ಬೀದರ್‌ | ಅಣ್ಣಾಭಾವು ಸಾಠೆ ಬದುಕು ಸಮಾಜಕ್ಕೆ ಆದರ್ಶ

Date:

ʼಸಮಾಜದ ಶೋಷಿತ, ವಂಚಿತ ಹಾಗೂ ದುಡಿಯುವ ವರ್ಗದ ಧ್ವನಿಯಾಗಿ ಸಾಹಿತ್ಯ, ಕಲೆ ಮತ್ತು ಸಾಮಾಜಿಕ ಚಳವಳಿಗಳ ಮೂಲಕ ಜಗತ್ತಿನಾದ್ಯಂತ ಜಾಗೃತಿ ಮೂಡಿಸಿದವರು ಲೋಕಶಾಹಿರ್ ಅಣ್ಣಾಭಾವು ಸಾಠೆʼ ಎಂದು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.

- Advertisement -

‌ಬೀದರ್‌ ನಗರದ ಸರ್ಕಾರಿ ನೌಕರರ ಭವನದಲ್ಲಿ ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತಿಕ ಲೋಕಮಂಚ್ ಟ್ರಸ್ಟ್ ಬೀದರ್, ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂಘ, ಬೀದರ್ ಹಾಗೂ ಮಾದರ ಚನ್ನಯ್ಯ ಮಾದಿಗ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಹಕಾರಿ ನಿಯಮಿತ, ಬೀದರ್ ಇವರ ಸಹಯೋಗದಲ್ಲಿ ಭಾನುವಾರ ನಡೆದ ಅಣ್ಣಾಭಾವು ಸಾಠೆಯವರ 106ನೇ ಜಯಂತೋತ್ಸವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

​ಮೋದಿ-ಶಾ ಅಸಲಿ ಮುಖ ಅನಾವರಣ: ಅಂಕಿತಾ ಭಂಡಾರಿ ಕೊಲೆ...

ವೇದಿಕೆಗಳಲ್ಲಿ ‘ಬೇಟಿ ಬಚಾವೋ’ ಎಂದು ಭಾಷಣ ಬಿಗಿಯುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು, ಹಾಡಹಗಲೇ ಕೊಲೆಯಾದ ಬಡ ಯುವತಿಯ ಸಾವಿನ ಸುತ್ತ ಕಳಂಕದ ಹುತ್ತ ಹೊತ್ತಿರುವ...

ನಿದ್ರೆಯಲ್ಲೂ ಮಿದುಳಿಗೆ ಮಸಾಜ್‌! ಮಾತ್ರೆಯಿಲ್ಲದೆ ಗಾಢ ನಿದ್ರೆ ತರಬಲ್ಲದೇ...

ಒತ್ತಡದ ಬದುಕಿನಲ್ಲಿ ನೆಮ್ಮದಿಯ ನಿದ್ರೆ ಎನ್ನುವುದೇ ಹಲವರ ಕನಸು. ನಿದ್ರೆಗಾಗಿ ಮಾತ್ರೆಗಳ ಮೊರೆ ಹೋಗುವವರ ಸಂಖ್ಯೆಯೂ ಕಡಿಮೆಯಿಲ್ಲ. ಇಂತಹವರ ಸಮಸ್ಯೆಗೆ ಪರ್ಯಾಯವೊಂದು ಸಿಕ್ಕರೆ ಹೇಗಿರಬಹುದು? ಮೆದುಳಿಗೆ ಅಲ್ಟ್ರಾಸೌಂಡ್‌ ತರಂಗಗಳ ಮೂಲಕ ಪ್ರಚೋದನೆ ನೀಡಿ...

ಸಾರ್ವಜನಿಕ ಸಭ್ಯತೆ ಮತ್ತು ಹೆಣ್ಣುಮಕ್ಕಳು ಮಾಡಿಕೊಳ್ಳುವ ಲೆಕ್ಕಾಚಾರಗಳು

ಫೀಲ್ಡ್‌ಗೆ ಇಳಿದು ಕೆಲಸ ಮಾಡುವಾಗ ಮಹಿಳಾ ಪತ್ರಕರ್ತೆಯರು ಎದುರಿಸುವ ರಿಸ್ಕ್ ಮತ್ತು ವರದಿ ಮಾಡುವ ಜವಾಬ್ದಾರಿ- ಇವೆರಡನ್ನೂ ನಿಭಾಯಿಸಬೇಕಾದಾಗ ಮಾಡಿಕೊಳ್ಳುವ ಲೆಕ್ಕಾಚಾರಗಳ ಬಗೆಗಿನ ಒಂದು ಸ್ವಾನುಭವ. ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಹೆಣ್ಣುಮಕ್ಕಳ ಮೇಲೆ...

“ಲೋಕಶಾಹಿರ್ ಅಣ್ಣಾಭಾವು ಸಾಠೆ ಅವರು ತಮ್ಮ ಶ್ರೇಷ್ಠ ಸಾಹಿತ್ಯ ಮತ್ತು ಕ್ರಾಂತಿಕಾರಿ ವಿಚಾರಗಳಿಂದ ದೇಶ-ವಿದೇಶಗಳಲ್ಲಿ ಅಪಾರ ಕೀರ್ತಿ ಗಳಿಸಿದ್ದಾರೆ. ಸಾಠೆಯವರ ಸ್ವಾಭಿಮಾನ, ಹೋರಾಟ ಮತ್ತು ಬದುಕಿನ ಸಂಘರ್ಷ ನಮಗೆಲ್ಲರಿಗೂ ಆದರ್ಶವಾಗಿದೆ” ಎಂದರು.

ಹಿರಿಯ ಸಾಹಿತಿ ರಜೀಯಾ ಬಳಬಟ್ಟಿ ಉಪನ್ಯಾಸ ನೀಡಿದ ಅವರು,”ಸಮಾಜದಲ್ಲಿ ಜಾತೀಯತೆ ಎಲ್ಲಿಯವರೆಗೆ ಜೀವಂತವಾಗಿರುತ್ತದೆಯೋ, ಅಲ್ಲಿಯವರೆಗೆ ಶೋಷಣೆಯೂ ಜೀವಂತವಾಗಿರುತ್ತದೆ. ಜಾತಿ, ವರ್ಗ, ಬಡತನ ಹಾಗೂ ಅಸಮಾನತೆಯ ಕಾರಣಕ್ಕೆ ಯಾವುದೇ ಮನುಷ್ಯನ ಗೌರವಕ್ಕೆ ಧಕ್ಕೆಯಾಗಬಾರದು ಎಂಬುದು ಅಣ್ಣಾಭಾವು ಸಾಠೆಯವರ ಆಶಯವಾಗಿತ್ತು. ಮಾನವ ಸಮಾನತೆಯನ್ನು ಪ್ರತಿಪಾದಿಸಿದ ಅವರು, ಶ್ರಮಕ್ಕೆ ಗೌರವ, ದುಡಿಯುವವರಿಗೆ ನ್ಯಾಯ, ಮಹಿಳೆಯರಿಗೆ ಸಮಾನ ಅವಕಾಶ ಹಾಗೂ ಪ್ರತಿಯೊಬ್ಬರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕು ದೊರೆಯಬೇಕು ಎಂದು ಬದುಕಿನುದ್ದಕ್ಕೂ ಹೋರಾಟ ನಡೆಸಿದರು” ಎಂದು ತಿಳಿಸಿದರು.

ಪ್ರಾಚಾರ್ಯ ಡಾ.ಜೈಯಕುಮಾರ ಸಿಂಧೆ ಮಾತನಾಡಿ, “ಇಂದಿನ ಕಾಲದಲ್ಲಿ ಅಣ್ಣಾಭಾವು ಸಾಠೆಯವರ ಸಾಹಿತ್ಯವನ್ನು ಓದುವುದು ತುಂಬಾ ಅಗತ್ಯ. ವಿಜ್ಞಾನ-ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಸಮಾಜದಲ್ಲಿ ಜಾತಿ-ವರ್ಗ ಅಸಮಾನತೆ, ಬಡತನ, ನಿರುದ್ಯೋಗ ಮತ್ತು ಅನ್ಯಾಯಗಳು ಉಳಿದಿದ್ದರೆ ನಿಜವಾದ ಅಭಿವೃದ್ಧಿ ಸಾಧ್ಯವಿಲ್ಲ. ಪ್ರಸ್ತುತ ಸಮಾಜಕ್ಕೆ ಸಾಠೆಯವರ ಸಾಹಿತ್ಯ ನಮಗೆ ಸಮಾನತೆ, ಸಹೋದರತ್ವ, ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯದ ದಾರಿ ತೋರಿಸುತ್ತದೆ. ಪ್ರಜ್ಞಾವಂತರು ಮೌನಮುರಿದು ನ್ಯಾಯಕ್ಕಾಗಿ ಹೋರಾಡುವುದು ಅಗತ್ಯವಿದೆ” ಎಂದರು.

DSC 2478

ಸಾಹಿತ್ಯ ರತ್ನ ಅಣ್ಣಾ ಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತಿಕ ಲೋಕಲ್ ಮಂಚ್ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಮನೋಹರ ಅಧ್ಯಕ್ಷತೆ ವಹಿಸಿದ್ದರು. ಬೀದರ್ ಬ್ಲಾಕ್‌‌ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಕಾಂತ ಹಿಪ್ಪಳಗಾಂವ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕಲೆ, ಸಾಹಿತ್ಯ, ಸಮಾಜ, ಶಿಕ್ಷಣ, ಮಾಧ್ಯಮ, ವೈಜ್ಞಾನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಗಣ್ಯರಿಗೆ ಗೌರವಿಸಲಾಯಿತು.

ಇದನ್ನೂ ಓದಿ : ಬೀದರ್‌ | ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ರಾಜ್ಯಮಟ್ಟದ ʼಬಾಪೂಜಿ ಪ್ರಬಂಧ ಸ್ಪರ್ಧೆʼ

ಕಾರ್ಯಕ್ರಮದಲ್ಲಿ ಪ್ರಮುಖರಾದ ಮರಾಠ ಸಮಾಜದ ಪೂಜ್ಯ ದಾದಾ ಮಹಾರಾಜ ನಗರಕರ್ ಸೇರಿದಂತೆ ಪ್ರಮುಖರಾದ ನಾರಾಯಣ ಗಣೇಶ, ಶಿವಶರಣಪ್ಪ ಹುಗ್ಗೆ ಪಾಟೀಲ, ಮಾಣಿಕ ನೇಳಗಿ, ಡಾ.ದೇವಿದಾಸ ತುಮಕುಂಟೆ, ಸುಮಂತ್‌ ಕಟ್ಟಿಮನಿ, ಡಾ.ಜೈಭಾರತ್‌ ಮಂಗೇಶಕರ್‌, ಪ್ರವೀಣ ಮಿರಗಂಜಕರ್‌, ಡಾ.ಮನೋಹರ ಮೇತ್ರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಸವಕಲ್ಯಾಣ | ಫುಲೆ, ಶಾಹು, ಅಂಬೇಡ್ಕರ್ ವಿಚಾರ ಮಂಚ್ ಉದ್ಘಾಟನೆ

ಮಹಾತ್ಮ ಜ್ಯೋತಿಬಾ ಫುಲೆ, ರಾಜರ್ಷಿ ಶಾಹು ಮಹಾರಾಜ್ ಹಾಗೂ ಡಾ. ಬಿ.ಆರ್....

ಬೀದರ್‌ | ಶೋಷಿತ ಸಮಾಜದ ಏಳಿಗೆಗೆ ಬದ್ಧ: ಈಶ್ವರ ಖಂಡ್ರೆ

ಶೋಷಿತ ಸಮಾಜ, ಅದರಲ್ಲೂ ಮಾದಿಗ ಸಮಾಜದ ಏಳಿಗೆಗಾಗಿ ತಾವು ಸದಾ ಬದ್ಧರಾಗಿದ್ದು,...

ಬೀದರ್‌ | ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಡಾ. ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು...

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಸಿಜೆಪಿ ಪ್ರತಿಭಟನೆ: ಗುಂಪು ಸೇರದಂತೆ ದೆಹಲಿ ಪೊಲೀಸರ ಎಚ್ಚರಿಕೆ

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧ 'ಕಾಕ್‌ರೋಚ್ ಜನತಾ...