ಚಿಕ್ಕಮಗಳೂರು

ಚಿಕ್ಕಮಗಳೂರು | ಪ್ಯಾಲೆಸ್ತೀನ್ ಧ್ವಜ ಹಿಡಿದು ಓಡಾಡಿದ ಆರೋಪ: ಆರು ಮಂದಿ ಅಪ್ರಾಪ್ತರು ಪೊಲೀಸ್ ವಶಕ್ಕೆ

ಪ್ಯಾಲೆಸ್ತೀನ್ ಬಾವುಟ ಹಿಡಿದು ಬೈಕ್‌ನಲ್ಲಿ ನಗರದಲ್ಲಿ ಓಡಾಡಿರುವ ಆರು ಮಂದಿ ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಬಂಧಿತ ಅಪ್ರಾಪ್ತರನ್ನು ಈ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ. ರವಿವಾರ ಕೆಲ ಯುವಕರು ಫೆಲೆಸ್ತೀನ್ ದ್ವಜ ಹಿಡಿದು...

ಚಿಕ್ಕಮಗಳೂರು | ದುರುದ್ದೇಶ, ಪ್ರತಿಕಾರದ ವಕ್ಫ್ ಮಸೂದೆ ಹಿಂಪಡೆಯಿರಿ: ಎಸ್‌ಡಿಪಿಐ ಆಕ್ರೋಶ

ಕೇಂದ್ರ ಸರ್ಕಾರ ತಿದ್ದುಪಡಿ ತರಲು ವಕ್ಫ್ ಮಸೂದೆ -2024 ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಚಿಕ್ಕಮಗಳೂರು ಜಿಲ್ಲಾ ಸಮಿತಿಯಿಂದ ಆಝಾದ್ ಪಾರ್ಕ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಜಿಲ್ಲಾಧ್ಯಕ್ಷ...

ಚಿಕ್ಕಮಗಳೂರು | ಕೆಎಸ್‌ಆರ್‌ಟಿಸಿ ಡಿಸಿಗೆ ಸಿಬ್ಬಂದಿಯಿಂದಲೇ  ಚಾಕು ಇರಿಯಲು ಯತ್ನ: ಜೀವಾಪಾಯದಿಂದ ಪಾರು

ಸಾರಿಗೆ ಸಿಬ್ಬಂದಿಯೇ ಕೆಎಸ್‌ಆರ್‌ಟಿಸಿ ಡಿಸಿಗೆ ಚಾಕು ಇರಿಯಲು ಯತ್ನಿಸಿರುವ ಘಟನೆ ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ಗುರುವಾರ ನಡೆದಿದೆ. ಘಟನೆಯಿಂದ ಗಾಯಗೊಂಡಿರುವ ಕೆಎಸ್‌ಆರ್‌ಟಿಸಿ ಡಿಸಿಯಾಗಿರುವ ಜಗದೀಶ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಕುವಿನಿಂದ ದಾಳಿ ಮಾಡಿರುವ...

ಚಿಕ್ಕಮಗಳೂರು | ವೈದ್ಯರ ಮೇಲೆ ಮಹಿಳೆಯಿಂದ ಹಲ್ಲೆ; ಇಬ್ಬರ ಬಂಧನ

ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಯೊಬ್ಬರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವಿರುದ್ಧ ವೈದ್ಯರು ಪ್ರತಿಭಟನೆಗೆ ಇಳಿದಿದ್ದು, ರೋಗಿಗಳು ಪರದಾಡುವಂತಾಗಿದೆ. ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿದ್ದ ತನ್ನ ಸಹೋದರನನ್ನು...

ಚಿಕ್ಕಮಗಳೂರು | ಅವಾಚ್ಯ ನಿಂದನೆ ಆರೋಪ: ಸರ್ಕಾರಿ ವೈದ್ಯರಿಗೆ ಹಲ್ಲೆ; ಒಪಿಡಿ ಬಂದ್, ಪ್ರತಿಭಟನೆ

ರೋಗಿಯನ್ನು ನೋಡಲೆಂದು ಬಂದಿದ್ದ ವೇಳೆ ವೈದ್ಯರು ಅವಾಚ್ಯವಾಗಿ ನಿಂದಿಸಿದ್ದಾರೆಂದು ಆಕ್ರೋಶಗೊಂಡ ಮಹಿಳೆಯರು, ಕೊರಳಪಟ್ಟಿ ಹಿಡಿದು ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ನಗರದ ಅರಳುಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಮೂಳೆ ತಜ್ಞರಾಗಿರುವ...

ಚಿಕ್ಕಮಗಳೂರು | ಅಕ್ರಮವಾಗಿ 27 ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ: ಬಿ ಆರ್ ಭಾಸ್ಕರ್ ಪ್ರಸಾದ್

ಒತ್ತುವರಿಯಾಗಿರುವ 27,000 ಎಕರೆ ಅರಣ್ಯ ಭೂಮಿ ಹಾಗೂ ಸರ್ಕಾರಿ ಜಮೀನುಗಳನ್ನು ತೆರವುಗೊಳಿಸಿ, ಅಕ್ರಮ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಆರ್ ಭಾಸ್ಕರ್ ಪ್ರಸಾದ್...

ಚಿಕ್ಕಮಗಳೂರು | ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿ, ಒತ್ತುವರಿ ತೆರವು ಕೈಬಿಡಿ: ಭೂ ಸಾಗುವಳಿ ಹೋರಾಟ ಸಮಿತಿ ಆಗ್ರಹ

ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಅರಣ್ಯ ಭೂಮಿ ಒತ್ತುವರಿ ತೆರವು ಕೈಬಿಡುವಂತೆ ಭೂ ಸಾಗುವಳಿ ಹೋರಾಟ ಸಮಿತಿಯಿಂದ ಮಂಗಳವಾರದಂದು ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಕಡವಂತಿ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದಪ್ರತಿಭಟನಾಕಾರರು ಗ್ರಾ.ಪಂ. ಅಧ್ಯಕ್ಷರು,...

ಚಿಕ್ಕಮಗಳೂರು | ಮಲೆನಾಡಿಗರ ಬದುಕಿನ ಪ್ರಶ್ನೆಯಾದ ಒತ್ತುವರಿ ತೆರವು : ಕಾನೂನು ಹೋರಾಟಕ್ಕೆ ಮುಖಂಡರ ಚಿಂತನೆ

ಮಲೆನಾಡಿನಲ್ಲಿ ಬದುಕು ಕಟ್ಟಿಕೊಂಡು ವಾಸವಾಗಿರುವ ಜನರನ್ನು ಹಾಗೂ ರೈತಾಪಿ ಕುಟುಂಬದವರನ್ನು ಒತ್ತುವರಿ ಆರೋಪಿಸಿ ಒಕ್ಕಲೆಬ್ಬಿಸುವುದು ಖಂಡನೀಯ ಎಂದು ಮಲೆನಾಡು ಕರಾವಳಿ ಒಕ್ಕೂಟ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ...

ಚಿಕ್ಕಮಗಳೂರು | ಗೂಗಲ್‌ನಲ್ಲಿ ತಪ್ಪು ಮಾಹಿತಿ: ‘ರಾಣಿಝರಿ’ ಬಿರುಕು ಬಿಟ್ಟಿತ್ತೆಂದು ಅಧಿಕಾರಿಗಳ ದೌಡು!

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ರಾಣಿಝರಿ ಎಡ್ಜ್ ಪಾಯಿಂಟ್ ಬಿರುಕು ಬಿಟ್ಟಿರುವ ರೀತಿ ಗೂಗಲ್ ಮ್ಯಾಪ್ ನಲ್ಲಿ ಗೋಚರಿಸಿದ್ದು, ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದರು. ಚಿಕ್ಕಮಗಳೂರು-ದಕ್ಷಿಣ ಕನ್ನಡ ಗಡಿಭಾಗದಲ್ಲಿರುವ...

ಬಡವರನ್ನು ಬಿಟ್ಟು, ನೂರಾರು ಎಕರೆಯ ಭೂ ಮಾಲೀಕರನ್ನು ಒಕ್ಕಲೆಬ್ಬಿಸಿ: ಸರ್ಕಾರಕ್ಕೆ ಹೋರಾಟಗಾರರ ಆಗ್ರಹ

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಡವರು ಜೀವನಕ್ಕಾಗಿ ಬದುಕಿಗಾಗಿ ಒಂದು ಹಾಗೂ ಎರಡು ಎಕರೆ ಭೂಮಿ ಸಾಗುವಳಿ ಮಾಡಿ ಬದುಕನ್ನು ಕಟ್ಟಿಕೊಂಡಿರುವ ಕುಟುಂಬಗಳನ್ನು ಅದೆಷ್ಟೋ ಇದೆ. ಸುಮಾರು 30-40 ವರ್ಷಗಳಿಂದ ಆ ಜಾಗದಲ್ಲಿ...

ಚಿಕ್ಕಮಗಳೂರು | ಭೂಮಿ-ವಸತಿ ಇಲ್ಲದವರಿಗೆ ಸರ್ಕಾರ ನ್ಯಾಯ ದೊರಕಿಸಲು ಚಿಂತಿಸಲಿ: ಕೆ ಎಲ್ ಅಶೋಕ್

ಅರಣ್ಯ ರಾಷ್ಟ್ರೀಯ ಸಂಪತ್ತಾಗಿದ್ದು ಜನರನ್ನು ಹೊರಗಿಟ್ಟು ಪರಿಸರ ರಕ್ಷಣೆ ಮಾಡುವುದು ಕಷ್ಟಸಾಧ್ಯ, ಬಡವರನ್ನು ಬೀದಿಗೆ ತಳ್ಳಿ ಶ್ರೀಮಂತರನ್ನು ರಕ್ಷಿಸುವ ಸರ್ಕಾರ ಮತ್ತು ರಾಜಕೀಯ ಪಕ್ಷಗಳ ಹೊಂದಾಣಿಕೆ ಖಂಡನೀಯ. ಭೂಮಿ-ವಸತಿ ಇಲ್ಲದವರಿಗೆ ನ್ಯಾಯ ದೊರಕಿಸಿ...

ಚಿಕ್ಕಮಗಳೂರು | ಮಾಧವ ಗಾಡ್ಗೀಳ್ ವೈಜ್ಞಾನಿಕ ವರದಿ ಜಾರಿಗೆ ಪ್ರಗತಿಪರ ಸಂಘಟನೆ ಆಗ್ರಹ

ಜೀವನೋಪಾಯಕ್ಕಾಗಿ 2ರಿಂದ 3 ಎಕರೆ ಸಾಗುವಳಿ ಮಾಡಿಕೊಂಡಿರುವ ಬಡ ಸಾಗುವಳಿದಾರರನ್ನು ಹೊರತುಪಡಿಸಿ ಭೂಮಾಲೀಕರ ಅರಣ್ಯ ಒತ್ತುವರಿಯನ್ನು ಕಡ್ಡಾಯವಾಗಿ ತೆರವುಗೊಳಿಸಿ ಮಾಧವ ಗಾಡ್ಗೀಳ್ ವೈಜ್ಞಾನಿಕ ವರದಿ ಜಾರಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ಪ್ರಗತಿಪರ ಸಂಘಟನೆಯಿಂದ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X