ಒಂದು ನಿಮಿಷದ ಓದು | ಮೈಸೂರು ವಿವಿಗೆ ವಿದೇಶಿ ವಿದ್ಯಾರ್ಥಿಗಳ ಕೊರತೆ

Date:

Advertisements

ಬೋಧಕ ಸಿಬ್ಬಂದಿ ಕೊರತೆ, ಆರ್ಥಿಕ ಸಂಕಷ್ಟದಿಂದಾಗಿ ವಿದೇಶಿಗರ ಕಲಿಕಾ ತಾಣವಾಗಿದ್ದ ಮೈಸೂರು ವಿಶ್ವವಿದ್ಯಾನಿಲಯದಲ್ಲೀಗ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ.

ಶೈಕ್ಷಣಿಕ ವರ್ಷ 2022-23ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಕ್ಯಾಂಪಸ್‌ಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 346 ಮಾತ್ರ. ಈ ಪೈಕಿ, 128 ವಿದ್ಯಾರ್ಥಿಗಳು ಅಫ್ಘಾನಿಸ್ತಾನದವರಾಗಿದ್ದಾರೆ ಎಂದು ವಿಶ್ವವಿದ್ಯಾಲಯದ ನಿರ್ದೇಶಕ ಜಿಆರ್ ಜನಾರ್ದನ್ ಹೇಳಿಕೆ ನೀಡಿದ್ದಾರೆ.  

2008-2009ರ ಶೈಕ್ಷಣಿಕ ವರ್ಷದಲ್ಲಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ 62 ದೇಶಗಳ ಮೂರು ಸಾವಿರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದರು. ಇತ್ತೀಚೆಗೆ, ವಿದೇಶಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕೆಳಮುಖವಾಗಿದೆ. ಈ ಬಾರಿ 28 ದೇಶಗಳ ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದಾರೆ. ಕಳೆದೆರಡು ವರ್ಷ ಉಲ್ಬಣಗೊಂಡಿದ್ದ ಕೋವಿಡ್‌ನ ಪ್ರಭಾವ, ಬೋಧಕ ಸಿಬ್ಬಂದಿ ಕೊರತೆ, ನಾನಾ ಕಾರಣಗಳಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನಲಾಗಿದೆ.

Advertisements

ಅಫ್ಘಾನಿಸ್ತಾನ, ಕೀನ್ಯಾ, ನೇಪಾಳ, ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಅಮೆರಿಕ ಹಾಗೂ ರಷ್ಯಾ ಸೇರಿದಂತೆ ಹಲವು ದೇಶಗಳ ವಿದ್ಯಾರ್ಥಿಗಳು ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾಣಸಿಗುತ್ತಿದ್ದರು. ಪಿಎಚ್‌ಡಿ ಪದವಿ ಪಡೆಯಲು ಅಧಿಕ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುತ್ತಿದ್ದರು. ಆದರೆ, ಈಗ ಮಾರ್ಗದರ್ಶಕರ ಹುದ್ದೆಯೇ ಖಾಲಿ ಇದೆ. ಕನಿಷ್ಠ 400 ಬೋಧನಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಅಗತ್ಯ ವಿಶ್ವವಿದ್ಯಾಲಯಕ್ಕಿದೆ. ಇಷ್ಟು ಸಿಬ್ಬಂದಿಗಳನ್ನು ನೇಮಿಸಿಕೊಂಡರೆ, ಸುಮಾರು 800 ವಿದೇಶಿ ವಿದ್ಯಾರ್ಥಿಗಳು ಪಿಎಚ್‌ಡಿ ಅಧ್ಯಯನ ಮಾಡಬಹುದಾಗಿದೆ ಎನ್ನಲಾಗಿದೆ.

ವಿಶ್ವವಿದ್ಯಾನಿಲಯದಲ್ಲಿ ಬೋಧಕ ಅಧ್ಯಾಪಕರನ್ನು ಕೊನೆಯ ಬಾರಿಗೆ 2007ರಲ್ಲಿ ನೇಮಿಸಲಾಯಿತು. ಈಗ, 665 ಮಂಜೂರಾದ ಹುದ್ದೆಗಳಲ್ಲಿ, 402 ಖಾಲಿ ಇವೆ. ಹೀಗಿರುವಾಗ ಹೊರ ದೇಶಗಳ ವಿದ್ಯಾರ್ಥಿಗಳು ಮೈಸೂರು ವಿವಿಗೆ ಏಕೆ ಸೇರುತ್ತಾರೆ ಎಂದು ಪ್ರಶ್ನಿಸಿದರು.

ಈ ಸುದ್ದಿ ಓದಿದ್ದೀರಾ?: ಐಐಟಿ ಜೆಇಇ ಪರೀಕ್ಷೆ: ಒಸಿಐ ಮತ್ತು ಪಿಐಒಗಳು ವಿದೇಶಿಗರಲ್ಲ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ‘ ನಿರಂತರ ಸಹಜ ರಂಗ – 2025 ‘ಉದ್ಘಾಟಿಸಿದ ಹಿರಿಯ ರಂಗಕರ್ಮಿ ಸಿ ಬಸವಲಿಂಗಯ್ಯ

ಮೈಸೂರಿನ ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ಭಾನುವಾರ ಸಂಜೆ ' ನಿರಂತರ ಸಹಜ...

ಮೈಸೂರು | ಆಗಸ್ಟ್. 24 ರಂದು ಬನವಾಸಿ ತೋಟದಲ್ಲಿ ‘ ಪ್ರೂನಿಂಗ್ – ಗ್ರಾಫ್ಟಿಂಗ್ ‘ ಕುರಿತಾದ ಒಂದು ದಿನದ ಕಾರ್ಯಗಾರ

ಮೈಸೂರಿನ ಪತ್ರಕರ್ತರ ಭವನದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿದ ಮಹಾದೇವ ಕೋಟೆಯವರು ' ಉಳುಮೆ...

ಸೆ. 1ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮೈಸೂರಿಗೆ ಭೇಟಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 1ರಂದು ಮೈಸೂರಿಗೆ ಭೇಟಿ ನೀಡಲಿದ್ದಾರೆ....

Download Eedina App Android / iOS

X