ದೇಶ

ಜಮ್ಮು ಕಾಶ್ಮೀರ | ಸೇನೆ ಬಂಧಿಸಿದ ಯುವಕನ ಮೃತದೇಹ ಕುಲ್ಗಾಮ್ ಹೊಳೆಯಲ್ಲಿ ಪತ್ತೆ; ತನಿಖೆಗೆ ಆಗ್ರಹ

ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಹೊಳೆಯೊಂದರಿಂದ 23 ವರ್ಷದ ಕಾರ್ಮಿಕನ ಶವ ಪತ್ತೆಯಾಗಿದೆ. ಈ ಯುವಕನನ್ನು ಕೆಲವು ದಿನಗಳ ಹಿಂದೆ ಸೇನೆ ಬಂಧಿಸಿತ್ತು. ಇದೀಗ ಯುವಕನ ಮೃತದೇಹ ಪತ್ತೆಯಾಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ....

ಜಾತಿಗಣತಿ ನಡೆಸುವುದು ಮೋದಿ ಸರ್ಕಾರದ ಉದ್ದೇಶವೇ ಅಲ್ಲ!

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮುಂದಿನ ಜನಗಣತಿ ಜೊತೆಗೆ ಜಾತಿಗಣತಿಯನ್ನೂ ನಡೆಸುವುದಾಗಿ ಘೋಷಿಸಿದೆ. ಇದು ತಮ್ಮ ಗೆಲುವು ಎಂದು ಕಾಂಗ್ರೆಸ್‌ ಆದಿಯಾಗಿ ಕೆಲವು ವಿಪಕ್ಷಗಳು ಸಂಭ್ರಮಿಸುತ್ತಿವೆ. ಆದರೆ, ಕೇಂದ್ರ ಸರ್ಕಾರ ನಿಜಕ್ಕೂ...

ಕಾಂಗ್ರೆಸ್‌ನ ತಪ್ಪುಗಳು ನಾನು ಪಕ್ಷದಲ್ಲಿ ಇಲ್ಲದಿದ್ದಾಗ ಸಂಭವಿಸಿವೆ: 1984ರ ಸಿಖ್‌ ಗಲಭೆ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರ

ಕಾಂಗ್ರೆಸ್ ಮಾಡಿದ ಬಹಳಷ್ಟು ತಪ್ಪುಗಳು ನಾನು ಪಕ್ಷದಲ್ಲಿ ಇಲ್ಲದಿದ್ದಾಗ ಸಂಭವಿಸಿವೆ. ಪಕ್ಷವು ತನ್ನ ಇತಿಹಾಸದಲ್ಲಿ ಮಾಡಿದ ಎಲ್ಲ ತಪ್ಪುಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಾನು ಹೆಚ್ಚು ಸಂತೋಷಪಡುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ...

ಜಮ್ಮು-ಕಾಶ್ಮೀರ | ಕಂದಕಕ್ಕೆ ಉರುಳಿದ ಸೇನಾ ವಾಹನ; ಮೂವರು ಸೈನಿಕರು ಸಾವು

ಸೇನಾ ವಾಹನವೊಂದು ಕಂದಕಕ್ಕೆ ಉರುಳಿದ್ದು, ಮೂವರು ಸೇನಾ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ರಾಂಬನ್‌ನಲ್ಲಿ ನಡೆದಿದೆ. ಜಮ್ಮುವಿನಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಸೇನಾ ಬೆಂಗಾವಲು ವಾಹನವು ರಾಂಬನ್‌ನಲ್ಲಿನ ರಾಷ್ಟ್ರೀಯ ಹೆದ್ದಾರಿ 44ರಲ್ಲಿ...

ಆಂಧ್ರಪ್ರದೇಶ | ಸರಣಿ ಅಪಘಾತ; ಐವರು ಸಾವು, ಎಂಟು ಮಂದಿಗೆ ಗಾಯ

ಹಲವು ವಾಹನಗಳಿಗೆ ನಡೆದ ಸರಣಿ ಅಪಘಾತಗಳಲ್ಲಿ ಐವರು ಸಾವನ್ನಪ್ಪಿ, ಒಟ್ಟು ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಓಂಗೋಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಮೊದಲ ಅಪಘಾತವು ಒಂಗೋಲ್...

ಕೇಂದ್ರವು ಕಾಶ್ಮೀರದಲ್ಲಿ ಏಕತೆ ನಿರ್ಮಿಸಬೇಕು, ಹಾನಿ ತಪ್ಪಿಸಬೇಕು: ಪಹಲ್ಗಾಮ್ ದಾಳಿಯ ಬಗ್ಗೆ ಸಿಪಿಐಎಂ ಹೇಳಿಕೆ

ಕೇಂದ್ರ ಸರ್ಕಾರವು ಕಾಶ್ಮೀರದಲ್ಲಿ ಏಕತೆಯನ್ನು ನಿರ್ಮಿಸಬೇಕು, ಯಾವುದೇ ಹಾನಿಯಾಗದಂತೆ ತಪ್ಪಿಸಬೇಕು ಎಂದು ಪಹಲ್ಗಾಮ್ ದಾಳಿಯ ಬಗ್ಗೆ ಸಿಪಿಐಎಂ ಭಾನುವಾರ ಹೇಳಿದೆ. ಭಯೋತ್ಪಾದಕರು ಇದ್ದರೆಂಬ ಕಾರಣಕ್ಕೆ ಮನೆಯನ್ನೇ ಕೆಡವುದರಿಂದ ಮುಗ್ಧ ಕುಟುಂಬಗಳ ಮೇಲೆ ಪರಿಣಾಮ...

ಜಮ್ಮು ಕಾಶ್ಮೀರ | 700 ಅಡಿ ಆಳದ ಪ್ರಪಾತಕ್ಕೆ ಬಿದ್ದ ಸೇನಾ ವಾಹನ: ಮೂವರು ಯೋಧರು ಸಾವು

ಜಮ್ಮು ಕಾಶ್ಮೀರದ ರಾಂಬನ್‌ನಲ್ಲಿ ಸೇನಾ ವಾಹನ 700 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ. ಮೃತ ಸೈನಿಕರನ್ನು ಅಮಿತ್ ಕುಮಾರ್, ಸುಜೀತ್ ಕುಮಾರ್ ಮತ್ತು ಮನ್ ಬಹದ್ದೂರ್ ಎಂದು...

ಜೀತ ಕಾರ್ಮಿಕರ ರಕ್ಷಣೆ, ಪುನರ್ವಸತಿ: ಮೋದಿ ಸರ್ಕಾರದ ಗುರಿ 13 ಲಕ್ಷ – ಸಾಧಿಸಿದ್ದು 468 ಮಾತ್ರ

ಜೀತ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆಗೊಳಿಸುವಲ್ಲಿ, ಜೀತ ಕಾರ್ಮಿಕರನ್ನು ರಕ್ಷಿಸಿ, ಪುರರ್ವಸತಿ ಒದಗಿಸುವಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ತನ್ನ ವೈಫಲ್ಯಗಳಿಗೆ ರಾಜ್ಯ ಸರ್ಕಾರಗಳನ್ನು ಹೊಣೆ ಮಾಡಲು ಯತ್ನಿಸುತ್ತಿದೆ. ಭಾರತವು ಡಿಜಿಟಲ್ ಯುಗಕ್ಕೆ...

ಮದ್ಯ ಸೇವನೆ ನಿಲ್ಲಿಸಲು ಹೇಳಿದ್ದಕ್ಕೆ ಸಿಟ್ಟಿಗೆದ್ದು ಮಗ, ಸೊಸೆಯ ಮೇಲೆ ಗುಂಡು ಹಾರಿಸಿದ ವ್ಯಸನಿ

ಮದ್ಯ ಸೇವನೆ ಮಾಡುವುದನ್ನು ನಿಲ್ಲಿಸಲು ಹೇಳಿದ್ದಕ್ಕೆ ಮದ್ಯ ವ್ಯಸನಿಯೋರ್ವ ಸಿಟ್ಟಿಗೆದ್ದು ಮಗ, ಸೊಸೆಯ ಮೇಲೆ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ. ನಿವೃತ್ತ ಗೃಹರಕ್ಷಕ ದಳದ ಸಿಬ್ಬಂದಿ ಹರಿ ಯಾದವ್ ಮನೆಯಲ್ಲಿ...

ರಸ್ತೆಯಲ್ಲೇ ವರದಕ್ಷಿಣೆ ಪ್ರಕರಣ ವಜಾ ಮಾಡಿದ ನ್ಯಾಯಾಧೀಶರು

ವೃದ್ಧ ದಂಪತಿಗಳ ವಿರುದ್ಧ ಅವರ ಸೊಸೆ ದಾಖಲಿಸಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ನ್ಯಾಯಾಧೀಶರು ರಸ್ತೆಯಲ್ಲೇ ಆಲಿಸಿ, ರದ್ದುಗೊಳಿಸಿದ್ದಾರೆ. ವೃದ್ಧ ದಂಪತಿಗಳು ಅನಾರೋಗ್ಯ ಕಾರಣದಿಂದ ನ್ಯಾಯಾಲಯದ ಮೆಟ್ಟಿಲುಗಳನ್ನು ಹತ್ತಿ ಬರಲಾಗದ ಸ್ಥಿತಿಯನ್ನು ಕಂಡು ನ್ಯಾಯಾಧೀಶರೇ...

ಭಾರತೀಯರನ್ನು ಮದುವೆಯಾದ ಪಾಕಿಸ್ತಾನ ಪ್ರಜೆಗಳಿಗೆ ದೇಶದಲ್ಲಿ ವಾಸಿಸುವ ಹಕ್ಕಿಲ್ಲ: ಜಮ್ಮು ಕಾಶ್ಮೀರ ಬಿಜೆಪಿ

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಿ ಪ್ರಜೆಗಳನ್ನು ಗಡಿಪಾರು ಮಾಡುವ ಕೇಂದ್ರದ ನಿರ್ಧಾರವನ್ನು ಬಿಜೆಪಿಯ ಜಮ್ಮು ಮತ್ತು ಕಾಶ್ಮೀರ ಘಟಕವು ಸ್ವಾಗತಿಸಿದೆ. "ಅವರು ಭಾರತೀಯ ನಾಗರಿಕರನ್ನು ಮದುವೆಯಾಗಿದ್ದರೂ ಸಹ ಅವರಿಗೆ ದೇಶದಲ್ಲಿ ಉಳಿಯಲು...

ಪೊಲೀಸ್ ಭದ್ರತೆಯಲ್ಲಿ ನಡೆದ ದಲಿತ ವರನ ವಿವಾಹ ಮೆರವಣಿಗೆ

ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಮಧ್ಯಪ್ರವೇಶದ ಬಳಿಕ ರಾಜಸ್ಥಾನದ ರಾಜ್ಸಮಂದ್ ಜಿಲ್ಲೆಯ ತಾರ್ವಾಡಾ ಗ್ರಾಮದ ದಲಿತ ಕುಟುಂಬವೊಂದು ಪೊಲೀಸ್‌ ಭದ್ರತೆಯಲ್ಲಿ ವಿವಾಹ ಮೆರವಣಿಗೆ ನಡೆಸಿತು. ವರನ ಸಹೋದರ ಸುರೇಶ್ ಬಮಾನಿಯಾ ಅವರು ತಮ್ಮ ಸಹೋದರನ...

ಈ ಹೊತ್ತಿನ ಪ್ರಮುಖ ಸುದ್ದಿ