರಣಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.ನವೆಂಬರ್ 1ರಿಂದ ಸರ್ಕಾರ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ದರ ಪರಿಷ್ಕರಣೆ ಮಾಡಿದೆ. ಇದರಿಂದ ಹಾಲು, ಮೊಸರು, ಮಜ್ಜಿಗೆ ಹಾಗೂ ಲಸ್ಸಿ ಸೇರಿದಂತೆ ವಿವಿಧ ಉತ್ಪನ್ನಗಳ ಬೆಲೆಯಲ್ಲಿ ಬದಲಾವಣೆಯಾಗಿದೆ.

ಲಕ್ಷಾಂತರ ಗ್ರಾಹಕರು ನಂದಿನಿ ಉತ್ಪನ್ನಗಳ ಮೇಲೆ ವಿಶ್ವಾಸವಿಟ್ಟಿದ್ದಾರೆ. ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಕಲಬೆರಕೆ ರಹಿತ, ಶುದ್ಧ ಹಾಗೂ ಉತ್ತಮ ಗುಣಮಟ್ಟದ ಹಾಲು ಪೂರೈಸುವುದು ಸಂಸ್ಥೆಯ ಆದ್ಯತೆಯಾಗಿದೆ ಎಂದರು.ಹೈನುಗಾರರನ್ನು ಆರ್ಥಿಕವಾಗಿ ಸದೃಢಗೊಳಿಸುವುದು, ಅವರ ಜೀವನಮಟ್ಟ ಸುಧಾರಿಸುವುದು ಹಾಗೂ ಹಾಲು ಉತ್ಪಾದನಾ ಕ್ಷೇತ್ರವನ್ನು ನಿರಂತರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಅನಿವಾರ್ಯ ಕಾರಣಗಳ ಹಿನ್ನೆಲೆಯಲ್ಲಿ ಹಾಲಿನ ದರ ಪರಿಷ್ಕರಣೆ ಮಾಡಲಾಗಿದೆ.

ನಂದಿನಿ ಸಂಸ್ಥೆ ಗುಣಮಟ್ಟ ಮತ್ತು ಶುಚಿತ್ವಕ್ಕೆ ಹೆಸರಾಗಿದ್ದು, ಬೆಮುಲ್ ಗಳಿಸುವ ಲಾಭದಲ್ಲಿ ರೈತರಿಗೆ ಪಾಲು ನೀಡುವುದೇ ಒಕ್ಕೂಟದ ಪ್ರಮುಖ ಆಶಯವಾಗಿದೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಕ್ಕಳ ರಕ್ಷಣೆ ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ: ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್

ಮಕ್ಕಳ ಮೇಲಿನ ಶೋಷಣೆ ಹಾಗೂ ದೌರ್ಜನ್ಯಗಳನ್ನು ತಡೆಗಟ್ಟಲು ಜಾರಿಗೊಳಿಸಲಾಗಿರುವ ಮಕ್ಕಳ ರಕ್ಷಣಾ...

ಉಡುಪಿ | ಸಹಕಾರಿ ಬ್ಯಾಂಕ್‌ಗಳ ಬಲವರ್ಧನೆಯಿಂದ ಸಮಾಜದ ಪ್ರಗತಿ ಸಾಧ್ಯ : ವಿನಯಕುಮಾರ್ ಸೊರಕೆ

ಕರ್ನಾಟಕ ರಾಜ್ಯ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಪಡುಬಿದ್ರಿ...

ಮಂಗಳೂರು | ಮಂಗಳ ಕ್ರೀಡಾಂಗಣ ಸಮಗ್ರ ಅಭಿವೃದ್ಧಿಗೆ ಸಚಿವರಿಂದ ಸ್ಥಳ ಪರಿಶೀಲನೆ

ನಗರದ ಮಂಗಳಾ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಯ ಹಿತದೃಷ್ಠಿಯಿಂದ ಜಿಲ್ಲಾ ಉಸ್ತುವಾರಿ ಸಚಿವ...