ದ್ವಿತೀಯ ಪಿಯುಸಿ | ಫಲಿತಾಂಶ ಹೇಗೆ ಬರಲಿ ಸ್ವೀಕರಿಸುವ ಮನೋಭಾವವಿರಲಿ

Date:

ಶುಕ್ರವಾರ 11:00ಗಂಟೆಗೆ ಪ್ರಕಟವಾಗುತ್ತಿರುವ ದ್ವಿತೀಯ ಪಿಯುಸಿ ಫಲಿತಾಂಶ ನಿರೀಕ್ಷಿತ‌ವಾಗಿ ಬರಲಿ ಅಥವಾ ಬಾರದಿರಲಿ, ಎದೆಗುಂದಬೇಡಿ. ಪಿಯುಸಿಯಲ್ಲಿ ಪಾಸಾದರೂ, ಫೇಲಾದರೂ ಕಲಿಯಲು ಸಾವಿರಾರು ಕೋರ್ಸ್’ಗಳಿವೆ ಈ ಬಗ್ಗೆ ಗಮನ ಕೊಡಿ ಎಂದು ಶಿಕ್ಷಣ ಮಾರ್ಗದರ್ಶಕ ಉಮರ್ ಯು.ಹೆಚ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.

2022–23ನೇ ಶೈಕ್ಷಣಿಕ ಸಾಲಿನಲ್ಲಿ 7,27,387ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ರಾಜ್ಯದ 1,109 ಕೇಂದ್ರಗಳಲ್ಲಿ ಮಾರ್ಚ್ 9ರಿಂದ 29ರವರೆಗೆ ಪರೀಕ್ಷೆಗಳು ನಡೆದಿದ್ದವು. ವಿಧಾನಸಭಾ ಚುನಾವಣಾ ಪ್ರಕ್ರಿಯೆಗಳ ಮಧ್ಯೆಯೇ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ಉಪನ್ಯಾಸಕರನ್ನು ಬಳಸಿಕೊಂಡು ಮೌಲ್ಯಮಾಪನ ಕಾರ್ಯ ಸುಸೂತ್ರವಾಗಿ ಪೂರ್ಣಗೊಂಡಿದೆ.

ಪರೀಕ್ಷೆಗಳ ಫಲಿತಾಂಶ ಪ್ರಕಟಣೆಯಾದ ನಂತರ ನೊಂದ ವಿದ್ಯಾರ್ಥಿಗಳು ಆತ್ಮಹತ್ಯಗೆ ಚಿಂತಿಸುವುದು, ಪೋಷಕರ ಒತ್ತಾಯಕ್ಕೆ ತಮಗೆ ಸರಿ ಅನಿಸದ ವಿಷಯಗಳ ಅಧ್ಯಯನಕ್ಕೆ ಸೇರಿಕೊಳ್ಳುವುದು ಸಾಮಾನ್ಯವಾಗಿದೆ. ಹೀಗಾಗಿ, ಪಿಯುಸಿ ನಂತರ ಮುಂದಿರುವ ಬಹಳಷ್ಟು ಅವಕಾಶಗಳ ಬಗ್ಗೆ ಶಿಕ್ಷಣ ಮಾರ್ಗದರ್ಶಕ ಉಮರ್ ಅವರು ಸಲಹೆ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಶುಕ್ರವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

“ಪಾಸಾಗಲಿ ಅಥವಾ ಫೇಲಾಗಲಿ ಫಲಿತಾಂಶವನ್ನು ಧೈರ್ಯವಾಗಿ ಸ್ವೀಕರಿಸಿ. ಶಾಲೆಯ‌ ಪರೀಕ್ಷೆಗಳಿಗಿಂತ ಬದುಕಿನ ಪರೀಕ್ಷೆಯಲ್ಲಿ ಪಾಸಾಗೋದು ಮುಖ್ಯ ಎಂಬುದು ತಿಳಿದಿರಲಿ. ಫಲಿತಾಂಶ ಪ್ರಕಟವಾದ ನಂತರ ಪೋಷಕರಿಂದ ಮತ್ತಿತ್ತರರಿಂದ ಒತ್ತಡಗಳು ಹೆಚ್ಚಾಗಬಹುದು ಅದನ್ನು ಜಾಣತನದಿಂದ ಎದುರಿಸಿ. ಮೂರ್ಖರಂತೆ ಎಂದೂ ತಪ್ಪು ತೀರ್ಮಾನ ಕೈಗೊಳ್ಳಬೀಡಿ, ಅಡ್ಡದಾರಿ ಹಿಡಿಯಬೇಡಿ. ಕಡಿಮೆ ಕಲಿತು ಅಥವಾ ಪಿಯುಸಿಯಲ್ಲಿ ಫೇಲಾಗಿ ಸಾಧನೆ ಮತ್ತು ದುಡ್ಡು ಸಂಪಾದನೆ ಮಾಡಿರುವ ಅನೇಕ ಸಾಧಕರು ಸುತ್ತಮುತ್ತಲೇ ಇರುತ್ತಾರೆ. ಅವರನ್ನು ಗಮನಿಸಿ. ಪ್ರತಿಭೆ, ಕೌಶಲ ಎಲ್ಲರಲ್ಲೂ ಇರುತ್ತದೆ. ಆತ್ಮವಿಶ್ವಾಸ ಒಂದಿರಬೇಕು”ಎಂದು ಆತ್ಮಸ್ಥೈರ್ಯ ತುಂಬಿದ್ದಾರೆ.

ಇಂದು ಪ್ರಕಟವಾದ ಫಲಿತಾಂಶವನ್ನು ಸ್ವೀಕರಿಸಿಲು ನೀವು ತಯಾರಿಲ್ಲ ಎಂದಾದರೆ, ನಿಮ್ಮ ಉತ್ತರ ಪತ್ರಿಕೆ ತರಿಸಿಕೊಳ್ಳಿ. ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿ. ಇಲ್ಲವಾದಲ್ಲಿ ಪೂರ್ತಿ ಫಲಿತಾಂಶವನ್ನೆ ದಿಕ್ಕರಿಸಿ ಮರು ಪರೀಕ್ಷೆ ಬರೆಯಿರಿ.

“ಪಿಯುಸಿಯಲ್ಲಿ ಪಾಸಾದರೂ, ಫೇಲಾದರೂ ಕಲಿಯಲು ಸಾವಿರಾರು ಕೋರ್ಸ್’ಗಳಿವೆ. ಗೂಗಲ್ ಸರ್ಚ್ ಮಾಡಿ, ಯೂಟ್ಯೂಬ್’ಲ್ಲಿ ಹುಡುಕಿ. ಅಥವಾ ತಿಳಿದವರಲ್ಲಿ ಅವುಗಳ ಮಾಹಿತಿ ಪಡೆಯಿರಿ.ಒತ್ತಡ, ಆಕರ್ಷಣೆ, ಅವಾಸ್ತವ ಭ್ರಮೆಗೆ ಒಳಗಾಗಿ ಕೋರ್ಸ್’ಗಳ ಆಯ್ಕೆ ಮಾಡಬೇಡಿ. ವೃತ್ತಿ ಜೀವನದ ಬಗ್ಗೆ ಯೋಜನೆ ರೂಪಿಸಿ. ಅದಕ್ಕೆ ಪೂರಕವಾದ ಕೋರ್ಸ್’ಗಳನ್ನ ಆಯ್ಕೆ ಮಾಡಿಕೊಳ್ಳಿ. ಸಾಧ್ಯವಾದರೆ ಕರಿಯರ್ ಕೌನ್ಸಿಲರ್ ಮಾರ್ಗದರ್ಶನ ಪಡೆಯಿರಿ” ಎಂದು ಸಲಹೆ ನೀಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಇನ್ಮುಂದೆ ವರ್ಷಕ್ಕೆ ಮೂರು ಪರೀಕ್ಷೆ : ರಾಜ್ಯ ಸರ್ಕಾರದ ನಿರ್ಧಾರ

ಶೈಕ್ಷಣಿಕ ಪ್ರಗತಿ, ಅರ್ಥಪೂರ್ಣ ಕಲಿಕೆ, ಜ್ಞಾನ ಹೆಚ್ಚಿಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೆಲ...

ಎನ್‌ಇಪಿಯಿಂದ ಕನ್ನಡವನ್ನೇ ಮರೆತುಬಿಡುವ ಅಪಾಯ: ಸಚಿವ ಮಧು ಬಂಗಾರಪ್ಪ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೊಳಿಸುವ ಮೂಲಕ ಹಿಂದಿ ಭಾಷೆ...

ಕೇಂದ್ರ ಸರ್ಕಾರದ ‘ರಗಳೆ’ | ವಿದ್ಯಾರ್ಥಿ ವೇತನಕ್ಕೆ ‘ಕಡ್ಡಾಯ ಬಯೋಮೆಟ್ರಿಕ್’ ಆದೇಶ; ವಿದ್ಯಾರ್ಥಿಗಳು ಸುಸ್ತು!

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ್ದ ಲಕ್ಷಾಂತರ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹಾಗೂ ಸಂಸ್ಥೆಗಳ...

ಶಿವಮೊಗ್ಗ | ಬಿಸಿಯೂಟದ ಜೊತೆ ಮೊಟ್ಟೆ ವಿತರಣೆ; ಆಗಸ್ಟ್‌ 18ರಂದು ಚಾಲನೆ

ರಾಜ್ಯದಲ್ಲಿ ಒಂದರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಸಿಯೂಟದ ಜೊತೆಗೆ ಮೊಟ್ಟೆಯನ್ನು ನೀಡಲಾಗುತ್ತದೆ....