ದೇಶ

ಗುಜರಾತ್ | ಹಾಸ್ಟೆಲ್‌ನಲ್ಲಿ ನಮಾಝ್ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ಗುಂಪಿನಿಂದ ಹಲ್ಲೆ; ನೋಡುತ್ತಾ ನಿಂತ ಪೊಲೀಸರು!

ಗುಜರಾತ್ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ಆಘಾತಕಾರಿ ಬೆಳವಣಿಗೆಯೊಂದು ಶನಿವಾರ ತಡರಾತ್ರಿ ನಡೆದಿದೆ. ರಮಝಾನ್ ಹಿನ್ನೆಲೆಯಲ್ಲಿ ರಾತ್ರಿಯ ತರಾವೀಹ್ ನಮಾಝ್ ಮಾಡುತ್ತಿದ್ದ ವೇಳೆ ಹಾಸ್ಟೆಲ್‌ಗೆ ನುಗ್ಗಿದ ಸಂಘಪರಿವಾರದ ಗೂಂಡಾಗಳು ದಾಂಧಲೆ ನಡೆಸಿದ್ದಲ್ಲದೇ, ಮುಸ್ಲಿಂ ವಿದ್ಯಾರ್ಥಿಗಳ ಮೇಲೆ...

ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಕೇಜ್ರಿವಾಲ್‌ಗೆ 9ನೇ ಸಮನ್ಸ್

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಭಾನುವಾರ ಒಂಬತ್ತನೇ ಸಮನ್ಸ್ ಅನ್ನು ಜಾರಿಗೊಳಿಸಿದ್ದು, ಮಾರ್ಚ್ 21ರ (ಗುರುವಾರ) ಒಳಗಾಗಿ ವಿಚಾರಣೆಗೆ ಹಾಜರಾಗಲು ತಿಳಿಸಿದೆ. ಹಲವು ಸಮನ್ಸ್‌ಗಳ...

ಲೋಕಸಭೆಯ ಜೊತೆಜೊತೆಗೇ ನಡೆಯಲಿದೆ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ

ಇಂದು ಚುನಾವಣಾ ಆಯೋಗವು ಲೋಕಸಭೆ ಚುನಾವಣೆ ದಿನಾಂಕ ಘೋಷಿಸುವುದರ ಜೊತೆಗೆಯೇ ನಾಲ್ಕು ರಾಜ್ಯಗಳಲ್ಲಿನ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಘೋಷಿಸಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ,...

ಈಡೇರದ ಆಸೆಗಳಿಗೆ ನಮ್ಮನ್ನು ದೂಷಿಸುವುದು ಸರಿಯಲ್ಲ; ಇವಿಎಂ ಕುರಿತ ಪ್ರಶ್ನೆಗೆ ಚುನಾವಣಾ ಆಯುಕ್ತರ ಉತ್ತರ

ದೇಶದಲ್ಲಿ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಸುವುದಾಗಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಘೋಷಿಸಿದ್ದಾರೆ. ಜೂನ್ 4 ರಂದು ಚುನಾವಣಾ ಫಲಿತಾಂಶ ಬರಲಿದೆ. ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಇವಿಎಂಗಳಿಗೆ ಸಂಬಂಧಿಸಿದ...

ಚುನಾವಣಾ ಬಾಂಡ್ | ಬಿಜೆಪಿ-ಮೋದಿ ಭದ್ರಕೋಟೆ ಛಿದ್ರಗೊಳಿಸಲು ವಿಪಕ್ಷಗಳಿಗೆ ಸುವರ್ಣಾವಕಾಶ

2024ರ ಲೋಕಸಭಾ ಚುನಾವಣೆಯ ಮತದಾನ ಏಪ್ರಿಲ್‌ 19ರಿಂದ ಆರಂಭವಾಗಲಿದೆ. ಇದಕ್ಕೂ ಮುನ್ನವೇ ಬಿಜೆಪಿಯ ಬ್ರಹ್ಮಾಂಡ ಹಗರಣವೊಂದು ಬಹಿರಂಗವಾಗಿದೆ. ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ಬರೋಬ್ಬರಿ 6,060 ಕೋಟಿ ರೂ. ದೇಣಿಗೆಯನ್ನು ವಿವಿಧ ಕಂಪನಿಗಳಿಂದ...

ಜೈಲಿನಲ್ಲೇ ವಿಡಿಯೋ ‘ಲೈವ್’ ಮಾಡಿದ ಕೊಲೆ ಆರೋಪಿ; ಮೂವರು ಜೈಲು ವಾರ್ಡನ್‌ಗಳ ಅಮಾನತು

ಜೈಲಿನಲ್ಲಿರುವ ಕೊಲೆ ಆರೋಪಿಯೊಬ್ಬಮೊಬೈಲ್ ಫೋನ್ ಹೊಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಲೈವ್ ವೀಡಿಯೋ ಮಾಡಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಜೈಲಿನ ಮೂವರು ವಾರ್ಡನ್‌ಗಳನ್ನು ಜೈಲು ಆಡಳಿತ...

ಚುನಾವಣಾ ಬಾಂಡ್ | ತನಿಖಾ ಸಂಸ್ಥೆಗಳ ದಾಳಿಗೂ 14 ಸಂಸ್ಥೆಗಳ ದೇಣಿಗೆಗೂ ನಂಟು?

ಚುನಾವಣಾ ಬಾಂಡ್‌ ಮೂಲಕ ಯಾವೆಲ್ಲ ಸಂಸ್ಥೆಗಳು ದೇಣಿಗೆಯನ್ನು ನೀಡಿದೆ ಎಂಬ ಮಾಹಿತಿಯನ್ನು ಎಸ್‌ಬಿಐ ಚುನಾವಣಾ ಆಯೋಗಕ್ಕೆ ನೀಡಿದ್ದರೂ ಸಂಪೂರ್ಣ ಮಾಹಿತಿಯನ್ನು ನೀಡಿಲ್ಲ. ಯಾರು ಹಣ ನೀಡಿದ್ದಾರೆ, ಎಷ್ಟು ನೀಡಿದ್ದಾರೆ ಎಂಬ ಮಾಹಿತಿ ಇದ್ದರೂ...

ಯಾವುದೇ ಭ್ರಷ್ಟರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

ಭ್ರಷ್ಟರನ್ನು ಬಿಡುವುದಿಲ್ಲ. ಯಾವುದೇ ಭ್ರಷ್ಟರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತೆಲಂಗಾಣದ ನಾಗರ್‌ಕರ್ನೂಲ್‌ನಲ್ಲಿ ಹೇಳಿದ್ದಾರೆ. ಶನಿವಾರ, ಬಿಜೆಪಿ ಆಯೋಜಿಸಿದ್ದ ರ್‍ಯಾಲಿಯಲ್ಲಿ ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಮತ್ತು...

ಇಶಾನ್ ಕಿಶನ್-ಶ್ರೇಯಸ್ ಅಯ್ಯರ್‌ರನ್ನು ಹೊರಗಿಟ್ಟ ಬಿಸಿಸಿಐ; ‘ಅವರ ಮನಸ್ಸಿನಲ್ಲಿ ಏನಿದೆ?’ ಎಂದ ಹರ್ಭಜನ್

ಭಾರತದ ಅಪೆಕ್ಸ್ ಕ್ರಿಕೆಟ್ ಬೋರ್ಡ್ ಪ್ರಕಟಿಸಿದ ಆಟಗಾರರ ಪಟ್ಟಿಯಲ್ಲಿ ಶೇಯಸ್‌ ಅಯ್ಯರ್ ಮತ್ತು ಇಶಾನ್ ಕಿಶನ್‌ರನ್ನು ಕೈಬಿಟ್ಟಿರುವ ಬಿಸಿಸಿಐ ವಿರುದ್ಧ ಭಾರತ ತಂಡದ ಮಾಜಿ ಸ್ಪನ್ನರ್ ಹರ್ಭಜನ್ ಸಿಂಗ್‌ ಬೇಸರ ವ್ಯಕ್ತಪಡಿಸಿದ್ದಾರೆ. ಅವರನ್ನು...

ಚುನಾವಣಾ ಬಾಂಡ್ | ಮೋದಿಯಿಂದ ‘ಸುಲಿಗೆ ದಂಧೆ’; ರಾಹುಲ್ ಗಾಂಧಿ ಕಿಡಿ

ಚುನಾವಣಾ ಬಾಂಡ್ ಮಾಹಿತಿ ಹೊರಬಿದ್ದ ಬಳಿಕ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, "ಪ್ರಧಾನಿ ಮೋದಿ 'ಸುಲಿಗೆ ದಂಧೆ' ನಡೆಸಿದ್ದಾರೆ" ಎಂದು ಆರೋಪಿಸಿದ್ದಾರೆ. "ಮಹಾರಾಷ್ಟ್ರ...

ಮಮತಾ ಗಾಯದ ಬಗ್ಗೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಲೇವಡಿ; ಸ್ತ್ರೀದ್ವೇಷದ ಪ್ರತಿಬಿಂಬ ಎಂದ ಟಿಎಂಸಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಗಾಯವಾಗಿರುವ ಬಗ್ಗೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅಪಹಾಸ್ಯ ಮಾಡಿದ್ದಾರೆ. ಅವರ ವಿರುದ್ಧ ಟಿಎಂಸಿ ಕಿಡಿಕಾರಿದೆ. ಗುರುವಾರ ಸಂಜೆ ಬ್ಯಾನರ್ಜಿ ಅವರ ಹಣೆಗೆ ಪೆಟ್ಟಾಗಿತ್ತು. ಆಸ್ಪತ್ರೆಯಲ್ಲಿ ಗಾಯಕ್ಕೆ...

ಅಬಕಾರಿ ನೀತಿ ಪ್ರಕರಣ | ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ರಿಗೆ ಜಾಮೀನು

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಇಂದು (ಮಾ.16) ಜಾಮೀನು ಮಂಜೂರು ಮಾಡಿದೆ. ಹಲವು ಸಮನ್ಸ್ ಗಳನ್ನು ತಪ್ಪಿಸಿದ್ದಕ್ಕಾಗಿ ಜಾರಿ ನಿರ್ದೇಶನಾಲಯ (ಈಡಿ)...

ಈ ಹೊತ್ತಿನ ಪ್ರಮುಖ ಸುದ್ದಿ