ಅಲ್ಲಮನ ಅನನ್ಯ ಪದಪ್ರಯೋಗಗಳು | ಪ್ರಥಮ ಭಿತ್ತಿ

Date:

Advertisements
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಪ್ರಥಮ ಭಿತ್ತಿ

ಏನೂ ಏನೂ ಇಲ್ಲದ ಬಯಲೊಳಗೊಂದು ಬಗೆಗೊಳಗಾದ ಬಣ್ಣ ತಲೆದೋರಿತ್ತು.
ಆ ಬಣ್ಣವು ಆ ಬಯಲ ಶೃಂಗರಿಸಲು,
ಬಯಲು ಸ್ವರೂಪಗೊಂಡಿತ್ತು.
ಅಂತಪ್ಪ ಸ್ವರೂಪಿನ ಬೆಡಗು ತಾನೆ,
ನಮ್ಮ ಗುಹೇಶ್ವರಲಿಂಗದ ಪ್ರಥಮಭಿತ್ತಿ.

ಪದಾರ್ಥ:
ಬಯಲು = ಆಕಾಶ, ಸೃಷ್ಟಿ
ಬಣ್ಣ = ವರ್ಣ, ಅಕ್ಷರ
ಭಿತ್ತಿ = ಚಿತ್ರ ಬರೆಯಲು ಬಳಸುವ ಬಟ್ಟೆ

Advertisements

ವಚನಾರ್ಥ:
ಈ ಸೃಷ್ಟಿಯ ಪ್ರಥಮ ಅಕ್ಷರ ಓಂ ಎಂದು ಪ್ರತಿಪಾದಿಸಲು ಮತ್ತು ಪ್ರಣವ ಸ್ವರೂಪವಾದ ಓಂ ಪ್ರಭೆಯನ್ನು ಪರಿಣಾಮಕಾರಿಯಾಗಿ ಬಿಂಬಿಸಲು ಅಲ್ಲಮ ನಿಸರ್ಗದ ಚಿತ್ರಣವೊಂದನ್ನು ರೂಪಕವಾಗಿ ಬಳಸಿರುವುದು ಈ ಸುಂದರ ವಚನದಲ್ಲಿ ಕಂಡು ಬರುತ್ತದೆ. ಸೃಷ್ಟಿ ಪೂರ್ವದ ಶೂನ್ಯದಲ್ಲಿ ಒಂದು ವರ್ಣ ಓಂ ತಲೆದೋರಿತ್ತು. ಅದು ವಿಕಾಸವಾಗುತ್ತಾ ಹೋದಂತೆಲ್ಲ ಸೃಷ್ಟಿಯಲ್ಲಿ ಸಂಚಲನ ಮೂಡಿತು. ನೆಲ ಬಾನು ಮುಗಿಲು ಓಂಕಾರದ ನಾದ ಪ್ರಭಾವದಿಂದ ಸಿಂಗಾರಗೊಂಡವು. ಆ ಓಂ ಎಂಬ ನಾದವೇ ಸೃಷ್ಟಿಯ ಪ್ರಥಮ ಭಿತ್ತಿ. ಆ ಭಿತ್ತಿಯ ಮೇಲಿನ ಚಿತ್ರದಲ್ಲಿ ನಿಸರ್ಗದ ಎಲ್ಲಾ ಚಿತ್ತಾರಗಳೂ ಒಡಮೂಡುತ್ತವೆ.

ಪದ ಪ್ರಯೋಗಾರ್ಥ:
ಈ ವಚನದಲ್ಲಿ ಅಲ್ಲಮ ಚಿತ್ರಿಸಿರುವ ದೃಶ್ಯವನ್ನು ಆಗ ತಾನೇ ಕತ್ತಲು ಕಳೆದು ಬೆಳಗು ಮೂಡುತ್ತಿರುವ ಆಕಾಶಕ್ಕೆ ಹೋಲಿಸಿ ನೋಡಬಹುದು. ರಾತ್ರಿಯ ಕತ್ತಲೆಯಲ್ಲಿ ಏನೂ ಏನೂ ಕಾಣದ ಬಾನ ಬಯಲಿನಲ್ಲಿ ಉಷೆ ಮೂಡುವ ಮೊದಲು ಒಂದು ಬಗೆಗೊಳಗಾದ ಬಣ್ಣ ತಲೆದೋರುತ್ತದೆ. ಆ ಬಣ್ಣ ಆ ಬಾನ ಬಯಲನ್ನು ಸಿಂಗರಿಸುತ್ತದೆ. ಹಾಗೆ ಸಿಂಗಾರಗೊಂಡ ಬಾನು ವಿವಿಧ ರೂಪಗಳನ್ನು ತಳೆದು ಹೊಮ್ಮುತ್ತಾ ಸ್ವರೂಪಗೊಳ್ಳುತ್ತದೆ. ಅದು ನಿಸರ್ಗದ ಬೆರಗು ಬೆಳಗು ಬೆಡಗು! ಅದು ಅನುದಿನವು ಆ ಕಲಾಕಾರನ ಕೈಯ ಕುಂಚಕ್ಕೆ ಅನುವಾಗಲು ಬಿಚ್ಚಿಕೊಳ್ಳುವ ಭಿತ್ತಿ. ಆ ದಿನದ ಪ್ರಥಮ ಭಿತ್ತಿ. ಶಾಂತಿರಸವೇ ಪ್ರೀತಿಯಿಂದ ಮೈದೋರಿತಣ್ಣಾ, ಇದು ಬರೀ ಬೆಳಗಲ್ಲೋ ಅಣ್ಣಾ ಅಂತ ಬೇಂದ್ರೆ ಅಂದದ್ದು ಅಲ್ಲಮನ ಧ್ವನಿಯಲ್ಲೇ. ಅಲ್ಲಮ ಕಂಡ ಓಂಕಾರದ ಪ್ರಥಮ ಭಿತ್ತಿಯನ್ನು ಬೇಂದ್ರೆ ದರ್ಶಿಸಿದ್ದು ಹೀಗೆ:

ಮೂಡಲ ಮನೆಯ ಮುತ್ತಿನ ನೀರಿನ
ಎರಕಾವ ಹೊಯ್ದ, ನುಣ್ಣನೆ ಎರಕಾವ ಹೊಯ್ದ
ಬಾಗಿಲು ತೆರೆದು ಬೆಳಕು ಹರಿದು ಜಗವೆಲ್ಲಾ ತೊಯ್ದ,
ದೇವನು ಜಗವೆಲ್ಲಾ ತೊಯ್ದ.

ಈ ಗೀತೆಯನ್ನು ಕಪ್ಪು ಬಿಳುಪು ಭಿತ್ತಿಯ ಮೇಲೆ ‘ಬೆಳ್ಳಿಮೋಡ’ ಚಲನಚಿತ್ರದಲ್ಲಿ ಪುಟ್ಟಣ್ಣ ಕಣಗಾಲ್ ಅದ್ಭುತವಾಗಿ ಚಿತ್ರೀಕರಿಸಿದ್ದಾರೆ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ವಿಷಕ್ಕೆ ರುಚಿ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X