ಒಂದು ನಿಮಿಷದ ಓದು | ಮೈಸೂರು ವಿವಿಗೆ ವಿದೇಶಿ ವಿದ್ಯಾರ್ಥಿಗಳ ಕೊರತೆ

Date:

ಬೋಧಕ ಸಿಬ್ಬಂದಿ ಕೊರತೆ, ಆರ್ಥಿಕ ಸಂಕಷ್ಟದಿಂದಾಗಿ ವಿದೇಶಿಗರ ಕಲಿಕಾ ತಾಣವಾಗಿದ್ದ ಮೈಸೂರು ವಿಶ್ವವಿದ್ಯಾನಿಲಯದಲ್ಲೀಗ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ.

ಶೈಕ್ಷಣಿಕ ವರ್ಷ 2022-23ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಕ್ಯಾಂಪಸ್‌ಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 346 ಮಾತ್ರ. ಈ ಪೈಕಿ, 128 ವಿದ್ಯಾರ್ಥಿಗಳು ಅಫ್ಘಾನಿಸ್ತಾನದವರಾಗಿದ್ದಾರೆ ಎಂದು ವಿಶ್ವವಿದ್ಯಾಲಯದ ನಿರ್ದೇಶಕ ಜಿಆರ್ ಜನಾರ್ದನ್ ಹೇಳಿಕೆ ನೀಡಿದ್ದಾರೆ.  

2008-2009ರ ಶೈಕ್ಷಣಿಕ ವರ್ಷದಲ್ಲಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ 62 ದೇಶಗಳ ಮೂರು ಸಾವಿರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದರು. ಇತ್ತೀಚೆಗೆ, ವಿದೇಶಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕೆಳಮುಖವಾಗಿದೆ. ಈ ಬಾರಿ 28 ದೇಶಗಳ ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದಾರೆ. ಕಳೆದೆರಡು ವರ್ಷ ಉಲ್ಬಣಗೊಂಡಿದ್ದ ಕೋವಿಡ್‌ನ ಪ್ರಭಾವ, ಬೋಧಕ ಸಿಬ್ಬಂದಿ ಕೊರತೆ, ನಾನಾ ಕಾರಣಗಳಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನಲಾಗಿದೆ.

ಅಫ್ಘಾನಿಸ್ತಾನ, ಕೀನ್ಯಾ, ನೇಪಾಳ, ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಅಮೆರಿಕ ಹಾಗೂ ರಷ್ಯಾ ಸೇರಿದಂತೆ ಹಲವು ದೇಶಗಳ ವಿದ್ಯಾರ್ಥಿಗಳು ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾಣಸಿಗುತ್ತಿದ್ದರು. ಪಿಎಚ್‌ಡಿ ಪದವಿ ಪಡೆಯಲು ಅಧಿಕ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುತ್ತಿದ್ದರು. ಆದರೆ, ಈಗ ಮಾರ್ಗದರ್ಶಕರ ಹುದ್ದೆಯೇ ಖಾಲಿ ಇದೆ. ಕನಿಷ್ಠ 400 ಬೋಧನಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಅಗತ್ಯ ವಿಶ್ವವಿದ್ಯಾಲಯಕ್ಕಿದೆ. ಇಷ್ಟು ಸಿಬ್ಬಂದಿಗಳನ್ನು ನೇಮಿಸಿಕೊಂಡರೆ, ಸುಮಾರು 800 ವಿದೇಶಿ ವಿದ್ಯಾರ್ಥಿಗಳು ಪಿಎಚ್‌ಡಿ ಅಧ್ಯಯನ ಮಾಡಬಹುದಾಗಿದೆ ಎನ್ನಲಾಗಿದೆ.

ವಿಶ್ವವಿದ್ಯಾನಿಲಯದಲ್ಲಿ ಬೋಧಕ ಅಧ್ಯಾಪಕರನ್ನು ಕೊನೆಯ ಬಾರಿಗೆ 2007ರಲ್ಲಿ ನೇಮಿಸಲಾಯಿತು. ಈಗ, 665 ಮಂಜೂರಾದ ಹುದ್ದೆಗಳಲ್ಲಿ, 402 ಖಾಲಿ ಇವೆ. ಹೀಗಿರುವಾಗ ಹೊರ ದೇಶಗಳ ವಿದ್ಯಾರ್ಥಿಗಳು ಮೈಸೂರು ವಿವಿಗೆ ಏಕೆ ಸೇರುತ್ತಾರೆ ಎಂದು ಪ್ರಶ್ನಿಸಿದರು.

ಈ ಸುದ್ದಿ ಓದಿದ್ದೀರಾ?: ಐಐಟಿ ಜೆಇಇ ಪರೀಕ್ಷೆ: ಒಸಿಐ ಮತ್ತು ಪಿಐಒಗಳು ವಿದೇಶಿಗರಲ್ಲ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ಪಾಲಿಕೆ | ಬಿಜೆಪಿ-ಜೆಡಿಎಸ್‌ ಮೈತ್ರಿ ಇದ್ದರೂ ಕಾಂಗ್ರೆಸ್‌ ವಶವಾದ ಸ್ಥಾಯಿ ಸಮಿತಿ

ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿವೆ. ಪದೇ...

ಸಿದ್ದರಾಮಯ್ಯ ಹತ್ಯೆ ಪ್ರಚೋದಿಸುವ ಹೇಳಿಕೆ; ಅಶ್ವತ್ಥನಾರಾಯಣ ವಿರುದ್ಧ ಎಫ್‌ಐಆರ್‌

ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕ್ಬೇಕು ಎಂದು ಹೇಳಿಕೆ ನೀಡಿದ್ದ...

ಮೈಸೂರು | ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ʼವೇಶ್ಯಾವಾಟಿಕೆಯ ಕಥೆ-ವ್ಯಥೆ’ ಕೃತಿ ಆಯ್ಕೆ

ಲೇಖಕಿ, ಸಂಶೋಧಕಿ ಬಿ.ಎಂ ರೋಹಿಣಿ ಅವರ  'ವೇಶ್ಯಾವಾಟಿಕೆಯ ಕಥೆ-ವ್ಯಥೆ' ಸಂಶೋಧನಾ ಕೃತಿಯನ್ನು...

ಮೈಸೂರು | ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕರು ದುರ್ಮರಣ

ಸ್ನೇಹಿತರ ಜೊತೆಗೆ ತಲಕಾಡಿಗೆ ತೆರಳಿದ್ದಂತ ಇಬ್ಬರು ಬಾಲಕರು ಕಾವೇರಿ ನದಿ ನೀರಿನಲ್ಲಿ...