ದೇಶ

ಭಾಷಾ ಪ್ರಚಾರ ಸಮಿತಿಯ ಅಧ್ಯಕ್ಷ RSS ಅನುಯಾಯಿ: ಕೇಂದ್ರ ವಿವಿ ಉಪಕುಲಪತಿಗಿಂತ ಹೆಚ್ಚಿನ ವೇತನ

2021ರ ನವೆಂಬರ್ 15ರ ಸಚಿವಾಲಯದ ಆದೇಶದಲ್ಲಿ ಗೌರವಾರ್ಥ ಸದಸ್ಯರು ಎಂದಿದ್ದು, 2023ರ ಡಿಸೆಂಬರ್‌ನಿಂದ ಸಚಿವಾಲಯವು ಶಾಸ್ತ್ರಿ ಅವರಿಗೆ ತಿಂಗಳಿಗೆ 2.5 ಲಕ್ಷ ರೂಪಾಯಿ ಪಾವತಿಸಲು ಪ್ರಾರಂಭಿಸಿದೆ. ಕೇಂದ್ರವು 2021ರಲ್ಲಿ ಆರ್‌ಎಸ್‌ಎಸ್ ಅನುಯಾಯಿ ಚಾಮು ಕೃಷ್ಣಶಾಸ್ತ್ರಿ...

ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ಬೆಂಬಲ: ರಷ್ಯಾ ಅಧ್ಯಕ್ಷ

ಪಹಲ್ಗಾಮ್‌ ದಾಳಿಯ ಉಗ್ರರನ್ನು ಹಾಗೂ ಅವರ ಬೆಂಬಲಿಗರಿಗೆ ಖಂಡಿತಾ ಶಿಕ್ಷೆಯಾಗಬೇಕಿದ್ದು, ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ತಾವು ಬೆಂಬಲಿಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಫೋನ್‌ ಮೂಲಕ...

ವೃದ್ಧರ ಸಂಖ್ಯೆ ದೇಶದ ಅತಿದೊಡ್ಡ ಬಿಕ್ಕಟ್ಟಾಗಬಹುದು: ಎಚ್ಚರಿಸಿದ ಮೋಹನ್ ದಾಸ್ ಪೈ

ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವೃದ್ಧರ ಸಂಖ್ಯೆ ಶೀಘ್ರದಲ್ಲೇ ದೇಶದ ಅತಿದೊಡ್ಡ ಬಿಕ್ಕಟ್ಟಾಗಬಹುದು ಎಂದು ಆರಿನ್ ಕ್ಯಾಪಿಟಲ್‌ನ ಅಧ್ಯಕ್ಷ ಮೋಹನ್ ದಾಸ್ ಪೈ ಎಚ್ಚರಿಸಿದ್ದಾರೆ. ಸ್ಟ್ಯಾನ್‌ಫೋರ್ಡ್ ಇಂಡಿಯಾ ಸಮ್ಮೇಳನ 2025ರಲ್ಲಿ ಇನ್ಫೋಸಿಸ್‌ನ ಮಾಜಿ...

ವಿವಾದಿದ ವಕ್ಫ್‌ ಮಸೂದೆ: ಮೇ 15 ರಂದು ನೂತನ ಮುಖ್ಯ ನ್ಯಾಯಮೂರ್ತಿಗಳ ಪೀಠದಿಂದ ವಿಚಾರಣೆ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ವಕ್ಫ್‌ ಮಸೂದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ನೂತನ ನ್ಯಾಯಮೂರ್ತಿ ಬಿ ಆರ್‌ ಗವಾಯಿ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ. ನೂತನ ಮುಖ್ಯ ನ್ಯಾಯಮೂರ್ತಿಗಳು ಮೇ 14ರಂದು ಪ್ರಮಾಣವಚನ...

ರಾಜಸ್ಥಾನ | ಗಣಿಗಾರಿಕೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೈಬಿಡಲು 20 ಲಕ್ಷ ರೂ. ಲಂಚ: ಶಾಸಕನ ಬಂಧನ

ರಾಜ್ಯ ವಿಧಾನಸಭೆಯಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ಮೂರು ಪ್ರಶ್ನೆಗಳನ್ನು ಕೈಬಿಡಲು 20 ಲಕ್ಷ ರೂ. ಲಂಚ ಪಡೆದ ಆರೋಪದ ಮೇಲೆ ಭಾರತ್ ಆದಿವಾಸಿ ಪಕ್ಷದ ಶಾಸಕ ಜೈಕೃಷ್ಣ ಪಟೇಲ್ ಅವರನ್ನು ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ...

ಅರ್ಧದಷ್ಟು ನಟರು ಮಾರಾಟವಾಗಿದ್ದಾರೆ, ಮಾತನಾಡಲು ಭಯಪಡುತ್ತಾರೆ: ಪ್ರಕಾಶ್ ರಾಜ್

ರಾಜಕೀಯ ವಿಷಯಗಳ ಬಗ್ಗೆ ಬಾಲಿವುಡ್‌ನ ಮೌನವನ್ನು ನಟ ಪ್ರಕಾಶ್ ರಾಜ್ ಟೀಕಿಸಿದ್ದಾರೆ. "ಅರ್ಧದಷ್ಟು ನಟರು ಮಾರಾಟವಾಗಿದ್ದಾರೆ. ಮಾತನಾಡಲು ತುಂಬಾ ಹೆದರುತ್ತಾರೆ ಅಥವಾ ಸುಮ್ಮನಿದ್ದು ಬಿಡುತ್ತಾರೆ" ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ. ಇತ್ತೀಚೆಗೆ 'ದಿ ಲಲ್ಲನ್...

ರೇಬೀಸ್‌ ಲಸಿಕೆ ಪಡೆದರೂ ಬಾಲಕಿ ಸಾವು; ತಿಂಗಳಲ್ಲಿ ಕೇರಳದಲ್ಲಿ ಇದು ಮೂರನೇ ಪ್ರಕರಣ

ರೇಬೀಸ್ ಲಸಿಕೆ ಪಡೆದರೂ ಚಿಕಿತ್ಸೆ ಪಡೆಯುತ್ತಿದ್ದ ಏಳು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಕೇರಳದಲ್ಲಿ ನಡೆದಿದೆ. ಕೊಲ್ಲಂನ ಕುನ್ನಿಕೋಡ್‌ನ ನಿಯಾ ಫೈಸಲ್‌ ಮೃತ ಬಾಲಕಿ. ರೇಬೀಸ್‌ ಪತ್ತೆಯಾದ ಬಳಿಕ ಆಕೆಯನ್ನು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು....

ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋದ ಕೇರಳ ಮೂಲದ ಹಿಂದೂ ಸಂಸ್ಥೆ

ಕೇರಳ ಮೂಲದ ಹಿಂದೂ ಸಂಸ್ಥೆಯಾದ ಶ್ರೀ ನಾರಾಯಣ ಮಾನವ ಧರ್ಮಂ ಟ್ರಸ್ಟ್, ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಸೋಮವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ದೇಶದಲ್ಲಿರುವ ಮುಸ್ಲಿಂ ಸಮುದಾಯದ ಅಸ್ತಿತ್ವಕ್ಕೆ ಕಾನೂನು ಬೆದರಿಕೆಯಾಗಿದೆ ಎಂದು...

ಮುಸ್ಲಿಂ ದ್ವೇಷ ಬೇಡ ಎಂದಿದ್ದಕ್ಕೆ ಟ್ರೋಲ್‌ಗೆ ಗುರಿಯಾದ ಯೋಧನ ಪತ್ನಿ: ಮಹಿಳಾ ಆಯೋಗ ಆಕ್ರೋಶ

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಏ.22 ರಂದು ಮೃತರಾದ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪತ್ನಿ ಹಿಮಾಂಶಿ ನರ್ವಾಲ್ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗೆ ಗುರಿಯಾಗಿರುವ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ...

ಜಾತಿ ಜನಗಣತಿ ನಡೆಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಪ್ರಿಯಾಂಕಾ ಗಾಂಧಿ

ವಯನಾಡಿನ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮುಂದಿನ ಜನಗಣತಿಯಲ್ಲಿ ಜಾತಿ ಜನಗಣತಿ ನಡೆಸುವ ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ತಮ್ಮ ಕ್ಷೇತ್ರ ವಯನಾಡಿಗೆ ಎರಡು ದಿನಗಳ ಭೇಟಿ ನೀಡಿರುವ ಕಾಂಗ್ರೆಸ್...

ಎನ್‌ಡಿಎಯಲ್ಲೇ ಇರುತ್ತೇನೆ, ಯಾವುದೇ ಬದಲಾವಣೆಗಳ ಬಗ್ಗೆ ಯೋಚಿಸುವುದಿಲ್ಲ: ನಿತೀಶ್ ಕುಮಾರ್

ಸತತ ಐದನೇ ಬಾರಿಗೆ ಅಧಿಕಾರವನ್ನು ಮತ್ತೆ ಪಡೆಯುವ ತಯಾರಿಯನ್ನು ನಡೆಸುತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು "ಎನ್‌ಡಿಎಯಲ್ಲೇ ಇರುತ್ತೇನೆ, ಯಾವುದೇ ಬದಲಾವಣೆಗಳ ಬಗ್ಗೆ ಯೋಚಿಸುವುದಿಲ್ಲ" ಎಂದು ಹೇಳಿದ್ದಾರೆ. ದೇಶಾದ್ಯಂತ ಸಾವಿರಾರು ಯುವ ಕ್ರೀಡಾಪಟುಗಳು...

ಮಧ್ಯಪ್ರದೇಶ | ತನ್ನೊಂದಿಗೆ ಮಾತು ನಿಲ್ಲಿಸಿದ್ದಕ್ಕೆ ಸಹಪಾಠಿ ಬಾಲಕಿಯನ್ನು ಕೊಂದ ಬಾಲಕ

ತನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ ಕಾರಣಕ್ಕೆ 17 ವರ್ಷದ ಸಹಪಾಠಿ ಬಾಲಕಿಯನ್ನು ಬಾಲಕನೋರ್ವ ಕೊಂದ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ. ಧಾರ್ ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಉಮರ್ಬನ್ ಪೊಲೀಸ್ ಠಾಣೆ...

ಈ ಹೊತ್ತಿನ ಪ್ರಮುಖ ಸುದ್ದಿ