ಬೆಳಗಾವಿ | ಕಬ್ಬು ಬೆಳೆಗಾರರ ಜೈಲ್ ಭರೋ ಪ್ರತಿಭಟನೆ; ನಿಷೇಧಾಜ್ಞೆ ಧಿಕ್ಕರಿಸಿ ರೈತರು, ನೂರಾರು ಮಂದಿ ಬಂಧನ

Date:

ಪ್ರತಿ ಟನ್ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ಮತ್ತು ರಾಜ್ಯ ಸರ್ಕಾರದಿಂದ ಪರಿಹಾರ ಧನ ನೀಡುವಂತೆ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ‘ಜೈಲ್ ಭರೋ’ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಚೂನಪ್ಪ ಪೂಜಾರಿ ಅವರ ಬಂಧನದ ಬಳಿಕ ನಗರದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ನಿಷೇಧಾಜ್ಞೆಯನ್ನೂ ಧಿಕ್ಕರಿಸಿ ರಸ್ತೆಗಿಳಿದ ರೈತರು ಮತ್ತು ಪೊಲೀಸರ ನಡುವೆ ಭಾರಿ ಜಟಾಪಟಿ ನಡೆದಿದ್ದು, ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

ಇತ್ತೀಚೆಗೆ, ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ನಡೆದ ಸಭೆಯಲ್ಲಿ ಪ್ರತಿ ಟನ್‌ಗೆ 3,600 ರೂ. ದರ ನಿಗದಿಪಡಿಸುವ ಕುರಿತು ಸರ್ಕಾರ ಚರ್ಚೆ ನಡೆಸಿತ್ತು. ಆದರೆ, ಸರ್ಕಾರದ ಈ ಪ್ರಸ್ತಾಪವನ್ನು ರೈತರು ಧಿಕ್ಕರಿಸಿದ್ದಾರೆ. ಕೃಷಿ ವೆಚ್ಚ ದುಬಾರಿಯಾಗಿದ್ದು, ಪ್ರತಿ ಟನ್ ಕಬ್ಬಿಗೆ 5,500 ರೂ. ಎಂಎಸ್‌ಪಿ ನಿಗದಿಪಡಿಸಬೇಕು ಮತ್ತು ರಾಜ್ಯ ಸರ್ಕಾರದಿಂದ ಪ್ರತಿ ಟನ್‌ಗೆ 1,000 ರೂ. ಪ್ರೋತ್ಸಾಹಧನ ನೀಡಬೇಕು ಎಂದು ರೈತರು ಪಟ್ಟುಹಿಡಿದಿದ್ದಾರೆ. ಪ್ರತಿಭಟನೆ ತೀವ್ರಗೊಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಯಾನ್ವಾದಲ್ಲಿ 1,271 ಉದ್ಯೋಗಿಗಳ ವಜಾ: ಸಾಫ್ಟ್‌ವೇರ್ ಉದ್ಯಮಕ್ಕೆ ‘AI’...

2013ರಲ್ಲಿ ಆರಂಭವಾದ ಕ್ಯಾನ್ವಾ, ವೃತ್ತಿಪರ ಗ್ರಾಫಿಕ್ ವಿನ್ಯಾಸದ ಯಾವುದೇ ತಾಂತ್ರಿಕ ಪರಿಣತಿ ಅಥವಾ ಅನುಭವವಿಲ್ಲದ ಸಾಮಾನ್ಯರಿಗೂ ಪೋಸ್ಟರ್‌ಗಳು, ಪ್ರೆಸೆಂಟೇಷನ್‌ಗಳು, ಸಾಮಾಜಿಕ ಮಾಧ್ಯಮದ ಚಿತ್ರಗಳು, ವೀಡಿಯೊಗಳು ಹಾಗೂ ಜಾಹೀರಾತುಗಳನ್ನು ಅತ್ಯಂತ ಸುಲಭವಾಗಿ ಸೃಷ್ಟಿಸುವ ಅವಕಾಶವನ್ನು...

ಅಕ್ಕಿ ಬೆಲೆ ಏರಿಕೆಯ ಬಿಸಿ: ಗ್ರಾಹಕರ ಕೈ ಸುಡುತ್ತಿದೆ,...

ಅಡುಗೆ ಮನೆಯ ದಿನನಿತ್ಯದ ಅಗತ್ಯವಾಗಿರುವ ಅಕ್ಕಿಯ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು, ಸಾಮಾನ್ಯ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ, ಉದ್ಯೋಗ ಮತ್ತು...

ಮನುಷ್ಯ ಜಾತಿ ಒಂದೇ; ಮೇಲು–ಕೀಳು ಎಂಬ ಭೇದವೇಕೆ?

ಒಂದೆಡೆ ಧರ್ಮದ ಭೇದ ಮರೆತು ಸಹಬಾಳ್ವೆ ನಡೆಸುವ ಹಳ್ಳಿಗಳು; ಮತ್ತೊಂದೆಡೆ ಜಾತಿಯ ಹೆಸರಿನಲ್ಲಿ ಅಸ್ಪೃಶ್ಯತೆ, ಹಲ್ಲೆ ಮತ್ತು ಸಾಮಾಜಿಕ ಬಹಿಷ್ಕಾರ! ರಾಯಚೂರಿನ ತಿಡಿಗೋಳ ಘಟನೆ ಮನುಷ್ಯತ್ವ, ಸಮಾನತೆ ಮತ್ತು ಸಂವಿಧಾನದ ಆಶಯಗಳ ಕುರಿತು...

ಗುರುವಾರ (ನ.5) ರೈತರು ಬೆಳಗಾವಿಯಲ್ಲಿ ಜೈಲ್ ಭರೋ ಪ್ರತಿಭಟನೆಗೆ ಕರೆ ಕೊಟ್ಟಿದ್ದರು. ಪರಿಣಾಮ, ಪೊಲೀಸರು ನಗರದ ಪ್ರಮುಖ ಸ್ಥಳಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಆದಾಗ್ಯೂ, ಚೂನಪ್ಪ ಪೂಜಾರಿ ನೇತೃತ್ವದಲ್ಲಿ ರೈತರು ಬೆಳಗಾವಿಯಲ್ಲಿ ಜಮಾಯಿಸಿದ್ದರು. ಪ್ರತಿಭಟನಾ ನಿರತ ರೈತರನ್ನು ತಡೆಯಲು ಪೊಲೀಸರು ಯತ್ನಿಸಿದ್ದು, ರೈತ ಮುಖಂಡ ಚೂನಪ್ಪ ಪೂಜಾರಿ ಮತ್ತು ಹಲವು ನಾಯಕರನ್ನು ವಶಕ್ಕೆ ಪಡೆದರು.

ತಮ್ಮ ನಾಯಕ ಚೂನಪ್ಪ ಪೂಜಾರಿ ಅವರ ಬಂಧನದಿಂದ ಆಕ್ರೋಶಗೊಂಡ ರೈತರು ಚೆನ್ನಮ್ಮ ವೃತ್ತದಲ್ಲಿ ಜಮಾಯಿಸಿ, ಧರಣಿ ಕುಳಿತರು. ಚೂನಪ್ಪ ಅವರನ್ನು ತಕ್ಷಣವೇ ಬಿಡುಗಡೆ ಮಾಡದಿದ್ದರೆ ಇಡೀ ನಗರದ ವಾಹನ ಸಂಚಾರ ಬಂದ್ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದರು. ಮಾತ್ರವಲ್ಲದೆ, ರೈತರನ್ನು ವಶಕ್ಕೆ ಪಡೆದು ಕರೆದೊಯ್ಯುತ್ತಿದ್ದ ಪೊಲೀಸ್‌ ವಾಹನವನ್ನು ತಡೆದು, ಚಾಲಕನನ್ನು ಕೆಳಗಿಳಿಸಿ, ಬಂಧಿತ ರೈತರನ್ನು ಕೆಳಗಿಳಿಸಿದರು.

ಈ ಬೆನ್ನಲ್ಲೇ, ಹೆಚ್ಚುವರಿ ತುಕಡಿಗಳೊಂದಿಗೆ ಚೆನ್ನಮ್ಮ ಸರ್ಕಲ್‌ಗೆ ಬಂದ ಪೊಲೀಸ್ ಅಧಿಕಾರಿಗಳು, ನಿಷೇಧಾಜ್ಞೆ ಮೀರಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ವಶಕ್ಕೆ ಪಡೆದು, ಬಲವಂತವಾಗಿ ಪೊಲೀಸ್‌ ವಾಹನಕ್ಕೆ ಹತ್ತಿಕೊಂಡು ಕರೆದೊಯ್ದಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಕ್ಕಿ ಬೆಲೆ ಏರಿಕೆಯ ಬಿಸಿ: ಗ್ರಾಹಕರ ಕೈ ಸುಡುತ್ತಿದೆ, ಆಹಾರ ಭದ್ರತೆಗೆ ಎದುರಾಗಿದೆ ಸವಾಲು!

ಅಡುಗೆ ಮನೆಯ ದಿನನಿತ್ಯದ ಅಗತ್ಯವಾಗಿರುವ ಅಕ್ಕಿಯ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು,...

ಕಸ್ಟಡಿ ಹೆಸರಿನಲ್ಲಿ ಕಾಲಹರಣಕ್ಕಿಲ್ಲ ಅವಕಾಶ: ಸುಪ್ರೀಂ ಮಹತ್ವದ ತೀರ್ಪು

ಪೊಲೀಸ್ ಅಥವಾ ತನಿಖಾ ಸಂಸ್ಥೆಗಳು ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದ ಕ್ಷಣದಿಂದಲೇ...

ಈ ದಿನ ಸಂಪಾದಕೀಯ | ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ, ಕಾರ್ಯಸಾಧ್ಯವೇ?

ಇಲ್ಲಿ, ಸರೋಜಿನಿ ಮಹಿಷಿ ವರದಿಯೂ ಜಾರಿಯಾಗಲಿಲ್ಲ, ಕನ್ನಡ ಭಾಷೆ ಅನ್ನದ ಭಾಷೆಯೂ...

ಟ್ರಂಪ್‌ ಬೆಂಬಲಿಗನ ಎದುರು ಅಮೋಘ ಗೆಲುವು ಸಾಧಿಸಿದ ಅಮೀಶ್ ಶಾ ಯಾರು ಗೊತ್ತಾ?

ಅಮೆರಿಕದ 2026ರ ಮಧ್ಯಂತರ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿತ ಅಭ್ಯರ್ಥಿ,...