ಪ್ರಧಾನಿ ಮೋದಿ ಚಹಾ ಸವಿದಿದ್ದ ಅಯೋಧ್ಯೆಯ ಮೀರಾ ಮಾಂಝಿ ಕುಟುಂಬವೀಗ ಸಾಲದ ಸುಳಿಯಲ್ಲಿ; ಬ್ಯಾಂಕ್‌ನಿಂದ ನೋಟಿಸ್‌

Date:

2023ರ ಡಿಸೆಂಬರ್ 30ರಂದು ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ಉಜ್ವಲ ಯೋಜನೆ’ಯ 10 ಕೋಟಿಯ ಫಲಾನುಭವಿ ಮೀರಾ ಮಾಂಝಿ ಅವರ ಮನೆಗೆ ಅಚ್ಚರಿಯ ಭೇಟಿ ನೀಡಿ ಚಹಾ ಸವಿದಿದ್ದರು. ರಾಮಮಂದಿರ ಉದ್ಘಾಟನೆಗೂ ಕೆಲವೇ ವಾರಗಳ ಮುನ್ನ ನಡೆದಿದ್ದ ಈ ಭೇಟಿ ರಾಷ್ಟ್ರಮಟ್ಟದಲ್ಲಿ ಭಾರೀ ಗಮನ ಸೆಳೆದಿತ್ತು. ಅಂದು ತಮ್ಮ ಬಡತನ ನಿವಾರಣೆಯಾಗಲಿದೆ ಎಂದು ನಂಬಿದ್ದ ಮೀರಾ ಕುಟುಂಬ, ಪ್ರಧಾನಿ ಭೇಟಿಯ ಮೂರು ವರ್ಷಗಳ ಬಳಿಕ ಇದೀಗ ತೀವ್ರ ಆರ್ಥಿಕ ಸಂಕಷ್ಟ ಹಾಗೂ ಸಾಲದ ಸುಳಿಗೆ ಸಿಲುಕಿ ಪರದಾಡುತ್ತಿದೆ.

- Advertisement -

ಪ್ರಧಾನಿ ಭೇಟಿಯ ನಂತರ ಜಿಲ್ಲಾಡಳಿತದ ಅಧಿಕಾರಿಗಳು ಬದುಕು ಹಸನಾಗುವ ಭರವಸೆ ನೀಡಿದ್ದರು. ಆದರೆ, ಮೀರಾ ಅವರ ಪತಿ ಸೂರಜ್‌ ಕುಮಾರ್‌ಗೆ ಕಾಯಂ ಉದ್ಯೋಗ ನೀಡುವ ಬದಲು ದೋಣಿ ಖರೀದಿಸಲು ‘ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ’ದ (PMEGP) ಅಡಿ ಸಾಲ ನೀಡಲಾಯಿತು. “ನಾವು ಸಾಲ ಕೇಳಿರಲಿಲ್ಲ, ಕೆಲಸವನ್ನಷ್ಟೇ ಕೇಳಿದ್ದೆವು. ಆದರೆ ನಮ್ಮನ್ನು ಸಾಲದ ಸುಳಿಗೆ ದೂಡಲಾಯಿತು” ಎಂದು ಮೀರಾ ಅವರು ಅಕ್ಟೋಬರ್ 28ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯುಪಿ ಚುನಾವಣೆ | ಬಿಜೆಪಿಯ ಹಿಂದುತ್ವದ ಅಸ್ತ್ರಕ್ಕೆ ಎಸ್‌ಪಿ...

ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಗೆ ಕೇವಲ ಕೆಲವೇ ತಿಂಗಳುಗಳು ಬಾಕಿ ಇವೆ. ಆ ರಾಜ್ಯದ ರಾಜಕೀಯ ರಂಗದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಗಳು ಕಂಡುಬರುತ್ತಿವೆ. ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ, ಮಾಜಿ ಮುಖ್ಯಮಂತ್ರಿ...

ಪಾತಾಳ ಸೀಳಿ ಪೈರಾಗಿ ಎದ್ದವನು: ಕನ್ನಡ ಮನಸ್ಸಿನಲ್ಲಿ ಬಲೀಂದ್ರನ...

ಸತ್ಯನಿಷ್ಠೆ, ಮಹೋದಾರತೆ ಮತ್ತು ಶ್ರಮಸಂಸ್ಕೃತಿಯ ಫಲವಂತಿಕೆಯಾಗಿ ಸಾವನ್ನು ಗೆದ್ದು ಜನಮಾನಸದಲ್ಲಿ ನೆಲೆಗೊಂಡಿರುವ ಬಲಿ ಕೇವಲ ಸೋಲಿನ ಸಂಕೇತವಲ್ಲ; ಆತ ಚಾರಿತ್ರಿಕವಾಗಿ ಪ್ರಭುತ್ವದ ವಂಚನೆಯನ್ನು ಬಯಲು ಮಾಡುವ ಜೀವಂತ ಪ್ರತಿರೋಧ. ಊರಿಗೆಲ್ಲ ದೀಪಾವಳಿಯು ಬೆಳಕಿನ ಸಂಭ್ರಮವಾದರೆ,...

ಗದಗ | ಬದುಕ ಬೆಳಗಿತು ಹಣತೆ: ಕುಂಬಾರಿಕೆಗೆ ಮರು...

ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕುಂಬಾರಿಕೆ ವೃತ್ತಿ ನಿಧಾನವಾಗಿ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ, ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ಮಹಿಳೆಯೊಬ್ಬರು ತಮ್ಮ ಕುಟುಂಬದ ಕುಲಕಸುಬನ್ನೇ ಆದಾಯದ ಪ್ರಮುಖ ಮೂಲವನ್ನಾಗಿಸಿಕೊಂಡು ಸ್ವಾವಲಂಬಿ ಬದುಕಿನತ್ತ ಹೆಜ್ಜೆಯಿಟ್ಟಿದ್ದಾರೆ. ಸಂಜೀವಿನಿ...

ನದಿತೀರದಲ್ಲಿ ಹೂವು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಮೀರಾ ಅವರಿಗೆ, ವ್ಯಾಪಾರ ಮಾಡಲು ನಿಗದಿತ ಜಾಗ ನೀಡಲು 5,000 ರೂ. ಲಂಚ ಕೇಳಲಾಯಿತು. ಹಣ ನೀಡಲಾಗದೆ ಅವರು ಆ ಕೆಲಸವನ್ನೂ ಕಳೆದುಕೊಂಡರು. ಇತ್ತ ಪತಿ ಸೂರಜ್ ಅವರ ದೋಣಿ ವ್ಯಾಪಾರವೂ ಪ್ರವಾಹ ಹಾಗೂ ವಾರಾಣಸಿ-ಅಯೋಧ್ಯೆ ನಡುವಿನ ಬೃಹತ್ ಐಷಾರಾಮಿ ಕ್ರೂಸ್ ಹಡಗುಗಳ ಪೈಪೋಟಿಯಿಂದಾಗಿ ಸಂಪೂರ್ಣವಾಗಿ ನೆಲಕಚ್ಚಿತು. ಇದರಿಂದಾಗಿ ಕುಟುಂಬದ ಆದಾಯದ ಮೂಲವೇ ಕಮರಿಹೋಯಿತು.

ಬ್ಯಾಂಕಿನಿಂದ ಪಡೆದಿದ್ದ ಒಟ್ಟು ಸಾಲದಲ್ಲಿ ಕಂತುಗಳನ್ನು ಕಟ್ಟಲಾಗದೆ, ಸದ್ಯ 2,04,616 ರೂ. ಬಾಕಿ ಉಳಿದಿದೆ. ಸಾಲ ಮರುಪಾವತಿಸಲು ಸಾಧ್ಯವಾಗದ ಕಾರಣ, 2026ರ ಜುಲೈ 5ರಂದು ಬ್ಯಾಂಕ್ ಈ ಸಾಲವನ್ನು ‘ಸುಸ್ತಿ ಸಾಲ’ (NPA) ಎಂದು ಘೋಷಿಸಿ ನೋಟಿಸ್ ಜಾರಿ ಮಾಡಿದೆ. ಪ್ರಸ್ತುತ, ಸಾಲ ವಸೂಲಾತಿ ಏಜೆಂಟರು ಮನೆಗೆ ಬಂದು ಬೆದರಿಕೆ ಹಾಕುತ್ತಿದ್ದು, ಮೂವರು ಪುಟ್ಟ ಮಕ್ಕಳಿರುವ ಈ ಬಡ ಕುಟುಂಬ ದಿಕ್ಕುತೋಚದ ಪರಿಸ್ಥಿತಿಯಲ್ಲಿದೆ.

ಈ ವಿಷಯ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಯುವ ಕಾಂಗ್ರೆಸ್ ನಾಯಕ ಶರದ್ ಶುಕ್ಲಾ, “ಇದು ‘ಮೋದಿ ಮಾಡೆಲ್’ನ ನೈಜ ಮುಖ” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ, ಸಮಾಜವಾದಿ ಪಕ್ಷದ ಮಾಜಿ ಸಚಿವ ಪವನ್ ಪಾಂಡೆ ಅವರು 50,000 ರೂ. ಹಾಗೂ ಅಯೋಧ್ಯೆಯ ಬಿಜೆಪಿ ಮೇಯರ್ ಗಿರೀಶ್ ಪತಿ ತ್ರಿಪಾಠಿ ಅವರು 60,000 ರೂ.ಗಳ ಆರ್ಥಿಕ ನೆರವನ್ನು ಆ ಕುಟುಂಬಕ್ಕೆ ವಿತರಿಸಿದ್ದಾರೆ.

ವಿರೋಧ ಪಕ್ಷಗಳು ವಿನಾಕಾರಣ ವಿವಾದ ಸೃಷ್ಟಿಸುತ್ತಿವೆ ಎಂದು ಆರೋಪಿಸಿರುವ ಅಯೋಧ್ಯೆ ಮೇಯರ್ ಗಿರೀಶ್ ತ್ರಿಪಾಠಿ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ. “ಈ ಕುಟುಂಬಕ್ಕೆ ಈಗಾಗಲೇ ಪಿಎಂ ಆವಾಸ್, ಆಯುಷ್ಮಾನ್ ಭಾರತ್ ಮತ್ತು ಉಜ್ವಲ ಯೋಜನೆಗಳ ಸೌಲಭ್ಯ ಒದಗಿಸಲಾಗಿದೆ. ಸಬ್ಸಿಡಿ ಸಹಿತ ಸಾಲವನ್ನೂ ನೀಡಲಾಗಿತ್ತು. ಆದರೆ, ಬ್ಯಾಂಕ್‌ ಸಾಲವನ್ನು ಮರುಪಾವತಿ ಮಾಡುವುದು ಸರ್ಕಾರದ ಅಥವಾ ಆಡಳಿತದ ಜವಾಬ್ದಾರಿಯಲ್ಲ, ಸಮಾಜ ಈ ಬಗ್ಗೆ ನೆರವಾಗಬೇಕು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಜಿತ್ ಇಂದೋರ್ ಕನ್ಸರ್ಟ್‌ಗೆ ಬಾಂಬ್ ಬೆದರಿಕೆ; ಹೈಕೋರ್ಟ್‌ಗೆ ಇಮೇಲ್!

ಪ್ರಸಿದ್ಧ ಪಂಜಾಬಿ ಗಾಯಕ ದಿಲ್ಜಿತ್ ದೊಸಾಂಜ್ ಅವರ ಮುಂಬರುವ 'ಆರಾ ಟೂರ್'...

ತಮಿಳುನಾಡು: ಟಾಟಾ ಕೈಗಾರಿಕಾ ಘಟಕದಲ್ಲಿ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ಮೂವರು ಗುತ್ತಿಗೆ ಕಾರ್ಮಿಕರ ಸಾವು

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೈಗಾರಿಕಾ ಘಟಕವೊಂದರಲ್ಲಿ ನಿರ್ವಹಣಾ ಕಾರ್ಯದಲ್ಲಿ ತೊಡಗಿದ್ದ ಮೂವರು...

ತಮಿಳುನಾಡು: ರಸ್ತೆ ಮಧ್ಯೆ ಪಟಾಕಿ ಸಿಡಿಸಿದ್ದನ್ನು ಪ್ರಶ್ನಿಸಿದ ಪೊಲೀಸ್ ಅಧಿಕಾರಿಯ ಭೀಕರ ಹತ್ಯೆ

ತಮಿಳುನಾಡಿನ ಥೇಣಿಯಲ್ಲಿ ರಸ್ತೆ ಮಧ್ಯೆ ಪಟಾಕಿ ಸಿಡಿಸುತ್ತಿದ್ದ ಯುವಕರ ಗುಂಪನ್ನು ಪ್ರಶ್ನಿಸಿದ...