ಗಲಭೆ ನಿಯಂತ್ರಣಕ್ಕೆ ತಾನು ಏನೆಲ್ಲ ಮಾಡಿದೆ ಎಂದು ಮಣಿಪುರದ ಮುಖ್ಯಮಂತ್ರಿ ಬೀರೇನ್ ಸಿಂಗ್ ಮಾಧ್ಯಮಗಳ ಎದುರು ಇದುವರೆಗೂ ಹೇಳುತ್ತ ಬರುತ್ತಿರುವುದು ಕೇವಲ ಕಾಗಕ್ಕ-ಗುಬ್ಬಕ್ಕನ ಕತೆಗಳಷ್ಟೇ. ಸ್ವತಃ ಪತ್ರಕರ್ತರೂ ಆಗಿದ್ದ ಬೀರೇನ್ ಸಿಂಗ್ ಅವರಿಗೆ, ಮಾಧ್ಯಮಗಳನ್ನು ನಿಭಾಯಿಸುವ ಕಲೆ ಬಹಳ ಚೆನ್ನಾಗಿಯೇ ಕರಗತವಾಗಿದೆ
ಈಶಾನ್ಯ ರಾಜ್ಯ ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ತೀವ್ರ ಹಿಂಸಾತ್ಮಕ ಸಂಘರ್ಷ ಆರಂಭವಾಗಿ ಭರ್ತಿ ಎರಡೂವರೆ ತಿಂಗಳಾಗಿದೆ. ನೂರಕ್ಕೂ ಹೆಚ್ಚು ಮಂದಿ ಹತ್ಯೆಗೀಡಾಗಿದ್ದಾರೆ. ಎರಡೂ ಸಮುದಾಯದ ಮಹಿಳೆಯರನ್ನು ಗುರಿಮಾಡಿಕೊಂಡು ಹೀನಾತಿಹೀನ ಕೃತ್ಯಗಳನ್ನು ಎಸಗಲಾಗಿದೆ. ಐವತ್ತಕ್ಕೂ ಹೆಚ್ಚು ಗ್ರಾಮಗಳನ್ನು ನೆಲಸಮಗೊಳಿಸಿ ನಾಶ ಮಾಡಲಾಗಿದೆ. ರದ್ದುಗೊಂಡಿದ್ದ ಇಂಟರ್ನೆಟ್ ವ್ಯವಸ್ಥೆಗೆ ಮತ್ತೆ ಚಾಲನೆ ನೀಡಿದ ನಂತರ ಈ ಎಲ್ಲ ದುಷ್ಕೃತ್ಯಗಳ ವಿವರಗಳು ಬಯಲಿಗೆ ಬರತೊಡಗಿವೆ.
ಮಹಿಳೆಯರಿಬ್ಬರನ್ನು ಬೆತ್ತಲೆ ಮೆರವಣಿಗೆ ಮಾಡಿದ ವಿಡಿಯೊ ವೈರಲ್ ಆಗುತ್ತಲೇ, ಈ ದೇಶದ ಶಾಸಕಾಂಗದ ಮುಖ್ಯಸ್ಥರಾದ ಪ್ರಧಾನಿ ಮತ್ತು ನ್ಯಾಯಾಂಗದ ಮುಖ್ಯಸ್ಥರಾದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ – ಕ್ರಮ ಕೈಗೊಳ್ಳುವ ಮಾತುಗಳನ್ನು ಕಾಕತಾಳೀಯವೋ ಎಂಬಂತೆ ಒಂದೇ ದಿನ ಆಡಿದ್ದಾರೆ. ಆದರೆ, ಈ ಇಬ್ಬರ ಮಾತುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ‘ದುಷ್ಕೃತ್ಯಗಳನ್ನು ಎಸಗಿದವರ ಮೇಲೆ ಕ್ರಮ’ ಎಂಬ ದನಿ ಮಾತ್ರ ಕೇಳಿಸುತ್ತದೆಯೇ ವಿನಾ, ವಿವೇಚನೆರಹಿತವಾಗಿ ವರ್ತಿಸಿ ಇಂಥದ್ದೊಂದು ಭಯಾನಕ ಗಲಭೆಗೆ ಆಸ್ಪದ ಮಾಡಿಕೊಟ್ಟವರ ಮೇಲೆ ಮತ್ತು ಗಲಭೆಯ ರಾಜಕೀಯ ಲಾಭ ಪಡೆಯಲು ತೆರೆಮರೆಯಲ್ಲಿ ಹೊಂಚು ಹೂಡಿ ಕಾಯುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವ ಯಾವುದೇ ಇರಾದೆ ಇದ್ದಂತಿಲ್ಲ.
ಈ ಸಂಪಾದಕೀಯ ಓದಿದ್ದೀರಾ?: ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸುವುದಕ್ಕೂ ಸಚಿವೆಯರಿಗೆ ಮೋದಿ ಅನುಮತಿ ಬೇಕೇ?
ಗಲಭೆ ನಿಯಂತ್ರಣಕ್ಕೆ ತಾನು ಏನೆಲ್ಲ ಮಾಡಿದೆ ಎಂದು ಮಣಿಪುರದ ಮುಖ್ಯಮಂತ್ರಿ ಎನ್ ಬೀರೇನ್ ಸಿಂಗ್ ಮಾಧ್ಯಮಗಳ ಎದುರು ಇದುವರೆಗೂ ಹೇಳುತ್ತ ಬರುತ್ತಿರುವುದು ಕೇವಲ ಕಾಗಕ್ಕ-ಗುಬ್ಬಕ್ಕನ ಕತೆಗಳಷ್ಟೇ. ಸ್ವತಃ ಪತ್ರಕರ್ತರೂ ಆಗಿದ್ದ ಬೀರೇನ್ ಸಿಂಗ್ ಅವರಿಗೆ, ಮಾಧ್ಯಮಗಳನ್ನು ನಿಭಾಯಿಸುವ ಕಲೆ ಬಹಳ ಚೆನ್ನಾಗಿಯೇ ಕರಗತವಾಗಿದೆ. ಹಾಗಾಗಿಯೇ, ಇಷ್ಟು ದೊಡ್ಡ ಗಲಭೆಯಾದ ಮೇಲೂ, ಸ್ಥಳೀಯ ಮಾಧ್ಯಮಗಳೇ ಆಗಲಿ, ರಾಷ್ಟ್ರಮಟ್ಟದ ಮಾಧ್ಯಮಗಳೇ ಆಗಲಿ, ಬೀರೇನ್ ಸಿಂಗ್ ಮೇಲೆ ಸಣ್ಣ ಆರೋಪವನ್ನೂ ಮಾಡಲು ಸಾಧ್ಯವಾಗಿಲ್ಲ. ಬದಲಿಗೆ, ಬಿಜೆಪಿ ಜೊತೆಗೆ ನಿಂತಿರುವ ಮಾಧ್ಯಮಗಳ, ‘ಮುಖ್ಯಮಂತ್ರಿ ಇದುವರೆಗೂ ಕೈಗೊಂಡ ಕ್ರಮಗಳೇನು?’ ಎಂಬ ತಲೆಬರಹದ ಸವಕಲು ಸುದ್ದಿಗಳೇ ಹೆಚ್ಚು ಚಾಲ್ತಿಯಲ್ಲಿವೆ.
ಇಂಟರ್ನೆಟ್ ಸ್ಥಗಿತಗೊಳಿಸಿ, ಗಲಭೆ ತಹಬಂದಿಗೆ ಬಂದಿತು ಎಂದು ಉಳಿದ ಭಾರತವನ್ನು ನಂಬಿಸಿದ್ದ ಸಂದರ್ಭದಲ್ಲೇ ಗೃಹ ಸಚಿವ ಅಮಿತ್ ಶಾ ಅವರ ಮೂರು ದಿನಗಳ ಮಣಿಪುರ ಭೇಟಿ ನಿಗದಿಯಾಗುತ್ತದೆ. ಅಲ್ಲಿ ಅವರು ಕುಕಿ ಮತ್ತು ಮೈತೇಯಿ ಸಮುದಾಯಗಳ ಕೆಲವು ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಾರೆ. ಆದರೆ, ಆ ಮಾತುಕತೆಯ ಬಹುಪಾಲು – ಎರಡೂ ಸಮುದಾಯದ ನಾಯಕರು, ಗಲಭೆಯಿಂದ ಸಂತ್ರಸ್ತರಾದವರಿಗೆ ಸಹಾಯ ಮಾಡುವಂತೆ, ಸಂಚಾರ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸುವಷ್ಟಕ್ಕೇ ಸೀಮಿತವಾಗುತ್ತದೆ. ಇದಾದ ನಂತರ, ಮುಖ್ಯಮಂತ್ರಿ ಬೀರೇನ್ ಸಿಂಗ್ ನವದೆಹಲಿ ತಲುಪಿ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾಗಿ, ಮರುದಿನ ಪ್ರಧಾನಿ ಮೋದಿಯವರು ಮಣಿಪುರ ಗಲಭೆ ಸಂಬಂಧ ಸಭೆ ನಡೆಸಿದ್ದಾಗಿ ಮಾಧ್ಯಮ ವರದಿಗಳಿವೆ. ಆದರೆ, ಈ ಯಾವುದೇ ಭೇಟಿಗಳು ಮತ್ತು ಸಭೆಗಳು ಗಲಭೆಯನ್ನು ತಣ್ಣಗಾಗಿಸುವ ಯಾವೊಂದು ಪರಿಹಾರವನ್ನೂ ಕಂಡುಕೊಳ್ಳಲಿಲ್ಲ ಎಂಬುದು ಗಮನಾರ್ಹ. ಇಷ್ಟೆಲ್ಲ ಆಗುವಾಗ ತಮಗೂ ಮಣಿಪುರಕ್ಕೂ ಸಂಬಂಧವೇ ಇಲ್ಲ ಎಂಬಂತಿದ್ದ ಪ್ರಧಾನಿಯವರ ಇತ್ತೀಚಿನ ಹೇಳಿಕೆಯು ಜನಸಾಮಾನ್ಯರಿಗೆ ಯಾವುದೋ ಸಿನಿಮಾ ಡೈಲಾಗಿನಂತೆ ಕೇಳಿಸಿದರೆ ಖಂಡಿತ ಅತಿಶಯವಿಲ್ಲ.
ಈ ಸಂಪಾದಕೀಯ ಓದಿದ್ದೀರಾ?: ಮಣಿಪುರದ ಪೈಶಾಚಿಕ ಕೃತ್ಯ- ಸುಪ್ರೀಮ್ ಉಸ್ತುವಾರಿಯಲಿ ನಡೆಯಲಿ ನ್ಯಾಯಾಂಗ ತನಿಖೆ
‘ಈ ಆದೇಶ ಲಭಿಸಿದ ನಾಲ್ಕು ವಾರದೊಳಗೆ ಮೈತೇಯಿ ಜನರಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ಕಲ್ಪಿಸಬೇಕು’ ಎಂದು ಮಣಿಪುರ ಹೈಕೋರ್ಟ್ ಮಾರ್ಚ್ ಅಂತ್ಯದಲ್ಲೇ ಆದೇಶ ಹೊರಡಿಸಿಬಿಟ್ಟಿತ್ತು. ಆದರೆ, ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲದ ಕಾರಣ, ಆದೇಶದಲ್ಲಿ ಸೂಕ್ತ ಬದಲಾವಣೆಗಳನ್ನು ಬಯಸಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆಯಾಗಿತ್ತು. ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವಿನ ಸಂಘರ್ಷದ ಇತಿಹಾಸದ ಅರಿವಿದ್ದೂ ಇಂಥದ್ದೊಂದು ಆದೇಶ ಇಷ್ಟು ಅನಾಯಾಸವಾಗಿ ಹೊರಬಿತ್ತೇ ಎಂಬುದು ಚರ್ಚೆಯ ಸಂಗತಿ. ಅಲ್ಲದೆ, ಗಲಭೆಗೆ ಮೂಲ ಕಾರಣವಾದ ಈ ಆದೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಇದುವರೆಗೂ ಒಂದೂ ಮಾತಾಡಿಲ್ಲ. ತನ್ನ ಆದೇಶವೊಂದು ಅನಿರೀಕ್ಷಿತವಾಗಿ ಹೀಗೆ ರಾಜ್ಯದ ಜನರ ಬದುಕಿಗೆ ಮಾರಕವಾದ ನಂತರವೂ ಹೈಕೋರ್ಟ್ ತುಟಿ ಬಿಚ್ಚಿಲ್ಲ. ಗಲಭೆಯನ್ನು ನಿಯಂತ್ರಿಸುವ ಬಹುದೊಡ್ಡ ಅಸ್ತ್ರ ಸ್ವತಃ ಹೈಕೋರ್ಟ್ ಬಳಿ ಇರಲಿಲ್ಲವೇ? ಇದೀಗ ತನ್ನ ವ್ಯಾಪ್ತಿ ಮೀರಿ ಒಕ್ಕೂಟ ಸರ್ಕಾರಕ್ಕೆ ಮತ್ತು ಮಣಿಪುರ ಸರ್ಕಾರಕ್ಕೆ ಗಂಭೀರ ಎಚ್ಚರಿಕೆ ಕೊಟ್ಟಿರುವ ಸುಪ್ರೀಂ ಕೋರ್ಟ್, ಗಲಭೆ ತಾರಕಕ್ಕೇರಿ ಮಣಿಪುರದ ಮಂದಿ ತನ್ನ ಬಳಿ ಓಡಿಬಂದಾಗಲೇ ಎಚ್ಚೆತ್ತುಕೊಳ್ಳಬಹುದಿತ್ತಲ್ಲವೇ? ದೇಶದ ಸರ್ವೋನ್ನತ ನ್ಯಾಯಾಲಯಕ್ಕೆ ಇಂಥದ್ದೊಂದು ದೂರದೃಷ್ಟಿ ಮತ್ತು ವಿವೇಚನೆ ಇದ್ದರೆ ಒಳ್ಳೆಯದಲ್ಲವೇ? ಕಾನೂನು ಸುವ್ಯವಸ್ಥೆ ವಿಷಯದಲ್ಲಿ ಮಧ್ಯಪ್ರವೇಶಿಸಲಾರೆ ಎಂದು ಸುಮ್ಮನುಳಿದಿದ್ದ ಸುಪ್ರೀಂ ಕೋರ್ಟ್ನ ನಿಲುವು ಆ ಸಮಯಕ್ಕೆ ಸರಿ ಇತ್ತು ನಿಜ; ಆದರೆ, ಆ ನಿಲುವೇ ಒಕ್ಕೂಟ ಮತ್ತು ಮಣಿಪುರ ಸರ್ಕಾರಗಳ ರಾಜಕೀಯ ಲಾಭದಾಹಕ್ಕೆ ನೀರೆರೆದದ್ದು ಕೂಡ ನಿಜ. ಈ ಹಿನ್ನೆಲೆಯಲ್ಲಿ, ಗಲಭೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರಗಳು ಮತ್ತು ನ್ಯಾಯಾಲಯಗಳು ತಮ್ಮ ಇದುವರೆಗಿನ ನಿಲುವು ಮತ್ತು ವರ್ತನೆಗಳಿಂದ ಆಚೆ ಬಂದರಷ್ಟೇ ಮಣಿಪುರದ ಸಮಸ್ಯೆ ಬಗೆಹರಿಯಲು ಸಾಧ್ಯ. ಇದು ಸಾಧ್ಯವಾಗಲಿ ಎಂಬುದು ಸಮಸ್ತ ಜನಸಾಮಾನ್ಯರ ಆಶಯ.
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ
I don’t think Supreme Court could have intervened as the situation is much more complex than we are given to understand. Other than the tribal – non tribal issues regarding SC status to the Meitis, there are inter state issues with Mizoram and with Nagaland where the Kuiki people ( also called Chin in Burma and Kuki or zo in Bangladesh and India. With increased militancy of Buddhists in Burma they have burnt the houses of Christian kuki or Chin. We must remember that Burma has 130 ethnicities. The Karen are also Christian and has an army fighting the state. I don’t know if the Chin state also has an army. The tribes in this region that is called the Golden triangle all have been poppy cultivators for centuries
The kuki in India also grow poppy. When the Burmese declared war on the chins they came as refugees to Mizoram. Modi- Shah wanted them repatriated to Burma but Mizoram refused
The mizos and kukis have blood ties
Now Mosha used the poppy cultivation as an excuse to wage war on kukis . This they did by arming the Hindu meities. There are just too many issues in the borderlands of our country and Supreme Court cannot just intervene without taking into consideration the international ramifications of it. After all Myanmar is nothing but a client state of China. West remember that China has been arming certain minorities in this region from before the China – Infia war. We in India don’t bother to study our borderlands and the ethnically distinct tribes. So we pay for our lethargy and our obsession with Pakistan border.