ವಿಶ್ವವಿದ್ಯಾಲಯಗಳಲ್ಲಿನ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಈ ವರ್ಷದ ಜೂನ್ 5ರಿಂದ 12ರವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ–ಪಿಜಿ) ನಡೆಸಲಾಗುತ್ತದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಗುರುವಾರ ತಿಳಿಸಿದೆ.
ಅರ್ಜಿ ಸಲ್ಲಿಕೆಗೆ ಈ ಮೊದಲು ಏಪ್ರಿಲ್ 19ರವರೆಗೆ ಗಡುವು ನೀಡಲಾಗಿತ್ತು. ಇದನ್ನು ಮೇ 5ರವರೆಗೂ ವಿಸ್ತರಿಸಲಾಗಿದೆ. ಪರೀಕ್ಷೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಎನ್‌ಟಿಎ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎನ್‌ಟಿಇ ಅಧಿಕೃತ ವೆಬ್‌ಸೈಟ್ cuet.nta.nic.inಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು. ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಬಯಸುವ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಳ್ಳಬಹುದು. 2022ರಲ್ಲಿ, 36 ಕೇಂದ್ರ ಮತ್ತು 6 ರಾಜ್ಯ ವಿವಿಗಳು ಸೇರಿ ಒಟ್ಟು 42 ವಿಶ್ವವಿದ್ಯಾಲಯಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದವು.
ಸಿಯುಇಟಿ-ಪಿಜಿ ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ಮಾಡಲಾಗುತ್ತದೆ. ಈ ಅರ್ಜಿಯನ್ನು ಭರ್ತಿ ಮಾಡಲು ಅಭ್ಯರ್ಥಿಗಳು ಫೋಟೋ, ಸಹಿ, ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ ಹಾಗೂ ಅರ್ಜಿ ಶುಲ್ಕವನ್ನು ಸಹ ಆನ್‌ಲೈನ್ ಮೂಲಕ ಪಾವತಿಸಬೇಕಾಗಿದೆ.
ಈ ಸುದ್ದಿ ಓದಿದ್ದೀರಾ?: ದ್ವಿತೀಯ ಪಿಯುಸಿ | ಫಲಿತಾಂಶ ಹೇಗೆ ಬರಲಿ ಸ್ವೀಕರಿಸುವ ಮನೋಭಾವವಿರಲಿ