ದೇಶ

ಜ್ಞಾನವಾಪಿ | ಬೇರೆ ನ್ಯಾಯಾಲಯಕ್ಕೆ 1991ರ ಮೊಕದ್ದಮೆ ವರ್ಗಾವಣೆ ಕೋರಿದ್ದ ಅರ್ಜಿ ವಜಾ: ವಾರಣಾಸಿ ಕೋರ್ಟ್‌

ಜ್ಞಾನವಾಪಿ ಮಸೀದಿಯನ್ನು ವಿವಾದಗೊಳಿಸಿ, ಮಸೀದಿ ವಿರುದ್ಧ 1991ರಲ್ಲಿ ದಾಖಲಿಸಲಾಗಿದ್ದ ಮೂಲ ಮೊಕದ್ದಮೆಯನ್ನು ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಿಂದ ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ. ಜ್ಞಾನವಾಪಿ ಮಸೀದಿ ಸ್ಥಳದಲ್ಲಿ...

ತರಬೇತಿ ಇಲ್ಲ, ಕೆಲಸಕ್ಕೆ ವರದಿಯೂ ಆಗಿಲ್ಲ; ಆದರೂ 35 ಲಕ್ಷ ರೂ. ವೇತನ ಪಡೆದ ಪೊಲೀಸ್

ಕಡ್ಡಾಯ ತರಬೇತಿಯಲ್ಲಿ ಭಾಗಿಯಾಗಿ ತರಬೇತಿ ಪಡೆಯದೆ, ಕರ್ತವ್ಯಕ್ಕೆ ವರದಿಯನ್ನೂ ಮಾಡಿಕೊಳ್ಳದೆ ಪೊಲೀಸ್ ಪೇದೆಯೊಬ್ಬರು 12 ವರ್ಷಗಳಲ್ಲಿ 35 ಲಕ್ಷ ರೂ. ವೇತನ ಪಡೆದಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ತರಬೇತಿ, ಕರ್ತವ್ಯಕ್ಕೆ ವರದಿಯನ್ನೇ...

ಬಿಹಾರದ ಉದ್ಯಮಿ ಗೋಪಾಲ್‌ ಖೇಮ್ಕಾ ಕೊಲೆಯ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ

ಬಿಹಾರದ ಪಾಟ್ನಾದ ಹೆಸರಾಂತ ಉದ್ಯಮಿ ಗೋಪಾಲ್‌ ಖೇಮ್ಕಾ ಹತ್ಯೆಯ ಪ್ರಮುಖ ಆರೋಪಿಯನ್ನು ಪೊಲೀಸರು ಇಂದು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ. ಪಾಟ್ನಾ ನಗರದ ಮಾಲ್‌ ಸಲಾಮಿ ನಗರದಲ್ಲಿ ಆರೋಪಿಯನ್ನು ಬಂಧಿಸುವ ಸಂದರ್ಭದಲ್ಲಿ ಈ ಘಟನೆ...

ತಮಿಳುನಾಡು | ಶಾಲಾ ವಾಹನಕ್ಕೆ ರೈಲು ಡಿಕ್ಕಿ; ಮೂವರು ವಿದ್ಯಾರ್ಥಿಗಳ ಸಾವು, ಹಲವರಿಗೆ ಗಾಯ

ಶಾಲಾ ವಾಹನಕ್ಕೆ ರೈಲು ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ಸೆಮ್ಮಂಗುಪ್ಪಂನಲ್ಲಿ ನಡೆದಿದೆ. ಅಪಘಾತದಲ್ಲಿ ಗಾಯಗೊಂಡ 10 ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಲೂರು ನಿಂದ ಸುಮಾರು...

ಮಾಟಮಂತ್ರ ಮಾಡುತ್ತಿದ್ದ ಶಂಕೆ: ಒಂದೇ ಕುಟುಂಬದ ಐವರ ಸಜೀವ ದಹನ

ಮಾಟಮಂತ್ರ ಮಾಡಿರುವ ಶಂಕೆಯಿಂದ ಒಂದೇ ಕುಟುಂಬದ ಐವರ ಸಜೀವ ದಹನ ಮಾಡಿರುವ ಘಟನೆ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಡಿಐಜಿ(ಪೂರ್ಣಿಯಾ)...

ಕಾಂಗ್ರೆಸ್ ‘ದೇಶದ ಶತ್ರು’ ಎಂದ ಅರ್ನಬ್ ಗೋಸ್ವಾಮಿ: ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ

ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಕಾಂಗ್ರೆಸ್‌ 'ದೇಶದ ಶತ್ರು' ಎಂದು ಹೇಳಿದ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ನ್ಯಾಯಮೂರ್ತಿ...

ಪೌರತ್ವ ಪ್ರಮಾಣಪತ್ರ ನೀಡುವುದು ಚುನಾವಣಾ ಆಯೋಗದ ಕೆಲಸವಲ್ಲ; ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಹೀಗಂದಿದ್ದೇಕೆ?

ಚುನಾವಣಾ ಆಯೋಗದ ಕೆಲಸ ಚುನಾವಣೆ ನಡೆಸುವುದು. ಆ ಕರ್ತವ್ಯವನ್ನೇ ಸರಿದೂಗಿಸಲಾಗದ ಆಯೋಗವು ಓರ್ವ ವ್ಯಕ್ತಿ ಭಾರತದ ಪ್ರಜೆಯೇ ಅಲ್ಲವೇ ಎಂದು ನಿರ್ಧರಿಸುವ ಕಾರ್ಯಕ್ಕೆ ಇಳಿದಂತಿದೆ. ಬಿಹಾರದಲ್ಲಿ 2025ರ ನವೆಂಬರ್ ಒಳಗಾಗಿ ವಿಧಾನಸಭೆ ಚುನಾವಣೆ ನಡೆಯಲಿದ್ದು,...

ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ನನ್ನ ಬಳಿ ಹಣವಿಲ್ಲ: ಕಂಗನಾ ರನೌತ್ ವಿವಾದ

ಹಿಮಾಚಲ ಪ್ರದೇಶದಾದ್ಯಂತ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿ ಇಲ್ಲಿಯವರೆಗೂ 78 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಅಪಾರ ಪ್ರಮಾಣದ ಆಸ್ತಿಪಾಸ್ತಿಗಳು ಹಾನಿಯಾಗಿವೆ. ಆದರೆ ಇದೇ ಸಂದರ್ಭದಲ್ಲಿ ಹಿಮಾಚಲ ಪ್ರದೇಶದ ಬಿಜೆಪಿ ಸಂಸದೆ...

ಬಡವರ ಸಂಖ್ಯೆ ಹೆಚ್ಚಳ | ಸತ್ಯ ಒಪ್ಪಿಕೊಂಡ ಗಡ್ಕರಿ, ಬಡತನಕ್ಕೆ ದೂಡಿದವರ ಬಗ್ಗೆಯೂ ಮಾತನಾಡಲಿ: ಬಿ ಕೆ ಹರಿಪ್ರಸಾದ್

ದೇಶದಲ್ಲಿ ಬಡವರ ಸಂಖ್ಯೆ ಮಿತಿ ಮೀರಿ ಹೆಚ್ಚುತ್ತಿರುವುದರ ಬಗ್ಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಸತ್ಯವನ್ನು ಒಪ್ಪಿಕೊಂಡಿದ್ದಕ್ಕೆ ಸ್ವಾಗತ, ಆದ್ರೆ ವಾಸ್ತವವನ್ನು ಮರೆಮಾಚುತ್ತಲೇ ಬಡತನಕ್ಕೆ ದೂಡಿದವರ ಬಗ್ಗೆಯೂ ಮಾತಾಡಿದ್ದರೆ ಸನ್ಮಾನಕ್ಕೂ ಅರ್ಹರಾಗುತ್ತಿದ್ದರು! ಎಂದು...

ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ: ಜುಲೈ 10 ರಂದು ಸುಪ್ರೀಂನಿಂದ ಚುನಾವಣಾ ಆಯೋಗ ನಿರ್ಧಾರ ಪ್ರಶ್ನಿಸುವ ಅರ್ಜಿಗಳ ವಿಚಾರಣೆ

ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಕೈಗೊಳ್ಳುವ ಭಾರತೀಯ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಬ್ಯಾಚನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್...

ನಾಗಾಲ್ಯಾಂಡ್‌ | ಭಾರೀ ಮಳೆಗೆ ಮೂವರು ಬಲಿ: ವಿಮಾನ ಹಾರಾಟ ಸ್ಥಗಿತ

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಾಗಾಲ್ಯಾಂಡ್‌ನಾದ್ಯಂತ ಪ್ರವಾಹ ಉಂಟಾಗಿದ್ದು ಮೂವರು ಬಲಿಯಾಗಿದ್ದಾರೆ. ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ದಿಮಾಪುರದಲ್ಲಿ ಮನೆಯೊಂದರಲ್ಲಿ ಮಳೆ...

ಟ್ರಂಪ್ ಭೇಟಿ ಮಾಡಿದ ಯುವ ಬಿಜೆಪಿ ಸಂಸದರಿಗೆ ಭಾರೀ ಮುಖಭಂಗ; ರಾಷ್ಟ್ರೀಯ ನಾಯಕರಿಂದ ಛೀಮಾರಿ

ಆಪರೇಷನ್‌ ಸಿಂಧೂರ್‌ ಬಗ್ಗೆ ಜಾಗತಿಕ ಗಮನ ಸೆಳೆಯಲು ಇತ್ತೀಚೆಗೆ ಭಾರತೀಯ ಸಂಸದರ ನೇತೃತ್ವದಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ನಿಯೋಗದಲ್ಲಿದ್ದ, ಯುವ ಬಿಜೆಪಿ ಸಂಸದರೊಬ್ಬರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ನಂತರ...

ಈ ಹೊತ್ತಿನ ಪ್ರಮುಖ ಸುದ್ದಿ