ದೇಶ

ಕುತೂಹಲದಿಂದ ಸೂಟ್‌ಕೇಸ್‌ ತೆರೆದ ಮಕ್ಕಳು; ಮಹಿಳೆಯ ರುಂಡ ಪತ್ತೆ

ಆಟವಾಡುತ್ತಿದ್ದ ಮಕ್ಕಳು ಸೂಟ್‌ಕೇಸ್ ಒಂದನ್ನು ನೋಡಿ ಕುತೂಹಲದಿಂದ ಸೂಟ್‌ಕೇಸ್ ತೆರೆದಾಗ ಅದರಲ್ಲಿ ಮಹಿಳೆಯೊಬ್ಬರ ರುಂಡ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ನಡೆದಿದೆ. ಪಾಲ್ಘಾರ್ ಜಿಲ್ಲೆಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು...

ಮಣಿಪುರವನ್ನು ಕಟ್ಟಲು ನೀವು ಇಚ್ಛಿಸದಿದ್ದರೆ, ಅದನ್ನು ಆಳುವ ಹಕ್ಕು ನಿಮಗಿಲ್ಲ; ಸಂಸತ್‌ನಲ್ಲಿ ಸಂಸದ ಆರ್ಥರ್ ಅಬ್ಬರ

ರಾಷ್ಟ್ರವನ್ನು ಕಟ್ಟಲು ಮಣಿಪುರವನ್ನು ಪುನರ್‌ ನಿರ್ಮಿಸುವ ಅಗತ್ಯವಿದೆ. ನೀವು ನನ್ನ ರಾಜ್ಯವನ್ನು ದೃಢವಾಗಿ ನಿರ್ಮಿಸಲು ಬಯಸದಿದ್ದರೆ, ಅದನ್ನು ಆಳುವ ಹಕ್ಕು ನಿಮಗಿಲ್ಲ ಎಂದು ಮಣಿಪುರದ ಸಂಸದ ಆಲ್ಫ್ರೆಡ್ ಕಂಗಮ್ ಎಸ್. ಆರ್ಥರ್ ಹೇಳಿದ್ದಾರೆ. ಕೇಂದ್ರ...

ಕೇಂದ್ರದಿಂದ 2,150 ಕೋಟಿ ರೂಪಾಯಿ ವಂಚನೆ; ತಮಿಳುನಾಡು ಬಜೆಟ್‌ ಭಾಷಣದಲ್ಲಿ ಆರೋಪ

ಹಿಂದಿ ಹೇರಿಕೆ ವಿಚಾರದಲ್ಲಿ ಡಿಎಂಕೆ ಮತ್ತು ಬಿಜೆಪಿ ನಡುವಿನ ವಾಕ್ಸಮರ ಮುಂದುವರೆದಿದೆ. ತಮಿಳುನಾಡು ಬಜೆಟ್ ಭಾಷಣದಲ್ಲಿಯೂ ಹಿಂದಿ ಹೇರಿಕೆ ಮತ್ತು ಕೇಂದ್ರ ಸರ್ಕಾರದ ಬೆದರಿಕೆಯ ಬಗ್ಗೆ ಉಲ್ಲೇಖಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ತಮಿಳುನಾಡು ಹಣಕಾಸು...

ಮರ್ಯಾದಾಗೇಡು ಹತ್ಯೆ | ಅಂತರ್ಜಾತಿ ಪ್ರೀತಿ; ತಂದೆಯ ಕ್ರೌರ್ಯಕ್ಕೆ ಮಗಳು ಬಲಿ

ಮತ್ತೊಂದು ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಆಕೆಯ ತಂದೆ ಮತ್ತು ಅಣ್ಣ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ತೇಲಿ ಸಮುದಾಯದ ನೇಹಾ ರಾಥೋಡ್ ಮತ್ತು ಜಾಟ್...

ಬೈಕ್‌ನಲ್ಲಿ ಬೆನ್ನತ್ತಿ ಶಿವಸೇನೆ ನಾಯಕನಿಗೆ ಗುಂಡಿಕ್ಕಿ ಹತ್ಯೆ

ಬೈಕ್‌ನಲ್ಲಿ ಬೆನ್ನತ್ತಿ ಶಿವಸೇನೆ ನಾಯಕನಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬ್‌ನ ಮೋಗಾದಲ್ಲಿ ನಡೆದಿದೆ. ದಾಳಿಯಲ್ಲಿ ಮೃತಪಟ್ಟವರು ಶಿವಸೇನೆಯ ಮೋಗಾ ಜಿಲ್ಲೆಯ ಜಿಲ್ಲಾಧ್ಯಕ್ಷರು ಎನ್ನಲಾಗಿದೆ. ಈ ದಾಳಿಯಲ್ಲಿ ಓರ್ವ ಬಾಲಕನಿಗೂ ಗಾಯವಾಗಿದೆ ಎಂದು...

ಹೋಳಿ ಬಣ್ಣ ಹಚ್ಚಿಸಿಕೊಳ್ಳಲು ನಿರಾಕರಿಸಿದ ಯುವಕನ ಕೊಲೆ

ಹೋಳಿ ಹಬ್ಬದಂದು ಬಣ್ಣ ಹಚ್ಚಿಸಿಕೊಳ್ಳಲು ನಿರಾಕರಿಸಿದ ಯುವಕನನ್ನು ಮೂವರು ಕತ್ತು ಹಿಸುಕಿ ಹತ್ಯೆಗೈದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಬುಧವಾರ ಸಂಜೆ ದೌಸಾ ಜಿಲ್ಲೆಯ ರಾಲ್ವಾಸ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹತ್ಯೆಗೀಡಾದ ಯುವಕನನ್ನು ಹಂಸರಾಜ್‌...

ಪತ್ರಿಕೋದ್ಯಮ ಮೌನವಾಗಿರುವುದಿಲ್ಲ: ಖಾಲಿ ಸಂಪಾದಕೀಯ ಪ್ರಕಟಿಸಿದ ತೆಲಂಗಾಣ ಉರ್ದು ದೈನಿಕ

ತೆಲಂಗಾಣದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ನಮ್ಮ ಪತ್ರಿಕೆಗೆ ನೀಡುತ್ತಿರುವ ಸರ್ಕಾರಿ ಜಾಹೀರಾತನ್ನು ಸಂಪೂರ್ಣ ಸ್ಥಗಿತಗೊಳಿಸಿದೆ ಎಂದು ಆಪಾದಿಸಿದ ಉರ್ದು ದೈನಿಕವೊಂದು ಸಂಪಾದಕೀಯ ಜಾಗವನ್ನು ಖಾಲಿ ಬಿಟ್ಟು ತನ್ನ ಪ್ರತಿಭಟನೆಯನ್ನು...

ಆರು ರಾಜ್ಯಗಳಲ್ಲಿ 85 ಲಕ್ಷ ಮಕ್ಕಳ ಭವಿಷ್ಯ ಅಪಾಯದಲ್ಲಿದೆ: ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ತರಾಟೆ

ಪ್ರಶ್ನೆ ಪತ್ರಿಕೆ ಹೇಳಿಕೆ ವಿಚಾರದಲ್ಲಿ ಬಿಜೆಪಿ ಸರ್ಕಾರವನ್ನು ಲೋಕಸಭೆ ವಿಪಕ್ಷ ನಾಯಕ, ಸಂಸದ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆರು ರಾಜ್ಯಗಳಲ್ಲಿ 85 ಲಕ್ಷ ಮಕ್ಕಳ ಭವಿಷ್ಯ ಅಪಾಯದಲ್ಲಿದೆ ಎಂದು ರಾಹುಲ್ ಗಾಂಧಿ...

ಹಿಂದಿ ಭಾಷಾ ಹೇರಿಕೆ ವಿವಾದದ ನಡುವೆ ಡೈರಿ ಮಿಲ್ಕ್ ಹೊಸ ಜಾಹೀರಾತು ವೈರಲ್

ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರದ ನಡುವೆ ತ್ರಿಭಾಷಾ ನೀತಿ ವಿಚಾರದಲ್ಲಿ ವಾಗ್ವಾದ ನಡೆಯುತ್ತಿದೆ. ಕೇಂದ್ರ ಸರ್ಕಾರವು ಹಿಂದಿ ಹೇರಿಕೆ ಮಾಡುತ್ತಿದೆ ದಕ್ಷಿಣ ಭಾರತದ ರಾಜ್ಯಗಳು ವರ್ಷಗಳಿಂದ ಆರೋಪಿಸುತ್ತಾ ಬಂದಿದೆ. ಪ್ರಸ್ತುತ ಬಿಜೆಪಿ...

300 ವರ್ಷಗಳ ಬಳಿಕ ದೇವಾಲಯ ಪ್ರವೇಶಿಸಿದ ದಲಿತರು

ಶತಮಾನಗಳಿಂದ ಅಸ್ತಿತ್ವದಲ್ಲಿದ್ದ ಜಾತಿ ಸಂಕೋಲೆಯನ್ನು ದಲಿತರು ಮುರಿದಿದ್ದು, ಬರೋಬ್ಬರಿ 300 ವರ್ಷಗಳ ಬಳಿಕ ಶಿವನ ದೇವಾಲಯವನ್ನು ಪ್ರವೇಶಿಸಿದ್ದಾರೆ. ಪಶ್ಚಿಮ ಬಂಗಾಳದ ಪುರ್ಬ ಬರ್ಧಮಾನ್ ಜಿಲ್ಲೆಯ ಗಿಧೇಶ್ವರ ಶಿವ ದೇವಾಲಯಕ್ಕೆ 3 ಶತಮಾನಗಳ ಬಳಿಕ...

ಕರ್ನಲ್‌ ಪತ್ನಿ ಮೇಲೆ ಲೈಂಗಿಕ ದೌರ್ಜನ್ಯ: ಸೇನಾಧಿಕಾರಿ ವಿರುದ್ಧ ಪ್ರಕರಣ ದಾಖಲು

ಸೇನಾಧಿಕಾರಿಯೊಬ್ಬರು ತನ್ನ ಕಿರಿಯ ಸಹೋದ್ಯೋಗಿ (ಕರ್ನಲ್) ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸೇನಾಧಿಕಾರಿ ವಿರುದ್ಧ ಮೇಘಾಲಯದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನ್ನ ಪತ್ನಿಗೆ ಬ್ರಿಗೇಡಿಯರ್‌ ಶ್ರೇಣಿಯ ಹಿರಿಯ ಅಧಿಕಾರಿ ಲೈಂಗಿಕ...

ಡಬ್ಲ್ಯೂಎಫ್‌ಐ ಅಮಾನತು ರದ್ದು; ಗೊಂದಲ ವ್ಯಕ್ತಪಡಿಸಿದ ವಿನೇಶ್ ಫೋಗಟ್

ಬುಧವಾರ ಕ್ರೀಡಾ ಸಚಿವಾಲಯವು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯೂಎಫ್‌ಐ) ಅಮಾನತು ರದ್ದುಗೊಳಿಸಿದ್ದಾರೆ. ಈ ಬೆನ್ನಲ್ಲೇ 2023ರಲ್ಲಿ ಡಬ್ಲ್ಯೂಎಫ್‌ಐನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕುಸ್ತಿಪಟು-...

ಈ ಹೊತ್ತಿನ ಪ್ರಮುಖ ಸುದ್ದಿ