ಒಡಿಶಾ | ರಸ್ತೆ ಸಂಪರ್ಕ, ವೈದ್ಯಕೀಯ ಕೊರತೆ: ಹೆರಿಗೆಗಾಗಿ ಗರ್ಭಿಣಿಯನ್ನು ಜೋಲಿಯಲ್ಲಿ 5 ಕಿ.ಮೀ. ಹೊತ್ತೊಯ್ದ ಕುಟುಂಬ; ಉಳಿಯಲಿಲ್ಲ ಮಗು

Date:

ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರನ್ನು ಆ್ಯಂಬುಲೆನ್ಸ್‌ ಸೌಲಭ್ಯವಿಲ್ಲದ ಕಾರಣ, ಕುಟುಂಬಸ್ಥರು 5 ಕಿ.ಮೀ. ಜೋಲಿಯಲ್ಲಿ ಹೊತ್ತೊಯ್ದಿದ್ದಾರೆ. ಆದರೆ, ಸೂಕ್ತ ಸಮಯಕ್ಕೆ ವೈದ್ಯಕೀಯ ಚಿಕಿತ್ಸೆ ಸಿಗದೆ ಆಕೆ ಮೃತ ಮಗುವಿಗೆ ಜನ್ಮ ನೀಡಿದ್ದಾರೆ. ಈ ದಾರುಣ ಘಟನೆ ಒಡಿಶಾದ ರಾಯಗಡ ಜಿಲ್ಲೆಯ ಕಾಶಿಪುರ ತಾಲೂಕಿನಲ್ಲಿ ಸಂಭವಿಸಿದೆ.

- Advertisement -

ಈ ಘಟನೆಯು ಒಡಿಶಾದ ಗುಡ್ಡಗಾಡು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ರಸ್ತೆ ಸಂಪರ್ಕ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಯ ಭೀಕರತೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ರಾಯಗಡ ಜಿಲ್ಲೆಯ ಸಿಜಿಮಾಲಿ ಪ್ರದೇಶದ ಸುಂಗೇರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲಿಪದರ ಗ್ರಾಮದಲ್ಲಿ ಭಾನುವಾರ ಈ ದುರಂತ ನಡೆದಿದೆ. ಗ್ರಾಮದ ಅರ್ಜುನ್ ಮಾಝಿ ಎಂಬುವರ ಪತ್ನಿ, ಸುಕು ಮಾಝಿ ಅವರಿಗೆ ದಿಢೀರ್ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಸ್ಥಳೀಯ ಆಶಾ ಕಾರ್ಯಕರ್ತೆ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ, ಮಾಲಿಪದರ ಗ್ರಾಮಕ್ಕೆ ಯೋಗ್ಯವಾದ ರಸ್ತೆ ಸಂಪರ್ಕವಿಲ್ಲದ ಕಾರಣ, ಆಂಬ್ಯುಲೆನ್ಸ್ ಅಲಿಗುಣ ಗ್ರಾಮದ ಸಮೀಪದವರೆಗಷ್ಟೇ ಬಂದು, ಅಲ್ಲಿಯೇ ನಿಂತಿದೆ.

ಬೇರೆ ದಾರಿ ಇಲ್ಲದೆ, ಕುಟುಂಬಸ್ಥರು ಗರ್ಭಿಣಿಯನ್ನು ಬಟ್ಟೆಯ ಜೋಲಿಯಲ್ಲಿ ಕೂರಿಸಿಕೊಂಡು ಕಡಿದಾದ ಬೆಟ್ಟಗುಡ್ಡಗಳ ಹಾದಿಯಲ್ಲಿ ಸುಮಾರು 5 ಕಿ.ಮೀ. ದೂರ ಕಾಲ್ನಡಿಗೆಯಲ್ಲೇ ಹೊತ್ತೊಯ್ದು, ಆ್ಯಂಬುಲೆನ್ಸ್‌ ಇದ್ದಲ್ಲಿಗೆ ತಲುಪಿಸಿದ್ದಾರೆ.

ಬಳಿಕ ಆಕೆಯನ್ನು ಸಮೀಪದ ಸುಂಗೇರ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಆದರೆ, ಅಲ್ಲಿ ಯಾವುದೇ ವೈದ್ಯರು ಲಭ್ಯವಿರಲಿಲ್ಲ. ನಂತರ, ಆಕೆಯನ್ನು ಕಾಶಿಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.

ಅಲ್ಲಿದ್ದ ವೈದ್ಯರು ಗರ್ಭಿಣಿಯ ಸ್ಥಿತಿ ತೀವ್ರ ಚಿಂತಾಜನಕವಾಗಿರುವುದನ್ನು ಗಮನಿಸಿ, ಹೆಚ್ಚಿನ ಚಿಕಿತ್ಸೆಗಾಗಿ ರಾಯಗಡದಲ್ಲಿರುವ ಜಿಲ್ಲಾ ಆಸ್ಪತ್ರೆಗೆ (DHH) ಕಳಿಸಿದ್ದಾರೆ. ಆದರೆ, ಸುದೀರ್ಘ ಪ್ರಯಾಣ ಮತ್ತು ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವು ಸಿಗದ ಕಾರಣ, ಆಕೆ ಆಸ್ಪತ್ರೆಯಲ್ಲಿ ಮೃತ ಮಗುವಿಗೆ ಜನ್ಮ ನೀಡಿದ್ದಾರೆ.

ಎಐ ಯುಗ, ಅಚ್ಚೇದಿನ್, ಅಭಿವೃದ್ಧಿಯ ಬಗ್ಗೆ ಭಾರೀ ಭಾಷಣಗಳು, ಘೋಷಣೆಗಳು ಕೇಳಿಬರುತ್ತಿರುವ ಇಂದಿನ ಕಾಲದಲ್ಲಿಯೂ, ಇಂದಿಗೂ ಗ್ರಾಮೀಣ ಜನರಿಗೆ ಸೂಕ್ತ ರಸ್ತೆ ಮತ್ತು ಆರೋಗ್ಯ ಮೂಲಸೌಕರ್ಯಗಳು ಸಿಗುತ್ತಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೆರ್ಬಿಯಾದಲ್ಲಿ 12 ವರ್ಷಗಳ ವುಚಿಚ್ ಆಡಳಿತ ಅಂತ್ಯ; ವಿದ್ಯಾರ್ಥಿ ಹೋರಾಟಕ್ಕೆ ಚುನಾವಣಾ ಜಯ

ಯುರೋಪಿನ ಸೆರ್ಬಿಯಾದಲ್ಲಿ ಸುಮಾರು ಎರಡು ವರ್ಷಗಳಿಂದ ನಡೆಯುತ್ತಿದ್ದ ವಿದ್ಯಾರ್ಥಿಗಳ ನೇತೃತ್ವದ ಭ್ರಷ್ಟಾಚಾರ...

SIR ಪ್ರಕ್ರಿಯೆಯಲ್ಲಿ ಬಳಸಿದ ಸಾಫ್ಟ್‌ವೇರ್ ಮಾಹಿತಿ ಬಹಿರಂಗಕ್ಕೆ ಚುನಾವಣಾ ಆಯೋಗ ನಕಾರ

ಮತದಾರರ ಪಟ್ಟಿಯಲ್ಲಿನ ದೋಷಗಳು ಹಾಗೂ ಅಸಂಗತತೆಗಳನ್ನು ಪತ್ತೆಹಚ್ಚಲು ವಿಶೇಷ ತೀವ್ರ ಪರಿಷ್ಕರಣೆ...

ಉರಿದು ಬೂದಿಯಾದ ಹಿಟ್ಲರ್‌ನ ಅತಿಥಿ ಗೃಹ

ನಾಜಿ ಆಡಳಿತದ ಇತಿಹಾಸದ ಕರಾಳ ನೆನಪನ್ನು ಹೊಂದಿದ್ದ ಅಡಾಲ್ಫ್ ಹಿಟ್ಲರ್‌ನ ಅತಿಥಿ...

ಸುಳ್ಳು ಅಫಿಡವಿಟ್‌ ವಿರುದ್ಧ ಮತದಾರರೇ ದೂರು ಸಲ್ಲಿಸಬಹುದು, ಇಸಿ ಅನುಮತಿ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರದೊಂದಿಗೆ ಸಲ್ಲಿಸುವ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿದ್ದರೆ,...