ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

Date:

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ ಆರೋಪದ ಸಿಬಿಐ ತನಿಖೆ ಇನ್ನೂ ಮುಗಿದಿಲ್ಲ. ಅದಕ್ಕೂ ಮುನ್ನ ರಾಜ್ಯಪಾಲರಂತಹ ಗೌರವದ ಹುದ್ದೆ ಕರುಣಿಸುವುದರ ಹಿಂದೆ ಪ್ರಕರಣದಿಂದ ಕೈ ಬಿಡುವ ಹುನ್ನಾರ ಅಡಗಿದೆ ಎಂಬ ಅನುಮಾನ ಬರುತ್ತಿದೆ. ಇಂತಹ ವ್ಯಕ್ತಿಯನ್ನು ಒಂದು ರಾಜ್ಯದ ರಾಜ್ಯಪಾಲರನ್ನಾಗಿ ನೇಮಿಸುವಾಗ ಸ್ವತಃ ಮಹಿಳೆಯಾಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಯಾವುದೇ ವಿವರಣೆ ಕೇಳದೇ ಸಹಿ ಮಾಡಿರುವುದು ನಿಜಕ್ಕೂ ಬೇಸರದ ಸಂಗತಿ.

- Advertisement -

2022ರಲ್ಲಿ ಉತ್ತರಾಖಂಡದ ಋಷಿಕೇಶ ಸಮೀಪದ ವನಂತರಾ ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿಯಾಗಿ ಕೆಲಸಕ್ಕೆ ಸೇರಿ 20 ದಿನಗಳಲ್ಲಿಯೇ 19 ವರ್ಷದ ಯುವತಿ ಅಂಕಿತಾ ಭಂಡಾರಿ ಕೊಲೆಯಾಗುತ್ತಾಳೆ. ಈ ಕೊಲೆಯ ಮುಖ್ಯ ಆರೋಪಿ ರೆಸಾರ್ಟ್‌ ಮಾಲೀಕ ಬಿಜೆಪಿಯ ಪ್ರಭಾವಿ ಮುಖಂಡನ ಪುತ್ರ ಪುಲ್ಕಿತ್‌ ಆರ್ಯ ಮತ್ತು ಆತನ ಸಹಚರರಿಗೆ 2025ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆದರೆ, ಆ ಪ್ರಕರಣದಲ್ಲಿ ಕೇಳಿಬಂದಿದ್ದ ʼವಿಐಪಿʼ ಬಿಜೆಪಿಯ ಹಿರಿಯ ನಾಯಕ ದುಶ್ಯಂತ್ ಕುಮಾರ್ ಗೌತಮ್ ಗೆ ಸಿಕ್ಕಿಂ ರಾಜ್ಯಪಾಲರ ಹುದ್ದೆ ನೀಡುವ ಮೂಲಕ ಮೋದಿ ಸರ್ಕಾರ ಗಂಭೀರ ಪ್ರಕರಣದ ಆರೋಪಿಗಳಿಗೆ ಸಮ್ಮಾನ ನೀಡುವ ತನ್ನ ಚಾಳಿಯನ್ನು ಮುಂದುವರಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಶಿವಮೊಗ್ಗ | ಅಸುರಕ್ಷತೆಯ ತಾಣವಾದ ರೈಲ್ವೆ ನಿಲ್ದಾಣ: ಪ್ರಯಾಣಿಕರ...

ಕುಡಿಯುವ ನೀರಿಲ್ಲದಿರುವುದು, ಹಾಳಾದ ಶೌಚಾಲಯಗಳು, ರಾತ್ರಿ ವೇಳೆ ಬೀದಿದೀಪ ಹಾಗೂ ಕಾವಲುಗಾರರ ಕೊರತೆಯಿಂದಾಗಿ ಈ ನಿಲ್ದಾಣವು ನಿರ್ಜನ ಪ್ರದೇಶದಂತೆ ಭಾಸವಾಗುತ್ತಿದೆ. ಇದರೊಂದಿಗೆ ಕಳ್ಳತನ, ಅನೈತಿಕ ಚಟುವಟಿಕೆಗಳು ಹೆಚ್ಚಾಗಿರುವುದು ಜೊತೆಗೆ ಸಿಸಿಟಿವಿ ಕ್ಯಾಮೆರಾಗಳೂ ಇಲ್ಲದಿರುವುದು...

ಈ ಪ್ರಕರಣದಲ್ಲಿ ಪುಟ್ಟ ಯುವತಿ ಅಂಕಿತಾಳಿಗೆ ಆಕೆ ಕೆಲಸಕ್ಕೆ ಸೇರಿದ ಕೆಲವೇ ವಾರಗಳಲ್ಲಿ ಅಲ್ಲಿನ ಕರಾಳತೆ ಅರಿವಾಗಿತ್ತು. ವಿಐಪಿಯೊಬ್ಬರಿಗೆ ವಿಶೇಷ ಸೇವೆ ಮಾಡಬೇಕು ಎಂದು ಪುಲ್ಕಿತ್‌ ಆರ್ಯ ಆಕೆಗೆ ಒತ್ತಡ ಹಾಕಿದ್ದ. ಆ ವಿಐಪಿಯೇ ಈಗ ರಾಜ್ಯಪಾಲರ ಹುದ್ದೆಗೆ ಮೋದಿ ಸರ್ಕಾರ ಆಯ್ಕೆ ಮಾಡಿರುವ ಗೌರವಾನ್ವಿತ ವ್ಯಕ್ತಿ! ಮೋದಿ ಸರ್ಕಾರದ ಈ ಅಸಹ್ಯ ನಡೆಯನ್ನು ಖಂಡಿಸಿ ಅಂಕಿತಾ ಕುಟುಂಬ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದೆ. ಪೊಲೀಸರು ಅವರನ್ನು ಬಂಧಿಸಿದ್ದರು.

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ವಿಐಪಿ ಹೆಸರನ್ನು ಪೊಲೀಸರು ಬಹಿರಂಗಪಡಿಸಿರಲಿಲ್ಲ. ಆದರೆ, ಬಿಜೆಪಿ ಮುಖಂಡರೊಬ್ಬರು ದುಶ್ಯಂತ್‌ ಹೆಸರನ್ನು ಬಹಿರಂಗಪಡಿಸಿದ್ದರು. 2025ರ ಡಿಸೆಂಬರ್‌ನಲ್ಲಿ ಬಿಜೆಪಿಯ ಮಾಜಿ ಶಾಸಕ ಸುರೇಶ್ ರಾಠೋಡ್ ಅವರ ಪತ್ನಿ ಎಂದು ಹೇಳಿಕೊಳ್ಳುವ ನಟಿ ಊರ್ಮಿಳಾ ಸನಾವರ್ ಅವರು, ರಾಠೋಡ್ ಅವರೊಂದಿಗೆ ನಡೆಸಿದ್ದಾರೆನ್ನಲಾದ ಸಂಭಾಷಣೆಯ ಧ್ವನಿಮುದ್ರಿಕೆಯಲ್ಲಿ ‘ಗಟ್ಟು’ ಎಂದು ಕರೆಯಲ್ಪಡುವ ಬಿಜೆಪಿಯ ಹಿರಿಯ ನಾಯಕನೇ ಅಂಕಿತಾ ಪ್ರಕರಣದ ‘ವಿಐಪಿ’ ಎಂದು ಉಲ್ಲೇಖಿಸಲಾಗಿತ್ತು ಹಾಗೂ ಆ ವ್ಯಕ್ತಿ ಬೇರೆ ಯಾರೂ ಅಲ್ಲ, ದುಶ್ಯಂತ್ ಕುಮಾರ್ ಗೌತಮ್ ಎಂದು ನೇರವಾಗಿ ಹೆಸರಿಸಲಾಗಿತ್ತು.

ಈ ಸ್ಫೋಟಕ ಆಡಿಯೊ ಬಹಿರಂಗವಾದ ಬಳಿಕ ಉತ್ತರಾಖಂಡದಾದ್ಯಂತ ಜನರ ಆಕ್ರೋಶ ಭುಗಿಲೆದ್ದ ಪರಿಣಾಮವಾಗಿ, ಅನಿವಾರ್ಯವಾಗಿ ಮಣಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು 2026ರ ಜನವರಿ 9ರಂದು ಸಿಬಿಐ ತನಿಖೆಗೆ ಶಿಫಾರಸು ಮಾಡಿದರು. ಫೆಬ್ರವರಿಯಲ್ಲಿ ಸಿಬಿಐ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡು ದಾಖಲೆಗಳನ್ನು ಸುಪರ್ದಿಗೆ ಪಡೆದರೂ, ತನಿಖಾ ಸಂಸ್ಥೆಯು ದುಶ್ಯಂತ್ ಕುಮಾರ್ ಗೌತಮ್ ಅವರನ್ನು ವಿಚಾರಣೆಗೆ ಒಳಪಡಿಸುವ ಗೋಜಿಗೆ ಹೋಗಿಲ್ಲ.

ಸಿಬಿಐ ತನಿಖೆ ಮುಂದುವರಿದಿದ್ದು, ಅಂಕಿತಾ ಭಂಡಾರಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದುಶ್ಯಂತ್ ಕುಮಾರ್ ಗೌತಮ್ ನೇರ ಅಥವಾ ಪರೋಕ್ಷ ಭಾಗವಹಿಸುವಿಕೆ ಇರಬಹುದೆಂಬ ಆರೋಪಗಳು ಕೇಳಿಬಂದಿವೆ. ಈ ಪ್ರಕರಣದಲ್ಲಿ ಆತನ ಪಾತ್ರದ ಕುರಿತು ತನಿಖೆ ಇನ್ನೂ ನಡೆಯುತ್ತಿದ್ದು, ಆರೋಪಗಳು ತನಿಖೆಗೆ ಒಳಪಟ್ಟಿವೆ. ತನಿಖೆ ಮುಗಿಯುವುದಕ್ಕೂ ಮುನ್ನ ರಾಜ್ಯಪಾಲರಂತಹ ಸಾಂವಿಧಾನಿಕ ಹುದ್ದೆ ಕರುಣಿಸುವುದರ ಹಿಂದೆ ಪ್ರಕರಣದಿಂದ ಕೈ ಬಿಡುವ ಹುನ್ನಾರ ಅಡಗಿದೆ ಎಂಬ ಅನುಮಾನ ಉಂಟಾಗಿರುವುದು ಸ್ವಾಭಾವಿಕ. ಒಮ್ಮೆ ರಾಜ್ಯಪಾಲರಾದರೆ ಅವರ ವಿರುದ್ಧ ತನಿಖೆ ನಡೆಸುವ ಅಧಿಕಾರ ಯಾವ ಸಂಸ್ಥೆಗೂ ಇಲ್ಲ. ಇಂತಹ ವ್ಯಕ್ತಿಯನ್ನು ಒಂದು ರಾಜ್ಯದ ರಾಜ್ಯಪಾಲರನ್ನಾಗಿ ನೇಮಿಸುವಾಗ ಸ್ವತಃ ಮಹಿಳೆಯಾಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಯಾವುದೇ ವಿವರಣೆ ಕೇಳದೇ ಸಹಿ ಮಾಡಿರುವುದು ನಿಜಕ್ಕೂ ಬೇಸರದ ಸಂಗತಿ. ರಾಷ್ಟ್ರಪತಿ ಹುದ್ದೆಯನ್ನು ರಬ್ಬರ್‌ ಸ್ಟಾಂಪ್‌ಗೆ ಹೋಲಿಸಿರುವುದು ಸರಿಯಾಗಿಯೇ ಇದೆ. ಒಬ್ಬ ಅಮಾಯಕ ಬಡ ಕುಟುಂಬದ ಯುವತಿ, ವಿಐಪಿಗೆ “ವಿಶೇಷ ಆತಿಥ್ಯ” ನೀಡಲು ಒಲ್ಲೆ ಎಂದ ಕಾರಣಕ್ಕೆ ಆಕೆಯನ್ನು ಕೊಂದು ಬಿಸಾಕುವ ಧೈರ್ಯ ಎಲ್ಲಿಂದ ಬಂತು? ರಾಜಕೀಯ ನಂಟು ಇದ್ದರೆ ಏನು ಬೇಕಾದರೂ ಮಾಡಿ ಬಚಾವ್‌ ಆಗಬಹುದು ಎಂಬ ಭಂಡತನ ಅಲ್ಲವೇ? ಅಷ್ಟೇ ಅಲ್ಲ ಜೈಲಿಗೆ ಹೋದರೂ ಜಾಮೀನಿನ ಮೇಲೆ ಹೊರ ಬರುವ ಅವಕಾಶ ಹೇರಳ. ದೊರೆಯುವ ಅಭೂತಪೂರ್ವ ಸ್ವಾಗತ ಮಾನ, ಮರ್ಯಾದೆಗೂ ಕೊರತೆಯಿಲ್ಲ.

ಮೋದಿಯವರಿಗೆ ನಿರಂತರವಾಗಿ ಸಿಗುತ್ತಿರುವ ‘ಗೆಲುವು’ ತಮ್ಮ ಪಕ್ಷ, ಸರ್ಕಾರ ಸಾರ್ವಜನಿಕ ನೈತಿಕತೆಗೆ ಸೊಪ್ಪು ಹಾಕದ ಧಾರ್ಷ್ಟ್ಯವನ್ನು ಹುಟ್ಟಿಸಿದೆ. ದೇಶದಲ್ಲಿ ಹೆಣ್ಣುಮಕ್ಕಳ ಸಾಮೂಹಿಕ ಅತ್ಯಾಚಾರ, ಕೊಲೆಯಂತಹ ಕೃತ್ಯಗಳು ಅವೆಷ್ಟೇ ನಡೆದರೂ ಮೌನವೇ ಮೋದಿಯವರ ಉತ್ತರ. ಅದರಲ್ಲೂ ಬಿಜೆಪಿ ಆಡಳಿತವಿರುವ ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರದಲ್ಲೆಲ್ಲ ನಿರಂತರವಾಗಿ ಹೆಣ್ಣುಮಕ್ಕಳ ಮೇಲೆ ಭೀಕರ ಅತ್ಯಾಚಾರಗಳು, ಹತ್ಯೆಗಳು ನಡೆಯುತ್ತಿವೆ. ಅಂತಹ ಪ್ರಕರಣಗಳ ಬಗ್ಗೆ ಅವರಿಗೆ ಕಿಂಚಿತ್ತೂ ಆಘಾತ ಆಗದಿರುವುದೇ ಅಚ್ಚರಿ.

ಸದಾ ಹಿಂದೂ ಹೆಣ್ಣುಮಕ್ಕಳ ರಕ್ಷಣೆಯ ಬಣ್ಣಬಣ್ಣದ ಮಾತಾಡಿ, ಮಹಿಳೆಯನ್ನು ಮಾತೆ, ದೇವತೆ ಎಂದು ಬಾಯುಪಚಾರ ಮಾಡುವ ಬಿಜೆಪಿ- ಸಂಘಪರಿವಾರದ ಮಂದಿ ಅತಿ ಹೆಚ್ಚು ಲೈಂಗಿಕ ಅಪರಾಧ, ಲೈಂಗಿಕ ಹಗರಣಗಳಲ್ಲಿ ಸುದ್ದಿಯಾಗುತ್ತಿದ್ದಾರೆ. ಅನೇಕ ಬಿಜೆಪಿ ಪದಾಧಿಕಾರಿಗಳೇ ಪೋಕ್ಸೊ ಪ್ರಕರಣದ ಆರೋಪಿಗಳಾಗಿದ್ದಾರೆ. ದೆಹಲಿಯಲ್ಲಿ ಅ.10ರಂದು ನಡೆದ ಸಿಜೆಪಿ ಪ್ರತಿಭಟನೆಯಲ್ಲಿ ಕೇಸರಿ ಶಾಲು ಹಾಕಿಕೊಂಡು ಬಂದ ಬಿಜೆಪಿ ಬೆಂಬಲಿಗರು ಹೆಣ್ಣುಮಕ್ಕಳನ್ನು ನೆಲಕ್ಕೆ ಕೆಡವಿ, ಅವರ ಬಟ್ಟೆ ಹರಿದು ಥಳಿಸಿದ್ದರು. ಆ ಪ್ರಕರಣದಲ್ಲಿ ಬಂಧಿತರಾದ ಮೂವರಿಗೆ ಒಂದೇ ದಿನದಲ್ಲಿ ಜಾಮೀನು ಸಿಕ್ಕಿದೆ. ಅಷ್ಟೇ ಅಲ್ಲ ಅವರು ಪೊಲೀಸ್‌ ಕಸ್ಟಡಿಯಿಂದ ಹೊರಬಂದಾಗ ಬಿಜೆಪಿ ಮುಖಂಡರು ಹೂವಿನ ಹಾರ ಹಾಕಿ ಸನ್ಮಾನಿಸಿದ್ದಾರೆ.

ಬಿಲ್ಕಿಸ್‌ ಬಾನೋ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮೇಲ್ವರ್ಗದ ಅಪರಾಧಿಗಳನ್ನು 75 ನೇ ಸ್ವಾತಂತ್ರ್ಯ ಸಂಭ್ರಮದ ಸಮಯದಲ್ಲಿ ಸನ್ನಡತೆಯ ನೆಪವೊಡ್ಡಿ ಬಿಡುಗಡೆ ಮಾಡಿತ್ತು ʼಬೇಟಿ ಬಚಾವೊʼ ಎಂಬ ಹುಸಿ ಕಾಳಜಿ ತೋರುವ ಮೋದಿಯವರ ಡಬಲ್‌ ಎಂಜಿನ್‌ ಸರ್ಕಾರ. ರೇಪಿಸ್ಟ್‌ಗಳ ಕುಟುಂಬದವರು ಹೂಹಾರ ಹಾಕಿ, ಹಣೆಗೆ ತಿಲಕ ಇಟ್ಟು, ಆರತಿ ಬೆಳಗಿ ಸ್ವಾಗತಿಸಿದ್ದರು. ಗೋಧ್ರಾ ಗಲಭೆಯ ಸಮಯದಲ್ಲಿ ನಡೆದ ಮುಸ್ಲಿಂ ಮಹಿಳೆ ಬಿಲ್ಕಿಸ್‌ಳ ಕುಟುಂಬದ ಹತ್ಯಾಕಾಂಡ ಮತ್ತು ಆಗ ಗರ್ಭಿಣಿಯಾಗಿದ್ದ ಆಕೆಯ ಮೇಲೆ ನಡೆದ ರಾಕ್ಷಸರ ಸಾಮೂಹಿಕ ಅತ್ಯಾಚಾರ ಪ್ರಕರಣ ಭಾರತದ ಇತಿಹಾಸದಲ್ಲಿ ಕರಾಳ ಪುಟಗಳಾಗಿ ಶತ ಶತಮಾನಗಳ ಕಾಲ ಉಳಿಯಲಿವೆ. ಮೋದಿಯವರ ಆಡಳಿತದ ಅವಧಿಯಲ್ಲಿ ನಡೆದ ಈ ಕೃತ್ಯ ಮತ್ತು ಆ ನಂತರವೂ ಸರ್ಕಾರ ಮತ್ತು ಪಕ್ಷ ನಡೆದುಕೊಳ್ಳುತ್ತಿರುವ ರೀತಿ, ಹೆಣ್ಣುಮಕ್ಕಳ ಘನತೆಗೆ ಧಕ್ಕೆ ತರುವ ನಡವಳಿಕೆಗಳು ಮೋದಿಯವರ ಕುಯುಕ್ತಿ ಮತ್ತು ಕಪಟತನಕ್ಕೆ ಸಾಕ್ಷಿಯಾಗಿವೆ.

ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಸಿಲುಕಿಕೊಂಡ ರಾಜಕಾರಣಿಗಳಲ್ಲಿ ಬಹುತೇಕರು ಬಿಜೆಪಿಗರೇ ಆಗಿದ್ದಾರೆ. ಆ ಬಗ್ಗೆ ಪಕ್ಷದ ಹಿರಿಯರು ಆತಂಕ ವ್ಯಕ್ತಪಡಿಸಿರುವ, ಆರೆಸ್ಸೆಸ್‌ನ ಮುಖಂಡರು ಬುದ್ಧಿಮಾತು ಹೇಳಿದ ಉದಾಹರಣೆ ಇಲ್ಲವೇ ಇಲ್ಲ. ಅಷ್ಟೇ ಅಲ್ಲ ಸೋಷಿಯಲ್‌ ಮೀಡಿಯಾದಲ್ಲಿ ಹೆಣ್ಣುಮಕ್ಕಳ ಚಾರಿತ್ರ್ಯ ಹರಣ ಮಾಡುವುದು, ಬಿಜೆಪಿಯನ್ನು ಪ್ರಶ್ನಿಸಿದರೆ ಸಾಕು, ಸೋಷಿಯಲ್‌ ಮೀಡಿಯಾಗಳಲ್ಲಿ ಬಿಜೆಪಿ ಟ್ರೋಲ್‌ ಪಡೆ ಚುರುಕಾಗುತ್ತದೆ. ಅವರ ಹುಟ್ಟಿನ ಮೂಲದ ಬಗ್ಗೆ ಕೀಳು ಮಟ್ಟದ ಟೀಕೆ ಮಾಡುವುದು, ತಿರುಚಿದ ಫೋಟೋ, ವಿಡಿಯೋ ಹಂಚುವುದು, ಅಶ್ಲೀಲ ಪದ ಬಳಕೆ ಮಾಡುವುದು ಎಗ್ಗಿಲ್ಲದೇ ನಡೆಯುತ್ತಿದೆ. ಸಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾದ ಹೆಣ್ಣುಮಕ್ಕಳಿಗೆ ರೇಪ್‌ ಬೆದರಿಕೆಗಳು ಬಂದಿರುವುದು ಈ ಮಾತಿಗೆ ತಾಜಾ ಉದಾಹರಣೆಗಳು.

ಅಕ್ಟೋಬರ್ 12ರಂದು ರಾಷ್ಟ್ರಪತಿ ಭವನ ಪ್ರಕಟಿಸಿರುವ ದುಶ್ಯಂತ್ ಕುಮಾರ್ ಗೌತಮ್ ಅವರ ರಾಜ್ಯಪಾಲ ನೇಮಕಾತಿಯನ್ನು ತಕ್ಷಣವೇ ಹಿಂಪಡೆಯದಿದ್ದರೆ ದೇಶವ್ಯಾಪಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಅಂಕಿತಾ ಕುಟುಂಬ ಎಚ್ಚರಿಕೆ ನೀಡಿದೆ. ತಮ್ಮ ಮಗಳ ಸಾವಿಗೆ ಕಾರಣರಾದ ಪ್ರಭಾವಿಗಳಿಗೆ ಶಿಕ್ಷೆಯಾಗುವವರೆಗೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಾಯಿ ಸೋನಿ ದೇವಿ ಹೇಳಿದ್ದಾರೆ.

ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ ‘ವಿಐಪಿ’ ಪಾತ್ರದ ಕುರಿತು ಸಿಬಿಐ ತನಿಖೆ ಇನ್ನೂ ಪೂರ್ಣಗೊಳ್ಳದೆ ಇರುವಾಗಲೇ, ಕುಟುಂಬಸ್ಥರಿಂದ ನೇರವಾಗಿ ಆರೋಪ ಎದುರಿಸುತ್ತಿರುವ ದುಶ್ಯಂತ್ ಕುಮಾರ್ ಗೌತಮ್ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ನಡೆಯ ಹಿಂದೆ ದೊಡ್ಡ ರಾಜಕೀಯ ಹುನ್ನಾರವಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ. ಸಿಬಿಐ ತನಿಖೆ ಮುಗಿಯುವವರೆಗೆ ಗೌತಮ್ ಅವರ ನೇಮಕಾತಿಗೆ ತಡೆ ನೀಡಬೇಕು ಎಂದು ಪೋಷಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಿದ್ದರೂ ಪರಿಗಣಿಸಿಲ್ಲ. ಈಗ ಆ ಕುಟುಂಬ ಪ್ರತಿಭಟನೆಯ ಎಚ್ಚರಿಕೆ ನೀಡಿದೆ. ಇದನ್ನು ರಾಷ್ಟ್ರಪತಿ ಮುರ್ಮು ಅವರು ಪರಿಗಣಿಸಿ, ಆದೇಶವನ್ನು ವಾಪಸ್‌ ಪಡೆಯುವುದು ಸರಿಯಾದ ನಡೆಯಾದೀತು. ಇಲ್ಲದಿದ್ದರೆ ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ರಾಜ್ಯಪಾಲನನ್ನಾಗಿ ಮಾಡಿದ ಕಳಂಕವನ್ನು ಮಹಿಳಾ ರಾಷ್ಟ್ರಪತಿ ಶಾಶ್ವತವಾಗಿ ಹೊರಬೇಕಾದೀತು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ʼಬಾಂಬೆ ಬಾಯ್ಸ್‌ʼ ಪುಸ್ತಕ ಹೊರಬಂದರೆ ಮೂರೂ ಪಕ್ಷಗಳ ನಾಯಕರು ಬೆತ್ತಲು: ಎಚ್‌ ವಿಶ್ವನಾಥ್‌ ಹೊಸ ಬಾಂಬ್!‌

‘ಬಾಂಬೆ ಬಾಯ್ಸ್‌’ ಪುಸ್ತಕ ಪ್ರಕಟವಾದರೆ ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳ...

ವಿಜಯಪುರ | ರೈತರಿಗೆ ಎಕರೆಗೆ ರೂ.25 ಸಾವಿರ ಪರಿಹಾರ ನೀಡಿ: ಭೀಮ್ ರಾಜ್ಯ ದಲಿತ ಸೇವಾ ಸಮಿತಿ ಆಗ್ರಹ

ಮಳೆ ಕೊರತೆಯಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ...

14 ಎಸೆತಗಳಲ್ಲಿ ಅರ್ಧಶತಕ: ಮೆಕ್‌ಗರ್ಕ್‌ ಸಿಡಿಲಾಟ, ವೈಭವ್‌ ವಿಶ್ವದಾಖಲೆ ಅಬಾಧಿತ

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌ ಜೇಕ್‌ ಫ್ರೇಸರ್‌ ಮೆಕ್‌ಗರ್ಕ್‌ ಕೇವಲ 14...

ರಷ್ಯಾ-ಉಕ್ರೇನ್ ಸಂಘರ್ಷ: ನಿರ್ಬಂಧ ವಿನಾಯಿತಿ ಪುಟಿನ್‌ಗೆ ಟ್ರಂಪ್ ನೀಡಿದ ಬಹುಮಾನ ಎಂದ‌ ಝೆಲೆನ್ಸ್ಕಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾದ ಮೇಲಿನ ಪ್ರಮುಖ ನಿರ್ಬಂಧಗಳನ್ನು...