ಈ ದಿನ ಸಂಪಾದಕೀಯ | ಪಾದಯಾತ್ರೆಯ ಪಾವಿತ್ರ್ಯತೆಯನ್ನು ಬಿಜೆಪಿ ಮುಖಂಡರು ಮಣ್ಣುಗೂಡಿಸಿದರೇ?

Date:

ದೇಶದಲ್ಲಿ ಇಲ್ಲಿಯವರೆಗೆ ಜರುಗಿದ ಪಾದಯಾತ್ರೆಗಳು ಜನರ ಸಮಸ್ಯೆಗಳನ್ನು ಹೊತ್ತು ನಡೆದ ಹೆಜ್ಜೆಗಳಾಗಿದ್ದವು, ರಾಜಕೀಯ ಇತಿಹಾಸದಲ್ಲಿ ದಾಖಲಾಗಿದ್ದವು. ಬಿಜೆಪಿಯ ಮೂವರು ಮುಖಂಡರ ನೇತೃತ್ವದಲ್ಲಿ ನಡೆದ ಪಾದಯಾತ್ರೆ, ಆ ನಾಯಕರ ಮೆರವಣಿಗೆ ಮತ್ತು ಮೆರೆದಾಟಕ್ಕೆ ಮಾತ್ರ ಸೀಮಿತವಾಗಿತ್ತು. ಜನರ ನಂಬಿಕೆಯನ್ನು ಹುಸಿಗೊಳಿಸಿತ್ತು. ಪಾದಯಾತ್ರೆಯ ಪಾವಿತ್ರ್ಯತೆಯನ್ನು ಮಣ್ಣುಗೂಡಿಸಿತ್ತು.

ಭಾರತದ ರಾಜಕಾರಣದಲ್ಲಿ ಪಾದಯಾತ್ರೆ ಕೇವಲ ಕಾಲ್ನಡಿಗೆಯ ಪ್ರಯಾಣವಲ್ಲ; ಜನರನ್ನು ನೇರವಾಗಿ ತಲುಪುವ, ಜನರನ್ನು ಜಾಗೃತಗೊಳಿಸುವ, ನಾಯಕತ್ವವನ್ನು ರೂಪಿಸುವ ಮತ್ತು ಕೆಲವೊಮ್ಮೆ ಚುನಾವಣಾ ರಾಜಕಾರಣದ ದಿಕ್ಕನ್ನೇ ಬದಲಿಸುವ ಸಾಧನವಾಗಿದೆ. ಮಹಾತ್ಮ ಗಾಂಧಿಯವರ ದಂಡಿ ಯಾತ್ರೆಯಿಂದ ಆರಂಭಿಸಿ, ಮಾಜಿ ಪ್ರಧಾನಿ ಚಂದ್ರಶೇಖರ್, ಬಿಜೆಪಿಯ ಹಿರಿಯ ನಾಯಕ ಅಡ್ವಾಣಿ, ಆಂಧ್ರದ ಕಾಂಗ್ರೆಸ್ ನಾಯಕ ವೈ.ಎಸ್. ರಾಜಶೇಖರ ರೆಡ್ಡಿ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಕರ್ನಾಟಕದ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆವರೆಗೆ… ಪಾದಯಾತ್ರೆಗಳು ದೇಶದ ಇತಿಹಾಸದ ಭಾಗವಾಗಿವೆ.

- Advertisement -

ಅಂತಹ ಐತಿಹಾಸಿಕ ಪಾದಯಾತ್ರೆಗಳನ್ನು ಕಂಡ ಜನ ಸಹಜವಾಗಿಯೇ, ಬಿಜೆಪಿಯ ಬಳ್ಳಾರಿ ಚಲೋ ಪಾದಯಾತ್ರೆಯ ಬಗ್ಗೆ ಆಶಾಭಾವನೆ ಹೊಂದಿದ್ದರು. ರಾಜಕೀಯ ಪಕ್ಷವೊಂದು ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬೀದಿಗಿಳಿಯುವುದು ಪ್ರಜಾಪ್ರಭುತ್ವದ ಆರೋಗ್ಯಕರ ಲಕ್ಷಣ ಎಂದು ತಿಳಿದಿದ್ದರು. ಅಧಿಕಾರದಲ್ಲಿರುವ ಪಕ್ಷವನ್ನು ಪ್ರಶ್ನಿಸುವುದು, ಆಡಳಿತದ ವೈಫಲ್ಯಗಳನ್ನು ಜನರ ಮುಂದೆ ಇಡುವುದು ಮತ್ತು ಜನರ ಪರವಾಗಿ ಧ್ವನಿ ಎತ್ತುವುದು ವಿರೋಧ ಪಕ್ಷದ ಮೂಲಭೂತ ಕರ್ತವ್ಯ ಎಂದು ಭಾವಿಸಿದ್ದರು.   

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ಆ ನಿಟ್ಟಿನಲ್ಲಿ ವಿರೋಧ ಪಕ್ಷವಾದ ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ. ರಾಜ್ಯ ಸರ್ಕಾರದ ಭಾಗವಾಗಿದ್ದ ಸಚಿವರೊಬ್ಬರು ಆರೋಪಿಯಾಗಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ, ರೈತರ ಸಮಸ್ಯೆ, ಬರ ನಿರ್ವಹಣೆ ಮತ್ತು ಆಡಳಿತ ವೈಫಲ್ಯಗಳನ್ನು ಪಾದಯಾತ್ರೆಯುದ್ದಕ್ಕೂ ಪ್ರಮುಖವಾಗಿ ಪ್ರಶ್ನಿಸಲಾಗಿದೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನೂ ಮಾಡಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಐಫೆಲ್ ಟವರ್‌ ಎದುರು ಭಾರತದ ಮಾನ ಕಳೆದ ಧಾರ್ಮಿಕ ಪಿತೃಸತ್ತೆ!

ಆದರೆ, ಬಿಜೆಪಿ ಹಮ್ಮಿಕೊಂಡಿದ್ದ ಪಾದಯಾತ್ರೆ ಕೇವಲ ಮೂರು ಜಿಲ್ಲೆಗಳಿಗೆ- ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿಗಷ್ಟೇ ಸೀಮಿತವಾಗಿತ್ತು. ಹಾಗೆಯೇ ಮೂವರು ನಾಯಕರು- ವಿಜಯೇಂದ್ರ, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲುಗಳ ಮೆರವಣಿಗೆಯಾಗಿತ್ತು ಎನ್ನುವ ಅಪವಾದವೂ ಅಂಟಿಕೊಂಡಿದೆ.

ಅದಕ್ಕೆ ಪೂರಕವಾಗಿ ಈ ಮೂವರು ನಾಯಕರ ಮೆರವಣಿಗೆ ಮತ್ತು ಮೆರೆದಾಟ ಎಂತಹ ಅತಿರೇಕಕ್ಕೆ ಹೋಗಿತ್ತು ಮತ್ತು ಅದು ಜನರಲ್ಲಿ ಯಾವ ಪರಿ ಅಸಹ್ಯ ಹುಟ್ಟಿಸಿತ್ತು ಎನ್ನುವುದನ್ನು ಪಾದಯಾತ್ರೆಯನ್ನು ಖುದ್ದಾಗಿ ಕಂಡವರು ಹೇಳುತ್ತಿದ್ದಾರೆ. ಬಿಜೆಪಿಯವರಿಗೆ ಮೋದಿಯೇ ಮುಖ್ಯ, ಬಿಜೆಪಿಯ ಮುಖವೇ ಮೋದಿ. ಆದರೆ, ಪಾದಯಾತ್ರೆಯುದ್ದಕ್ಕೂ ಮೋದಿಯವರ ಒಂದೇ ಒಂದು ಫೋಟೋ, ಕಟೌಟ್ ಕೂಡ ಕಾಣಲಿಲ್ಲ. ಅದನ್ನು ಗಮನಿಸಿದ ಸಂಘಪರಿವಾರ ಪೋಷಿತ ಪತ್ರಿಕೆಯೊಂದು ‘ಮೋದಿಯನ್ನು ಮರೆತ ವಿಜಯೇಂದ್ರ’ ಎಂದು ವಿಡಿಯೋ ಮಾಡಿತು. ಅದು ಪ್ರಸಾರವೂ ಆಯಿತು. ಅದನ್ನು ನೋಡಿ ಕೆಂಡಾಮಂಡಲರಾದ ವಿಜಯೇಂದ್ರ, ಸಂಘಪರಿವಾರದ ಪತ್ರಿಕೆಯ ಪತ್ರಕರ್ತನಿಗೇ ನೇರವಾಗಿ ಫೋನಾಯಿಸಿ, ಧಮ್ಕಿ ಹಾಕಿ, ಯೂಟ್ಯೂಬ್ ನಿಂದ ಆ ವಿಡಿಯೋ ಡಿಲೀಟ್ ಮಾಡಿಸಿದ್ದರು.  

ಇದನ್ನೆಲ್ಲ ಗಮನಿಸಿದ ಬಿಜೆಪಿ ಮುಖಂಡ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಪಾದಯಾತ್ರೆ ಆರಂಭವಾಗುವ ಮುನ್ನವೇ ಮಾಯವಾಗಿದ್ದರು. ಇನ್ನು ರಾಜ್ಯದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್, ಪಾದಯಾತ್ರೆಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿ, ಪಾದಯಾತ್ರೆಯಿಂದ ಹೊರಗುಳಿದಿತ್ತು.

ಇವರೆಲ್ಲರನ್ನೂ ಬಿಟ್ಟು ಅದು ಭಾರತೀಯ ಜನತಾ ಪಕ್ಷದ ಪಾದಯಾತ್ರೆಯಾಗುವುದಾದರೂ ಹೇಗೆ? ಬಿಟ್ಟರೂ ಪರವಾಗಿಲ್ಲ, ಪಾದಯಾತ್ರೆಯ ನೇತೃತ್ವ ವಹಿಸಿದ್ದ ವಿಜಯೇಂದ್ರ, ಜನಾರ್ದನ ರೆಡ್ಡಿ ಮತ್ತು ಶ್ರೀರಾಮಲು- ಇವರಾದರೂ ಪಾದಯಾತ್ರೆಯ ಉದ್ದೇಶ ಈಡೇರಿಸಿದರೇ? ಈ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ. ಒಬ್ಬರು ಅಪ್ಪನ ಆಡಳಿತದಲ್ಲಿ ಡಿಫಾಕ್ಟೋ ಸಿಎಂ ಆಗಿ ಆಡಳಿತವನ್ನು ಅಧ್ವಾನ ಮಾಡಿದವರು; ಮತ್ತೊಬ್ಬರು ಶಾಸಕರನ್ನು ಖರೀದಿಸಿ ಸರ್ಕಾರ ರಚನೆಗೆ ನೆರವಾದ ಗಣಿ ಲೂಟಿಕೋರರು; ಮಗದೊಬ್ಬರು ಕೋವಿಡ್ ಹಗರಣದಲ್ಲಿ ಭಾಗಿಯಾದವರು. ಸಾರ್ವಜನಿಕ ವಲಯದಲ್ಲಿ ಕಳಂಕಿತ ವ್ಯಕ್ತಿಗಳು ಎಂದು ಹೆಸರಾದವರು.

ಕಳಂಕಿತ ವ್ಯಕ್ತಿಗಳು ಪಾದಯಾತ್ರೆ ಮಾಡಬಾರದು ಎಂಬ ನಿಯಮವೇನೂ ಇಲ್ಲ. ಪಾದಯಾತ್ರೆಯ ನೆಪದಲ್ಲಾದರೂ ಜನರೊಂದಿಗೆ ಬೆರೆತರೆ, ಕಷ್ಟಸುಖ ಕೇಳಿದರೆ ಎಂದರೆ- ಮೂವರೂ ಸಕಲ ಸೌಕರ್ಯವಿರುವ ಮೂರು ಅತ್ಯಾಧುನಿಕ ಕ್ಯಾರವಾನ್ ಗಳನ್ನು ಹೊಂದಿದ್ದರು. ಪಾದಯಾತ್ರೆಯುದ್ದಕ್ಕೂ ನೂರಾರು ವಾಹನಗಳು, ಜೈಕಾರ ಹಾಕುವ ಸಾವಿರಾರು ಕಾರ್ಯಕರ್ತರು, ಸ್ವಾಗತಿಸಲು ಆಳೆತ್ತರದ ಹಣ್ಣಿನ-ಹೂವಿನ ಹಾರಗಳು, ಆರತಿ ಎತ್ತುವ ಹೆಂಗಳೆಯರು, ನಗಾರಿ ಬಾರಿಸುವ ತಂಡದವರು ಸಿದ್ಧವಾಗಿದ್ದರು. ಅದನ್ನೆಲ್ಲ ವ್ಯವಸ್ಥೆ ಮಾಡಲು ಹರೀಶ್ ಪೂಂಜ ಮತ್ತು ಮಾನಪ್ಪ ವಜ್ಜಲ ಎಂಬ ಶಾಸಕರು ಉಸ್ತುವಾರಿ ಹೊತ್ತಿದ್ದರು.

ಇನ್ನು ಪಾದಯಾತ್ರೆಯನ್ನು ಇಡೀ ದೇಶಕ್ಕೆ ತಲುಪಿಸುವ ಸುದ್ದಿ ಮಾಧ್ಯಮಗಳು. ಇದಂತೂ ಹೊಸ ವಿವಾದವನ್ನೇ ಸೃಷ್ಟಿಸಿತು. ಪ್ರತಿ ಊರಲ್ಲೂ ಪಾದಯಾತ್ರೆಯನ್ನು ಎದುರುಗೊಳ್ಳುವ ನೂರಾರು ಪತ್ರಕರ್ತರು ಮತ್ತು ಛಾಯಾಗ್ರಾಹಕರು. ಅವರ ಮುಂದೆ ಅತ್ಯುತ್ಸಾಹದಿಂದ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯುವ ಮುಖಂಡರು. ಆ ಸುದ್ದಿಗಳನ್ನು ಪ್ರಸಾರ ಮಾಡಿ ಪ್ರಚಾರ ನೀಡುವ ಮಾರಿಕೊಂಡ ಮಾಧ್ಯಮಗಳು; ಮಾಡದಿದ್ದರೆ ಇಡೀ ಪುಟವನ್ನೇ ಖರೀದಿಸಿ, ತಮಗೆ ಬೇಕಾದಂತೆ ಬರೆಸಿ ಜಾಹೀರಾತಿನ ಮೂಲಕ ಸುದ್ದಿ ಹಂಚುವ ಹೊಸ ವಿಧಾನಗಳು ಚಾಲ್ತಿಗೆ ಬಂದವು. ಇನ್ನು ಬಿಜೆಪಿ ಐಟಿ ಸೆಲ್ ಅಂತೂ, ಪಾದಯಾತ್ರೆಯನ್ನು ಸೋಷಿಯಲ್ ಮೀಡಿಯಾಗಳಲ್ಲಿ ಮೆರವಣಿಗೆ ಮಾಡಿತ್ತು.

ಇದನ್ನು ಕಂಡ ಸಚಿವ ಶಿವರಾಜ್ ತಂಗಡಗಿ, ರಾಜ್ಯ ಬಿಜೆಪಿ ನಾಯಕರು ಹಮ್ಮಿಕೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆಯನ್ನು ಬಿಜೆಪಿಯ ‘ಪ್ರಾಯಶ್ಚಿತ್ತ ಯಾತ್ರೆ’ ಎಂದು ವ್ಯಂಗ್ಯವಾಡಿದರು. ವಿಜಯೇಂದ್ರ, ರೆಡ್ಡಿ ಮತ್ತು ರಾಮುಲು- ಮೂವರು ನಾಯಕರೂ ಈ ಹಿಂದೆ- ಕೆಜೆಪಿ, ಕಲ್ಯಾಣರಾಜ್ಯ ಪ್ರಗತಿ, ಬಿಎಸ್ಆರ್ ಪಕ್ಷಗಳನ್ನು ಕಟ್ಟಿ ಬಿಜೆಪಿಗೆ ದ್ರೋಹ ಬಗೆದವರು ಎಂದು ವ್ಯಂಗ್ಯವಾಡಿದರು. ಇನ್ನು ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಳ್ಳುವ ಭೀತಿಯಿಂದ ಹಾಗೂ ಡಿಕೆಯೊಂದಿಗಿನ ಹೊಂದಾಣಿಕೆ ಮುಚ್ಚಿಹಾಕಲು ವಿಜಯೇಂದ್ರ ಈ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಆರೋಪಿಸಿದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಾರುವುದಿಲ್ಲ ಎಂದು ಮಾರುವ ಮೋದಿ… ಈಗ ಇಸ್ರೋ ಸರದಿ?

ರಾಜಕಾರಣಿಗಳ ಆರೋಪಗಳು, ಟೀಕೆಗಳನ್ನು ರಾಜಕಾರಣದ ಭಾಗವಾಗಿ ನೋಡಿ ನಿರ್ಲಕ್ಷಿಸಬಹುದು. ಆದರೆ, ಬಳ್ಳಾರಿ ಚಲೋ ಪಾದಯಾತ್ರೆಯ ಕೇಂದ್ರದಲ್ಲಿ ಸಾಮಾನ್ಯ ಜನರಿದ್ದರೇ, ಜನಪರ ಕಾಳಜಿಯಿತ್ತೇ ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ.

ಏಕೆಂದರೆ, ದೇಶದಲ್ಲಿ ಇಲ್ಲಿಯವರೆಗೆ ಜರುಗಿದ ಪಾದಯಾತ್ರೆಗಳು ಜನರ ಸಮಸ್ಯೆಗಳನ್ನು ಹೊತ್ತು ನಡೆದ ಹೆಜ್ಜೆಗಳಾಗಿದ್ದವು, ರಾಜಕೀಯ ಇತಿಹಾಸದಲ್ಲಿ ದಾಖಲಾಗಿದ್ದವು. ಬಿಜೆಪಿಯ ಮೂವರು ಮುಖಂಡರ ನೇತೃತ್ವದಲ್ಲಿ ನಡೆದ ಪಾದಯಾತ್ರೆ, ಆ ನಾಯಕರ ಮೆರವಣಿಗೆ ಮತ್ತು ಮೆರೆದಾಟಕ್ಕೆ ಮಾತ್ರ ಸೀಮಿತವಾಗಿತ್ತು. ಜನರ ನಂಬಿಕೆಯನ್ನು ಹುಸಿಗೊಳಿಸಿತ್ತು. ಪಾದಯಾತ್ರೆಯ ಪಾವಿತ್ರ್ಯತೆಯನ್ನು ಮಣ್ಣುಗೂಡಿಸಿತ್ತು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಕಲಬುರಗಿಯಲ್ಲಿ ಎಸ್ಎಫ್ಐ 17ನೇ ರಾಜ್ಯ ಸಮ್ಮೇಳನ: ಬಸವರಾಜ ಎಸ್

ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು, ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸಲು, ಕೋಮು ಸೌಹಾರ್ದತೆಗಾಗಿ,...

ಉದ್ಯೋಗ ಮಾಹಿತಿ: SSLC, ITI ಪಾಸಾದವರಿಗೆ ಅವಕಾಶ; BHELನಲ್ಲಿ 660 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರಿ ವಲಯದ 'ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್' (BHEL) ಸಂಸ್ಥೆ ಬೃಹತ್...

ಬಾಗಲಕೋಟೆ | ಆಶಾ ಕಾರ್ಯಕರ್ತೆಯರಿಗೆ ರೂ.15000 ಮಾಸಿಕ ವೇತನ ನಿಗದಿಪಡಿಸಲು ಆಗ್ರಹ

ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿರುವ ಸಂದರ್ಭದಲ್ಲಿ, ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವ...