ಈ ದಿನ ಸಂಪಾದಕೀಯ | ದುಬಾರಿ ಚುನಾವಣೆಗಳು, ಸಾಮಾನ್ಯರ ಸ್ಪರ್ಧೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ

Date:

Advertisements
ದುಬಾರಿ ಚುನಾವಣೆಗಳು ಒಟ್ಟು ವ್ಯವಸ್ಥೆಯನ್ನು ಭ್ರಷ್ಟಗೊಳಿಸುತ್ತಲೇ ಸಾಗಿವೆ. ಇಂತಹ ವ್ಯವಸ್ಥೆಯಲ್ಲಿ ಸರಳರು, ಸಂಭಾವಿತರು, ಸಾಮಾನ್ಯರು ಸ್ಪರ್ಧಿಸಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ, ಪ್ರಜಾಪ್ರಭುತ್ವಕ್ಕೆ ಬೆಲೆ ಬರುವುದೇ? ಅಥವಾ ಕಾಸು ಖರ್ಚು ಮಾಡದೆ ಗೆದ್ದ ಸಸಿಕಾಂತ್‌ ಸೆಂಥಿಲ್‌ ತರಹದವರ ಗೆಲುವು ಭರವಸೆಯ ಬೆಳಕಿನಂತೆ ದಾರಿ ತೋರಬಲ್ಲದೇ?

ಚುನಾವಣೆಗಳು ಎಂದರೆ ಪ್ರಜಾಪ್ರಭುತ್ವದ ಹಬ್ಬ ಎನ್ನುತ್ತಾರೆ. ಆದರೆ, ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, 1.44 ಶತಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ, ಅವರೆಲ್ಲರಿಗೂ ಮತದಾನದ ಹಕ್ಕು ಇರುವುದರಿಂದ, ಚುನಾವಣೆಗಳನ್ನು ನಡೆಸುವುದು ಕಷ್ಟಕರ ಕೆಲಸ. ಈ ಮಹತ್ಕಾರ್ಯಕ್ಕೆ ಮಣಗಟ್ಟಲೆ ಹಣದ ಅಗತ್ಯವಿದೆ. ಅದರಲ್ಲೂ ಹೊಸಗಾಲದ ರಾಜಕಾರಣದಲ್ಲಿ ಚುನಾವಣೆ ನಡೆಸುವುದು ದುಬಾರಿ ವ್ಯವಹಾರವಾಗಿದೆ.

ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಕೋಟಿಗಟ್ಟಲೆ ಹಣ ಸುರಿದು ಚುನಾವಣೆ ನಡೆಸಬೇಕಾದ ಸ್ಥಿತಿ ಏರ್ಪಟ್ಟಿದೆ. ಸ್ಪರ್ಧಾಳುಗಳು ಕೂಡ ತಮ್ಮ ಆಸ್ತಿ ಘೋಷಣೆಯಲ್ಲಿ ನೂರಾರು ಕೋಟಿಗಳನ್ನು ಅಧಿಕೃತವಾಗಿಯೇ ಘೋಷಿಸಿಕೊಳ್ಳುತ್ತಿದ್ದಾರೆ. ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷದ ಅಭ್ಯರ್ಥಿ ಡಾ. ಪೆಮ್ಮಸಾನಿ, 5,785 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಈ ಚುನಾವಣೆಯಲ್ಲಿ ಇವರು ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದರು.

2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ತನ್ನ ಅಭ್ಯರ್ಥಿಗಳಿಗೆ ನೀಡಿದ ಹಣ ಸೇರಿದಂತೆ ಚುನಾವಣಾ ವೆಚ್ಚವಾಗಿ ಒಟ್ಟು 18.44 ಕೋಟಿ ರೂ. ಖರ್ಚು ಮಾಡಿದೆ. ಹಾಗೆಯೇ ರಾಜ್ಯ ಕಾಂಗ್ರೆಸ್ ಒಟ್ಟು 25.04 ಕೋಟಿ ರೂ. ವೆಚ್ಚ ಮಾಡಿದೆ. ಇದು ಕೇವಲ 28 ಅಭ್ಯರ್ಥಿಗಳಿಗೆ ಅಧಿಕೃತವಾಗಿ ಪಕ್ಷಗಳು ತಮ್ಮ ಅಭ್ಯರ್ಥಿಗಳಿಗೆ ಖರ್ಚು ಮಾಡಿದ ಮೊತ್ತ. ಇದಲ್ಲದೆ, ಪ್ರತಿ ಅಭ್ಯರ್ಥಿಯೂ ವೈಯಕ್ತಿಕವಾಗಿ ಖರ್ಚು ಮಾಡುವ ಅನಧಿಕೃತ ಹಣವೆಷ್ಟು ಎಂಬುದರ ಲೆಕ್ಕವನ್ನು ಯಾರು ಕೊಟ್ಟಿದ್ದಾರೆ? ಅದು ಊಹೆಗೂ ನಿಲುಕದ ವಿಚಾರ.

Advertisements

ಈ ಬಾರಿಯ ಲೋಕಸಭೆ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಎನಿಸಿಕೊಳ್ಳುವ ಸಾಧ್ಯತೆ ಇದೆ. ಅಂಕಿ-ಅಂಶಗಳ ಪ್ರಕಾರ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ದುಪ್ಪಟ್ಟು ವೆಚ್ಚವಾಗಿದೆ. 2019ರಲ್ಲಿ 60 ಸಾವಿರ ಕೋಟಿ ಖರ್ಚಾಗಿದ್ದರೆ, ಈ ಬಾರಿ 1.35 ಲಕ್ಷ ಕೋಟಿ ವೆಚ್ಚವಾಗಲಿದೆ ಎಂದು ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ (ಸಿಎಂಎಸ್) ಅಂದಾಜಿಸಿದೆ. 96.6 ಕೋಟಿ ಮತದಾರರನ್ನು ಹೊಂದಿರುವ ದೇಶದ ಪ್ರತಿಯೊಬ್ಬ ಮತದಾರರಿಗೆ ಸುಮಾರು 1,400 ರೂ. ವೆಚ್ಚವಾಗುತ್ತದೆಂದು ಲೆಕ್ಕಹಾಕಿದೆ. ಈ ಸಮಗ್ರ ವೆಚ್ಚವು ರಾಜಕೀಯ ಪಕ್ಷಗಳು, ಸಂಘಟನೆಗಳು, ಅಭ್ಯರ್ಥಿಗಳು, ಸರ್ಕಾರ ಮತ್ತು ಚುನಾವಣಾ ಆಯೋಗ ಸೇರಿದಂತೆ ಚುನಾವಣೆಗಳಿಗೆ ಸಂಬಂಧಿಸಿದ ಎಲ್ಲಾ ಖರ್ಚುಗಳನ್ನು ಪ್ರತ್ಯಕ್ಷ-ಪರೋಕ್ಷವಾಗಿ ಒಳಗೊಂಡಿರುತ್ತದೆ ಎನ್ನುವುದನ್ನು ಬಹಿರಂಗ ಪಡಿಸಿದೆ.

ಭಾರತೀಯ ಜನತಾ ಪಕ್ಷದ ಮುಖಂಡ ಮೋದಿಯವರು, ಈ ಬಾರಿ ಗೆದ್ದು ಮೂರನೇ ಬಾರಿಗೆ ಪ್ರಧಾನಿಯಾಗಲೇಬೇಕೆಂಬ ಹಠಕ್ಕೆ ಬಿದ್ದಿದ್ದರು. ಹಣಕಾಸಿನ ಥೈಲಿಗಳಂತಹ ಅದಾನಿ-ಅಂಬಾನಿಗಳನ್ನು ಎಡ-ಬಲಕ್ಕೆ ಇಟ್ಟುಕೊಂಡಿದ್ದರು. ಸಾಲದೆಂದು ಚುನಾವಣಾ ಬಾಂಡ್‌ಗಳ ಮೂಲಕ ಸಂಗ್ರಹಿಸಿದ ಸಾವಿರಾರು ಕೋಟಿ ರೂ.ಗಳನ್ನು ಸಿದ್ಧವಾಗಿಟ್ಟುಕೊಂಡಿದ್ದರು. ಈ ಸಂಪನ್ಮೂಲ ಬಳಸಿ 75 ದಿನಗಳಲ್ಲಿ 180 ರೋಡ್‌ ಶೋಗಳು, ರ್ಯಾಲಿಗಳು, ಪ್ರಚಾರ ಭಾಷಣಗಳನ್ನು ಮಾಡಿದ್ದರು. ಸುಮಾರು 80 ಸುದ್ದಿ ಸಂಸ್ಥೆಗಳಿಗೆ ಪ್ರಾಯೋಜಿತ ಸಂದರ್ಶನಗಳನ್ನು ಕೊಟ್ಟಿದ್ದರು. ಹೆಚ್ಚಿನ ಜನರನ್ನು ತಲುಪಲು ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮತದಾರರನ್ನು ಆಕರ್ಷಿಸಲು ಡಿಜಿಟಲ್ ಮೀಡಿಯಾಗಳ ಜಾಹೀರಾತುಗಳಿಗೆ ಶಕ್ತಿಮೀರಿ ಹಣ ಸುರಿದಿದ್ದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹತಾಶೆಯಿಂದ ಆಶಾವಾದದೆಡೆಗೆ ಕರೆದೊಯ್ಯುವ ಜನಾದೇಶ

ಹೀಗೆ ವ್ಯವಸ್ಥೆಯನ್ನೇ ಭ್ರಷ್ಟಗೊಳಿಸಿ ಅಧಿಕಾರಕ್ಕೆ ಬಂದವರು, ಭ್ರಷ್ಟಾಚಾರದಿಂದ ಮುಕ್ತರಾಗಿರುತ್ತಾರೆಯೇ ಎಂಬ ಪ್ರಶ್ನೆ ಎದುರಾಗುವುದು ಸಹಜ. ಅದಕ್ಕೆ ಪೂರಕವಾಗಿ, ಕಳೆದ ಹತ್ತುವರ್ಷಗಳಲ್ಲಿ ಅಭಿವೃದ್ಧಿಗಾಗಿ ಖರ್ಚು ಮಾಡಿದ ಹಣದ ಅಂಕಿ ಅಂಶಗಳನ್ನು ಗಮನಿಸಿದರೆ, ದೇಶದಲ್ಲಿ ಬಡವರೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿರಬೇಕಿತ್ತು. ಆದರೆ, ಚುನಾವಣಾ ಭಾಷಣಗಳಲ್ಲಿ ಮೋದಿಯವರೇ ʼನಮ್ಮ ಸರ್ಕಾರ 80 ಕೋಟಿ ಬಡವರಿಗೆ ಉಚಿತ ಅಕ್ಕಿ ವಿತರಿಸುತ್ತಿದೆʼ ಎಂದು ನಾಚಿಕೆ ಇಲ್ಲದೆ ಹೇಳುತ್ತಾರೆ. ಅಂದರೆ, ವಾಸ್ತವದಲ್ಲಿ ಅಭಿವೃದ್ಧಿ ಕಣ್ಣಿಗೆ ಕಾಣುತ್ತಿಲ್ಲ ಮತ್ತು ಜನಸಾಮಾನ್ಯರಿಗೆ ತಲುಪುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಸರ್ಕಾರದ ಅಭಿವೃದ್ಧಿ ಯೋಜನೆಗಳು, ಕಲ್ಯಾಣ ಕಾರ್ಯಕ್ರಮಗಳ ಕುರಿತು ಮಾತನಾಡುವ ರಾಜಕೀಯ ವಿಶ್ಲೇಷಕರು ಹೆಚ್ಚು ಹಣ ಒದಗಿಸುವುದರ ಬಗ್ಗೆ ಒತ್ತುಕೊಡುತ್ತಾರೆ. ಸುದ್ದಿ ಮಾಧ್ಯಮಗಳು ಕೂಡ ಅಂಕಿ-ಅಂಶಗಳನ್ನು ದೊಡ್ಡದು ಮಾಡಿ ಹೇಳುತ್ತವೆ. ಜನರ ನಡುವೆ ಅದೇ ದೊಡ್ಡ ಚರ್ಚೆಯಾಗುತ್ತದೆ. ಆದರೆ ಎತ್ತಿಟ್ಟ ಹಣ ಸಮರ್ಪಕವಾಗಿ ಬಳಕೆಯಾಗಿದ್ದರ ಬಗ್ಗೆ ಯಾರೂ ಗಮನ ಹರಿಸುವುದಿಲ್ಲ.

ಅಧಿಕಾರಿಗಳು, ಅಧಿಕಾರಸ್ಥರು ಮತ್ತು ಅರ್ಥಶಾಸ್ತ್ರಜ್ಞರು ಕೂಡ ಭ್ರಷ್ಟಾಚಾರವನ್ನು ವ್ಯವಸ್ಥೆಯ ಭಾಗವೆಂದು ಒಪ್ಪಿಕೊಂಡಂತಿದೆ. ಆದರೆ, ಭ್ರಷ್ಟಾಚಾರ ಎನ್ನುವುದು ಈ ಕ್ಷಣಕ್ಕೂ ರಾಜಕಾರಣಿಗಳಿಗೆ ಆರೋಪ-ಪ್ರತ್ಯಾರೋಪದ ಪ್ರಮುಖ ವಿಷಯವಾಗಿದೆ. ಅಷ್ಟೇ ಅಲ್ಲ, ಪ್ರತಿಯೊಬ್ಬ ರಾಜಕಾರಣಿಯೂ ತಾನು ಮಾತ್ರ ಸತ್ಯಸಂಧ, ಮಿಕ್ಕವರೆಲ್ಲ ಭ್ರಷ್ಟರು ಎಂದು ಬಿಂಬಿಸಿಕೊಳ್ಳುವುದು ಸಾಮಾನ್ಯವಾಗಿದೆ. ದುಬಾರಿ ಚುನಾವಣೆಗಳಿಂದಲೇ ಭ್ರಷ್ಟನಾದೆ ಎಂದು ಬಹಿರಂಗವಾಗಿ ಒಪ್ಪಿಕೊಂಡ ಉದಾಹರಣೆಯೇ ಇಲ್ಲವಾಗಿದೆ.

ದುಬಾರಿ ಚುನಾವಣೆಗಳು ಒಟ್ಟು ವ್ಯವಸ್ಥೆಯನ್ನು ಭ್ರಷ್ಟಗೊಳಿಸುತ್ತಲೇ ಸಾಗಿವೆ. ಇಂತಹ ವ್ಯವಸ್ಥೆಯಲ್ಲಿ ಸರಳರು, ಸಂಭಾವಿತರು, ಸಾಮಾನ್ಯರು ಸ್ಪರ್ಧಿಸಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ, ಪ್ರಜಾಪ್ರಭುತ್ವಕ್ಕೆ ಬೆಲೆ ಬರುವುದೇ? ಅಥವಾ ಕಾಸು ಖರ್ಚು ಮಾಡದೆ ಗೆದ್ದ ಸಸಿಕಾಂತ್‌ ಸೆಂಥಿಲ್‌ ತರಹದವರ ಗೆಲುವು ಭರವಸೆಯ ಬೆಳಕಿನಂತೆ ದಾರಿ ತೋರಬಲ್ಲದೇ?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X