ಪಾಕ್ ಜೊತೆ ಮಾತುಕತೆಗೆ ಇರಾನ್ ನಕಾರ: ಕದನ ವಿರಾಮಕ್ಕೆ ಅನಿಶ್ಚಿತತೆ; ತೈಲ ಬೆಲೆ ಭಾರಿ ಏರಿಕೆ

Date:

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಹಾರ್ಮುಜ್ ಜಲಸಂಧಿ ಮತ್ತು ಓಮನ್ ಸಮುದ್ರದಲ್ಲಿ ನಡೆದ ಮುಖಾಮುಖಿ ದಾಳಿಗಳು ಮತ್ತು ಹಡಗು ವಶಪಡಿಸುವ ಘಟನೆಗಳು ಆತಂಕವನ್ನು ನಿರ್ಮಿಸಿವೆ. ಅಮೆರಿಕದ ಯೋಧರು ಇರಾನ್‌ನ ಸರಕು ಹಡಗನ್ನು ವಶಕ್ಕೆ ಪಡೆದಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಅಮೆರಿಕದ ಯುದ್ಧನೌಕೆಗಳ ಮೇಲೆ ಡ್ರೋನ್ ದಾಳಿ ನಡೆಸಿ, ಅವರು ಹಿಂದೆ ಸರಿಯುವಂತೆ ಮಾಡಿದೆ ಎಂದು ಹೇಳಿಕೊಂಡಿದೆ. ಇದು ಬುಧವಾರ ಅಂತ್ಯಗೊಳ್ಳಲಿರುವ ತಾತ್ಕಾಲಿಕ ಶಾಂತಿ ಒಪ್ಪಂದದ ಮುಂದುವರಿಕೆಗೆ ದೊಡ್ಡ ಪೆಟ್ಟನ್ನು ನೀಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ​

- Advertisement -

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯ ಪ್ರಕಾರ, ‘ತೌಸ್ಕಾ’ ಹೆಸರಿನ ಇರಾನ್ ಬಾವುಟವುಳ್ಳ ಸರಕು ಹಡಗನ್ನು ಓಮನ್ ಸಮುದ್ರದಲ್ಲಿ ತಡೆಯಲಾಗಿದೆ. ಕಳೆದ ವಾರ ಇರಾನ್‌ನ ಬಂದರುಗಳ ಮೇಲೆ ಹೇರಲಾಗಿರುವ ನಿರ್ಬಂಧವನ್ನು ಉಲ್ಲಂಘಿಸಿ ಸಂಚರಿಸಲು ಯತ್ನಿಸಿದಾಗ, ಅಮೆರಿಕದ ನೌಕಾಪಡೆಯ ‘ಗೈಡೆಡ್-ಮಿಸೈಲ್ ಡಿಸ್ಟ್ರಾಯರ್’ ಈ ಹಡಗನ್ನು ನಿಷ್ಕ್ರಿಯಗೊಳಿಸಿದೆ. ನಂತರ ಯುಎಸ್ ಮೆರೀನ್ಸ್ ಪಡೆಗಳು ಅದನ್ನು ತಮ್ಮ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿವೆ. ಟ್ರಂಪ್ ಅವರು ಇದನ್ನು ನಿರ್ಬಂಧ ಹೇರಿದ ನಂತರ ನಡೆದ ಮೊದಲ ಕ್ರಮ ಎಂದು ಹೇಳಿದ್ದಾರೆ. ಆದರೆ, ಇರಾನ್‌ನ ಸಂಯುಕ್ತ ಸೇನಾ ಕಮಾಂಡ್ ಇದನ್ನು ‘ಕಡಲ್ಗಳ್ಳತನ’ ಎಂದು ಹೇಳಿದ್ದು, ಇದಕ್ಕೆ ಶೀಘ್ರವೇ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸೋನಿಯಾ ಗಾಂಧಿ ಎಂಬ ಸೋಜಿಗ! ರಾಜಕೀಯ ನಾಯಕತ್ವದ ಹಿಂದಿನ...

ದಿನೇಶ್ ಅಮೀನ್ ಮಟ್ಟು ಅವರು ಪ್ರಸ್ತಾಪಿಸಿದ ನಾಲ್ಕು ಆಯಾಮಗಳು ನನ್ನನ್ನು ವೈಯಕ್ತಿಕವಾಗಿ ಬಹಳವಾಗಿ ಪ್ರಭಾವಿಸಿದವು. ಸೋನಿಯಾ ಗಾಂಧಿ ಒಬ್ಬ ಮಹಿಳೆಯಾಗಿ, ಒಬ್ಬ ವಿಧವೆಯಾಗಿ, ಅಲ್ಪಸಂಖ್ಯಾತ ಕ್ರಿಶ್ಚಿಯನ್ ಧಾರ್ಮಿಕ ಹಿನ್ನೆಲೆಯ ಮಹಿಳೆಯಾಗಿ ಮತ್ತು ವಿದೇಶಿ...

ಬಿತ್ತನೆ ಗುರಿ ಅರ್ಧದಷ್ಟೂ ಮುಟ್ಟದ ಕೃಷಿ ಚಟುವಟಿಕೆ; ಜೋಳದ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟದಿಂದ ಕಂಗೆಟ್ಟ ಅನ್ನದಾತರಿಗೆ ಹಿಂಗಾರು ಹಂಗಾಮಿನಲ್ಲಾದರೂ ಮಳೆ ಆಸರೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ರೈತರ ಆ ನಿರೀಕ್ಷೆಯೂ ಹುಸಿಯಾಗಿದೆ. ಮುಂಗಾರಿನ ಬೆನ್ನಲ್ಲೇ ಹಿಂಗಾರು ಹಂಗಾಮಿನಲ್ಲೂ ಮಳೆ ಕೈಕೊಟ್ಟಿರುವುದರಿಂದ...

ಧಾರವಾಡದ ‘ಲಲಿತಕಲಾ ಅಕಾಡೆಮಿ’ಗೆ ದುಸ್ಥಿತಿ: ಕಲಾವಿದರಿಂದಲೇ ದೂರವಾದ ಪ್ರಾದೇಶಿಕ...

ಕಲಾವಿದರ ಬಹುದಿನಗಳ ಬೇಡಿಕೆಯಂತೆ ಸ್ಥಾಪನೆಯಾದ ಕೇಂದ್ರಕ್ಕೆ ಮೂರೇ ವರ್ಷಗಳಲ್ಲಿ ದುಸ್ಥಿತಿ; ಸಂಚಾಲಕರ ಏಕಪಕ್ಷೀಯ ಧೋರಣೆ, ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಕಲಾ ಚಟುವಟಿಕೆಗಳ ಕೊರತೆಯ ವಿರುದ್ಧ ಹಿರಿಯ ಕಲಾವಿದರ ಆಕ್ರೋಶ. ಸಲಹಾ ಸಮಿತಿ...

​ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಮಾತುಕತೆ ರದ್ದು

ಸೋಮವಾರ ಪಾಕಿಸ್ತಾನದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆಯಬೇಕಿದ್ದ ಶಾಂತಿ ಮಾತುಕತೆಗೆ ಇರಾನ್ ಗೈರು ಹಾಜರಾಗಲು ನಿರ್ಧರಿಸಿದೆ. ಬುಧವಾರಕ್ಕೆ ಅಂತ್ಯಗೊಳ್ಳಲಿರುವ ತಾತ್ಕಾಲಿಕ ಶಾಂತಿ ಒಪ್ಪಂದವನ್ನು ವಿಸ್ತರಿಸುವ ಸಲುವಾಗಿ ಅಮೆರಿಕದ ನಿಯೋಗ ಪಾಕಿಸ್ತಾನಕ್ಕೆ ತೆರಳುತ್ತಿದೆ ಎಂದು ಟ್ರಂಪ್ ಹೇಳಿದ್ದರು. ಆದರೆ ಇರಾನ್‌ನ ಸರ್ಕಾರಿ ಮಾಧ್ಯಮ ಐಆರ್‌ಐಬಿ, ಅಮೆರಿಕ ಜೊತೆ ಮಾತುಕತೆ ನಡೆಸುವ ಯಾವುದೇ ಯೋಜನೆ ತಮ್ಮಲ್ಲಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದನ್ನು ಓದಿದ್ದೀರಾ? ಅಮೆರಿಕದ ವಿನಾಶಕ್ಕೆ ಸಿದ್ಧವಾಗಿರುವ ಡೊನಾಲ್ಡ್ ಟ್ರಂಪ್ ಎಂಬ ‘ವಿಧ್ವಂಸಕ’

ಶನಿವಾರ ಹಾರ್ಮುಜ್ ಜಲಸಂಧಿಯಲ್ಲಿ ಫ್ರಾನ್ಸ್ ದೇಶದ ಸಿಎಂಎ ಸಿಜಿಎಂ ಕಂಪನಿಯ ‘ಎವರ್‌ಗ್ಲೇಡ್ಸ್’ ಎಂಬ ಹಡಗಿನ ಮೇಲೆ ಕೂಡ ಎಚ್ಚರಿಕೆಯ ಗುಂಡಿನ ದಾಳಿ ನಡೆಸಲಾಗಿದೆ. ಇದರಿಂದ ಹಡಗಿಗೆ ಹಾನಿಯಾಗಿದ್ದು, ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಐಎಂಒ ದೃಢಪಡಿಸಿದೆ. ಇನ್ನೊಂದೆಡೆ, ಓಮನ್ ಸಮುದ್ರದಲ್ಲಿ ಸರಕು ಹಡಗಿನ ಮೇಲೆ ನಡೆದ ದಾಳಿಗೆ ಪ್ರತಿಕಾರವಾಗಿ, ಇರಾನ್‌ನ ಪಡೆಗಳು ಅಮೆರಿಕದ ಯುದ್ಧನೌಕೆಗಳ ಮೇಲೆ ಡ್ರೋನ್ ದಾಳಿಗಳನ್ನು ನಡೆಸಿವೆ. ಅಮೆರಿಕದ ಪಡೆಗಳು ಹಿಂದೆ ಸರಿಯುವಂತೆ ಮಾಡುವುದರಲ್ಲಿ ತಾವು ಯಶಸ್ವಿಯಾಗಿರುವುದಾಗಿ ಇರಾನ್‌ನ ಐಆರ್‌ಜಿಸಿ ಹೇಳಿಕೊಂಡಿದೆ. ಭಾನುವಾರ, ಬೋಟ್ಸ್ವಾನಾ ಮತ್ತು ಅಂಗೋಲಾ ಬಾವುಟದಡಿ ಸಂಚರಿಸುತ್ತಿದ್ದ ಎರಡು ತೈಲ ಹಡಗುಗಳನ್ನು ಕೂಡ ಇರಾನ್‌ನ ಪಡೆಗಳು ಹಾರ್ಮುಜ್ ಜಲಸಂಧಿಯಲ್ಲಿ ತಡೆದು ನಿಲ್ಲಿಸಿವೆ.

ಇರಾನ್‌ನ ಉಪಾಧ್ಯಕ್ಷ ಮೊಹಮ್ಮದ್ ರೆಜಾ ಅರೆಫ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, “ಹಾರ್ಮುಜ್ ಜಲಸಂಧಿಯ ಭದ್ರತೆ ಉಚಿತವಾಗಿಲ್ಲ. ಇರಾನ್‌ನ ತೈಲ ರಫ್ತನ್ನು ನಿರ್ಬಂಧಿಸಿ, ಬೇರೆಯವರಿಗೆ ಉಚಿತವಾಗಿ ಭದ್ರತೆ ಒದಗಿಸಲು ಸಾಧ್ಯವಿಲ್ಲ,” ಎಂದು ಗುಡುಗಿದ್ದಾರೆ. ಇದು ಜಗತ್ತಿನ ಇಂಧನ ಮಾರುಕಟ್ಟೆಯ ಮೇಲೆ ತೀವ್ರ ಪ್ರಭಾವ ಬೀರಬಲ್ಲದು ಎಂದು ಎಚ್ಚರಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯೂಜಿಲೆಂಡ್ ಟೆಸ್ಟ್ ಸರಣಿ: ಕುಲದೀಪ್ ಯಾದವ್‌ಗೆ ಕೊಕ್, ಗುರ್ನೂರ್ ಬ್ರಾರ್‌ಗೆ ಮಣೆ!

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ...

ಸೋನಿಯಾ ಗಾಂಧಿ ಎಂಬ ಸೋಜಿಗ! ರಾಜಕೀಯ ನಾಯಕತ್ವದ ಹಿಂದಿನ ಮಹಿಳೆಯ ಸವಾಲುಗಳು ಮತ್ತು ಆತ್ಮಸ್ಥೈರ್ಯದ ಪಯಣ

ದಿನೇಶ್ ಅಮೀನ್ ಮಟ್ಟು ಅವರು ಪ್ರಸ್ತಾಪಿಸಿದ ನಾಲ್ಕು ಆಯಾಮಗಳು ನನ್ನನ್ನು ವೈಯಕ್ತಿಕವಾಗಿ...